ಎಂಟ್ರಿ ಲೆವೆಲ್ ಏರ್ ಟೆಲ್ ಪ್ಲಾನ್ ನಲ್ಲಿ ಅಮೇಜಾನ್ ಪ್ರೈಮ್ ಸದಸ್ಯತ್ವ ಲಭ್ಯ

|

ದೇಶದ ಎರಡನೇ ಅತೀ ದೊಡ್ಡ ಟೆಲಿಕಾಂ ಆಪರೇಟರ್ ಅನ್ನಿಸಿಕೊಂಡಿರುವ ಏರ್ ಟೆಲ್ ಇತ್ತೀಚೆಗೆ ಉಚಿತ ಅಮೇಜಾನ್ ಪ್ರೈಮ್ ಸದಸ್ಯತ್ವವನ್ನು ತನ್ನ ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ನೀಡಿದ್ದು ಯಾವ ಗ್ರಾಹಕರು 499 ರೂಪಾಯಿ ಪ್ಲಾನ್ ನ್ನು ಆಯ್ಕೆ ಮಾಡಿಕೊಳ್ಳುತ್ತಾರೋ ಅವರಿಗೆ ಈ ಸೌಲಭ್ಯ ಸಿಗುತ್ತಿತ್ತು.

ಎಂಟ್ರಿ ಲೆವೆಲ್ ರೀಚಾರ್ಜ್ ಗೆ ಅಮೇಜಾನ್ ಸದಸ್ಯತ್ವ:

ಎಂಟ್ರಿ ಲೆವೆಲ್ ರೀಚಾರ್ಜ್ ಗೆ ಅಮೇಜಾನ್ ಸದಸ್ಯತ್ವ:

ಇದೀಗ ಟೆಲ್ಕೋ ಇದೇ ಆಫರ್ ನ್ನು ತನ್ನ ಎಂಟ್ರಿ ಲೆವೆಲ್ ಪೋಸ್ಟ್ ಪೇಯ್ಡ್ ಪ್ಲಾನ್ ಗೂ ನೀಡುವ ಬಗ್ಗೆ ಪ್ರಕಟಣೆ ನೀಡಿದೆ. ಹೌದು ಏರ್ ಟೆಲ್ ಗ್ರಾಹಕರು ಯಾರು ರೂಪಾಯಿ 399 ರ ಪ್ಲಾನ್ ನ್ನು ರೀಚಾರ್ಜ್ ಮಾಡಿಕೊಳ್ಳುತ್ತಾರೋ ಅವರಿಗೆ ಉಚಿತವಾಗಿ ಅಮೇಜಾನ್ ಪ್ರೈಮ್ ಸದಸ್ಯತ್ವ ಲಭ್ಯವಾಗಲಿದೆ.

399 ರೂಪಾಯಿ ಪ್ಲಾನ್ ರೀಚಾರ್ಜ್ ಮಾಡಿ:

399 ರೂಪಾಯಿ ಪ್ಲಾನ್ ರೀಚಾರ್ಜ್ ಮಾಡಿ:

ಈ 399 ರುಪಾಯಿ ಪ್ಲಾನ್ ನ ಅಡಿಯಲ್ಲಿ ಏರ್ ಟೆಲ್ ನಿಮಗೆ 40ಜಿಬಿ ಡಾಟಾ ಮತ್ತು 200ಜಿಬಿ ವರೆಗೆ ಡಾಟಾ ರೋಲ್ ಓವರ್ ಸೌಲಭ್ಯವನ್ನು ಒದಗಿಸಿದೆ. ಇದರ ಜೊತೆಗೆ ಏರ್ ಟೆಲ್ ಉಚಿತ Wynk ಮ್ಯೂಸಿಕ್ ಮತ್ತು ಏರ್ ಟೆಲ್ ಟಿವಿ ಚಂದಾದಾರಿಕೆಯನ್ನು ನೀಡುತ್ತದೆ ಅಷ್ಟೇ ಅಲ್ಲ ಅನಿಯಮಿತರ ಎಸ್ ಡಿಡಿ ಮತ್ತು ಸ್ಥಳೀಯ ಕರೆಗಳು ಮತ್ತು ಎಸ್ ಎಂಎಸ್ ಗಳಿಗೂ ಕೂಡ ಇದು ಅವಕಾಶ ನೀಡುತ್ತದೆ.

ಉಚಿತ ಗಿಫ್ಟ್ ಕಾರ್ಡ್ ಗಳು:

ಇದರ ಜೊತೆಗೆ ಏರ್ ಟೆಲ್ ಪೋಸ್ಟ್ ಪೇಯ್ಡ್ ಗ್ರಾಹಕರು 51 ರುಪಾಯಿ ಬೆಲೆಬಾಳುವ ಅಮೇಜಾನ್ ಪೇ ಗಿಫ್ಟ್ ಕಾರ್ಡ್ ನ್ನು ಪಡೆಯಲಿದ್ದಾರೆ ಮತ್ತು ಮೊದಲ 6 ತಿಂಗಳ ಒಟ್ಟು ಬಿಲ್ಲಿಂಗ್ ಮೊತ್ತದಲ್ಲಿ 50 ರೂಪಾಯಿ ರಿಯಾಯಿತಿ ಕೂಡ ದಕ್ಕುತ್ತದೆ.

ಬ್ಯಾನರ್ ಕ್ಲಿಕ್ಕಿಸಿ ಪಡೆಯಿರಿ:

ಬ್ಯಾನರ್ ಕ್ಲಿಕ್ಕಿಸಿ ಪಡೆಯಿರಿ:

ಈ ಆಫರ್ ನ್ನು ಪಡೆದುಕೊಳ್ಳಲು ಏರ್ ಟೆಲ್ ಪೋಸ್ಟ್ ಪೇಯ್ಡ್ ಗ್ರಾಹಕರು

399 ರುಪಾಯಿ ಪ್ಲಾನ್ ನ್ನು ಹಾಕಿಸಿಕೊಳ್ಳಬೇಕು ಮತ್ತು ನಂತರ ಮೈ ಏರ್ ಟೆಲ್ ಅಥವಾ ಏರ್ ಟೆಲ್ ಟಿವಿ ಆಪ್ ಮತ್ತು ಅಮೇಜಾನ್ ಪ್ರೈಮ್ ಮೆಂಬರ್ ಶಿಪ್ ಬ್ಯಾನರ್ ನ್ನು ಕ್ಲಿಕ್ಕಿಸಬೇಕು. ಒಂದು ವೇಳೆ ನೀವು ಈಗಾಗಲೇ ಪ್ರೈಮ್ ಮೆಂಬರ್ ಆಗಿದ್ದಲ್ಲಿ ನಿಮ್ಮ ಪ್ರೈಮ್ ಮೆಂಬರ್ ಶಿಪ್ ಅವಧಿ ಮುಗಿಯುವವರೆಗೆ ಕಾಯಬೇಕಾಗುತ್ತದೆ.

ಏರ್ ಟೆಲ್ 119 ರುಪಾಯಿ ಪ್ಲಾನ್:

ಏರ್ ಟೆಲ್ 119 ರುಪಾಯಿ ಪ್ಲಾನ್:

ಈ ತಿಂಗಳ ಆರಂಭದಲ್ಲಿ ಏರ್ ಟೆಲ್ ತನ್ನ 99 ರುಪಾಯಿ ಪ್ಲಾನ್ ನ್ನು ಮರುಪರಿಶೀಲನೆ ಮಾಡಿ ಬಿಡುಗಡೆಗೊಳಿಸಿತ್ತು. 99 ರುಪಾಯಿ ಪ್ಲಾನ್ ನ್ನು 119 ರುಪಾಯಿ ಪ್ಲಾನ್ ಆಗಿ ಬದಲಾವಣೆ ಮಾಡಿತ್ತು. ಈ ಬದಲಾವಣೆಯ ನಂತರ 119 ರುಪಾಯಿ ಪ್ಲಾನ್ ನಲ್ಲಿ ಏರ್ ಟೆಲ್ 2ಜಿಬಿ ಡಾಟಾ ಮತ್ತು ಅನಿಯಮಿತ ಸ್ಥಳೀಯ ಮತ್ತು ಎಸ್ ಟಿಡಿ ಕರೆಗಳು ಮತ್ತು 300 ಎಸ್ಎಂಎಸ್ ನ್ನು ಉಚಿತವಾಗಿ ನೀಡುತ್ತದೆ. ಈ ಪ್ಲಾನ್ 28 ದಿನಗಳ ಅವಧಿಯನ್ನು ಹೊಂದಿದೆ.

ಕಂಪೆನಿಯು ಹೇಳುವ ಪ್ರಕಾರ ಈ ಹೊಸ ಪ್ಲಾನ್ ಎಲ್ಲಾ 22 ಟೆಲಿಕಾಂ ಸರ್ಕಲ್ ಗಳಲ್ಲೂ ಕೂಡ ಲಭ್ಯವಿದೆ. ಇದಕ್ಕಾಗಿ ಟೆಲ್ಕೋ ಯಾವುದೇ ದಿನಂಪ್ರತಿ ಎಫ್ ಯುಪಿ ಲಿಮಿಟ್ ನ್ನು ಸೆಟ್ ಮಾಡಿಲ್ಲ. ಹಾಗಾಗಿ ಏರ್ ಟೆಲ್ ಚಂದಾದಾರರು 250 ನಿಮಿಷದ ಡೈಲಿ ಲಿಮಿಟ್ ಗಾಗಿ ಚಿಂತಿಸಬೇಕಾಗಿಲ್ಲ ಮತ್ತು ಉಚಿತವಾಗಿ ಕರೆಗಳನ್ನು ಮಾಡಬಹುದು. ಮೈ ಏರ್ ಟೆಲ್ ಆಪ್ ಅಥವಾ ಏರ್ ಟೆಲ್.ಇನ್ ತೆರಳಿ ಗ್ರಾಹಕರು ಈ ಪ್ಲಾನ್ ಬಗ್ಗೆ ತಿಳಿದುಕೊಳ್ಳಬಹುದು ಮತ್ತು ಪಡೆಯಬಹುದು.

Best Mobiles in India

Read more about:
English summary
Now get Amazon Prime membership with this entry-level Airtel plan

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X