ಒನ್ ಪ್ಲಸ್ 7, ಒನ್ ಪ್ಲಸ್ 7 ಪ್ರೋ ಬಿಡುಗಡೆಗೆ ಡೇಟ್ ಫಿಕ್ಸ್

By Gizbot Bureau
|

ಚೀನಾದ ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆ ಒನ್ ಪ್ಲಸ್ ತನ್ನ ನೂತನ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆಗೊಳಿಸುವ ದಿನಾಂಕವನ್ನು ಪ್ರಕಟಿಸಿದೆ. ಬೆಂಗಳೂರಿನಲ್ಲಿ ಮೇ 14 ರಂದು 8:15 ಕ್ಕೆ ನಡೆಯುವ ಅಂತರಾಷ್ಟ್ರೀಯ ಎಕ್ಸಿಬಿಷನ್ ಸೆಂಟರ್ ನಲ್ಲಿ ಇದು ಬಿಡುಗಡೆಗೊಳಿಸಲಿದೆ.

ಎಂಟ್ರಿ ವೋಚರ್ ಪಡೆಯುವುದು ಹೇಗೆ?

ಎಂಟ್ರಿ ವೋಚರ್ ಪಡೆಯುವುದು ಹೇಗೆ?

ಎಪ್ರಿಲ್ 25, 2019 ಬೆಳಿಗ್ಗೆ 10 ಘಂಟೆಯಿಂದಲೇ ಬಿಡುಗಡೆ ಕಾರ್ಯಕ್ರಮಕ್ಕೆ ಎಂಟ್ರಿ ವೋಚರ್ ನ್ನು ಒನ್ ಪ್ಲಸ್.ಇನ್ ನಲ್ಲಿ ಲಭ್ಯವಾಗುತ್ತದೆ. ಯಾರಿಗೆಲ್ಲ ಇವೆಂಟ್ ನಲ್ಲಿ ಭಾಗವಹಿಸುವುದಕ್ಕೆ ಸಾಧ್ಯವಾಗುವುದಿಲ್ಲವೋ ಅವರು ಲೈವ್ ಸ್ಟ್ರೀಮ್ ಲಿಂಕ್ ಮೂಲಕ ಕಾರ್ಯಕ್ರಮ ವೀಕ್ಷಣೆಗೆ ಅವಕಾಶವಿರುತ್ತದೆ. ಅಮೇಜಾನ್ ಒನ್ ಪ್ಲಸ್ ನ ಎಕ್ಸ್ ಕ್ಲೂಸೀವ್ ಆನ್ ಲೈನ್ ಸೇಲ್ ನ ಸಹಭಾಗಿತ್ವವನ್ನು ಹೊಂದಿದ್ದಾರೆ.

ಪ್ರೊಡಕ್ಟ್ ಹೆಸರು ಪ್ರಕಟವಾಗಿಲ್ಲ:

ಪ್ರೊಡಕ್ಟ್ ಹೆಸರು ಪ್ರಕಟವಾಗಿಲ್ಲ:

ಪ್ರೊಡಕ್ಟ್ ಗಳ ಅಂತಿಮ ಹೆಸರನ್ನು ಒನ್ ಪ್ಲಸ್ ಇದುವರೆಗೂ ಕೂಡ ಪ್ರಕಟಪಡಿಸಿಲ್ಲ.ಆದರೆ ವರದಿಗಳು ಮತ್ತು ಈಗಾಗಲೇ ಲೀಕ್ ಆಗಿರುವ ಸುದ್ದಿಗಳನ್ನು ಪ್ರಕಾರ ಒನ್ ಪ್ಲಸ್ 7 ಮತ್ತು ಒನ್ ಪ್ಲಸ್ 7 ಪ್ರೋ ಎಂದು ಹೇಳಲಾಗುತ್ತಿದೆ.

ಸಿಇಓ ಹೇಳಿದ್ದೇನು?

ಸಿಇಓ ಹೇಳಿದ್ದೇನು?

ಒನ್ ಪ್ಲಸ್ 6 ಮತ್ತು 6ಟಿ ಫೋನಿನ ಯಶಸ್ಸಿನ ಫೋನ್ ಒನ್ ಪ್ಲಸ್ 7 ಆಗಿದೆ. ಒನ್ ಪ್ಲಸ್ 7 ಫೋನ್ ಆಪಲ್ ಮತ್ತು ಸ್ಯಾಮ್ ಸಂಗ್ ಫೋನಿನಂತೆಯೇ ಪ್ರೀಮಿಯಂ ಬೆಲೆಯನ್ನು ಹೊಂದಿರುವ ಸಾಧ್ಯತೆ ಇದೆ. ಈ ಹಿಂದೆ ಒನ್ ಪ್ಲಸ್ ನ ಸಿಇಓ ಪಿಟೆ ಲೋ ಒಂದು ಸಂದರ್ಶನದಲ್ಲಿ ಮುಂದಿನ ಸ್ಮಾರ್ಟ್ ಫೋನ್ ನಲ್ಲಿ ಅತ್ಯದ್ಭುತವಾಗಿರುವ ಡಿಸ್ಪ್ಲೇ ಇರುತ್ತದೆ ಎಂಬುದಾಗಿ ತಿಳಿಸಿದ್ದರು.

ವದಂತಿಗಳು ಹೇಳುವುದು ಹೀಗೆ:

ವದಂತಿಗಳು ಹೇಳುವುದು ಹೀಗೆ:

ವರದಿಗಳು ಮತ್ತು ವದಂತಿಗಳು ಹೇಳುತ್ತಿರುವ ಪ್ರಕಾರ ನಾಚ್ ಇಲ್ಲದ, ಗರಿಷ್ಟ ರಿಫ್ರೆಶ್ ರೇಟ್ ಡಿಸ್ಪ್ಲೇಯನ್ನು ಈ ಫೋನ್ ಗಳು ಹೊಂದಿರುತ್ತವೆ. ಒನ್ ಪ್ಲಸ್ 7 ಪ್ರೋ ಕನ್ಸ್ಯೂಮರ್ ಸೆಂಟ್ರಿಕ್ ಡಿವೈಸ್ ಆಗಿರುತ್ತದೆ.. ಗೇಮಿಂಗ್ ಗೆ ಹೆಚ್ಚು ಮಹತ್ವ ನೀಡುತ್ತದೆ. ರೇಝರ್ ಫೋನ್ 2 ಮತ್ತು ಆಸೂಸ್ ROG ಫೋನ್ ಗಳಿಗೆ ಇವು ಸ್ಪರ್ಧೆ ನೀಡುತ್ತದೆ.

ಸೆಲ್ಫೀ ಕ್ಯಾಮರಾ ಮೆಕಾನಿಸಂ:

ಸೆಲ್ಫೀ ಕ್ಯಾಮರಾ ಮೆಕಾನಿಸಂ:

ಇದರಲ್ಲಿ ಮೊಟೋರೈಸ್ಡ್ ಸೆಲ್ಫೀ ಕ್ಯಾಮರಾ ಮೆಕಾನಿಸಂನ್ನು ಅಳವಡಿಸಲಾಗಿರುತ್ತದೆ ಎಂದು ಹೇಳಲಾಗಿದೆ. ಒನ್ ಪ್ಲಸ್ 7 ಪ್ರೋ ಸ್ನ್ಯಾಪ್ ಡ್ರ್ಯಾಗನ್ 855 ಪ್ರೊಸೆಸರ್ ನ್ನು ಹೊಂದಿದ್ದು ಕ್ವಾಲ್ಕಂ ನ ನೂತನ 5ಜಿ ಮಾಡೆಮ್ ನ್ನು ಹೊಂದಿದೆ ಜೊತೆಗೆ ಕ್ವಾಲ್ಕಂ ಎಕ್ಸ್ 55 ನ್ನು ಹೊಂದಿರುತ್ತದೆ ಎನ್ನಲಾಗುತ್ತಿದೆ. 5ಜಿ ನೆಟ್ ವರ್ಕ್ ಲಭ್ಯತೆಯ ಬಗ್ಗೆ ಒನ್ ಪ್ಲಸ್ ಈ ಫೋನಿನಲ್ಲಿ ಪ್ರಚಾರವನ್ನು ನಡೆಸುವುದು ಅನುಮಾನವಾಗಿದೆ.

Best Mobiles in India

English summary
OnePlus 7, OnePlus 7 Pro to be launched on 14 May in Bengaluru

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X