ವಿಕಲಚೇತನರಿಗಾಗಿ ಹೊಸ ಫೀಚರ್ಸ್‌ ಪ್ರಕಟಿಸಿದ ನೆಟ್‌ಫ್ಲಿಕ್ಸ್‌! ವಿಶೇಷತೆ ಏನು?

|

ಜನಪ್ರಿಯ ಒಟಿಟಿ ಪ್ಲಾಟ್‌ಫಾರ್ಮ್‌ ನೆಟ್‌ಫ್ಲಿಕ್ಸ್‌ ತನ್ನ ಬಳಕೆದಾರರಿಗೆ ಹೊಸ ಫೀಚರ್ಸ್‌ಗಳನ್ನು ಪ್ರಕಟಿಸಿದೆ. ವಿಕಲಚೇತನರಿಗೆ ನೆಟ್‌ಫ್ಲಿಕ್ಸ್‌ನಲ್ಲಿ ವಿಷಯವನ್ನು ಪ್ರವೇಶಿಸುವುದಕ್ಕೆ ಅನುಕೂಲವಾಗುವ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇದರಲ್ಲಿ ಆಡಿಯೊ ವಿವರಣೆ (AD) ನೀಡುವುದಕ್ಕೆ ವಿಸ್ತೃತ ಭಾಷಾಬೆಂಬಲ ಮತ್ತು ಶ್ರವಣ ದೋಷವುಳ್ಳವರಿಗಾಗಿ (SDH)ಸಬ್‌ ಟೈಟಲ್‌ಗಳನ್ನು ಕೂಡ ಪರಿಚಯಿಸಿದೆ. ವಿಸ್ತರಿತ ಭಾಷಾ ಬೆಂಬಲ ಇದೇ ತಿಂಗಳು ಪ್ರಾರಂಭವಾಗಲಿದೆ. ಇನ್ನು AD ಮತ್ತು SDH ಬೆಂಬಲಕ್ಕಾಗಿ ಒಟ್ಟು 20 ಭಾಷೆಗಳನ್ನು ಸೇರಿಸಲು ನೆಟ್‌ಫ್ಲಿಕ್ಸ್‌ ಪ್ಲಾನ್‌ ಮಾಡಿದೆ.

ನೆಟ್‌ಫ್ಲಿಕ್ಸ್‌

ಹೌದು, ನೆಟ್‌ಫ್ಲಿಕ್ಸ್‌ ವಿಕಲಚೇತನರಿಗಾಗಿ ಹೊಸ ಹೆಜ್ಜೆಯನ್ನು ಇಟ್ಟಿದೆ. ಶ್ರವಣ ದೋಷವನ್ನು ಹೊಂದಿರುವವರಿಗೆ ಸುಲಭವಾಗಿ ಕಂಟೆಂಟ್‌ ಅರ್ಥ ಮಾಡಿಸುವ ನಿಟ್ಟಿನಲ್ಲಿ ವಿಸ್ತೃತ ಭಾಷಾ ಬೆಂಬಲ ಹಾಗೂ ಸಬ್‌ಟೈಟಲ್‌ಗಳನ್ನು ಪರಿಚಯಿಸಲು ಮುಂದಾಗಿದೆ. ಅದರಂತೆ ದೃಶ್ಯದಲ್ಲಿ ಏನು ನಡೆಯುತ್ತಿದೆ ಎಂಬುದರ ಕುರಿತು ಹೆಚ್ಚಿನ ದೃಶ್ಯ ವಿವರಣೆಯನ್ನು ಸೇರಿಸುವ ಪ್ರಯತ್ನವನ್ನು ಇದರ ಮೂಲಕ ಮಾಡಲಿದೆ. ಹಾಗಾದ್ರೆ ನೆಟ್‌ಫ್ಲಿಕ್ಸ್‌ನ ಹೊಸ ಫೀಚರ್ಸ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ನೆಟ್‌ಫ್ಲಿಕ್ಸ್

ನೆಟ್‌ಫ್ಲಿಕ್ಸ್ ಪರಿಚಯಿಸುವ ಹೊಸ AD ಮತ್ತು SDH ಫೀಚರ್ಸ್‌ಗಳು ಸಾಕಷ್ಟು ವಿಶೇಷವಾಗಿದೆ. AD ಮತ್ತು SDH ಹೊಂದಿರುವ ಪ್ರದರ್ಶನಗಳು ಮತ್ತು ಚಲನಚಿತ್ರಗಳಿಗಾಗಿ ಹೊಸ ಬ್ಯಾಡ್ಜ್‌ಗಳನ್ನು ಸಹ ನೆಟ್‌ಫ್ಲಿಕ್ಸ್‌ ಪರಿಚಯಿಸಲಿದೆ. ಇನ್ನು ಈ ಬ್ಯಾಡ್ಜ್‌ಗಳು ವೆಬ್ ಮತ್ತು iOS ಆವೃತ್ತಿಗಳಲ್ಲಿ ಮೊದಲು ಕಾಣಿಸಿಕೊಳ್ಳುತ್ತವೆ. ಈ ಬ್ಯಾಡ್ಜ್‌ಗಳಿಂದ ವಿಕಲಚೇತನ ಬಳಕೆದಾರರು ತಮ್ಮ ಅಗತ್ಯಗಳಿಗೆ ಸೂಕ್ತವಾದ ಕಥೆಗಳನ್ನು ಅನ್ವೇಷಿಸಲು ಸುಲಭವಾಗುತ್ತದೆ. ಐಒಎಸ್‌ ಆವೃತ್ತಿಯಲ್ಲಿ ಪ್ರಕಟವಾದ ನಂತರ ಈ ಬ್ಯಾಡ್ಜ್‌ಗಳು ಆಂಡ್ರಾಯ್ಡ್‌ ಆವೃತ್ತಿಗೆ ಬರುತ್ತವೆ ಎನ್ನಲಾಗಿದೆ.

ನೆಟ್‌ಫ್ಲಿಕ್ಸ್‌

ಇನ್ನು ನೆಟ್‌ಫ್ಲಿಕ್ಸ್‌ "ಸೆಲೆಬ್ರೇಟಿಂಗ್ ಡಿಸೆಬಿಲಿಟಿ ವಿತ್ ಡೈಮೆನ್ಷನ್" ಎಂಬ ಟೈಟಲ್‌ ಹೊಂದಿರುವ ಹೊಸ ಸ್ಟೋರೇಜ್‌ ಅನ್ನು ಪ್ರಾರಂಭಿಸುತ್ತಿದೆ. ಇದರಲ್ಲಿ 50ಕ್ಕೂ ಹೆಚ್ಚು ಶೋಗಳು ಮತ್ತು ಚಲನಚಿತ್ರಗಳನ್ನು ನೋಡಬಹುದು. ಈ ಶೋಗಳು ಮತ್ತು ಚಲನಚಿತ್ರಗಳು ಒಳಗೊಂಡಿರುವ ಪಾತ್ರಗಳು ಅಥವಾ ವಿಕಲಾಂಗ ವ್ಯಕ್ತಿಗಳ ಕಥೆಗಳನ್ನು ಒಳಗೊಂಡಿದೆ. ಇದು ತನ್ನ AD ಮತ್ತು SDH ಫೀಚರ್ಸ್‌ಗಳನ್ನು ಲಿವಿಂಗ್ ರೂಮ್‌ನ ಹೊರಗೆ ಜೀವಕ್ಕೆ ತರಲು ಪ್ಲಾನ್‌ ಮಾಡಿದೆ.

ಭಾಷಾ

ಇನ್ನು ಭಾಷಾ ಬೆಂಬಲವನ್ನು ಗಮನಿಸುವುದಾದರೆ ಯಾವುದೇ ಶೋ ಅಥವಾ ಚಲನಚಿತ್ರ ಬಳಕೆದಾರರು ಮೂಲ ಭಾಷೆಯಲ್ಲಿ ವಿಷಯವನ್ನು ಪ್ರವೇಶಿಸಲು ಅವಕಾಶ ಸೀಮಿತವಾಗಿರುತ್ತಾರೆ. ಹಾಗಾಗಿ ಕಂಟೆಂಟ್ ಅನ್ನು ಭಾರತದಲ್ಲಿ ನಿರ್ಮಿಸಿದರೆ, ಕಿವುಡ ಮತ್ತು ಶ್ರವಣ ದೋಷದ ಆಡಿಯೊ ವಿವರಣೆಗಳಿಗೆ ಸಬ್‌ಟೈಟಲ್‌ಗಳನ್ನು ಸ್ಥಳೀಯ ಭಾಷೆಯಲ್ಲಿ ಒದಗಿಸಲಾಗುತ್ತದೆ. ಆದರೆ ಈ ವಿಸ್ತರಣೆಯೊಂದಿಗೆ, ಹೆಚ್ಚಿನ ಭಾಷೆಗಳು ಕೂಡ ಲಭ್ಯವಾಗಲಿದೆ. ಇದರಿಂದ ಬಳಕೆದಾರರು ಮಾತನಾಡುವ ಭಾಷೆಯಲ್ಲಿ ಜಾಗತಿಕ ಕಥೆಗಳನ್ನು ನೋಡುವುದಕ್ಕೆ ಸಾಧ್ಯವಾಗಲಿದೆ ಅನ್ನೊದು ನೆಟ್‌ಫ್ಲಿಕ್ಸ್‌ನ ವಾದವಾಗಿದೆ.

ಸ್ಮಾರ್ಟ್‌ಫೋನ್‌ನಲ್ಲಿ ನೆಟ್‌ಫ್ಲಿಕ್ಸ್‌ ಭಾಷೆಯನ್ನು ಬದಲಾಯಿಸುವುದು ಹೇಗೆ?

ಸ್ಮಾರ್ಟ್‌ಫೋನ್‌ನಲ್ಲಿ ನೆಟ್‌ಫ್ಲಿಕ್ಸ್‌ ಭಾಷೆಯನ್ನು ಬದಲಾಯಿಸುವುದು ಹೇಗೆ?

ನೆಟ್‌ಫ್ಲಿಕ್ಸ್‌ ಅಪ್ಲಿಕೇಶನ್‌ ನಿಮಗೆ ಹಲವು ಭಾಷೆಗಳ ಆಯ್ಕೆಯನ್ನು ನೀಡುತ್ತದೆ. ಅದರಂತೆ ನಿಮ್ಮ ಆಯ್ಕೆಯ ಭಾಷೆಯನ್ನು ಬಳಸಬಹುದಾಗಿದೆ. ಇದರಿಂದ ಅಪ್ಲಿಕೇಶನ್ ಅನ್ನು ಸುಲಭವಾಗಿ ಬಳಸಲು ನೀವು ಈ ಭಾಷೆಗಳ ನಡುವೆ ಬದಲಾಯಿಸಬಹುದಾಗಿದೆ. ನಿಮ್ಮ ಭಾಷೆಯನ್ನು ಬದಲಾಯಿಸಬೇಕೆಂದು ಕೊಂಡರೆ ಈ ಕೆಳಗಿನ ಹಂತಗಳನ್ನು ಅನುಸರಿಸಿ.
ಹಂತ:1 ಮೊದಲಿಗೆ ನಿಮ್ಮ ಮೊಬೈಲ್ ಡಿವೈಸ್‌ನಲ್ಲಿ ನೆಟ್‌ಫ್ಲಿಕ್ಸ್‌ ಅಪ್ಲಿಕೇಶನ್ ತೆರೆಯಿರಿ
ಹಂತ:2 ನಂತರ ಸ್ಕ್ರೀನ್‌ ಮೇಲಿನ ಬಲ ಮೂಲೆಯಲ್ಲಿರುವ ಪ್ರೊಫೈಲ್ ಐಕಾನ್‌ನಿಂದ ಡ್ರಾಪ್-ಡೌನ್ ಮೆನುವಿನ ಮೇಲೆ ಕ್ಲಿಕ್ ಮಾಡಿ ಮತ್ತು 'ಅಕೌಂಟ್‌' ಆಯ್ಕೆಮಾಡಿ.
ಹಂತ:3 'ಪ್ರೊಫೈಲ್ ಮತ್ತು ಪೇರೆಂಟ್‌ ಕಂಟ್ರೋಲ್ಸ್‌' ವಿಭಾಗದ ಅಡಿಯಲ್ಲಿ ನಿಮ್ಮ ಪ್ರೊಫೈಲ್‌ ಲ್ಯಾಂಗ್ವೇಜ್‌ ಬದಲಿಸಿ.
ಹಂತ:4 ನಂತರ ನಿಮ್ಮ ಆದ್ಯತೆಯ ಡಿಸ್‌ಪ್ಲೇ ಭಾಷೆಯನ್ನು ಆಯ್ಕೆ ಮಾಡಿ ಮತ್ತು ಸ್ಕ್ರೀನ್‌ ಕೆಳಭಾಗದಲ್ಲಿ ಸೇವ್‌ ಕ್ಲಿಕ್ ಮಾಡಿ.

Best Mobiles in India

Read more about:
English summary
Netflix adds new accessibility features with support for audio descriptions and more

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X