ಜಿಬೋರ್ಡ್‌ ಬಗ್‌ನಿಂದ ಮೊಬೈಲ್‌ ಲಾಕ್‌ ಆಗಿದೆಯೇ..? ಇಲ್ಲಿದೆ ಪರಿಹಾರ..!

By Gizbot Bureau
|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ದಿನದಿಂದ ದಿನಕ್ಕೆ ಹೊಸ ಸೇವೆಗಳನ್ನು ಬಿಡುಗಡೆ ಮಾಡುತ್ತಿದ್ದು, ಆ ಸೇವೆಗಳ ಪರಿಣಾಮಕಾರಿ ಬಳಕೆಗೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಆದರೆ, ಇತ್ತೀಚಿನ ಸೇವೆ ಗೂಗಲ್‌ ಕೀಬೋರ್ಡ್‌ ಬಗ್ಗೆ ಬಳಕೆದಾರರಲ್ಲಿ ಅಸಮಾಧಾನ ಕಂಡುಬಂದಿದೆ. ಗೂಗಲ್ ಫೋರಂ, ಟ್ವಿಟ್ಟರ್ ಮತ್ತು ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಜಿಬೋರ್ಡ್‌ ಬಗ್ಗೆ ಬಳಕೆದಾರರು ಬರೆದುಕೊಂಡಿದ್ದು, ಆಪ್‌ ಆಗಾಗ ಕ್ರ್ಯಾಶ್ ಆಗುತ್ತದೆ ಮತ್ತು ಕಾರ್ಯನಿರ್ವಹಿಸುವುದಿಲ್ಲ ಎಂದು ದೂರಿದ್ದಾರೆ.

ಹೊಸ ಅಪ್‌ಡೇಟ್‌ನಲ್ಲಿ ಸಮಸ್ಯೆ

ಹೊಸ ಅಪ್‌ಡೇಟ್‌ನಲ್ಲಿ ಸಮಸ್ಯೆ

ಭಾರತದ ಹಲವು ಪ್ರಾದೇಶಿಕ ಭಾಷೆಗಳನ್ನು ಒಳಗೊಂಡಂತೆ ವಿಶ್ವದ ಹೆಚ್ಚಿನ ಭಾಷೆಗಳಲ್ಲಿ ಟೈಪಿಂಗ್‌ನ ಸರಳ ಅನುಭವ ನೀಡುವ ಜಿಬೋರ್ಡ್‌, ಕನಿಷ್ಠ ಯುಐ ವಿನ್ಯಾಸ ಹುಡುಕುವವರಿಗೆ ಹೆಚ್ಚಿನ ಆದ್ಯತೆಯ ಆಂಡ್ರಾಯ್ಡ್ ಕೀಬೋರ್ಡ್ ಆಗಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಆದರೆ, ಮೇಲೆ ವಿವರಿಸಿದ ದೋಷಗಳು ಡಿಸೆಂಬರ್ 17ರ ನಂತರ ಕಂಡುಬಂದಿದೆ. ಗೂಗಲ್ ಪ್ಲೇ ಸ್ಟೋರ್ ಮೂಲಕ ಇತ್ತೀಚಿನ ಅಪ್‌ಡೇಟ್‌ ಪಡೆದಿರುವ ಜಿಬೋರ್ಡ್‌ ಸಮಸ್ಯೆಯನ್ನು ತಾನೇ ಎಳೆದುಕೊಂಡಿದೆ.

ಸಮಸ್ಯೆ ಪರಿಹಾರ

ಸಮಸ್ಯೆ ಪರಿಹಾರ

ಬಳಕೆದಾರರ ಪ್ರತಿಕ್ರಿಯೆಯನ್ನು ಆಲಿಸಿರುವ ಗೂಗಲ್‌ ತನ್ನ ಆಂಡ್ರಾಯ್ಡ್ ಹೆಲ್ಪ್ ವೇದಿಕೆಯಲ್ಲಿ ಸಮಸ್ಯೆಯನ್ನು ಬಗೆಹರಿಸಿದೆ. "ಆಂಡ್ರಾಯ್ಡ್ 7.1 ಮತ್ತು ಅದಕ್ಕಿಂತ ಕೆಳಗಿನ ಆವೃತ್ತಿಯ ಜಿಬೋರ್ಡ್ ಬಳಕೆದಾರರಿಗೆ ಇತ್ತೀಚಿನ ಅಪ್‌ಡೇಟ್‌ನಲ್ಲಿ ಬಂದ ದೋಷದ ಬಗ್ಗೆ ನಮಗೆ ಅರಿವಿದೆ. ಈ ಸಮಸ್ಯೆಗೆ (8.9.14) ಪರಿಹಾರವನ್ನು ಹೊರತರಲಾಗಿದ್ದು, ಹೆಚ್ಚಿನ ಸಾಧನಗಳಲ್ಲಿ ಅಪ್ಲಿಕೇಶನ್ ಸ್ವಯಂಚಾಲಿತವಾಗಿ ಅಪ್‌ಡೇಟ್‌ ಆಗುತ್ತದೆ. ಕೆಲವು ಬಳಕೆದಾರರು ಅಪ್‌ಡೇಟ್‌ಗಾಗಿ ತಮ್ಮ ಸಾಧನವನ್ನು ಮರುಹೊಂದಿಸಬೇಕಾಗಿದೆ ಎಂದು ಗೂಗಲ್‌ ಸಪೋರ್ಟ್‌ ವೇದಿಕೆಯಲ್ಲಿ ಗೂಗಲ್‌ ಉದ್ಯೋಗಿ ಝಾಕ್‌ ಪಿ ಪೋಸ್ಟ್‌ ಮಾಡಿದ್ದಾರೆ.

ಸರಳ ವಿಧಾನ

ಸರಳ ವಿಧಾನ

ಜಿಬೋರ್ಡ್‌ ಕಾರ್ಯವಿಧಾನವನ್ನು ನೀವೇ ಸರಳವಾಗಿ ಸರಿಪಡಿಸಿಕೊಳ್ಳಬಹುದು. ಅದಕ್ಕಾಗಿ ನಿಮ್ಮ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ನಲ್ಲಿ ಸೆಟ್ಟಿಂಗ್ಸ್‌ಗೆ ತೆರಳಿ. ನಂತರ ಅಲ್ಲಿ, ಅಪ್ಲಿಕೇಶನ್ಸ್‌ ಆಯ್ಕೆಯನ್ನು ಟ್ಯಾಪ್ ಮಾಡಿ, ಅಲ್ಲಿ Gbaord ಅಪ್ಲಿಕೇಶನ್‌ನ್ನು ಆಯ್ಕೆ ಮಾಡಿ. ನಂತರ ಅಂತಿಮವಾಗಿ ಡೇಟಾ ಮತ್ತು ಸಂಗ್ರಹ ತೆರವುಗೊಳಿಸುವ ಆಯ್ಕೆಯನ್ನು ಕ್ಲಿಕ್ ಮಾಡಿ. ಇದು ಜಿಬೋರ್ಡ್‌ನಲ್ಲಿ ಕಾಣಿಸಿಕೊಂಡಿರುವ ದೋಷವನ್ನು ಸರಿಪಡಿಸಲು ಸಹಾಯ ಮಾಡುತ್ತದೆ, ಆದರೆ, ಡೇಟಾ ಮತ್ತು ಸಂಗ್ರಹ ತೆರವುಗೊಳಿಸುವುದರಿಂದ ನೀವು ಕೀಬೋರ್ಡ್ ಸೆಟ್ಟಿಂಗ್ಸ್‌ನಲ್ಲಿ ಉಳಿಸಿದ ಪದಗಳು ಮತ್ತು ಡಿಕ್ಷನರಿ ಶಾರ್ಟ್‌ಕಟ್‌ಗಳು ಅಳಿಸುತ್ತವೆ.

ಭೌತಿಕ ಕೀಬೋರ್ಡ್‌

ಭೌತಿಕ ಕೀಬೋರ್ಡ್‌

ಫೋನ್‌ ಅನ್‌ಲಾಕ್‌ ಮಾಡುವುದಕ್ಕಾಗಿ ಪಾಸ್‌ವರ್ಡ್ ನಮೂದಿಸಲು ಕೀಬೋರ್ಡ್ ಬಳಸಲು ಸಾಧ್ಯವಾಗದ ಬಳಕೆದಾರರಲ್ಲಿ ನೀವು ಒಬ್ಬರಾಗಿದ್ದರೆ, ನಿಮಗೆ ಲಭ್ಯವಿರುವ ಏಕೈಕ ಪರಿಹಾರವೆಂದರೆ ನಿಮ್ಮ ಫೋನ್ ಅನ್ನು ಭೌತಿಕ ಕೀಬೋರ್ಡ್‌ಗೆ ಸಂಪರ್ಕಿಸಬೇಕು. ನಂತರ ಭೌತಿಕ ಕೀಬೋರ್ಡ್‌ ಮೂಲಕ ಫ್ಯಾಕ್ಟರಿ ರಿಸೆಟ್‌ ಮಾಡಿದರೆ ನಿಮ್ಮ ಸ್ಮಾರ್ಟ್‌ಫೋನ್‌ನ್ನು ಮತ್ತೆ ಬಳಸಬಹುದು. ಫ್ಯಾಕ್ಟರಿ ರಿಸೆಟ್‌ ಮಾಡಿದಾಗ ನಿಮ್ಮ ಫೋನ್‌ನಲ್ಲಿ ಬ್ಯಾಕ್‌ಅಪ್‌ ಆಗಿರದ ಡೇಟಾ ಡಿಲೀಟ್‌ ಆಗುತ್ತದೆ.

ರಿಮೋಟ್‌ ಇನ್‌ಸ್ಟಾಲ್‌

ರಿಮೋಟ್‌ ಇನ್‌ಸ್ಟಾಲ್‌

ಇನ್ನೊಂದು ಆಯ್ಕೆಯನ್ನು ನೀವು ಪ್ರಯತ್ನಿಸಬಹುದು. ಇದು ಕಾರ್ಯನಿರ್ವಹಿಸುತ್ತದೆ ಎಂಬ ಖಾತರಿಯಿಲ್ಲ. ಕಂಪ್ಯೂಟರ್‌ನಲ್ಲಿ ನಿಮ್ಮ ಸ್ಮಾರ್ಟ್‌ಫೋನ್‌ನ ಪ್ಲೇ ಸ್ಟೋರ್ ಅಪ್ಲಿಕೇಶನ್‌ನಿಂದ ಕೀಬೋರ್ಡ್‌ನ್ನು ಇನ್‌ಸ್ಟಾಲ್‌ ಮಾಡಿ. ರೀಬೂಟ್ ಮಾಡಿದ ನಂತರ, ಕೀಬೋರ್ಡ್‌ ಆಯ್ದುಕೊಳ್ಳುವ ಆಯ್ಕೆ ನಿಮಗೆ ಸಿಗಬಹುದು. ಗೂಗಲ್‌ ಸಪೋರ್ಟ್‌ ವೇದಿಕೆಯಲ್ಲಿ ತಿಳಿಸಿರುವಂತೆ ಈಗಾಗಲೇ ಸಮಸ್ಯೆ ಪರಿಹರಿಸಲಾಗಿದೆ, ಆದರೆ, ದೋಷವನ್ನು ಸಂಪೂರ್ಣವಾಗಿ ಪರಿಹರಿಸಲಾಗಿದೆ ಎಂಬುದು ಸ್ಪಷ್ಟವಾಗುವವರೆಗೆ ಹಳೆ ಆವೃತ್ತಿಯನ್ನೇ ಬಳಸುವುದು ಉತ್ತಮ.

Most Read Articles
Best Mobiles in India

Read more about:
English summary
New Bug On Google Gboard May Lock You Out Of Your Smartphone

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X