ನವೆಂಬರ್ 1ಕ್ಕೆ ಪ್ರಾರಂಭವಾಗುತ್ತಾ ನೆಟ್‌ಫ್ಲಿಕ್ಸ್‌ನ ಈ ಪ್ಲಾನ್‌!

|

ಇತ್ತೀಚಿನ ದಿನಗಳಲ್ಲಿ ಒಟಿಟಿ ಪ್ಲಾಟ್‌ಫಾರ್ಮ್‌ಗಳ ಪ್ರಭಾವ ಜಾಸ್ತಿಯಾಗಿದೆ. ಮನರಂಜನಯ ವ್ಯಾಖ್ಯಾನವನ್ನೇ ಬದಲಾಯಿಸಿರುವ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಸಾಕಷ್ಟು ಗಮನ ಸೆಳೆದಿವೆ. ಇದರಲ್ಲಿ ನೆಟ್‌ಫ್ಲಿಕ್ಸ್‌ ವೀಡಿಯೋ ಸ್ಟ್ರೀಮಿಂಗ್‌ ಅಪ್ಲಿಕೇಶನ್‌ ಕೂಡ ಒಂದಾಗಿದೆ. ನೆಟ್‌ಫ್ಲಿಕ್ಸ್‌ ತನ್ನ ವಿಶೇಷ ಚಂದಾದಾರಿಕೆಗಳ ಮೂಲಕ ಬಳಕೆದಾರರನ್ನು ಸೆಳೆದಿದೆ. ಆದರೆ ಇತ್ತೀಚಿಗೆ ನೆಟ್‌ಫ್ಲಿಕ್ಸ್‌ ತನ್ನ ಚಂದಾದಾರರ ಸಂಖ್ಯೆಯಲ್ಲಿ ಕುಸಿತವನ್ನು ಅನುಭವಿಸಿದೆ. ಇದರಿಂದ ತನ್ನತ್ತ ಚಂದಾದಾರರನ್ನು ಸೆಳೆಯುವುದಕ್ಕೆ ಇನ್ನಿಲ್ಲದ ಸರ್ಕಸ್‌ ನಡೆಸುತ್ತಿದೆ.

ನೆಟ್‌ಫ್ಲಿಕ್ಸ್‌

ಹೌದು, ನೆಟ್‌ಫ್ಲಿಕ್ಸ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಚಂದಾದಾರರ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶದಿಂದ ಹೊಸ ಹೊಸ ಪ್ಲಾನ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಇದರಲ್ಲಿ ಅಗ್ಗದ ಜಾಹಿರಾತು ಬೆಂಬಲಿತ ಪ್ಲಾನ್‌ ಕೂಡ ಒಂದಾಗಿದೆ. ಈಗಾಗಲೇ ಹಲವು ಭಾರಿ ಚರ್ಚೆಗೆ ಬಂದಿರುವ ಅಗ್ಗದ ಜಾಹಿರಾತು ಬೆಂಬಲಿತ ಪ್ಲಾನ್‌ ಇದೇ ನವೆಂಬರ್ 1 ರಂದು ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ. ಈ ಪ್ಲಾನ್‌ ಮೂಲಕ ಅಗ್ಗದ ಬೆಲೆಯಲ್ಲಿ ಚಂದಾದಾರರನ್ನು ಸೆಳೆಯುವ ಪ್ರಯತ್ನಕ್ಕೆ ನೆಟ್‌ಫ್ಲಿಕ್ಸ್‌ ಮುಂದಾಗಿದೆ. ಹಾಗಾದ್ರೆ ನೆಟ್‌ಫ್ಲಿಕ್ಸ್‌ನ ಅಗ್ಗದ ಜಾಹಿರಾತು ಬೆಂಬಲಿತ ಪ್ಲಾನ್‌ ವಿಶೇಷತೆ ಏನಿರಲಿದೆ? ಇದರ ಪ್ರಯೋಜನಗಳೇನು ಇದೆಲ್ಲದರ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಮುಂದೆ ಓದಿರಿ.

ನೆಟ್‌ಫ್ಲಿಕ್ಸ್‌

ನೆಟ್‌ಫ್ಲಿಕ್ಸ್‌ ಅಗ್ಗದ ಬೆಲೆಯಲ್ಲಿ ಚಂದಾದಾರಿಕೆ ಪ್ಲಾನ್‌ ನೀಡಲು ಮುಂದಾಗಿದೆ. ಈ ಪ್ಲಾನ್‌ಗಳು ಅಗ್ಗದ ಬೆಲೆಯನ್ನು ಹೊಂದಿದ್ದು, ಜಾಹಿರಾತು ಬೆಂಬಲಿಸಲಿವೆ. ಕೈ ಗೆಟಕುವ ಬೆಲೆಯಲ್ಲಿ ನೆಟ್‌ಫ್ಲಿಕ್ಸ್‌ ಪ್ರವೇಶ ಸಿಗುವುದರಿಂದ ಬಳಕೆದಾರರು ನೆಟ್‌ಫ್ಲಿಕ್ಸ್‌ ಅನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬ ಯೋಚನೆ ನೆಟ್‌ಫ್ಲಿಕ್ಸ್‌ದ್ದಾಗಿದೆ. ಇದಕ್ಕಾಗಿ ಕಳೆದ ಮೂರು ನಾಲ್ಕು ತಿಂಗಳಿನಿಂದಲೂ ಸಿದ್ಧತೆ ನಡೆಸಿದೆ. ಇನ್ನು ಈ ಪ್ಲಾನ್‌ ಮೊದಲು ಕೆಲವು ಆಯ್ದ ದೇಶಗಳಲ್ಲಿ ಮಾತ್ರ ಬಿಡುಗಡೆಯಾಗುವ ಸಾಧ್ಯತೆಯಿದೆ. ಇದು ಯುಎಸ್‌ನಲ್ಲಿ ಮಾಸಿಕ $7 ಬೆಲೆಯಲ್ಲಿ ಬರಲಿದೆ ಎನ್ನಲಾಗಿದೆ.

ಅಗ್ಗದ ಜಾಹೀರಾತು-ಬೆಂಬಲಿತ ಪ್ಲಾನ್‌ ಹೇಗೆ ಕಾರ್ಯನಿರ್ವಹಿಸಲಿದೆ?

ಅಗ್ಗದ ಜಾಹೀರಾತು-ಬೆಂಬಲಿತ ಪ್ಲಾನ್‌ ಹೇಗೆ ಕಾರ್ಯನಿರ್ವಹಿಸಲಿದೆ?

ಅಗ್ಗದ ನೆಟ್‌ಫ್ಲಿಕ್ಸ್ ಪ್ಲಾನ್‌ US ಪ್ರೇಕ್ಷಕರಿಗೆ ಮಾಸಿಕ $7 (ಸುಮಾರು 560ರೂ) ಮತ್ತು $9 (ಸುಮಾರು 720ರೂ) ಬೆಲೆಯಲ್ಲಿ ಬರುವ ಸಾದ್ಯತೆ ಇದೆ. ಇದು ಇದರ $15.49 (ಸುಮಾರು ರೂ. 1,237) ಬೆಲೆಯ ಸ್ಟ್ಯಾಂಡರ್ಡ್ ಪ್ಲಾನ್‌ಗೆ ವಿರುದ್ಧವಾಗಿದೆ. ಇದರ ಸ್ಟ್ಯಾಂಡರ್ಡ್ ಯೋಜನೆಯು 1080p ವೀಡಿಯೊ ಸ್ಟ್ರೀಮಿಂಗ್‌ನೊಂದಿಗೆ ಒಂದು ಸಮಯದಲ್ಲಿ ಎರಡು ಸ್ಕ್ರೀನ್‌ಗಳಲ್ಲಿ ನೋಡುವುದಕ್ಕೆ ಅವಕಾಶ ನೀಡಲಿದೆ. ಆದರೆ ಅಗ್ಗದ ಜಾಹೀರಾತು-ಬೆಂಬಲಿತ ಯೋಜನೆಯಲ್ಲಿ ಬಳಕೆದಾರರಿಗೆ ಆಫ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಲು ಮತ್ತು ವೀಕ್ಷಿಸಲು ಅನುಮತಿಸುವುದಿಲ್ಲ ಎಂದು ವರದಿಯಾಗಿದೆ.

ನೆಟ್‌ಫ್ಲಿಕ್ಸ್

ಇನ್ನು ನೆಟ್‌ಫ್ಲಿಕ್ಸ್ ಅಗ್ಗದ ಜಾಹಿರಾತು ಬೆಂಬಲಿತ ಪ್ಲಾನ್‌ನಲ್ಲಿ ವೆಬ್‌ ಸಿರೀಸ್‌ ನಲ್ಲಿ ಗಂಟೆಗೆ ನಾಲ್ಕು ನಿಮಿಷಗಳ ಕಾಲ ಜಾಹೀರಾತು ಪ್ರದರ್ಶನವಾಗಲಿದೆ. ಇದು ಪ್ರೀ ಆಡ್‌ಗಳನ್ನು ಹೊರತರಲಿದೆ. ಸದ್ಯ ಕಡಿಮೆ ಬೆಲೆಯ, ಜಾಹೀರಾತು-ಬೆಂಬಲಿತ ಶ್ರೇಣಿಯನ್ನು ಹೇಗೆ ಪ್ರಾರಂಭಿಸುವುದು, ಇದನ್ನು ಎಷ್ಟು ಪ್ಲಾಟ್‌ಫಾರ್ಮ್‌ಗಳಿಗೆ ಬೆಂಬಲಿಸುವಂತೆ ಮಾಡುವುದು ಎಂಬುದರ ಬಗ್ಗೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿಲ್ಲ ಎಂದು ನೆಟ್‌ಫ್ಲಿಕ್ಸ್ ಪ್ರತಿನಿಧಿ ವೆರೈಟಿಗೆ ತಿಳಿಸಿದ್ದಾರೆ.

ನೆಟ್‌ಫ್ಲಿಕ್ಸ್‌

ಪ್ರಸ್ತುತ ನೆಟ್‌ಫ್ಲಿಕ್ಸ್‌ ಪ್ಲಾಟ್‌ಫಾರ್ಮ್‌ ಭಾರತದಲ್ಲಿ ನಾಲ್ಕು ರೀತಿಯ ಪ್ಲಾನ್‌ಗಳನ್ನು ನೀಡುತ್ತಿದೆ. ಇದರಿಂದ ಬಳಕೆದಾರರು ತಮ್ಮ ಆಯ್ಕೆಯ ಪ್ಲಾನ್‌ಗಳನ್ನು ಆಯ್ಕೆ ಮಾಡಬಹುದಾಗಿದೆ. ಒಂದು ವೇಳೆ ಚಂದಾದಾರರು ತಮ್ಮ ಪ್ಲಾನ್‌ ಅನ್ನು ಬದಲಾಯಿಸಬೇಕೆಂದು ಕೊಂಡರೆ ಕೆಳಗಿನ ಹಂತಗಳನ್ನು ಅನುಸರಿಸಬಹುದಾಗಿದೆ.

ನಿಮ್ಮ ನೆಟ್‌ಫ್ಲಿಕ್ಸ್ ಚಂದಾದಾರಿಕೆ ಪ್ಲಾನ್‌ ಬದಲಾಯಿಸುವುದು ಹೇಗೆ?

ನಿಮ್ಮ ನೆಟ್‌ಫ್ಲಿಕ್ಸ್ ಚಂದಾದಾರಿಕೆ ಪ್ಲಾನ್‌ ಬದಲಾಯಿಸುವುದು ಹೇಗೆ?

ನಿಮ್ಮ ನೆಟ್‌ಫ್ಲಿಕ್ಸ್ ಚಂದಾದಾರಿಕೆ ಪ್ಲಾನ್‌ ಅನ್ನು ಅಪ್‌ಗ್ರೇಡ್ ಮಾಡಲು ಅಥವಾ ಡೌನ್‌ಗ್ರೇಡ್ ಮಾಡಲು ನೀವು ಪ್ಲಾನ್‌ ಮಾಡಿದ್ದರೆ ಈ ಕೆಳಗಿನ ಹಂತಗಳನ್ನು ಅನುಸರಿಸಿ.
ಹಂತ:1 ಮೊದಲಿಗೆ ನೆಟ್‌ಫ್ಲಿಕ್ಸ್ ಅಪ್ಲಿಕೇಶನ್ ತೆರೆಯಿರಿ ಮತ್ತು ಲಾಗಿನ್ ಮಾಡಿ
ಹಂತ:2 ನಂತರ ಮೆನುವಿನಲ್ಲಿ "ಖಾತೆಗಳು" ವಿಭಾಗಕ್ಕೆ ಹೋಗಿ
ಹಂತ:3 ಇದರಲ್ಲಿ "ಪ್ಲಾನ್‌ ಡಿಟೇಲ್ಸ್‌" ವರ್ಗದ ಅಡಿಯಲ್ಲಿ, ನೀವು "ಚೇಂಜ್‌ ಪ್ಲಾನ್‌" ಆಯ್ಕೆಯನ್ನು ನೋಡುತ್ತೀರಿ
ಹಂತ:4 ಈಗ ನಿಮ್ಮ ಆದ್ಯತೆಯ ಪ್ಲಾನ್‌ಗಳನ್ನು ಆಯ್ಕೆಮಾಡಿ ಮತ್ತು "ಕಂಟಿನ್ಯೂ" ಕ್ಲಿಕ್ ಮಾಡಿ
ಹಂತ:5 ಅಂತಿಮವಾಗಿ, "ಸೇವ್‌ ಆಂಡ್‌ ಅಪ್ಡೇಟ್‌" ಕ್ಲಿಕ್ ಮಾಡಿ ಮತ್ತು ನೀವು ಬಯಸಿದ ಪ್ಲಾನ್‌ಗೆ ಬದಲಾಗಿ.

Best Mobiles in India

English summary
Netflix is all set to launch its cheaper ad-supported plan on November:Report

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X