ಆದಾಯ ತೆರಿಗೆ ಕಟ್ಟಲು ಈಗ ಆಧಾರ್ ಸಾಕು..! ಹೊಸ ನಿಯಮ ಏನೇಳುತ್ತೆ..?

By Gizbot Bureau
|

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಚೊಚ್ಚಲ ಕೇಂದ್ರ ಬಜೆಟ್‌ನ್ನು ಮಂಡಿಸಿದ್ದಾರೆ. ಹೊಸ ವಿತ್ತ ನೀತಿ, ಆದಾಯ ತೆರಿಗೆ ನೀತಿಗಳನ್ನು ಹಣಕಾಸು ಸಚಿವೆ ತಮ್ಮ ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಹೌದು, ಹೊಸ ಆದಾಯ ತೆರಿಗೆ ನಿಯಮಗಳ ಪ್ರಕಾರ ಪ್ಯಾನ್ ಕಾರ್ಡ್‌ ಹಾಗೂ ಆಧಾರ್ ಕಾರ್ಡ್‌ಗಳನ್ನು ಶೀಘ್ರದಲ್ಲಿಯೇ ಪರಸ್ಪರ ಬದಲಾಯಿಸಬಹುದಾಗಿದೆ. ಇನ್ಮುಂದೆ ಆದಾಯ ತೆರಿಗೆ ರಿಟರ್ನ್ಸ್‌ ಫೈಲ್‌ ಮಾಡಲು ಪ್ಯಾನ್‌ ಅಥವಾ ಆಧಾರ್ ಕಾರ್ಡ್‌ನಲ್ಲಿ ಯಾವುದಾದರೂ ಒಂದನ್ನು ಬಳಸಬಹುದಾಗಿದೆ. ಸದ್ಯ ನೀವು ಐಟಿಆರ್ ಫೈಲ್‌ ಮಾಡಲು ಆಧಾರ್ ಮತ್ತು ಪ್ಯಾನ್‌ ಕಾರ್ಡ್ ಎರಡನ್ನು ಬಳಸಬೇಕಾಗಿದೆ.

ಪ್ಯಾನ್‌ ಇಲ್ಲದಿದ್ದರೆ ಸಮಸ್ಯೆಯಿಲ್ಲ

ಪ್ಯಾನ್‌ ಇಲ್ಲದಿದ್ದರೆ ಸಮಸ್ಯೆಯಿಲ್ಲ

ತಮ್ಮ ಚೊಚ್ಚಲ ಕೇಂದ್ರ ಬಜೆಟ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ತೆರಿಗೆ ಪಾವತಿದಾರರಿಗೆ ಅನುಕೂಲ ಮಾಡಿಕೊಡಲು ಹೊಸ ಕ್ರಮವೊಂದನ್ನು ಘೋಷಿಸಿದ್ರು. ಐಟಿಆರ್ ಫೈಲಿಂಗ್‌ನ್ನು ಇನ್ನಷ್ಟು ಸುಲಭಗೊಳಿಸಲು ಪ್ಯಾನ್ ಮತ್ತು ಆಧಾರ್‌ ಕಾರ್ಡ್ನ್ನು ಪರಸ್ಪರ ಬದಲಾಯಿಸಬಹುದಾಗಿದ್ದು, ಪ್ಯಾನ್ ಕಾರ್ಡ್‌ ಇಲ್ಲದವರು ತಮ್ಮ ಆಧಾರ್ ಸಂಖ್ಯೆಯನ್ನು ಉಲ್ಲೇಖಿಸಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಬಹುದಾಗಿದೆ. ಇದಷ್ಟೇ ಅಲ್ಲದೇ ಪ್ಯಾನ್ ಕಾರ್ಡ್‌ ಎಲ್ಲೆಲ್ಲಿ ಬಳಸುತ್ತೇವೆಯೋ ಅಲ್ಲೆಲ್ಲಾ ಆಧಾರ್ ಕಾರ್ಡ್‌ ಬಳಸಬಹುದಾಗಿದೆ.

'ಆಧಾರ'ದ ಮೇಲೆ ಪ್ಯಾನ್‌

'ಆಧಾರ'ದ ಮೇಲೆ ಪ್ಯಾನ್‌

ಪ್ರಸ್ತಾವಿತ ನಿಯಮಗಳ ಪ್ರಕಾರ, ಆದಾಯ ತೆರಿಗೆ ಇಲಾಖೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದಿಂದ (ಯುಐಡಿಎಐ) ಡೆಮೋಗ್ರಫಿಕ್ ಡೇಟಾ ಪಡೆದ ನಂತರ ವ್ಯಕ್ತಿಗೆ ಆಧಾರ್‌ ಆಧಾರದ ಮೇಲೆ ಪ್ಯಾನ್ ಕಾರ್ಡ್ ನೀಡುತ್ತದೆ.

ಲಿಂಕ್ ಆಗಿದ್ದರೆ ಸುಲಭ

ಲಿಂಕ್ ಆಗಿದ್ದರೆ ಸುಲಭ

ಈಗಾಗಲೇ ತೆರಿಗೆ ಪಾವತಿದಾರ ಆಧಾರ್‌ನ್ನು ಪ್ಯಾನ್‌ನೊಂದಿಗೆ ಲಿಂಕ್ ಮಾಡಿದ್ದರೆ, ಆದಾಯ ತೆರಿಗೆ ಕಾಯ್ದೆಯಡಿ ಪ್ಯಾನ್‌ಗೆ ಬದಲಾಗಿ ಆಧಾರ್ ಬಳಸಲು ವ್ಯಕ್ತಿಗೆ ಆಯ್ಕೆ ಸಿಗುತ್ತದೆ.

ಹೆಚ್ಚಿನ ವಹಿವಾಟಿನ ಮೇಲೆ ನಿಗಾ

ಹೆಚ್ಚಿನ ವಹಿವಾಟಿನ ಮೇಲೆ ನಿಗಾ

ಹೆಚ್ಚಿನ ಮೌಲ್ಯದ ವಹಿವಾಟುಗಳನ್ನು ಪತ್ತೆಹಚ್ಚಲು ಹಣಕಾಸು ಸಚಿವಾಲಯ ಮತ್ತೊಂದು ಹೆಜ್ಜೆ ಇಟ್ಟಿದ್ದು, ಕೆಲವು ನಿಗದಿತ ವಹಿವಾಟುಗಳಿಗೆ ಪ್ಯಾನ್ / ಆಧಾರ್‌ ಕಾರ್ಡ್‌ ಉಲ್ಲೇಖ ಮತ್ತು ದೃಢೀಕರಣವನ್ನು ಕಡ್ಡಾಯಗೊಳಿಸಿದೆ. ನಿಗದಿತ ವಹಿವಾಟುಗಳಿಗೆ ಸಂಬಂಧ ಪಟ್ಟಂತೆ ದಾಖಲೆಗಳನ್ನು ಸ್ವೀಕರಿಸುವ ವ್ಯಕ್ತಿ ಪ್ಯಾನ್ ಅಥವಾ ಆಧಾರ್‌ ಕಾರ್ಡ್‌ನ ದೃಢೀಕರಣ ಖಚಿತಪಡಿಸಿಕೊಳ್ಳಬೇಕು ಎಂಬ ನಿಯಮವನ್ನು ಕೂಡ ಬಜೆಟ್ ಪರಿಚಯಿಸಿದೆ. ಇಷ್ಟೇ ಅಲ್ಲದೇ ನಿಯಮಗಳನ್ನು ಕಡ್ಡಾಯವಾಗಿ ಜಾರಿಗೆ ತರಲು ದಂಡದ ನಿಬಂಧನೆಗಳನ್ನು ತಿದ್ದುಪಡಿ ಮಾಡಲು ಸಹ ಹಣಕಾಸು ಇಲಾಖೆ ಪ್ರಸ್ತಾಪ ಇಟ್ಟಿದೆ.

ಪ್ಯಾನ್‌ಗೆ ಆಧಾರ್‌ ಬೇಕೇ ಬೇಕು..!

ಪ್ಯಾನ್‌ಗೆ ಆಧಾರ್‌ ಬೇಕೇ ಬೇಕು..!

ಪ್ರಸ್ತುತ, ಆದಾಯ ತೆರಿಗೆ ಕಾಯ್ದೆಯಂತೆ ನಿರ್ದಿಷ್ಟ ದಿನಾಂಕದೊಳಗೆ ಪ್ಯಾನ್‌ನ್ನು ಆಧಾರ್‌ನೊಂದಿಗೆ ಸಂಪರ್ಕಿಸಿಲ್ಲ ಎಂದರೆ ಪ್ಯಾನ್‌ ಕಾರ್ಡ್‌ನ್ನು ಅಮಾನ್ಯ ಮಾಡಬಹುದಾಗಿದೆ. ಸದ್ಯ ಹಣಕಾಸು ಸಚಿವಾಲಯ ಹಿಂದಿನ ವ್ಯವಹಾರಗಳನ್ನು ರಕ್ಷಿಸಲು ಹೊಸ ತಂತ್ರವನ್ನು ಕಂಡುಹಿಡಿದುಕೊಂಡಿದ್ದು, ಒಬ್ಬ ವ್ಯಕ್ತಿಯು ಆಧಾರ್ ಸಂಖ್ಯೆಯನ್ನು ತಿಳಿಸಲು ವಿಫಲವಾದರೆ, ಅಂತಹ ವ್ಯಕ್ತಿಗೆ ನೀಡಲಾದ ಪ್ಯಾನ್ ನಿಷ್ಕ್ರಿಯಗೊಳಿಸಬಹುದು ಎಂದು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.

Best Mobiles in India

Read more about:
English summary
New Aadhaar And Pan Card Rules Post Budget Announcement

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X