ಶಾಕಿಂಗ್ ನ್ಯೂಸ್!..ಆನ್‌ಲೈನಿನಲ್ಲಿ ಖರೀದಿಸುವ ಮೂರು ವಸ್ತುಗಳಲ್ಲಿ ಒಂದು ನಕಲಿ!!

|

ವಿಶ್ವದ ಮಾರುಕಟ್ಟೆಯನ್ನೇ ಅಲುಗಾಡಿಸಿರುವ ಇ-ಕಾಮರ್ಸ್ ಎಂಬ ಆನ್‌ಲೈನ್ ಮಾರುಕಟ್ಟೆ ಈಗ ಬೃಹದಾಕಾರವಾಗಿ ಬೆಳೆದುನಿಂತಿದೆ. ಗ್ರಾಹಕರಿಗೆ ತಮ್ಮ ಆಯ್ಕೆ ಅಭಿರುಚಿಗಳ ಜೊತೆಗೆ ಅವರ ಎಲ್ಲಾ ಅವಶ್ಯಕತೆಗಳನ್ನು ಪೂರೈಸುತ್ತಿರುವ ಈ ಇ-ಕಾಮರ್ಸ್ ಎನ್ನುವ ಆನ್‌ಲೈನ್ ಜಾಲ ಈಗ ಕೊಳ್ಳುಬಾಕ ಮನಸ್ಥಿತಿಯ ಮೊದಲ ಮೆಟ್ಟಿಲಾಗುತ್ತಿದೆ ಎಂದರೆ ಆಶ್ಚರ್ಯವೇನಿಲ್ಲ.

ಹೌದು, ಯಾವುದಾದರೂ ಅಂಗಡಿಗೆ ತೆರಳಿ ಮೋಸಹೋಗುವುದಕ್ಕಿಂತ, ಆನ್‌ಲೈನ್ ಮಾರುಕಟ್ಟೆಯಲ್ಲಿ ನಿಖರ ಬೆಲೆಯನ್ನು ನnIಡಿ ವಸ್ತುವನ್ನು ಖರೀದಿಸುವ ಆಯ್ಕೆ ಜನರಿಗೆ ಹೆಚ್ಚು ಹಿತವೆನಿಸಿದೆ. ಆದರೆ, ಈ ಆಸೆಯೇ ದುರಾಸೆಯಾಗಿ ಕೊಳ್ಳುಬಾಕ ಮನಸ್ಥಿತಿಗೆ ಒಳಗಾಗಿರುವ ಜನರು ಆನ್‌ಲೈನ್ ಮಾರುಕಟ್ಟೆಯ ಪೂರ್ವಾಪರ ತಿಳಿಯದೇ ಅಲ್ಲಿಯೂ ಮೋಸಹೋಗುತ್ತಿದ್ದಾರೆ.

ಶಾಕಿಂಗ್ ನ್ಯೂಸ್!..ಆನ್‌ಲೈನಿನಲ್ಲಿ ಖರೀದಿಸುವ ಮೂರು ವಸ್ತುಗಳಲ್ಲಿ ಒಂದು ನಕಲಿ!!

ಲಾಭ ಮಾಡಬೇಕು ಎಂಬುದೇ ಮಾರಾಟಗಾರರ ಧರ್ಮ ಆಗಿರುವಾಗ, ಆನ್‌ಲೈನ್ ಮಾರುಕಟ್ಟೆಯಾದರೇನು ಅಥವಾ ಆಫ್‌ಲೈನ್ ಮಾರುಕಟ್ಟೆಯಾದರೇನು? ಎಲ್ಲಿಯಾದರೂ ನಾವು ಮೋಸಹೋಗುತ್ತೇವೆ. ಹಾಗಾದರೆ, ಗ್ರಾಹಕರ ನೆಚ್ಚಿನ ಶಾಪಿಂಗ್ ತಾಣವಾಗಿರುವ ಇ-ಕಾಮರ್ಸ್ ಮಾರುಕಟ್ಟೆ ನಮ್ಮನ್ನು ಹೇಗೆಲ್ಲಾ ಮೋಸಗೊಳಿಸುತ್ತಿದೆ ಎಂಬುದನ್ನು ಮುಂದೆ ತಿಳಿಯಿರಿ.

3 ವಸ್ತುಗಳಲ್ಲಿ ಒಂದು ನಕಲಿ!

3 ವಸ್ತುಗಳಲ್ಲಿ ಒಂದು ನಕಲಿ!

ಹೆಚ್ಚಿನ ಭಾರತೀಯರು ತಾವು ಆನ್‌ಲೈನಿನಲ್ಲಿ ಸರಿಯಾದ ಉತ್ಪನ್ನವನ್ನು ಪಡೆಯುತ್ತಿದ್ದೆವೆ ಎಂದುಕೊಂಡಿದ್ದಾರೆ. ಆದರೆ, ಮೂರು ಜನರಲ್ಲಿ ಓರ್ವ ವ್ಯಕ್ತಿ ಆನ್‌ಲೈನಿನಲ್ಲಿ ನಕಲಿ ಉತ್ಪನ್ನವನ್ನು ಪಡೆಯುತ್ತಾನೆ ಎಂದು ವರದಿಗಳು ಹೇಳುತ್ತವೆ. ವ್ಯಾಪಾರ ಮಾರುವವರ ಮತ್ತು ಖರೀದಿದಾರರ ನಡುವೆ ಕೇವಲ ಮಧ್ಯಸ್ಥಿಕೆ ವಹಿಸುತ್ತಿರುವ ಇ ಕಾಮರ್ಸ್ ಕಂಪೆನಿಗಳು ನಕಲಿ ಉತ್ಪನ್ನಗಳನ್ನು ಕಂಡುಹಿಡಿಯುವ ಗೋಜಿಗೆ ಹೋಗುತ್ತಿಲ್ಲ ಎನ್ನುತ್ತಿವೆ ವರದಿಗಳು.

ಬೆಲೆ ಕಮ್ಮಿ ಇದ್ದರೂ ಖರೀದಿ ಕಷ್ಟ!

ಬೆಲೆ ಕಮ್ಮಿ ಇದ್ದರೂ ಖರೀದಿ ಕಷ್ಟ!

ಮೊದಲೇ ಹೇಳಿದಂತೆ ಇ ಬೇ, ಅಮೆಜಾನ್‌ಗಳು "ರಿಫ‌ರ್ಬಶಿಂಗ್‌ ಐಟಂ'ಗಳನ್ನು ಮಾರಲಾರಂಭಿಸಿವೆ. ರಿಫ‌ರ್ಬಶಿಂಗ್‌ ಐಟಂಗಳ ಖರೀದಿ ದರದಲ್ಲಿ ಸದರಿ ಐಟಂನ ಬೆಲೆ ಇವತ್ತಿನ ಎಂಆರ್‌ಪಿಗಿಂತ ಬೆಲೆ ತೀರಾ ಕಡಿಮೆ ಇರುತ್ತದೆ. ಇದಕ್ಕೆ ಕೇವಲ ಮಾರಾಟಗಾರರ ಗ್ಯಾರಂಟಿ ಮಾತ್ರ ಲಭ್ಯವಾಗುತ್ತದೆ. ಹಾಗಾಗಿ, ಬೆಲೆ ಕಮ್ಮಿ ಇದ್ದರೆ ಎಚ್ಚರ ವಹಿಸುವುದು ಉತ್ತಮ.

ಆನ್‌ಲೈನ್‌ನಲ್ಲೂ ನಯವಂಚನೆ!

ಆನ್‌ಲೈನ್‌ನಲ್ಲೂ ನಯವಂಚನೆ!

ಆನ್‌ಲೈನ್‌ ದೈತ್ಯ ಅಮೆಜಾನ್‌ ತನ್ನ ಅಮೆಜಾನ್‌ ಪೇ ಗ್ರಾಹಕರಿಗೆ ಅಕೌಂಟ್‌ಗೆ 500 ರೂ. ತುಂಬಿದರೆ ನಿಮಗೆ ಅದಕ್ಕೆ 100 ರೂ. ಕ್ಯಾಷ್‌ಬ್ಯಾಕ್‌ ನೀಡುವುದಾಗಿ ಹೇಳಿಕೊಂಡಿತು. ಆದರೆ, . 500 ರೂ. ಭರ್ತಿ ಮಾಡಿದವರಿಗೆ ಹೆಚ್ಚುವರಿ 100 ರೂ. ಸಿಗಲಿಲ್ಲ. ಅಲ್ಲಿಟ್ಟ ಹಣಕ್ಕೆ ಏನಾದರೊಂದು ಖರೀದಿ ಮಾಡಲೇಬೇಕು ಎಂಬ ಷರತ್ತನ್ನು ಕಣ್ಣಿಗೆ ಕಾಣದಂತೆ ಅಮೆಜಾನ್ ಹೇಳಿತ್ತು.

up to ಸೂಪರ್‌ ಕ್ಯಾಷ್!

up to ಸೂಪರ್‌ ಕ್ಯಾಷ್!

ಗ್ರಾಹಕರು ಯಾವ ಅನುಮಾನವಿಲ್ಲದೇ ಈ up to ಕ್ಯಾಷ್ ಬ್ಯಾಕ್ ಆಫರ್ ಅನ್ನು ನಂಬದೇ ಇದ್ದರೆ ಒಳಿತು. ಇರುವ ಹತ್ತು ವಸ್ತುಗಳಲ್ಲಿ ಡಮ್ಮಿಯಂತಹ ಒಂದು ವಸ್ತುವಿಗೆ ಹೆಚ್ಚು ಕ್ಯಾಶ್‌ಬ್ಯಾಕ್ ನೀಡಿ ಮಾರಾಟ ಮಾಡುವ ತಂತ್ರ ಇದು. ಇತ್ತೀಚೆಗೆ ಕ್ಯಾಶ್‌ಬ್ಯಾಕ್‌ ಎಂಬ ವಾಲೆಟ್‌ಗಳ ಆಕರ್ಷಕ ಸ್ಲೋಗನ್‌ನ ಕೊನೆಯಲ್ಲಿ ಅದನ್ನು ಸೂಪರ್‌ ಕ್ಯಾಷ್ ಸೂತ್ರ ಜಾರಿಗೆ ಬಂದಿದೆ.

 ಮೊಬಿಕ್ವಿಕ್ ಸೂಪರ್‌ ಕ್ಯಾಶ್‌?

ಮೊಬಿಕ್ವಿಕ್ ಸೂಪರ್‌ ಕ್ಯಾಶ್‌?

ಮೊಬಿಕ್ವಿಕ್ ಪಾವತಿ ನಿಮಗೆ ಗೊತ್ತಿರಬಹುದು. ಈ ಪಾವತಿ ಆಪ್ 100 ರೂ. ಸೂಪರ್‌ ಕ್ಯಾಶ್‌ ಎಂಬ ಆಫರ್ ಅನ್ನು ನೀಡಿದೆ. 100 ರೂಪಾಯಿಗಳ ಸೂಪರ್‌ ಕ್ಯಾಶ್‌ಬ್ಯಾಕ್ ನಲ್ಲಿ ಗ್ರಾಹಕ ತನ್ನ ಪ್ರತಿ ಖರೀದಿಯ ಶೇ. 10ರಷ್ಟನ್ನು ಮಾತ್ರ ಬಳಸಿಕೊಳ್ಳಬಹುದು. ಹಾಗಾಗಿ, 100 ರೂ. ಸೂಪರ್‌ ಕ್ಯಾಶ್‌ ಬಳಸಿಕೊಳ್ಳಲು ಸಾವಿರ ರೂ. ವ್ಯಾಪಾರ ಮಾಡಬೇಕು.

ಕಮರ್ಷಿಯಲ್ ಜಾಹೀರಾತು!

ಕಮರ್ಷಿಯಲ್ ಜಾಹೀರಾತು!

ಫೇಸ್‌ಬುಕ್ ಬಳಕೆದಾರರಿಗೆ ಫೇಸ್‌ಬುಕ್ ಯಾವುದೋ ಆನ್‌ಲೈನ್‌ ಕಂಪನಿಯ ಕಮರ್ಷಿಯಲ್‌ ಜಾಹೀರಾತು ನೀಡುತ್ತದೆ. ಆ ಕಂಪೆನಿಯನ್ನು ನಿಮ್ಮ ಸ್ನೇಹಿತರು ಲೈಕ್ ಮಾಡಿರುವುದಾಗಿ ಪೋಸ್ಟ್‌ನಲ್ಲಿ ತೋರಿಸುತ್ತದೆ. ಸ್ನೇಹಿತರು ಲೈಕ್ ಮಾಡಿರುವ ಆ ಆನ್‌ಲೈನ್ ಕಂಪೆನಿಗಳು ಮೋಸ ಮಾಡುವ ಕಂಪೆನಿಗಳು ಆಗಿರಬಹುದು ಎಂದು ತಿಳೀಯುವುದಿಲ್ಲ. ಇದರಿಂದ ಏನೂ ತಿಳಿಯದವರೂ ಗುಂಡಿಗೆ ಬೀಳುತ್ತಾರೆ.

Best Mobiles in India

English summary
Indian ecommerce has an acute counterfeit problem. Even as . For the most part, Indians can't tolerate receiving the wrong product. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X