ನಾಯ್ಸ್ ಸಂಸ್ಥೆಯಿಂದ ಹೊಸ ಹೆಡ್‌ಫೋನ್‌ ಲಾಂಚ್‌; 50 ಗಂಟೆಗಳ ಪ್ಲೇಟೈಮ್

|

ನಾಯ್ಸ್ ಕಂಪೆನಿಯು ಸ್ಮಾರ್ಟ್‌ಫೋನ್‌ ಹಾಗೂ ಇನ್ನಿತರೆ ಡಿವೈಸ್‌ಗಳಿಗೆ ಅವಶ್ಯಕವಾದ ಸ್ಮಾರ್ಟ್‌ ಉತ್ಪನ್ನಗಳನ್ನು ತಯಾರಿಸಿ ಹೆಸರುಗಳಿಸಿದೆ. ಅದರಲ್ಲೂ ಸ್ಮಾರ್ಟ್ ವೇರಬಲ್ಸ್ ಹಾಗೂ ವೈರ್‌ಲೆಸ್ ಹೆಡ್‌ಫೋನ್‌ಗಳು ಹೆಚ್ಚಿಗೆ ಆಕರ್ಷಿತವಾಗಿವೆ. ಇದರ ನಡುವೆ ಈಗ ನಾಯ್ಸ್‌ ಹೊಸ ಹೆಡ್‌ಫೋನ್‌ಗಳನ್ನು ಪರಿಚಯಿಸಿದ್ದು, ಈ ಹೆಡ್‌ಫೋನ್‌ 50 ಗಂಟೆಗಳ ಪ್ಲೇಟೈಮ್ ನೀಡಲಿದೆ.

ಭಾರತೀಯ ಮಾರುಕಟ್ಟೆ

ಹೌದು, ಭಾರತೀಯ ಮಾರುಕಟ್ಟೆಯಲ್ಲಿ ನಾಯ್ಸ್ ಕಂಪೆನಿಯು ವೈರ್‌ಲೆಸ್ ಹೆಡ್‌ಫೋನ್‌ಗಳನ್ನು ಬಿಡುಗಡೆ ಮಾಡಿದ್ದು, ಈ ಮೂಲಕ ತನ್ನ ಉತ್ಪನ್ನದ ಪೋರ್ಟ್‌ಫೋಲಿಯೊವನ್ನು ವಿಸ್ತರಿಸಿಕೊಂಡಿದೆ. 40ms ವರೆಗಿನ ಕಡಿಮೆ ಲೇಟೆನ್ಸಿ ಮೋಡ್ ಆಯ್ಕೆ ಇವುಗಳಲ್ಲಿದ್ದು, ಹ್ಯಾಂಡ್ಸ್-ಫ್ರೀ ಕಾಲ್, ಸಿರಿ ಮತ್ತು ಗೂಗಲ್ ಅಸಿಸ್ಟೆಂಟ್, ಇನ್‌ಬಿಲ್ಟ್‌ ಮೈಕ್, ಎಫ್‌ಎಮ್‌ ರೇಡಿಯೋ ಸೇರಿದಂತೆ ಇನ್ನಿತರೆ ಫೀಚರ್ಸ್‌ ಪಡೆದುಕೊಂಡಿವೆ. ಹಾಗಿದ್ರೆ ಈ ಹೆಡ್‌ಫೋನ್‌ಗಳ ಬೆಲೆ ಎಷ್ಟು?, ಪ್ರಮುಖ ಫೀಚರ್ಸ್‌ ಅನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.

ಪ್ರಮುಖ ಫೀಚರ್ಸ್‌

ಪ್ರಮುಖ ಫೀಚರ್ಸ್‌

ನಾಯ್ಸ್ ವೈರ್‌ಲೆಸ್ ಹೆಡ್‌ಫೋನ್‌ ಕಿವಿಗೆ ಫಿಟ್‌ ಆಗುವ ಆಕರ್ಷಕ ಶೈಲಿಯನ್ನು ಪಡೆದುಕೊಂಡಿದ್ದು, ಹಗುರವಾಗಿದೆ. ಬಳಕೆದಾರರ ತಲೆಯ ಗಾತ್ರವನ್ನು ಅವಲಂಬಿಸಿ ಅದನ್ನು ಸರಿಹೊಂದಿಸಿಕೊಳ್ಳಬಹುದಾಗಿದೆ. ಇನ್ನು ವಾಟರ್‌ ರೆಸಿಸ್ಟೆಂಟ್‌ಗಾಗಿ ಈ ಹೆಡ್‌ಫೋನ್‌ IPX5 ರೇಟಿಂಗ್‌ ಪಡೆದುಕೊಂಡಿದ್ದು, ಇದರೊಂದಿಗೆ ಹ್ಯಾಂಡ್ಸ್-ಫ್ರೀ ಕಾಲ್, ಸಿರಿ ಮತ್ತು ಗೂಗಲ್ ಅಸಿಸ್ಟೆಂಟ್, ಇನ್‌ಬಿಲ್ಟ್‌‌ ಮೈಕ್, ಎಫ್‌ಎಮ್‌ ರೇಡಿಯೋ ಆಯ್ಕೆ ಈ ಹೆಡ್‌ಫೋನ್‌ನಲ್ಲಿದೆ. ಇದರ ಜೊತೆಗೆ ಹೆಡ್‌ಫೋನ್‌ನ ಬ್ಯಾಟರಿ ಖಾಲಿಯಾದಾಗ ಅದನ್ನು ವೈರ್ಡ್ ಆಗಿಯೂ ಸಹ ಬಳಕೆ ಮಾಡಿಕೊಳ್ಳಬಹುದಾಗಿದೆ.

ಕನೆಕ್ಟಿವಿಟಿ ಆಯ್ಕೆ

ಕನೆಕ್ಟಿವಿಟಿ ಆಯ್ಕೆ

ಈ ಹೆಚ್‌ಫೋನ್‌ನ ಎಡ ಇಯರ್ ಕಪ್ ನಲ್ಲಿ ಮ್ಯೂಸಿಕ್ ಪ್ಲೇಬ್ಯಾಕ್ ಅನ್ನು ನಿಯಂತ್ರಿಸಲು ಮೂರು ಬಟನ್‌ಗಳನ್ನು ನೀಡಲಾಗಿದೆ. ಇದರ ಜೊತೆಗೆ ಯುಎಸ್‌ಬಿ-ಸಿ ಪೋರ್ಟ್, ಎಸ್‌ಡಿ ಕಾರ್ಡ್ ಸ್ಲಾಟ್ ಮತ್ತು AUX ಪೋರ್ಟ್ ಸಹ ಇದರಲ್ಲಿದೆ. ಹಾಗೆಯೇ ಈ ಹೆಡ್‌ಫೋನ್‌ ಬ್ಲೂಟೂತ್ v5.3, ಡ್ಯುಯಲ್ ಪೇರಿಂಗ್ ಫೀಚರ್ಸ್‌ನಿಂದ ಸಜ್ಜುಗೊಂಡಿದ್ದು, ವೇಗದ ಹಾಗೂ ಸ್ಥಿರ ಸಂಪರ್ಕವನ್ನು ಬೆಂಬಲಿಸುತ್ತದೆ. ಜೊತೆಗೆ ಈ ಹೆಡ್‌ಫೋನ್‌ ಆಂಡ್ರಾಯ್ಡ್‌ ಹಾಗೂ ಐಓಎಸ್‌ ಎರಡಕ್ಕೂ ಹೊಂದಿಕೆಯಾಗುತ್ತದೆ.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ನಾಯ್ಸ್ನ ಹೆಡ್‌ಫೋನ್‌ಗೆ ಭಾರತದಲ್ಲಿ 1,499 ರೂ. ಗಳನ್ನು ನಿಗದಿ ಮಾಡಲಾಗಿದೆ. ಈ ಹೆಡ್‌ಫೋನ್ ಬೋಲ್ಡ್ ಬ್ಲ್ಯಾಕ್, ಕಾಮ್ ವೈಟ್ ಮತ್ತು ಸೆರೀನ್ ಬ್ಲೂ ಎಂಬ ಮೂರು ಬಣ್ಣದ ವೇರಿಯಂಟ್‌ನಲ್ಲಿ ಲಭ್ಯವಿದೆ. ಹಾಗೆಯೇ, ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು ಮೈಂತ್ರಾ ವೆಬ್‌ಸೈಟ್‌ಗಳ ಮೂಲಕ ಖರೀದಿ ಮಾಡಿದರೆ ಆಕರ್ಷಕ ಆಪರ್‌ ಸಹ ಲಭ್ಯವಾಗಲಿದೆ.

ಗೆಸ್ಚರ್‌ ಕಂಟ್ರೋಲ್‌

ಇನ್ನು ಇತ್ತೀಚೆಗೆ ನಾಯ್ಸ್ ಭಾರತದ ಮೊದಲ ಗೆಸ್ಚರ್‌ ಕಂಟ್ರೋಲ್‌ TWS ಬಡ್ಸ್ ಇಂಟೆಲಿಬಡ್ಸ್ ಅನ್ನು ಪರಿಚಯಿಸಿದೆ. ಈ ಬಡ್‌ಗಳಿಗೆ 4,999ರೂ. ಬೆಲೆ ನಿಗದಿ ಮಾಡಲಾಗಿದ್ದು, ಇವು ಕಪ್ಪು ಮತ್ತು ಬಿಳಿ ಬಣ್ಣದ ವೇರಿಯಂಟ್‌ನಲ್ಲಿ ಲಭ್ಯ ಇವೆ. ಈ ಇಂಟೆಲಿಬಡ್ಸ್ ಅನ್ನು ಕತ್ತನ್ನು ಅಲುಗಾಡಿಸುವ ಮೂಲಕ ಕಂಟ್ರೋಲ್‌ ಮಾಡಬಹುದಾಗಿದ್ದು, ಭಾರತೀಯರಿಗೆ ಹೊಸ ಅನುಭವ ನೀಡಲಿವೆ.

ನಾಯ್ಸ್‌ಫಿಟ್‌ ಸ್ಮಾರ್ಟ್

ಈ ನಾಯ್ಸ್‌ ಇಂಟೆಲಿಬಡ್ಸ್ ಅನ್ನು ನಾಯ್ಸ್‌ಫಿಟ್‌ ಸ್ಮಾರ್ಟ್ ಆಪ್‌ ಬೆಂಬಲದೊಂದಿಗೆ ಅನಾವರಣಗೊಳಿಸಿದ್ದು, ಕ್ಯಾಮೆರಾ ಕಂಟ್ರೋಲ್‌ ಹಾಗೂ ಫಾಸ್ಟ್‌ ಮ್ಯೂಟ್ ಆಯ್ಕೆಯನ್ನು ಇದು ಪಡೆದುಕೊಂಡಿದೆ. ಈ ಇಂಟೆಲಿಬಡ್ಸ್ ಅನ್ನು ಒಮ್ಮೆ ಚಾರ್ಜ್‌ ಮಾಡಿದರೆ 36 ಗಂಟೆಗಳ ವರೆಗೆ ಬಳಕೆ ಮಾಡಬಹುದಾಗಿದೆ. ಇದಕ್ಕಾಗಿಯೇ 600mAh ಸಾಮರ್ಥ್ಯದ ಬ್ಯಾಟರಿಯಿಂದ ಇದನ್ನು ಪ್ಯಾಕ್‌ ಮಾಡಲಾಗಿದೆ. ಇದಿಷ್ಟೇ ಅಲ್ಲದೆ, ಸ್ಮಾರ್ಟ್ ಬ್ಯಾಟರಿ ಆಪ್ಟಿಮೈಸೇಶನ್ ಮತ್ತು ಇನ್‌ಸ್ಟಾ ಚಾರ್ಜ್ ಆಯ್ಕೆ ಸಹ ಇದರಲ್ಲಿದ್ದು, ಹೆಚ್ಚಿನ ಸಮಯ ಪ್ಲೇಟೈಮ್‌ ನೀಡುವಂತೆ ಮಾಡಬಹುದಾಗಿದೆ.

Best Mobiles in India

English summary
Noise Company has made a name for itself by manufacturing smart products that are essential for smartphones and other devices. Meanwhile, a new headphone has been released.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X