ನಾಯ್ಸ್‌ ಸಂಸ್ಥೆಯಿಂದ ಹೊಸ ಇಯರ್‌ಫೋನ್‌ ಲಾಂಚ್‌! 50 ಗಂಟೆಗಳ ಪ್ಲೇಬ್ಯಾಕ್ ವಿಶೇಷ!

|

ಮ್ಯೂಸಿಕ್‌ ಪ್ರಿಯರ ನೆಚ್ಚಿನ ಇಯರ್‌ಫೋನ್‌ ಬ್ರ್ಯಾಂಡ್‌ಗಳಲ್ಲಿ ನಾಯ್ಸ್‌ ಕಂಪೆನಿ ಒಂದಾಗಿದೆ. ನಾಯ್ಸ್‌ ಕಂಪೆನಿಯ ಇಯರ್‌ಫೋನ್‌ಗಳು ತಮ್ಮ ಆಕರ್ಷಕ ವಿನ್ಯಾಸದ ಕಾರಣಕ್ಕೆ ಮ್ಯೂಸಿಕ್‌ ಪ್ರಿಯರ ಗಮನಸೆಳೆದಿವೆ. ಈಗಾಗಲೇ ಹಲವು ಭಿನ್ನ ಶ್ರೇಣಿಯ ಇಯರ್‌ಫೋನ್‌ಗಳನ್ನು ನಾಯ್ಸ್‌ ಕಂಪೆನಿ ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಸದ್ಯ ಇದೀಗ ನಾಯ್ಸ್‌ ಕಂಪೆನಿ ಭಾರತದಲ್ಲಿ ಹೊಸ ನಾಯ್ಸ್‌ ಬಡ್ಸ್‌ VS204 TWS ಇಯರ್‌ಫೋನ್‌ ಬಿಡುಗಡೆ ಮಾಡಿದೆ. ಈ ಇಯರ್‌ಫೋನ್‌ನಲ್ಲಿ ಸಿಂಗಲ್‌ ಚಾರ್ಜ್‌ ಮೂಲಕ ಒಟ್ಟು 50 ಗಂಟೆಗಳ ಪ್ಲೇಬ್ಯಾಕ್ ಟೈಂ ಸಿಗಲಿದೆ.

ನಾಯ್ಸ್‌ ಬಡ್ಸ್‌ VS204 TWS

ಹೌದು, ನಾಯ್ಸ್‌ ಕಂಪೆನಿ ಹೊಸ ನಾಯ್ಸ್‌ ಬಡ್ಸ್‌ VS204 TWS ಇಯರ್‌ಫೋನ್‌ ಲಾಂಚ್‌ ಮಾಡಿದೆ. ಇದು ಇನ್‌ಸ್ಟಾಚಾರ್ಜ್ ಟಕ್ನಾಲಜಿಯನ್ನು ಹೊಂದಿದ್ದು, ವೇಗದ ಚಾರ್ಜಿಂಗ್ ಬೆಂಬಲಕ್ಕೆ ಮತ್ತೊಂದು ಹೆಸರಾಗಿದೆ. ಇನ್ನು ಈ ಇಯರ್‌ಬಡ್ಸ್‌ 13 ಎಂಎಂ ಆಡಿಯೋ ಡ್ರೈವರ್‌ಗಳನ್ನು ಹೊಂದಿದೆ. ಇದಲ್ಲದೆ ಹೈಪರ್‌ಸಿಂಕ್ ಫೀಚರ್ಸ್‌ ಮುಚ್ಚಳವನ್ನು ತೆರೆದ ತಕ್ಷಣ ಸ್ಮಾರ್ಟ್‌ಫೋನ್‌ನೊಂದಿಗೆ ಇಯರ್‌ಫೋನ್‌ಗಳನ್ನು ಕನೆಕ್ಟ್‌ ಮಾಡಲಿದೆ. ಹಾಗಾದ್ರೆ ನಾಯ್ಸ್‌ ಬಡ್ಸ್‌ VS204 TWS ಇಯರ್‌ಫೋನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನಾಯ್ಸ್ ಬಡ್ಸ್ VS204 ಫೀಚರ್ಸ್‌ ಹೇಗಿದೆ?

ನಾಯ್ಸ್ ಬಡ್ಸ್ VS204 ಫೀಚರ್ಸ್‌ ಹೇಗಿದೆ?

ನಾಯ್ಸ್ ಬಡ್ಸ್ VS204 ಇಯರ್‌ಫೋನ್‌ ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಇದು ಅತ್ಯಂತ ಸುಧಾರಿತ ಮತ್ತು ನಿಮ್ಮನ್ನು ತಲ್ಲೀನಗೊಳಿಸುವ ಬಾಸ್ ಅನ್ನು ಪ್ರೊಡ್ಯೂಸ್‌ ಮಾಡಲಿದೆ. ಇದಕ್ಕಾಗಿ ಈ ಇಯರ್‌ಫೋನ್‌ 13mm ಆಡಿಯೋ ಡ್ರೈವರ್‌ಗಳನ್ನು ಒಳಗೊಂಡಿದೆ. ಇನ್ನು ಈ ಇಯರ್‌ಫೋನ್‌ಗಳಲ್ಲಿ ಹೈಪರ್‌ಸಿಂಕ್‌ ಟೆಕ್ನಾಲಜಿಯನ್ನು ಅಳವಡಿಸಲಾಗದ್ದು, ಇಯರ್‌ಫೋನ್‌ ಕೇಸ್‌ ಅನ್ನು ತೆರೆದ ತಕ್ಷಣ ಸ್ಮಾರ್ಟ್‌ಫೋನ್‌ನೊಂದಿಗೆ ಆಟೋ ಕನೆಕ್ಟ್‌ ಆಗಲಿದೆ.

ಇಯರ್‌ಫೋನ್‌ಗಳು

ಇನ್ನು ನಾಯ್ಸ್ ಬಡ್ಸ್ VS204 ಇಯರ್‌ಫೋನ್‌ಗಳು ಎಕೋ ನಾಯ್ಸ್‌ ಕ್ಯಾನ್ಸಲೇಶನ್‌ ಒಳಗೊಂಡಿದೆ. ಇದರಿಂದ ಇನ್ನೊಂದು ತುದಿಯಲ್ಲಿರುವ ವ್ಯಕ್ತಿಗೆ ಸ್ಪಷ್ಟವಾದ ಧ್ವನಿಯನ್ನು ಕೇಳಲು ಅನುವು ಮಾಡಿಕೊಡಲಿದೆ. ಅಲ್ಲದೆ ಅಲ್ಗಾರಿದಮ್-ಆಧಾರಿತ ENC ಸ್ಪಷ್ಟವಾದ ಕರೆ ಅನುಭವವನ್ನು ಖಚಿತಪಡಿಸುತ್ತದೆ ಎಂದು ನಾಯ್ಸ್‌ ಕಂಪೆನಿ ಹೇಳಿಕೊಂಡಿದೆ. ಇದಲ್ಲದೆ ಈ ಇಯರ್‌ಫೋನ್‌ಗಳು ಕನೆಕ್ಟಿವಿಟಿಗಾಗಿ ಬ್ಲೂಟೂತ್ v5.3 ಅನ್ನು ಬೆಂಬಲಿಸಲಿವೆ. ಜೊತೆಗೆ ವಾಟರ್‌ಪ್ರೂಫ್‌ಗಾಗಿ IPX4 ರೇಟಿಂಗ್‌ ಅನ್ನು ಪಡೆದಿವೆ.

ಇಯರ್‌ಫೋನ್‌ಗಳು

ನಾಯ್ಸ್‌ ಬಡ್ಸ್‌ VS204 ಇಯರ್‌ಫೋನ್‌ಗಳು ಸಿಂಗಲ್‌ ಚಾರ್ಜ್‌ನಲ್ಲಿ 50 ಗಂಟೆಗಳವರೆಗೆ ಪ್ಲೇಟೈಮ್ ಅನ್ನು ನೀಡಲಿವೆ. ಇದಕ್ಕಾಗಿ ಇನ್‌ಸ್ಟಾಚಾರ್ಜ್ ಟೆಕ್ನಾಲಜಿಯನ್ನು ಅಳವಡಿಸಲಾಗಿದೆ. ಇದನ್ನು USB ಟೈಪ್-ಸಿ ಪೋರ್ಟ್‌ನೊಂದಿಗೆ ತ್ವರಿತವಾಗಿ ಚಾರ್ಜ್ ಮಾಡಬಹುದು. ಇದರಿಂದ ನೀವು ಕೇವಲ 10 ನಿಮಿಷದ ಅವಧಿಯ ಚಾರ್ಜ್‌ನಲ್ಲಿ 2 ಗಂಟೆಗಳ ರನ್‌ಟೈಮ್ ಅನ್ನು ನೀಡಲಿದೆ ಎಂದು ಹೇಳಲಾಗಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ನಾಯ್ಸ್‌ ಕಂಪೆನಿ ಪರಿಚಯಿಸಿರುವ ನಾಯ್ಸ್‌ ಬಡ್ಸ್‌ VS204 ಇಯರ್‌ಫೋನ್‌ ಬೆಲೆ 1,599ರೂ.ಆಗಿದೆ. ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ ಈ ಇಯರ್‌ಫೋನ್‌ ಅನ್ನು ಲಿಸ್ಟ್‌ ಮಾಡಲಾಗಿದ್ದು, ಶೀಘ್ರದಲ್ಲೇ ಖರೀದಿಗೆ ಲಭ್ಯವಾಗಲಿದೆ. ಇನ್ನು ನಾಯ್ಸ್ ಕಂಪೆನಿ ಅಧಿಕೃತ ವೆಬ್‌ಸೈಟ್‌ನಿಂದ ಈ TWS ಇಯರ್‌ಫೋನ್‌ಗಳನ್ನು ಖರೀದಿಸಬಹುದಾಗಿದೆ. ಈ ಇಯರ್‌ಫೋನ್‌ ಜೆಟ್ ಬ್ಲಾಕ್, ಮಿಂಟ್ ಗ್ರೀನ್, ಸ್ನೋ ವೈಟ್ ಮತ್ತು ಸ್ಪೇಸ್ ಬ್ಲೂ ಕಲರ್‌ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

ನಾಯ್ಸ್‌ ಕಂಪೆನಿ

ಇದಲ್ಲದೆ ನಾಯ್ಸ್‌ ಕಂಪೆನಿ ಇತ್ತೀಚಿಗೆ ಭಾರತದಲ್ಲಿ ಹೊಸ ನಾಯ್ಸ್‌ಫಿಟ್‌ ಕೋರ್‌ 2 ಸ್ಮಾರ್ಟ್ ವಾಚ್ ಅನ್ನು ಬಿಡುಗಡೆ ಮಾಡಿದೆ. ಇದು SpO2 ಮಾನಿಟರ್, ನಿರಂತರ ಹೃದಯ ಬಡಿತ ಮಾನಿಟರಿಂಗ್ ಮಾಡುವ ಫೀಚರ್ಸ್‌ಗಳನ್ನು ಒಳಗೊಂಡಿದೆ. ಈ ಸ್ಮಾರ್ಟ್‌ವಾಚ್‌ 1.28-ಇಂಚಿನ LCD ಡಿಸ್‌ಪ್ಲೇ ಹೊಂದಿದ್ದು, 100 ಕ್ಲೌಡ್ ಆಧಾರಿತ ವಾಚ್ ಫೇಸ್‌ಗಳನ್ನು ನೀಡಲಿದೆ. ನಾಯ್ಸ್‌ಫೀಟ್‌ ಕೋರ್‌ 2 ಸ್ಮಾರ್ಟ್‌ವಾಚ್‌ 1.28-ಇಂಚಿನ LCD ಡಿಸ್‌ಪ್ಲೇ ಹೊಂದಿದೆ. ಇದು 240 x 240 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 500 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಒಳಗೊಂಡೊದೆ. ಜೊತೆಗೆ ಈ ಸ್ಮಾರ್ಟ್‌ವಾಚ್‌ ವೃತ್ತಾಕಾರದ ಡಯಲ್ ಮತ್ತು ಮೆಟಾಲಿಕ್ ಫಿನಿಶ್ ಹೊಂದಿದೆ. ಇದು ಹಗುರವಾದ ವಿನ್ಯಾಸವನ್ನು ಒಳಗೊಂಡಿದೆ. ಈ ಸ್ಮಾರ್ಟ್‌ವಾಚ್‌ ಸುಮಾರು 50 ಸ್ಪೋರ್ಟ್ಸ್‌ ಮೋಡ್‌ಗಳನ್ನು ಒಳಗೊಂಡಿದೆ.

Best Mobiles in India

English summary
Noise Buds VS204 With Up to 50 Hours Total Playback Launched in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X