ಅರೆ ಏನಾಶ್ಚರ್ಯ ಫೋನ್ ಸ್ಕ್ರೀನ್‌ನಿಂದ ಬ್ಯಾಟರಿ ದುಪ್ಪಟ್ಟು

By Shwetha
|

ಫೋನ್ ಬ್ಯಾಟರಿ ಸಮಸ್ಯೆ ಎಲ್ಲರನ್ನೂ ಹೆಚ್ಚು ಕಾಡುವಂಥದ್ದು. ನೀವು ಆನ್‌ಲೈನ್ ಬಳಸಿ ಬಳಸದೇ ಇರಿ ಇಲ್ಲವೇ ನಿಮ್ಮ ಫೋನ್‌ನಲ್ಲಿ ಹಾಡು ಆಲಿಸುವುದು, ಗೇಮ್ಸ್ ಆಡುವುದು ಮೊದಲಾದ ಕ್ರಿಯೆಗಳನ್ನು ನಡೆಸದೇ ಇದ್ದರೂ ಫೋನ್ ಬಿಸಿಯಾಗಿ ತನ್ನಷ್ಟಕ್ಕೇ ಬ್ಯಾಟರಿ ಇಳಿಮುಖವಾಗುತ್ತದೆ ಇಲ್ಲವೇ ನನ್ನನ್ನು ಚಾರ್ಜ್ ಮಾಡಿ ಎಂಬ ಆರ್ತನಾದವನ್ನು ಫೋನ್‌ನಲ್ಲಿ ಮೊಳಗುವ ಸಂದೇಶ ನಿಮ್ಮನ್ನು ಬಂದು ತಲುಪುತ್ತದೆ.

ಓದಿರಿ: ಆಂಡ್ರಾಯ್ಡ್ ಡಿವೈಸ್ ಸ್ನೇಹಿ ಬ್ಯಾಟರಿ ಟಿಪ್ಸ್

ಈ ಸಮಸ್ಯೆಯನ್ನು ದೂರವಾಗಿಸಲು ವಿಜ್ಞಾನಿಗಳು, ಫೋನ್ ತಯಾರಕರು ಸಾಕಷ್ಟು ಸಂಶೋಧನೆಗಳನ್ನು ನಡೆಸುತ್ತಲೇ ಬಂದಿದ್ದಾರೆ. ಕೆಲವೊಂದು ಸಂಶೋಧನೆಗಳು ಫಲಕಾರಿ ಪರಿಣಾಮವನ್ನು ಬೀರಿದ್ದರೂ ಇನ್ನು ಕೆಲವು ಪ್ರಗತಿಯ ಹಂತದಲ್ಲಿದೆ. ಆದರೆ ಇಂದಿನ ಲೇಖನದಲ್ಲಿ ನಾವು ನಿಮಗಾಗಿ ಪ್ರಸ್ತುತಪಡಿಸುತ್ತಿರುವ ವಿಷಯ ನಿಮ್ಮನ್ನು ನಿಬ್ಬೆರಗಾಗಿಸುವುದು ಖಂಡಿತ. ಇದು ನಿಮ್ಮ ಫೋನ್ ಬ್ಯಾಟರಿಯನ್ನು ದುಪ್ಪಟ್ಟುಗೊಳಿಸುತ್ತದೆ ಎಂದರೆ ನೀವು ಖಂಡಿತ ಆಶ್ಚರ್ಯಪಡುತ್ತೀರಿ.

ವನಾಡೆ ಬೋರಾಟೆ ಗ್ಲಾಸ್

ವನಾಡೆ ಬೋರಾಟೆ ಗ್ಲಾಸ್

ವನಾಡೆ ಬೋರಾಟೆ ಗ್ಲಾಸ್ ಅನ್ನು ಸೆಮಿ ಅಫಿಯೋನ್ ಮತ್ತು ರೇನ್‌ಹಾರ್ಡ್ ನೆಸ್ಪರ್ ತಂಡವು ಸಂಶೋಧಿಸಿದ್ದು ಇದನ್ನು ಫೋನ್‌ಗೆ ಎಂಬೆಡ್ ಮಾಡಿದಾಗ ಇದು ಇಲೆಕ್ಟ್ರೋಡ್ ಲಿಥಿಯಮ್ ಇಯಾನ್ ಬ್ಯಾಟರಿಯಾಗಿ ಮಾರ್ಪಡುತ್ತದೆ.

ಇಲೆಕ್ಟ್ರೋಡ್ ಮಧ್ಯಸ್ಥ

ಇಲೆಕ್ಟ್ರೋಡ್ ಮಧ್ಯಸ್ಥ

ಒಂದು ವಸ್ತುವಿನಿಂದ ಇನ್ನೊಂದು ವಸ್ತುವಿಗೆ ಇಲೆಕ್ಟ್ರಿಕ್ ಕರೆಂಟ್ ಅನ್ನು ಇಲೆಕ್ಟ್ರೋಡ್ ಮಧ್ಯಸ್ಥನಂತೆ ರವಾನಿಸುತ್ತದೆ.

ಕೆಮಿಕಲ್ ಅಂಶ

ಕೆಮಿಕಲ್ ಅಂಶ

ಗ್ಲಾಸ್‌ನ ರಚನೆಗೆ ಬಳಸಲಾದ ಸಾಮಾಗ್ರಿ ಕೆಮಿಕಲ್ ಅಂಶಗಳಾಗಿದ್ದು ಅಂದರೆ ವನಾಡಿಯಮ್ ಆಕ್ಸೈಡ್ ಮತ್ತು ಲಿಥಿಯಮ್ ಬೋರೇಟ್ ಆಗಿದೆ.

ಕೋಟಿಂಗ್

ಕೋಟಿಂಗ್

ಗ್ರಾಫೈಟ್ ಆಕ್ಸೈಡ್ ಕೋಟಿಂಗ್‌ನೊಂದಿಗೆ ಈ ಕೆಮಿಕಲ್‌ಗಳನ್ನು ನಂತರ ಕವರ್ ಮಾಡಲಾಗುತ್ತದೆ. ಸಾಮಾಗ್ರಿಯ ಇಲೆಕ್ಟ್ರೋಡ್ ಅಂಶಗಳನ್ನು ಹೆಚ್ಚಿಸಲು ಕೋಟಿಂಗ್ ಅನ್ನು ಮಾಡಲಾಗುತ್ತದೆ.

ಬ್ಯಾಟರಿ ಸಂಗ್ರಹ ಸಾಮರ್ಥ್ಯ

ಬ್ಯಾಟರಿ ಸಂಗ್ರಹ ಸಾಮರ್ಥ್ಯ

ಹೆಚ್ಚಿನ ಚಾರ್ಜ್ ಅನ್ನು ಹೀರಿಕೊಳ್ಳುವ ಅಂತೆಯೇ ಬ್ಯಾಟರಿ ಸಂಗ್ರಹ ಸಾಮರ್ಥ್ಯವುಳ್ಳ ಸಾಮಾಗ್ರಿಯನ್ನು ಹುಡುಕುವುದೇ ಈ ಯೋಜನೆಯ ಹಿಂದಿರುವ ಉದ್ದೇಶವಾಗಿದೆ. ಇನ್ನು ಇದು ಅತಿ ಕಡಿಮೆ ದರದ್ದಾಗಿದೆ ಕೂಡ.

ದೀರ್ಘ ಸಮಯದವರೆಗೆ ಬಾಳಿಕೆ

ದೀರ್ಘ ಸಮಯದವರೆಗೆ ಬಾಳಿಕೆ

ಸುರಕ್ಷಿತವಾಗಿರುವ ಮತ್ತು ದೀರ್ಘ ಸಮಯದವರೆಗೆ ಬಾಳಿಕೆ ಬರುವಂತಹ ಬ್ಯಾಟರಿಗಳನ್ನು ನಿರ್ಮಿಸುವ ಇರಾದೆ ನಮ್ಮದಾಗಿದ್ದು ಇನ್ನೂ ನಮ್ಮ ಅನ್ವೇಷಣೆಯನ್ನು ಪ್ರಬಲವಾಗಿಸುವ ಹಾದಿಯಲ್ಲಿದ್ದೇವೆ ಎಂದು ಡಾ ಅಫಿಯೋನ್ ತಿಳಿಸಿದ್ದಾರೆ.

ಕಾರನ್ನು ಚಾಲನೆ ಮಾಡುವ ಶಕ್ತಿ

ಕಾರನ್ನು ಚಾಲನೆ ಮಾಡುವ ಶಕ್ತಿ

ವನಾಡೆ ಬೋರಾಟೆ ಗ್ಲಾಸ್ ಅನ್ನು ಸ್ಮಾರ್ಟ್‌ಫೋನ್ ಬ್ಯಾಟರಿ ಜೀವನವನ್ನು ಅಭಿವೃದ್ಧಿಪಡಿಸುವ ತಾಕತ್ತನ್ನು ಪಡೆದುಕೊಂಡಿದ್ದು ಕಾರನ್ನು ಚಾಲನೆ ಮಾಡುವ ಶಕ್ತಿ ಇದರಲ್ಲಿದೆ.

ತಂತ್ರಜ್ಞಾನ

ತಂತ್ರಜ್ಞಾನ

ಇಲೆಕ್ಟ್ರಿಕ್ ಕಾರುಗಳು, ಬೋಟ್ಸ್ ಮತ್ತು ಬೈಕ್‌ಗಳನ್ನು ಈ ತಂತ್ರಜ್ಞಾನವನ್ನು ಬಳಸಿ ಚಾಲನೆ ಮಾಡಬಹುದಾಗಿದೆ.

ಗ್ಲಾಸ್ ಗಾಳೀ ಕೇಂದ್ರ ಮತ್ತು ಸೌರ ಚಾಲಿತ ಸಸ್ಯ

ಗ್ಲಾಸ್ ಗಾಳೀ ಕೇಂದ್ರ ಮತ್ತು ಸೌರ ಚಾಲಿತ ಸಸ್ಯ

ವನಾಡೆ ಬೋರಾಟೆ ಗ್ಲಾಸ್ ಗಾಳೀ ಕೇಂದ್ರ ಮತ್ತು ಸೌರ ಚಾಲಿತ ಸಸ್ಯಗಳಲ್ಲಿ ಬಳಸಬಹುದಾಗಿದೆ. ಅಂದರೆ ಇದನ್ನು ಬಳಸಿ ಶಕ್ತಿಯುತ ಇಲೆಕ್ಟ್ರಿಸಿಟಿಯನ್ನು ತಯಾರಿಸಬಹುದಾಗಿದೆ.

ಸಮಸ್ಯೆಗೆ ಪರಿಹಾರ

ಸಮಸ್ಯೆಗೆ ಪರಿಹಾರ

ಅಂತೂ ಈ ಸಂಶೋಧನೆ ಯಶಸ್ವಿಯಾದರೆ ಫೋನ್ ಬ್ಯಾಟರಿ ಖಾಲಿಯಾಗುವ ಸಮಸ್ಯೆಗೆ ಪರಿಹಾರ ದೊರಕುವುದು ಖಂಡಿತ.

Best Mobiles in India

English summary
a new glass material developed by researchers will allow your battery last for double the amount of time they used to with normal lithium-ion batteries.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X