ತನ್ನ ಸ್ಮಾರ್ಟ್‌ಫೋನ್‌ಗಳಿಗಾಗಿ ಹೊಸ ಅಪ್ಡೇಟ್‌ ಪಾಲಿಸಿ ಪ್ರಕಟಿಸಿದ ಒನ್‌ಪ್ಲಸ್!

|

ಜನಪ್ರಿಯ ಒನ್‌ಪ್ಲಸ್ ತನ್ನ ಸ್ಮಾರ್ಟ್‌ಫೋನ್‌ಗಳಿಗಾಗಿ ಹೊಸ ಅಪ್ಡೇಟ್‌ ನೀತಿಯನ್ನು ಪ್ರಕಟಿಸಿದೆ. ಕಂಪನಿಯು ತನ್ನ ಕೆಲವು ಪ್ರಮುಖ ಫೋನ್‌ಗಳಿಗೆ ಸಾಫ್ಟ್‌ವೇರ್ ಬೆಂಬಲವನ್ನು ವಿಸ್ತರಿಸುತ್ತಿದೆ. ಒನ್‌ಪ್ಲಸ್ 8 ಸರಣಿ ಮತ್ತು ಹೊಸ ಸಾಧನಗಳು ಈಗ ಮೂರು ಪ್ರಮುಖ ಆಂಡ್ರಾಯ್ಡ್ ಓಎಸ್ ನವೀಕರಣಗಳನ್ನು ಮತ್ತು ನಾಲ್ಕು ವರ್ಷಗಳ ಭದ್ರತಾ ನವೀಕರಣಗಳನ್ನು ಪಡೆಯಲಿವೆ.

ಒನ್‌ಪ್ಲಸ್

ಹೌದು, ಒನ್‌ಪ್ಲಸ್ ಕಂಪೆನಿ ತನ್ನ ಸ್ಮಾರ್ಟ್‌ಫೋನ್‌ಗಳಿಗಾಗಿ ಹೊಸ ಅಪ್ಡೇಟ್‌ ಪಾಲಿಸಿಯನ್ನು ಪರಿಚಯಿಸಿದೆ. ಇದರಲ್ಲಿ ಒನ್‌ಪ್ಲಸ್‌ 9 ಪ್ರೊ, ಒನ್‌ಪ್ಲಸ್ 9 ಆರ್, ಒನ್‌ಪ್ಲಸ್ 9, ಒನ್‌ಪ್ಲಸ್ 8 ಟಿ, ಒನ್‌ಪ್ಲಸ್ 8 ಪ್ರೊ, ಮತ್ತು ಒನ್‌ಪ್ಲಸ್ 8 ನಂತಹ ಸಾಧನಗಳು ಮೂರು ಪ್ರಮುಖ ಆಂಡ್ರಾಯ್ಡ್ ಓಎಸ್ ಮತ್ತು ನಾಲ್ಕು ವರ್ಷಗಳ ಭದ್ರತಾ ನವೀಕರಣಗಳನ್ನು ಪಡೆಯಲಿವೆ. ಹಾಗಾದ್ರೆ ಈ ಹೊಸ ಅಪ್ಡೇಟ್‌ ಪಾಲಿಸಿಯ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಒನ್‌ಪ್ಲಸ್‌

ಒನ್‌ಪ್ಲಸ್‌ನಿಂದ ಹಳೆಯ ಮಧ್ಯ ಶ್ರೇಣಿಯ ಪ್ರೀಮಿಯಂ ಫೋನ್‌ಗಳಿಗೆ ಸಂಬಂಧಿಸಿದಂತೆ, ಅವರು ಮೂರು ವರ್ಷಗಳ ಭದ್ರತಾ ಪ್ಯಾಚ್‌ಗಳ ಜೊತೆಗೆ ಎರಡು ಪ್ರಮುಖ ಓಎಸ್ ನವೀಕರಣಗಳನ್ನು ಮಾತ್ರ ಪಡೆಯುತ್ತಾರೆ. ಒನ್‌ಪ್ಲಸ್ 8 ಸರಣಿಯ ಮೊದಲು ಬಿಡುಗಡೆಯಾದ ಪ್ರಮುಖ ಸಾಧನಗಳು ಹಿಂದಿನ 2 ಪ್ರಮುಖ ಆಂಡ್ರಾಯ್ಡ್ ನವೀಕರಣಗಳು ಮತ್ತು 3 ವರ್ಷಗಳ ಭದ್ರತಾ ನವೀಕರಣಗಳನ್ನು ಅನುಸರಿಸುತ್ತವೆ. ವಾಹಕ ಆವೃತ್ತಿಗಳಿಗಾಗಿ ಸಾಫ್ಟ್‌ವೇರ್ ನವೀಕರಣ ಯೋಜನೆಗಳು ನಮ್ಮ ವಾಹಕ ಪಾಲುದಾರರ ಅವಶ್ಯಕತೆಗಳನ್ನು ಅನುಸರಿಸುತ್ತವೆ ಎಂದು ಒನ್‌ಪ್ಲಸ್ ಬ್ಲಾಗ್ ಪೋಸ್ಟ್‌ನಲ್ಲಿ ಹೇಳಲಾಗಿದೆ.

ಒನ್‌ಪ್ಲಸ್‌

ಇನ್ನು ಒನ್‌ಪ್ಲಸ್‌ ಸಾದನಗಳಲ್ಲಿ ಕೇವಲ ಎರಡು ಓಎಸ್ ನವೀಕರಣಗಳು ಮತ್ತು 3 ವರ್ಷಗಳ ಭದ್ರತಾ ನವೀಕರಣಗಳಿಗೆ ಅರ್ಹವಾಗಿರುವ ಒನ್‌ಪ್ಲಸ್ 7 ಪ್ರೊ, ಒನ್‌ಪ್ಲಸ್ 7 ಟಿ ಪ್ರೊ, ಒನ್‌ಪ್ಲಸ್ 7 ಟಿ, ಮತ್ತು ಒನ್‌ಪ್ಲಸ್ 7 ಸೇರಿವೆ. ಈ ಪಟ್ಟಿಯಲ್ಲಿ ಒನ್‌ಪ್ಲಸ್ ನಾರ್ಡ್ ಸಿಇ ಮತ್ತು ಒನ್‌ಪ್ಲಸ್ ನಾರ್ಡ್ ಕೂಡ ಸೇರಿವೆ. ಒನ್‌ಪ್ಲಸ್ ನಾರ್ಡ್ ಎನ್ ಸರಣಿಯಲ್ಲಿ ಬರುವ ಎಲ್ಲಾ ಸ್ಮಾರ್ಟ್‌ಫೋನ್‌ಗಳು ಕೇವಲ ಒಂದು ಪ್ರಮುಖ ಆಂಡ್ರಾಯ್ಡ್ ಓಎಸ್ ನವೀಕರಣ ಮತ್ತು ಮೂರು ವರ್ಷಗಳ ಭದ್ರತಾ ನವೀಕರಣಗಳನ್ನು ಮಾತ್ರ ಪಡೆಯುತ್ತವೆ. ಇವುಗಳಲ್ಲಿ ಒನ್‌ಪ್ಲಸ್ ಎನ್ 200 5 ಜಿ, ಒನ್‌ಪ್ಲಸ್ ಎನ್ 100, ಮತ್ತು ಒನ್‌ಪ್ಲಸ್ ಎನ್ 10 5 ಜಿ ಸೇರಿವೆ.

ಒನ್‌ಪ್ಲಸ್

ಇದಲ್ಲದೆ ಜಾಗತಿಕ ಒನ್‌ಪ್ಲಸ್ ಬಳಕೆದಾರರಿಗೆ ಆಕ್ಸಿಜನ್ಓಎಸ್ ಯಾವಾಗಲೂ ಓಎಸ್ ಆಗಿ ಉಳಿದಿದೆ. ಆದರೆ ಈಗ ಹೆಚ್ಚು ಸ್ಥಿರ ಮತ್ತು ಬಲವಾದ ವೇದಿಕೆಯಲ್ಲಿ ನಿರ್ಮಿಸಲಾಗಿದೆ. ಇದು ಭವಿಷ್ಯದಲ್ಲಿ ಹೊಸ ಸಾಧನಗಳಿಗೆ ಅನ್ವಯಿಸುತ್ತದೆ, ಆದರೆ ಈಗಲೂ ನಿರ್ವಹಣಾ ವೇಳಾಪಟ್ಟಿಯಲ್ಲಿರುವ ಸಾಧನಗಳಿಗೆ, ಇದು ಆಂಡ್ರಾಯ್ಡ್ 12 ಜೊತೆಗೆ ಒಟಿಎ ಅಪ್‌ಡೇಟ್ ಮೂಲಕ ಸಂಭವಿಸುತ್ತದೆ ಎಂದು ಕಂಪನಿ ತಿಳಿಸಿದೆ. ಇದಲ್ಲದೆ, ಒನ್‌ಪ್ಲಸ್ ತನ್ನ ಆಕ್ಸಿಜನ್ಓಎಸ್ ಮತ್ತು ಕಲರ್ಓಎಸ್ ಕೋಡ್‌ಬೇಸ್‌ನ ಏಕೀಕರಣದ ಬಗ್ಗೆ ಸುಳಿವು ನೀಡಿದೆ, ಇದು ಆಂಡ್ರಾಯ್ಡ್ 12 ನೊಂದಿಗೆ ನಡೆಯಬಹುದು ಎನ್ನಲಾಗಿದೆ.

Most Read Articles
Best Mobiles in India

English summary
OnePlus has announced its new update policy for its smartphones. The company is extending software support for some of its flagship phones.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X