ಗೂಗಲ್ ಮ್ಯಾಪ್ ನಿಂದ ಪೋಲೀಸರ ಕೈಗೆ ಸಿಕ್ಕಿಬೀಳೋದನ್ನು ತಪ್ಪಿಸಿಕೊಳ್ಳಿ!

By Gizbot Bureau
|

ಟ್ರಾಫಿಕ್ ನಲ್ಲಿ ಎಲ್ಲಿ ಪೋಲೀಸರ ಕೈಗೆ ಸಿಕ್ಕಿ ಬಿದ್ದು ಬಿಡುತ್ತೀರೋ ಎಂಬ ಭಯವೇ? ಇದೀಗ ಭಾರತದ ಹಲವು ಸಿಟಿಗಳಲ್ಲಿ ಸ್ಪೀಡ್ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ನಿಗದಿತ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ನಿಮ್ಮ ವಾಹನವನ್ನು ಚಲಾಯಿಸಿದರೆ ಟ್ರಾಫಿಕ್ ಪೋಲೀಸರ ಕೈಗೆ ಸಿಕ್ಕಿಬೀಳುವುದು ಗ್ಯಾರೆಂಟಿ. ಹಾಗಾಗಿ ಈ ಸಮಸ್ಯೆ ಆಗದಂತೆ ತಡೆಯುವ ನಿಟ್ಟಿನಲ್ಲಿ ಗೂಗಲ್ ಮ್ಯಾಪ್ ನಿಮ್ಮ ಸಹಾಯಕ್ಕೆ ಬರಲಿದೆ.

{video1}

40 ದೇಶಗಳಲ್ಲಿ ಬಿಡುಗಡೆ:

40 ದೇಶಗಳಲ್ಲಿ ಬಿಡುಗಡೆ:

ಹೊಸ ಸ್ಪೀಡ್ ಲಿಮಿಟ್ ಮತ್ತು ಸ್ಪೀಡ್ ಕ್ಯಾಮರಾ ರಿಪೋರ್ಟಿಂಗ್ ಫೀಚರ್ ನ್ನು ಕಳೆದ ಕೆಲವು ವರ್ಷಗಳಿಂದ ಟೆಸ್ಟಿಂಗ್ ಮಾಡಿದ ನಂತರ ಇದೀಗ ವಿಶ್ವದಾದ್ಯಂತ ಕೆಲವು ದೇಶಗಳಲ್ಲಿ ಅಂದರೆ ಸುಮಾರು 40 ದೇಶಗಳಲ್ಲಿ ಗೂಗಲ್ ಇದನ್ನು ಬಿಡುಗಡೆಗೊಳಿಸುತ್ತಿದ್ದು ಅದರಲ್ಲಿ ಭಾರತವೂ ಕೂಡ ಸೇರಿದೆ.

ಓದಿರಿ : ಫೋನ್‌ ಖರೀದಿಸಲು ಸುಗ್ಗಿಕಾಲ!..ಮತ್ತೆ ಬಂತು 'ಅಮೆಜಾನ್ ಫ್ಯಾಬ್‌ ಫೋನ್ ಫೆಸ್ಟ್'‌!ಓದಿರಿ : ಫೋನ್‌ ಖರೀದಿಸಲು ಸುಗ್ಗಿಕಾಲ!..ಮತ್ತೆ ಬಂತು 'ಅಮೆಜಾನ್ ಫ್ಯಾಬ್‌ ಫೋನ್ ಫೆಸ್ಟ್'‌!

ಸ್ಪೀಡ್ ಲಿಮಿಟ್ ಬಗ್ಗೆ ಮಾಹಿತಿ:

ಸ್ಪೀಡ್ ಲಿಮಿಟ್ ಬಗ್ಗೆ ಮಾಹಿತಿ:

ಹೊಸ ಫೀಚರ್ ಬಳಕೆದಾರರಿಗೆ ಅವರು ಚಲಿಸುತ್ತಿರುವ ಮಾರ್ಗದ ಸ್ಪೀಡ್ ಲಿಮಿಟ್ ಬಗ್ಗೆ ಎಚ್ಚರಿಕೆ ನೀಡುತ್ತದೆ ಜೊತೆಗೆ ಸ್ಪೀಡ್ ಕ್ಯಾಮರಾಗಳು ಮತ್ತು ಮೊಬೈಲ್ ಸ್ಪೀಡ್ ಕ್ಯಾಮರಾ ಬಗ್ಗೆ ಕೂಡ ತಿಳಿಸುತ್ತದೆ.

ವೇಝ್ ನೇವಿಗೇಷನ್:

ವೇಝ್ ನೇವಿಗೇಷನ್:

ಹೊಸ ಸ್ಪೀಡ್ ಲಿಮಿಟ್ ಮತ್ತು ಸ್ಪೀಡ್ ಕ್ಯಾಮರಾ ಫೀಚರ್ ವೇಝ್ ನೇವಿಗೇಷನ್ ಆಪ್ ನಲ್ಲಿ ಈಗಾಗಲೇ ಲಭ್ಯವಿದೆ.2013ರಲ್ಲಿ ಗೂಗಲ್ ಇದನ್ನು ವಶಪಡಿಸಿಕೊಂಡಿತ್ತು. ಗೂಗಲ್ ಮ್ಯಾಪ್ ನಲ್ಲಿ ಇರುವ ಈ ಫೀಚರ್ ಕೂಡ ವೇಝ್ ಆಪ್ ನಲ್ಲಿ ಕೆಲಸ ಮಾಡಿದಂತೆಯೇ ಕಾರ್ಯ ನಿರ್ವಹಿಸುತ್ತದೆ ಮತ್ತು ಬಳಕೆದಾರರಿಗೆ ತಾವು ಚಲಿಸುತ್ತಿರುವ ಮಾರ್ಗದ ಸ್ಪೀಡ್ ಲಿಮಿಟ್ ಬಗ್ಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸುತ್ತದೆ.

ಮ್ಯಾನುವಲ್ ಎಂಟ್ರಿಗೂ ಅವಕಾಶ:

ಮ್ಯಾನುವಲ್ ಎಂಟ್ರಿಗೂ ಅವಕಾಶ:

ಹೆಚ್ಚುವರಿಯಾಗಿ ಆಪ್ ನ ಒಳಗೆ ಮಾನ್ಯುವಲ್ ಆಗಿ ಸ್ಪೀಡ್ ಕ್ಯಾಮರಾ ಮತ್ತು ಮೊಬೈಲ್ ಸ್ಪೀಡ್ ಕ್ಯಾಮರಾ ಬಗ್ಗೆ ವರದಿ ಮಾಡುವುದಕ್ಕೆ ಬಳಕೆದಾರರಿಗೆ ಅವಕಾಶವಿರುತ್ತದೆ. ನೇವಿಗೇಷನ್ ಆನ್ ಆಗಿದ್ದಾಗ ಸ್ಪೀಡ್ ಕ್ಯಾಮರಾ ಐಕಾನ್ ನ್ನು ಇತರೆ ಬಳಕೆದಾರರು ಗಮನಿಸುವುದಕ್ಕೆ ಸಾಧ್ಯವಾಗುತ್ತದೆ. ಇದರ ಬಗ್ಗೆ ನೋಟಿಫಿಕೇಷನ್ ಕೂಡ ಬಳಕೆದಾರರಿಗೆ ಲಭ್ಯವಾಗುತ್ತದೆ.

“+“ ಐಕಾನ್ ಬಳಸಿ:

“+“ ಐಕಾನ್ ಬಳಸಿ:

ನೇವಿಗೇಷನ್ ಪೇಜಿನ ಬಲಭಾಗದಲ್ಲಿ "+" ಐಕಾನ್ ನ್ನು ಟ್ಯಾಪ್ ಮಾಡುವ ಮೂಲಕ ಬಳಕೆದಾರರು ಸ್ಪೀಡ್ ಕ್ಯಾಮರಾ ಬಗೆಗಿನ ವರದಿಯನ್ನು ಮಾಡಬಹುದು. ಮೊಬೈಲ್ ಸ್ಪೀಡ್ ಕ್ಯಾಮರಾವನ್ನು ಹೊರತು ಪಡಿಸಿ ಅಪಘಾತ ಮತ್ತು ಟ್ರಾಫಿಕ್ ದಟ್ಟಣೆಯ ಬಗ್ಗೆ ಕೂಡ ವರದಿ ಮಾಡುವುದಕ್ಕೆ ಬಳಕೆದಾರರಿಗೆ ಅವಕಾಶವಿರುತ್ತದೆ.

ಹಂತಹಂತವಾಗಿ ಬಿಡುಗಡೆ:

ಹಂತಹಂತವಾಗಿ ಬಿಡುಗಡೆ:

ಭಾರತದಲ್ಲಿ ಹಂತಹಂತವಾಗಿ ಈ ಫೀಚರ್ ಬಿಡುಗಡೆಗೊಳ್ಳುತ್ತಿರುವುದರಿಂದಾಗಿ ಸದ್ಯ ಕೆಲವು ಬಳಕೆದಾರರು ಮಾತ್ರವೇ ಗೂಗಲ್ ಮ್ಯಾಪ್ ನಲ್ಲಿ ಈ ಬಗ್ಗೆ ವರದಿಯನ್ನು ಮಾಡುತ್ತಿದ್ದಾರೆ ಮತ್ತು ಎಲ್ಲಾ ಬಳಕೆದಾರರಿಗೆ ಲಭ್ಯವಾಗುವುದಕ್ಕೆ ಇನ್ನೂ ಕೆಲವು ದಿನಗಳು ಬೇಕಾಗುತ್ತದೆ ಎಂದು ತಿಳಿದುಬಂದಿದೆ.

ರೈಲ್ವೇ ಮಾಹಿತಿ:

ರೈಲ್ವೇ ಮಾಹಿತಿ:

ಮತ್ತೊಂದು ಸುದ್ದಿಯು ಹೇಳುವ ಪ್ರಕಾರ ಭಾರತದಲ್ಲಿ ಗೂಗಲ್ ಮ್ಯಾಪ್ ನಲ್ಲಿ ರಿಯಲ್ ಟೈಮ್ ರೈಲ್ವೇ ಮಾಹಿತಿ ಲಭ್ಯವಾಗುತ್ತದೆ ಮತ್ತು ಟ್ರೈನಿನ ಸಮಯ ಜೊತೆಗೆ ಟ್ರಾವೆಲ್ ಮಾಡಲು ಒಂದು ಸ್ಥಳದಿಂದ ಇನ್ನೊಂದು ಬೇಕಾಗುವ ಸಮಯದ ವಿವರವನ್ನು ಕೂಡ ಇದು ನೀಡುತ್ತದೆ ಎಂದು ಹೇಳಲಾಗಿದೆ.

Best Mobiles in India

English summary
New Google Maps Feature Lets You Avoid Traffic Cops

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X