ಶೀಘ್ರದಲ್ಲೇ ಗೂಗಲ್‌ ವರ್ಕ್‌ಸ್ಪೇಸ್‌ ಸೇರಲಿದೆ ಹೊಸ ಉಪಯುಕ್ತ ಫೀಚರ್ಸ್‌!

|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ತನ್ನ ಬಳಕೆದಾರರಿಗೆ ಹಲವು ಸೇವೆಗಳನ್ನು ನೀಡುತ್ತಾ ಬಂದಿದೆ. ಅಲ್ಲದೆ ಬಳಕೆದಾರರ ಅನುಕೂಲಕ್ಕಾಗಿ ಹಲವು ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ತನ್ನ ವರ್ಕ್‌ಸ್ಪೇಸ್‌ ಬಳಕೆದಾರರಿಗೆ ಜಿಮೇಲ್‌ನ ರಿಡಿಸೈನ್‌ ಆವೃತ್ತಿಯನ್ನು ಪರಿಚಯಿಸುವುದಾಗಿ ಗೂಗಲ್‌ ಘೋಷಿಸಿದೆ. ಗೂಗಲ್‌ ಚಾಟ್‌, ಗೂಗಲ್‌ ಮೀಟ್‌ ಮತ್ತು ಗೂಗಲ್‌ ಸ್ಪೇಸಸ್‌ ಅನ್ನು ತನ್ನ ಎಂಟರ್‌ಪ್ರೈಸ್ ಆಫರಿಂಗ್‌ನಲ್ಲಿ ಉತ್ತಮವಾಗಿ ಸಂಯೋಜಿಸಲು ಪ್ರಯತ್ನಿಸುತ್ತಿದೆ.

ಗೂಗಲ್‌

ಹೌದು, ಗೂಗಲ್‌ ಜಿಮೇಲ್‌ನಲ್ಲಿ ರಿ ಡಿಸೈನ್‌ ಮಾಡುವುದಾಗಿ ಹೇಳಿದೆ. ಕಳೆದ ವರ್ಷ ಘೋಷಣೆಯಾದ ವರ್ಕ್‌ಸ್ಪೇಸ್‌ ಗ್ರಾಹಕರಿಗೆ ಕಂಪನಿಯ ಇಮೇಲ್ ರಿ ಡಸೈನ್‌ ಲಭ್ಯವಾಗಲಿದೆ. ರಿ ಡಿಸೈನ್‌ ಮಾಡಲಾದ ಜಿ-ಮೇಲ್‌ ಮುಂದಿನ ವಾರದಿಂದ ಕಂಪನಿಯ "ಸಂಯೋಜಿತ ವೀಕ್ಷಣೆ" ಅನ್ನು ಒಳಗೊಂಡಿರುತ್ತದೆ. ಗೂಗಲ್‌ ಹೇಳಿರುವಂತೆ ಹೊಸ ರಿ ಡಿಸೈನ್‌ 2022ರ ಎರಡನೇ ತ್ರೈಮಾಸಿಕದ ವೇಳೆಗೆ ಎಲ್ಲಾ ಬಳಕೆದಾರರಿಗೆ ಲಭ್ಯವಾಗಲಿದೆ. ಹಾಗಾದ್ರೆ ಗೂಗಲ್‌ನ ಜಿಮೇಲ್‌ ರಿ ಡಿಸೈನ್‌ ಹೇಗಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌ನ

ಗೂಗಲ್‌ನ ವರ್ಕ್‌ಸ್ಪೇಸ್‌ ಬ್ಲಾಗ್‌ನಲ್ಲಿನ ಅಪ್ಡೇಟ್‌ ಪ್ರಕಾರ ವರ್ಕ್‌ಸ್ಪೇಸ್‌ ಬಳಕೆದಾರರು ಫೆಬ್ರವರಿ 8 ರಿಂದ ಹೊಸ ಸಂಯೋಜಿತ ವೀಕ್ಷಣೆಯನ್ನು ಪರೀಕ್ಷಿಸಲು ಪ್ರಾರಂಭಿಸಬಹುದು. ಜಿ-ಮೇಲ್‌, ಚಾಟ್‌ ಮತ್ತು ಗೂಗಲ್‌ ಮೀಟ್‌ ಎಲ್ಲವನ್ನೂ ಪ್ರವೇಶಿಸಬಹುದಾದ ಒಂದೇ ಲೇಔಟ್ ಬದಲಿಗೆ, ಗೂಗಲ್‌ ಬಳಕೆದಾರರಿಗೆ ಮೇಲ್, ಚಾಟ್, ಸ್ಪೇಸ್‌ಗಳು ಮತ್ತು ಮೀಟ್ ಎಂಬ ನಾಲ್ಕು ಬಟನ್‌ಗಳ ನಡುವೆ ಬದಲಾಯಿಸುವ ಸಾಮರ್ಥ್ಯವನ್ನು ನೀಡುತ್ತದೆ. ಇದರಿಂದ ಬಳಕೆದಾರರು ಆಯ್ಕೆ ಮಾಡಿದ ಯಾವುದೇ ಸೇವೆಯ ವಿಸ್ತೃತ ವೀಕ್ಷಣೆಯನ್ನು ಮಾತ್ರ ನೋಡಬಹುದಾಗಿದೆ. ಆದರೆ ನೋಟಿಫಿಕೇಶನ್‌ ಬಬಲ್ಸ್‌ ಬಳಕೆದಾರರನ್ನು ಅಪ್ಡೇಟ್‌ ಮಾಡಲಿದೆ ಎಂದು ಗೂಗಲ್‌ ಹೇಳಿಕೊಂಡಿದೆ.

ಗೂಗಲ್

ಗೂಗಲ್ ಹೇಳಿರುವಂತೆ ಜಿ-ಮೇಲ್‌ನ ಹೊಸ ಲೇಔಟ್‌ಗೆ ಅಪ್ಡೇಟ್‌ ಮಾಡುವ ಬಳಕೆದಾರರು ಇಂದು ಲಭ್ಯವಿರುವ ಮೇಲ್ ಮತ್ತು ಲೇಬಲ್ ಆಯ್ಕೆಗಳ ಅದೇ ಪಟ್ಟಿಯನ್ನು ಕಾಣಬಹುದು. ಈಗಾಗಲೇ ಗೂಗಲ್ ತನ್ನ ಬಳಕೆದಾರರಿಗೆ ವರ್ಕ್‌ಸ್ಪೇಸ್ ಟೂಲ್ಸ್‌ ಬದಲಾವಣೆಗಳನ್ನು ಘೋಷಿಸಿತು. ಇದರಿಂದ ಬಳಕೆದಾರರು ಗೂಗಲ್‌ ಮೀಟ್‌ ಲಿಂಕ್ ಅನ್ನು ರಚಿಸದೆಯೇ ಜಿ-ಮೇಲ್‌ ಮೂಲಕವೇ ಇತರ ಬಳಕೆದಾರರಿಗೆ ಕರೆಗಳನ್ನು ಮಾಡಲು ಸಾಧ್ಯವಾಗುತ್ತದೆ. ಗೂಗಲ್‌ ಸ್ಪೇಸಸ್‌ ಟ್ಯಾಬ್ ವರ್ಕ್‌ಸ್ಪೇಸ್‌ ಟೂಲ್‌ಗಳೊಂದಿಗೆ ಸಂಯೋಜನೆಗೊಳ್ಳುತ್ತದೆ. ಕನ್ವರ್‌ ಸೇಷನ್‌ ಹಿಸ್ಟರಿಯನ್ನು ತೋರಿಸುವಾಗ ಡಾಕ್ಯುಮೆಂಟ್‌ಗಳನ್ನು ಶೇರ್‌ ಮಾಡಲು ಬಳಕೆದಾರರಿಗೆ ಅನುಮತಿಸುತ್ತದೆ. ಡಿಸೈನ್‌ ಮಾಡಲಾದ ಜಿ-ಮೇಲ್‌ ಮುಂದಿನ ವಾರದಿಂದ ಕಂಪನಿಯ "ಸಂಯೋಜಿತ ವೀಕ್ಷಣೆ" ಅನ್ನು ಒಳಗೊಂಡಿರುತ್ತದೆ

ಗೂಗಲ್‌ನ

ಇನ್ನು ಗೂಗಲ್‌ನ ಹೊಸ ಜಿ-ಮೇಲ್‌ ಲೇಔಟ್‌ ಅನ್ನು ಪ್ರಯತ್ನಿಸಲು ಆಯ್ಕೆ ಮಾಡದ ಗೂಗಲ್‌ ವರ್ಕ್‌ಸ್ಪೇಸ್‌ ಬಳಕೆದಾರರು ಸ್ವಯಂಚಾಲಿತವಾಗಿ ಏಪ್ರಿಲ್‌ನಲ್ಲಿ ಹೊಸ ಲೇಔಟ್‌ಗೆ ಬದಲಾಯಿಸಬಹುದಾಗಿದೆ. ಗೂಗಲ್‌ ಬಳಕೆದಾರರಿಗೆ ಬದಲಾವಣೆಯನ್ನು ಸ್ವಲ್ಪ ಸಮಯದವರೆಗೆ ಹಿಂತಿರುಗಿಸಲು ಅನುಮತಿಸುತ್ತದೆ. ಆದರೆ 2022 ಎರಡನೇ ತ್ರೈಮಾಸಿಕದ ಕೊನೆಯಲ್ಲಿ ಎಲ್ಲಾ ಬಳಕೆದಾರರಿಗೆ ಹೊಸ ವಿನ್ಯಾಸವನ್ನು ಶಾಶ್ವತವಾಗಿ ಸಕ್ರಿಯಗೊಳಿಸಲಾಗುತ್ತದೆ ಎಂದು ಗೂಗಲ್‌ ಹೇಳಿಕೊಂಡಿದೆ.

ರಿಮೋಟ್

ಪ್ರಸ್ತುತ ಸಮಯದಲ್ಲಿ ರಿಮೋಟ್ ವರ್ಕಿಂಗ್ ಅನ್ನು ಹೆಚ್ಚಿನ ಕಂಪನಿಗಳು ಅಳವಡಿಸಿಕೊಂಡಿರುವುದರಿಂದ ಗ್ರಾಹಕರಿಗೆ ಸುಲಭವಾಗಿ ಪ್ರವೇಶಿಸಲು ಕಂಪನಿಯು ತನ್ನ ವರ್ಕ್‌ಸ್ಪೇಸ್ ಕೊಡುಗೆಗಳನ್ನು ಸಂಯೋಜಿಸಲು ಕೆಲಸ ಮಾಡುತ್ತಿದೆ. ಗೂಗಲ್‌ ನ ಸಂಯೋಜಿತ ವೀಕ್ಷಣೆಯು ಗೂಗಲ್‌ ವರ್ಕ್‌ಸ್ಪೇಸ್‌ ಬ್ಯುಸಿನೆಸ್, ಎಂಟರ್‌ಪ್ರೈಸಸ್‌, ಎಜುಕೇಶನ್‌, ಫ್ರಂಟ್‌ಲೈನ್‌, ನಾನ್‌ಪ್ರಾಫಿಟ್‌, ಜಿ ಸ್ಯೂಟ್‌ ಬೇಸಿಕ್‌ ಮತ್ತು ಬ್ಯುಸಿನೆಸ್‌ ಅಕೌಂಟ್‌ಗಳಿಗೆ ಲಭ್ಯವಿರುತ್ತದೆ. ಎಂಟರ್‌ಪ್ರೈಸ್ ಅಲ್ಲದ ವರ್ಕ್‌ಸ್ಪೇಸ್ ಬಳಕೆದಾರರಿಗೆ ಈ ಫೀಚರ್ಸ್‌ ಯಾವಾಗ ಲಭ್ಯವಿರುತ್ತದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಬ್ಯವಾಗಿಲ್ಲ.

Best Mobiles in India

English summary
Google Workspace customers will be permanently upgraded to the new layout by Q2 2022.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X