ನಾಯ್ಸ್‌ನಿಂದ ಭಾರತದಲ್ಲಿ ಮೊದಲ ಗೆಸ್ಚರ್ ಕಂಟ್ರೋಲ್‌ ಇಯರ್‌ಬಡ್ಸ್‌ ಲಾಂಚ್‌!

|

ಭಾರತದ ಪ್ರಮುಖ ಲೈಫ್‌ಸ್ಟೈಲ್ ಗ್ಯಾಜೆಟ್‌ ತಯಾರಿಕಾ ಬ್ರ್ಯಾಂಡ್‌ಗಳಲ್ಲಿ ಒಂದಾದ ನಾಯ್ಸ್ ಪ್ರಸ್ತುತ ಹಲವಾರು ಇಯರ್‌ಫೋನ್‌, ಇಯರ್‌ಬಡ್ಸ್‌ಗಳನ್ನು ಪರಿಚಯಿಸಿದೆ. ಇದರ ಬೆನ್ನಲ್ಲೇ ಈಗ ಮುಂದಿನ ತಲೆಮಾರಿನ ಗೆಸ್ಚರ್‌ ಫೀಚರ್ಸ್‌ ಇರುವ ಆಡಿಯೋ ಗ್ಯಾಜೆಟ್‌ ಒಂದನ್ನು ಲಾಂಚ್‌ ಮಾಡಿದ್ದು, ಈ ಡಿವೈಸ್‌ ಹೊಸ ರೀತಿಯ ಆಡಿಯೋ ಅನುಭವವನ್ನು ಗ್ರಾಹಕರಿಗೆ ನೀಡಲಿದೆ ಎಂದು ಕಂಪೆನಿ ಹೇಳಿದೆ.

ಇಂಟೆಲ್ಲಿಬಡ್ಸ್

ಹೌದು, ಭಾರತದಲ್ಲಿ ನೆಕ್ಸ್ಟ್ ಜೆನರೇಶನ್‌ನ ಇಂಟೆಲ್ಲಿಬಡ್ಸ್ (Noise IntelliBuds) ಎಂಬ ಗ್ಯಾಜೆಟ್‌ ಅನ್ನು ಅನಾವರಣಗೊಳಿಸಲಾಗಿದೆ. ಈ ಡಿವೈಸ್‌ ಅನ್ನು ನಮ್ಮ ಕಿವಿಯಲ್ಲಿ ಇರಿಸಿಕೊಂಡು ಕತ್ತನ್ನು ಅಲ್ಲಾಡಿಸುವ ಮೂಲಕ ನಿಯಂತ್ರಣ ಮಾಡಬಹುದಾಗಿದೆ. ಹಾಡುಗಳನ್ನು ಆಲಿಸಲು, ಕರೆ ಸ್ವೀಕರಿಸಲು ಹಾಗೂ ಇನ್ನಿತರೆ ಸ್ಮಾರ್ಟ್‌ ಕೆಲಸಗಳನ್ನು ಕೇವಲ ಗೆಸ್ಚರ್‌ ಮೂಲಕವೇ ನಿರ್ವಹಿಸಬಹುದು. ಹಾಗಿದ್ದರೆ ಇದರ ಇನ್ನಷ್ಟು ಫೀಚರ್ಸ್‌ಗಳನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ.

ಗೆಸ್ಚರ್‌ ಆಯ್ಕೆ ಭಾರತದಲ್ಲೇ ಮೊದಲು

ಗೆಸ್ಚರ್‌ ಆಯ್ಕೆ ಭಾರತದಲ್ಲೇ ಮೊದಲು

ಗ್ರಾಹಕರಿಗೆ ಅತ್ಯುತ್ತಮ ಆಡಿಯೋ ಡಿವೈಸ್‌ ಅನ್ನು ನೀಡುವ ಸಲುವಾಗಿ ನಾಯ್ಸ್‌ ಕಂಪೆನಿಯು ಆಡಿಯೋ ವಿಭಾಗದಲ್ಲಿ ತನ್ನದೇ ರೀತಿಯಲ್ಲಿ ಹೆಸರು ಗಳಿಸಿರುವ ಬ್ರಾಗಿ ಕಂಪೆನಿಯ ಜೊತೆ ಪಾಲುದಾರಿಕೆ ಹೊಂದಿದೆ. ಈ ಇಯರ್‌ಬಡ್ಸ್‌ ಗೆಸ್ಚರ್ ಕಂಟ್ರೋಲ್, ಹಾಟ್ ವಾಯ್ಸ್ ಕಮಾಂಡ್‌, ಮ್ಯೂಸಿಕ್‌ ಶೇರಿಂಗ್‌, ಟ್ರಾನ್ಪರೆನ್ಸಿ ಮೋಡ್ ಮತ್ತು ಕಸ್ಟಮೈಸ್ಡ್ ಈಕ್ವಲೈಜರ್ನಂತಹ ಫೀಚರ್ಸ್‌ಗಳನ್ನು ಪಡೆದಿದೆ. ಈ ರೀತಿಯ ಫೀಚರ್ಸ್‌ಗಳನ್ನು ಭಾರತದಲ್ಲಿ ಮೊದಲ ಬಾರಿಗೆ ಪರಿಚಯಿಸಿದ ಕೀರ್ತಿ ನಾಯ್ಸ್‌ ಹಾಗೂ ಬ್ರಾಗಿ ಕಂಪೆನಿಗೆ ಸಲ್ಲುತ್ತದೆ.

ನಾಯ್ಸ್‌

ಈ ಸಂಬಂಧ ನಾಯ್ಸ್‌ನ ಸಹ ಸಂಸ್ಥಾಪಕ ಅಮಿತ್ ಖತ್ರಿ ಮಾತನಾಡಿದ್ದು, ನಾವು ಉದ್ಯಮದಲ್ಲಿ ಈ ರೀತಿಯ ಮಾನದಂಡವನ್ನು ನಿರ್ಮಿಸುವ ತಂತ್ರಜ್ಞಾನವನ್ನು ತರುವಲ್ಲಿ ಮೊದಲಿಗರಾಗಿದ್ದೇವೆ. ನಾವೀನ್ಯತೆಯು ನಮ್ಮ ಡಿಎನ್‌ಎಗೆ ಮುಖ್ಯವಾಗಿದೆ. ಹಾಗೆಯೇ ಮುಂದಿನ ಜನ್ ಆಡಿಯೊ ಅನುಭವಕ್ಕಾಗಿ ನಮ್ಮ ಎರಡನೇ ಮೆದುಳಿನ ಕೂಸಾದ ಇಂಟೆಲ್ಲಿಬಡ್ಸ್‌ನಿಂದ ಪ್ರಾರಂಭಿಸಲು ರೋಮಾಂಚನಗೊಂಡಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಗ್ಯಾಜೆಟ್‌

ನಾವು ನಮ್ಮ ಜಾಗತಿಕ ಪಾಲುದಾರರಾದ ಬ್ರಾಗಿ ಅವರೊಂದಿಗೆ ಈ ಡಿವೈಸ್‌ ಸಂಬಂಧ ಹಲವು ಕಾಲದಿಂದ ಕಾರ್ಯಪ್ರವೃತ್ತರಾಗಿದ್ದೇವೆ. ಇದರಿಂದಾಗಿ ನವೀನ ಗ್ಯಾಜೆಟ್‌ಗಳನ್ನು ನಿರ್ಮಾಣ ಮಾಡಲು ಹಾಗೂ ಬಳಕೆದಾರರು ಹ್ಯಾಂಡ್ಸ್ ಫ್ರೀ ಫೀಚರ್ಸ್‌ನಲ್ಲಿ ತಮ್ಮ ಡಿವೈಸ್‌ಗಳೊಂದಿಗೆ ಕನೆಕ್ಟ್‌ ಆಗುವ ವಿಧಾನಕ್ಕೆ ಅನುವು ಮಾಡಿಕೊಡಲು ಮುಂದಾಗಿದ್ದೇವೆ. ಈ ಬಡ್ಸ್‌ ಎಲ್ಲಾ TWS ಬಳಕೆದಾರರ ಅಗತ್ಯತೆಯೊಂದಿಗೆ ಪ್ರತಿಧ್ವನಿಸಲಿದೆ ಹಾಗೆಯೇ ಭಾರತದಲ್ಲಿ ಈ ವಿಭಾಗವನ್ನು ಮರು ಆವಿಷ್ಕರಿಸುತ್ತದೆ ಎಂಬ ವಿಷಯ ನಮಗೆ ಖಚಿತವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಗೆಸ್ಚರ್ ಕಂಟ್ರೋಲ್ ಹೇಗೆ?

ಗೆಸ್ಚರ್ ಕಂಟ್ರೋಲ್ ಹೇಗೆ?

ಈ ಬಡ್ಸ್ ಭಾರತದ ಮೊದಲ ಗೆಸ್ಚರ್ ಕಂಟ್ರೋಲ್‌ TWS ಆಗಿದ್ದು, ತಲೆಯನ್ನು ಅಲ್ಲಾಡಿಸುವ ಮೂಲಕ ಎಲ್ಲಾ ರೀತಿಯಲ್ಲೂ ಡಿವೈಸ್‌ ಅನ್ನು ನಿಯಂತ್ರಣ ಮಾಡಬಹುದಾಗಿದೆ. ಉದಾಹರಣೆಗೆ ಬಳಕೆದಾರರು ಕರೆಯನ್ನು ತಿರಸ್ಕರಿಸಲು ತಲೆ ಅಲ್ಲಾಡಿಸಬಹುದು ಅಥವಾ ಕರೆ ಸ್ವೀಕರಿಸಲು ತಲೆದೂಗಬಹುದು. ಹಾಗಿದ್ರೆ ತಲೆಯನ್ನೇ ಅಲ್ಲಾಡಿಸುವ ಹಾಗಿಲ್ಲ, ಅಲ್ಲಾಡಿಸಿದರೆ ಅದು ತಂತಾನೆ ಏನಾದರೂ ಕಾರ್ಯನಿರ್ವಹಿಸುತ್ತದೆ ಎಂಬ ಪ್ರಶ್ನೆ ನಿಮ್ಮಲ್ಲಿ ಇದ್ದರೆ ಅದಕ್ಕೂ ಕಂಪೆನಿ ಸ್ಪಷ್ಟನೆ ನೀಡಿದೆ. ಈ ಡಿವೈಸ್‌ ಅನ್ನು ಧರಿಸಿರುವಾಗ ಕುಳಿತುಕೊಳ್ಳುವುದು, ನಡೆಯುವುದು, ಓಡುವುದು ಮತ್ತು ಮೆಟ್ಟಿಲುಗಳ ಮೇಲೆ ಹೋಗುವುದು ಅಥವಾ ಕೆಳಗೆ ಇಳಿಯುವಂತಹ ಸಂದರ್ಭಗಳನ್ನು ತಂತಾನೆ ಅರಿತುಕೊಳ್ಳುತ್ತದೆ. ಆ ವೇಳೆ ಯಾವುದೇ ತೊಂದರೆ ಇಲ್ಲದೆ ಅದು ತನ್ನ ಕೆಲಸವನ್ನು ಮಾಡುತ್ತಲೇ ಇರುತ್ತದೆ.

ಹಾಟ್ ವಾಯ್ಸ್ ಕಮಾಂಡ್ ಫೀಚರ್

ಹಾಟ್ ವಾಯ್ಸ್ ಕಮಾಂಡ್ ಫೀಚರ್

ಈ ಗೆಸ್ಚರ್ ಆಯ್ಕೆ ಜೊತೆಗೆ ಹಾಟ್ ವಾಯ್ಸ್ ಕಮಾಂಡ್ ಫೀಚರ್‌ ಅನ್ನು ಸಹ ಇದು ಹೊಂದಿದೆ. ಇದನ್ನು ನೀವು 'ಹೇಯ್ ಹೆಡ್‌ಫೋನ್‌ ' (Hey Headphones) ಎಂದು ಹೇಳುವ ಮೂಲಕ ನಿಯಂತ್ರಣಕ್ಕೆ ತರಬಹುದಾಗಿದೆ. ಅದರಲ್ಲೂ ಕರೆಗಳನ್ನು ಸ್ವೀಕಾರ ಮಾಡಲು, ತಿರಸ್ಕರಿಸಲು, ಹಾಡನ್ನು ಆಲಿಸಲು, ಸ್ಟಾಪ್‌ಮಾಡಲು, ಮುಂದಿನ ಸಾಂಗ್‌ ಪ್ಲೇ ಮಾಡಲು ಮತ್ತು ಡಿವೈಸ್‌ ಆಫ್‌ ಹಾಗೂ ಆನ್‌ ಮಾಡಲು ಈ ವಾಯ್ಸ್‌ ಕಮಾಂಡ್‌ ಬಳಕೆ ಮಾಡಬಹುದಾಗಿದೆ.

ಒಂದಾದ ಎರಡು ಕಂಪೆನಿಗಳು

ಒಂದಾದ ಎರಡು ಕಂಪೆನಿಗಳು

ಈ ಸಂಬಂಧ ಬ್ರಾಗಿಯ ಸಂಸ್ಥಾಪಕ ನಿಕೋಲಾಜ್ ಹ್ವಿಡ್ ಮಾತನಾಡಿದ್ದು, ನಾವು TWS ಮಾರುಕಟ್ಟೆಯನ್ನು ಮರು ಆವಿಷ್ಕರಿಸಲು ಎದುರು ನೋಡುತ್ತಿದ್ದೇವೆ ಹಾಗೆಯೇ ನಾಯ್ಸ್‌ ಗಿಂತ ಉತ್ತಮ ಪಾಲುದಾರನನ್ನು ನಾವು ಕಂಡಿಲ್ಲ. ಇದರಲ್ಲಿ ಎರಡೂ ಬ್ರಾಂಡ್ ಕಂಪೆನಿಗಳ ಪರಿಣಿತಿಯನ್ನು ಒಟ್ಟಿಗೆ ಜೋಡಿಸಲಾಗಿದೆ ಎಂದು ಹೇಳಿದ್ದಾರೆ.

ನಾಯ್ಸ್ ಇಂಟೆಲ್ಲಿಬಡ್ಸ್‌ ಇತರೆ ಫೀಚರ್ಸ್‌

ನಾಯ್ಸ್ ಇಂಟೆಲ್ಲಿಬಡ್ಸ್‌ ಇತರೆ ಫೀಚರ್ಸ್‌

ಈ ಇಂಟೆಲ್ಲಿಬಡ್ಸ್‌ನಲ್ಲಿ ಇತರೆ ಇಂಟೆಲ್ಲಿಬಡ್ಸ್ ಬಳಕೆದಾರರಿಗೆ ಮ್ಯೂಸಿಕ್‌ ಶೇರ್‌ ಮಾಡುವ ಆಯ್ಕೆ ನೀಡಿದೆ. ಇದರ ಜೊತೆಗೆ ಆಂಡ್ರಾಯ್ಡ್‌ನಲ್ಲಿನ ಅಪ್ಲಿಕೇಶನ್‌, ನಾಯ್ಸ್‌ಫಿಟ್‌ ಜೊತೆಗೆ ಸಂಪರ್ಕ ಮಾಡಿಕೊಳ್ಳಬಹುದು. ಹಾಗೆಯೇ ಈ ಡಿವೈಸ್‌ನ್ನು ನಮ್ಮದೇ ರೀತಿಯಲ್ಲಿ ವೈಯುಕ್ತೀಕರಿಸಿಕೊಳ್ಳಬಹುದು. ಈ ಬಡ್ಸ್‌ 600mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, ಒಂದು ಪೂರ್ಣ ಚಾರ್ಜ್‌ನಲ್ಲಿ 36 ಗಂಟೆಗಳ ಪ್ಲೇಟೈಮ್ ನೀಡಲಿದೆ.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ದೀಪಾವಳಿ ಹಬ್ಬದ ಹಿನ್ನೆಲೆ ನಾಯ್ಸ್‌ ಈ ಡಿವೈಸ್‌ ಅನ್ನು ಅನಾವರಣಗೊಳಿಸಿದ್ದು, 4,999ರೂ. ಗಳ ಬೆಲೆ ನಿಗದಿ ಮಾಡಲಾಗಿದೆ. ಹಾಗೆಯೇ GoNoise.com ನಲ್ಲಿ ಇದೇ ತಿಂಗಳ (ಅ.14) ರಂದು ಖರೀದಿಗೆ ಲಭ್ಯ ಇದೆ. ಜೊತೆಗೆ ಈ ಬಡ್ಸ್‌ ಕಪ್ಪು ಹಾಗೂ ಬಿಳಿ ಬಣ್ಣದ ಎರಡು ವೇರಿಯಂಟ್‌ನಲ್ಲಿ ಕಂಡು ಬಂದಿದೆ.

Best Mobiles in India

Read more about:
English summary
Noise, one of India's leading lifestyle gadget manufacturing brands, has recently introduced a range of earphones, earbuds. Now it has launched IntelliBuds with gesture control option.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X