ಒನ್ ಪ್ಲಸ್ 5T ಬಿಡುಗಡೆ ನವೆಂಬರ್ 16ಕ್ಕೆ, ಅಮೆಜಾನ್ ನಲ್ಲಿ ಮಾತ್ರ ಲಭ್ಯ..!

Written By: Lekhaka

ಈಗಾಗಲೇ ಒನ್ ಪ್ಲಸ್ 5T ಕುರಿತಂತೆ ಸಾಕಷ್ಟು ರೂಮರ್ ಗಳು ಹರಿದಾಡುತ್ತಿದ್ದು, ಇದೇ ಮಾದರಿಯಲ್ಲಿ ಈ ಸ್ಮಾರ್ಟ್ ಫೋನ್ ಅಮೆಜಾನ್ ನಲ್ಲಿ ಎಕ್ಸಕ್ಲೂಸಿವ್ ಆಗಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ಈ ಸ್ಮಾರ್ಟ್ ಫೋನ್ ಬಿಡುಗಡೆಯಾಗುವುದು ಖಂಡಿತ ಎನ್ನಲಾಗಿದೆ.

ಒನ್ ಪ್ಲಸ್ 5T ಬಿಡುಗಡೆ ನವೆಂಬರ್ 16ಕ್ಕೆ, ಅಮೆಜಾನ್ ನಲ್ಲಿ ಮಾತ್ರ ಲಭ್ಯ..!

ಸದ್ಯ ಫೋಟೋವೊಂದು ಲೀಕ್ ಆಗಿದ್ದು, ಒನ್ ಪ್ಲಸ್ 5T ಇದೇ ನವೆಂಬರ್ 12 ರಂದು ಲಾಂಚ್ ಆಗಲಿದೆ ಎನ್ನಲಾಗಿದ್ದು, ಈ ಫೋಟೊದಲ್ಲಿ ಅಮೆಜಾನ್ ನಲ್ಲಿ ಮಾತ್ರವೇ ಈ ಫೋನ್ ಮಾರಟವಾಗಲಿದೆ, ಈ ಫೋನ್ ನವೆಂಬರ್ ನಲ್ಲಿಯೇ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಎಂದು ಸಹ ತಿಳಿಸಲಾಗಿದೆ.

ಈ ಒನ್ ಪ್ಲಸ್ 5T ಕುರಿತಂತೆ ಸಾಕಷ್ಟು ರೂಮರ್ ಗಳು ಈಗಾಗಲೇ ಹರಿದಾಡುತ್ತಿದೆ. ಮೂಲಗಳ ಪ್ರಕಾರ ಈ ಸ್ಮಾರ್ಟ್ ಫೋನ್ ಫುಲ್ ಸ್ಕ್ರಿನ್ ಡಿಸ್ ಪ್ಲೇಯನ್ನು ಹೊಂದಿರಲಿದೆ ಎನ್ನಲಾಗಿದೆ. ಬಿಜಿಲ್ ಲೈಸ್ ವಿನ್ಯಾಸವನ್ನು ಹೊಂದಿರಲಿದ್ದು, ಉತ್ತಮ ವಿನ್ಯಾಸವನ್ನು ಹೊಂದಿರಲಿದೆ.

ಈ ಸ್ಮಾರ್ಟ್ ಫೋನಿನ ಹಿಂಭಾಗದಲ್ಲಿ ಡ್ಯುಯಲ್ ಲೈನ್ಸ್ ಕ್ಯಾಮೆರಾವನ್ನು ಕಾಣಬಹುದಾಗಿದ್ದು, 20MP + 20MP ಕ್ಯಾಮೆರಾವನ್ನು ಇದರಲ್ಲಿ ಅಳವಡಿಸಲಾಗಿದೆ. ಅಲ್ಲದೇ 18:9 ಅನುಪಾತದ ಡಿಸ್ ಪ್ಲೇ ಇದಾಗಿದೆ. ಇದಲ್ಲದೇ ಆಂಡ್ರಾಯ್ಡ್ ಓರಿಯೋದಲ್ಲಿ ಕಾರ್ಯನಿರ್ವಹಿಸಲಿದೆ.

ತುರ್ತು ಸಾಲ ನೀಡುವ ಆಪ್‌ಗಳಿವು!..ಬೇಕಾಗುತ್ತೆ ನೋಡಿರಿ!!

ಇದಲ್ಲದೇ ಈ ಸ್ಮಾರ್ಟ್ ಫೋನಿನಲ್ಲಿ 8GB RAM ಮತ್ತು 128GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದಾಗಿದ್ದು, ಎರಡು ಆವೃತ್ತಿಯಲ್ಲಿ ದೊರೆಯಲಿದೆ. 64GB ಮತ್ತು 128GB ಇಂಟರ್ನಲ್ ಮೆಮೊರಿಯೊಂದಿಗೆ ದೊರೆಯಲಿದೆ. ಇವುಗಳ ಬೆಲೆ ಕ್ರಮವಾಗಿ ರೂ.35,775 ಮತ್ತು ರೂ. 42,292 ಗಳಾಗಲಿದೆ ಎನ್ನಲಾಗಿದೆ.

English summary
A new leak suggests that the upcoming flagship OnePlus 5T will be Amazon Exclusive and it could be launched on November 16.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot