ಹೊಸ ಸ್ಮಾರ್ಟ್‌ವಾಚ್‌ ಪರಿಚಯಿಸಿದ ನಾಯ್ಸ್‌ ಕಂಪೆನಿ!..7 ದಿನಗಳ ಬ್ಯಾಟರಿ ಬ್ಯಾಕ್‌ಅಪ್‌!

|

ಸ್ಮಾರ್ಟ್‌ವಾಚ್‌ ಮಾರುಕಟ್ಟೆಯಲ್ಲಿ ನಾಯ್ಸ್‌ ಕಂಪೆನಿ ತನ್ನದೇ ಆದ ಪ್ರಾಬಲ್ಯವನ್ನು ಹೊಂದಿದೆ. ತನ್ನ ವಿಭಿನ್ನ ಶ್ರೇಣಿಯ ಸ್ಮಾರ್ಟ್‌ ವೆರಿಯೆಬಲ್ಸ್‌ಗಳ ಮೂಲಕ ಗ್ರಾಹಕರ ನೆಚ್ಚಿನ ಬ್ರ್ಯಾಂಡ್‌ ಎನಿಸಿಕೊಂಡಿದೆ. ಸದ್ಯ ಇದೀಗ ಭಾರತದಲ್ಲಿ ತನ್ನ ಹೊಸ ನಾಯ್ಸ್‌ ಕಲರ್‌ಫಿಟ್‌ ಪಲ್ಸ್‌ ಗೋ ಬಜ್‌ ಸ್ಮಾರ್ಟ್‌ವಾಚ್‌ ಲಾಂಚ್‌ ಮಾಡಿದೆ. ಇದು ನಾಯ್ಸ್‌ನ ಟ್ರೂ ಸಿಂಕ್‌ ಟೆಕ್ನಾಲಜಿಯನ್ನು ಹೊಂದಿದ್ದು, ಬ್ಲೂಟೂತ್‌ v5.3 ಕನೆಕ್ಟಿವಿಟಿಯೊಂದಿಗೆ ಹ್ಯಾಸಲ್‌ ಫ್ರೀ ಒನ್‌ ಸ್ಟೆಪ್‌ ಕನೆಕ್ಸನ್‌ ಅನ್ನು ಆಕ್ಟಿವ್‌ ಮಾಡಲಿದೆ.

ನಾಯ್ಸ್‌

ಹೌದು, ನಾಯ್ಸ್‌ ಕಂಪೆನಿ ಭಾರತದಲ್ಲಿ ಹೊಸ ನಾಯ್ಸ್‌ ಕಲರ್‌ಫಿಟ್‌ ಪಲ್ಸ್‌ ಗೋ ಬಜ್‌ ವಾಚ್‌ ಪರಿಚಯಿಸಿದೆ. ಇದು 18 ಮೀಟರ್ ವರೆಗಿನ ವಾಯರ್‌ಲೆಸ್ ರೇಂಜ್‌ ಅನ್ನು ಹೊಂದಿದ್ದು, ಸಿಂಗಲ್-ಚಿಪ್ ಬ್ಲೂಟೂತ್ ಕರೆಯನ್ನು ಸಹ ಬೆಂಬಲಿಸುತ್ತದೆ. ಇನ್ನು ಈ ಸ್ಮಾರ್ಟ್‌ವಾಚ್‌ 150 ಕ್ಕೂ ಹೆಚ್ಚು ಕ್ಲೌಡ್ ಆಧಾರಿತ ಮತ್ತು ಕಸ್ಟಮೈಸ್ ಮಾಡಿದ ವಾಚ್ ಫೇಸ್‌ಗಳನ್ನು ಬೆಂಬಲಿಸುತ್ತದೆ. ಇದು 100 ಕ್ಕೂ ಹೆಚ್ಚು ಸ್ಪೋರ್ಟ್ಸ್‌ ಮೋಡ್‌ಗಳನ್ನು ಹೊಂದಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ವಾಚ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ನಾಯ್ಸ್‌

ನಾಯ್ಸ್‌ ಕಲರ್‌ಫಿಟ್‌ ಪಲ್ಸ್‌ ಗೋ ಬಜ್‌ ಸ್ಮಾರ್ಟ್ ವಾಚ್ 1.69 ಇಂಚಿನ TFT LCD ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 240x280 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಇದು 500 ನಿಟ್ಸ್ ಬ್ರೈಟ್‌ನೆಸ್‌ ಅನ್ನು ನೀಡಲಿದೆ. ಈ ಸ್ಮಾರ್ಟ್‌ವಾಚ್‌ ನಾಯ್ಸ್‌ ಕಂಪನಿಯ ಟ್ರೂ ಸಿಂಕ್ ಟೆಕ್ನಾಲಜಿ ಮೂಲಕ ತಡೆರಹಿತ ಸಂಪರ್ಕವನ್ನು ನೀಡುತ್ತದೆ. ಇದು ಬ್ಲೂಟೂತ್ v5.3 ಸಂಪರ್ಕವನ್ನು ಹೊಂದಿದ್ದು, ಬ್ಲೂಟೂತ್ ಕಾಲ್‌ ಅನ್ನು ಬೆಂಬಲಿಸಲಿದೆ.

ಸ್ಮಾರ್ಟ್‌ವಾಚ್‌

ಈ ಸ್ಮಾರ್ಟ್‌ವಾಚ್‌ ಇಂಟರ್‌ಬಿಲ್ಟ್‌ ಸ್ಪೀಕರ್ ಮತ್ತು ಮೈಕ್ರೊಫೋನ್ ಹೊಂದಿದೆ. ಇದರಿಂದ ಬಳಕೆದಾರರು ತಮ್ಮ ಕಾಲ್‌ ಲಾಗ್ಸ್‌ ಮತ್ತು ನೆಚ್ಚಿನ ಸಂಪರ್ಕಗಳನ್ನು ಸ್ಮಾರ್ಟ್‌ವಾಚ್‌ನಲ್ಲಿ ವೀಕ್ಷಿಸಬಹುದು. ಈ ವಾಚ್‌ ಹಾರ್ಟ್‌ಬೀಟ್‌ ಸೆನ್ಸಾರ್‌, SpO2 ಬ್ಲಡ್‌ ಆಕ್ಸಿಜನ್‌ ಸೆನ್ಸಾರ್‌ ಮತ್ತು ವೇಗವರ್ಧಕವನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ವಾಚ್‌ನ ವಿಶೇಷತೆ ಎಂದರೆ ಆಟೋ ಸ್ಪೋರ್ಟ್ಸ್‌ ಡಿಟೆಕ್ಷನ್‌ ಫೀಚರ್‌ ಆಗಿದೆ. ಈ ವಾಚ್‌ 100 ಕ್ಕೂ ಹೆಚ್ಚು ಸ್ಪೋರ್ಟ್ಸ್‌ ಮೋಡ್‌ಗಳನ್ನು ಒಳಗೊಂಡಿದೆ.

ನಾಯ್ಸ್‌

ನಾಯ್ಸ್‌ ಕಲರ್‌ಫಿಟ್‌ ಪಲ್ಸ್‌ ಗೋ ಬಜ್‌ 22.6mm ಸಿಲಿಕೋನ್ ಪಟ್ಟಿಯನ್ನು ಹೊಂದಿದೆ. ಇದು IP68-ರೇಟೆಡ್ ನೀರು ಮತ್ತು ಧೂಳು-ನಿರೋಧಕ ವಿನ್ಯಾಸವನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ವಾಚ್ iOS 11 ಮತ್ತು ಆಂಡ್ರಾಯ್ಡ್‌ 9 ನಂತರದ ಡಿವೈಸ್‌ಗಳೊಂದಿಗೆ ಹೊಂದಿಕೊಳ್ಳುತ್ತದೆ. ಇದರಿಂದ ಫೋನ್‌ ಸ್ಥಳ, ಆಕ್ಟಿವಿಟಿ ಟ್ರ್ಯಾಕಿಂಗ್, ರಿಮೋಟ್ ಮ್ಯೂಸಿಕ್‌ ಕಂಟ್ರೋಲ್‌ ಮತ್ತು ಸ್ತ್ರೀ ಆರೋಗ್ಯ ಮೇಲ್ವಿಚಾರಣೆಯಂತಹ ಫೀಚರ್ಸ್‌ಗಳನ್ನು ಒಳಗೊಂಡಿದೆ. ಈ ಸ್ಮಾರ್ಟ್‌ವಾಚ್ 300mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 7 ದಿನಗಳ ಬಾಳಿಕೆ ನೀಡಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ನಾಯ್ಸ್‌ ಕಲರ್‌ಫಿಟ್‌ ಪಲ್ಸ್‌ ಗೋ ಬಜ್‌ ಸ್ಮಾರ್ಟ್‌ವಾಚ್‌ ಅಮೆಜಾನ್‌ ಮತ್ತು gonoise.com ನಲ್ಲಿ 1,999ರೂ ಬೆಲೆ ಹೊಂದಿದೆ. ಈ ನಾಯ್ಸ್ ಸ್ಮಾರ್ಟ್ ವಾಚ್ ಜೆಟ್ ಬ್ಲಾಕ್, ಮಿಡ್‌ನೈಟ್ ಬ್ಲೂ, ಮಿಸ್ಟ್ ಗ್ರೇ, ಆಲಿವ್ ಗ್ರೀನ್ ಮತ್ತು ರೋಸ್ ಪಿಂಕ್ ಬಣ್ಣಗಳಲ್ಲಿ ಬರುತ್ತದೆ.

ನಾಯ್ಸ್‌

ಇನ್ನು ನಾಯ್ಸ್‌ ಕಂಪೆನಿ ಇತ್ತೀಚಿಗೆ ಭಾರತದಲ್ಲಿ ಹೊಸ ನಾಯ್ಸ್‌ ಕಲರ್‌ಫಿಟ್‌ ಅಲ್ಟ್ರಾ 2 Buzz ಸ್ಮಾರ್ಟ್ ವಾಚ್ ಬಿಡುಗಡೆ ಮಾಡಿದೆ. ಇದು ಅಮೋಲೆಡ್‌ ಡಿಸ್‌ಪ್ಲೇ ಮತ್ತು ಬ್ಲೂಟೂತ್ ಕಾಲ್‌ ಎರಡನ್ನು ಹೊಂದಿರುವ ಮೊದಲ ಸ್ಮಾರ್ಟ್‌ವಾಚ್‌ ಇದಾಗಿದೆ ಎಂದು ನಾಯ್ಸ್‌ ಕಂಪನಿ ಹೇಳಿದೆ. ಜೊತೆಗೆ ಈ ಸ್ಮಾರ್ಟ್‌ವಾಚ್‌ನಲ್ಲಿ ಕರೆಗಳಿಗೆ ಉತ್ತರಿಸಲು ಇಂಟರ್‌ಬಿಲ್ಟ್‌ ಮೈಕ್ರೊಫೋನ್ ಮತ್ತು ಸ್ಪೀಕರ್ ಅನ್ನು ಸಹ ಅಳವಡಿಸಲಾಗಿದೆ. ನಾಯ್ಸ್‌ ಕಲರ್‌ಫಿಟ್‌ ಅಲ್ಟ್ರಾ 2 Buzz ಸ್ಮಾರ್ಟ್‌ವಾಚ್ 368x448 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯದ 1.78-ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 500 ನಿಟ್ಸ್ ಬ್ರೈಟ್‌ನೆಸ್‌ ಒಳಗೊಡಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ಡಿಸ್‌ಪ್ಲೇಯಲ್ಲಿರುವ AOD ಕಾರ್ಯವು ಬಳಕೆದಾರರಿಗೆ ಸ್ಕ್ರೀನ್ ಟಚ್‌ ಮಾಡದೇ ಸಮಯ, ದಿನಾಂಕ ಮತ್ತು ಸ್ಟೆಪ್ಸ್‌ ಮಾಡಲು ಅನುಮತಿಸುತ್ತದೆ.

Best Mobiles in India

Read more about:
English summary
Noise ColorFit Pulse Go Buzz Smartwatch Launched in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X