ಭಾರತದಲ್ಲಿ ಒನ್‌ಪ್ಲಸ್‌ ಕಂಪೆನಿಯಿಂದ ಹೊಸ ಇಯರ್‌ಫೋನ್‌ ಬಿಡುಗಡೆ! ಬೆಲೆ ಎಷ್ಟು?

|

ಭಾರತದ ಮಾರುಕಟ್ಟೆಯಲ್ಲಿ ಒನ್‌ಪ್ಲಸ್‌ ಕಂಪೆನಿ ತನ್ನ ಭಿನ್ನ ಗ್ಯಾಜೆಟ್ಸ್‌ಗಳ ಮೂಲಕ ಗುರುತಿಸಿಕೊಂಡಿದೆ. ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ, ಬ್ಲೂಟೂತ್‌ ಇಯರ್‌ಫೋನ್‌ಗಳನ್ನು ಕೂಡ ಮಾರುಕಟ್ಟೆಯಲ್ಲಿ ಪರಿಚಯಿಸುತ್ತಾ ಬಂದಿದೆ. ಈಗಾಗಲೇ ಹಲವು ಮಾದರಿಯ ಇಯರ್‌ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಭಾರತದಲ್ಲಿ ಒನ್‌ಪ್ಲಸ್‌ ನಾರ್ಡ್ ವೈರ್ಡ್ ಇಯರ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಈ ಇಯರ್‌ಫೋನ್‌ಗಳು 9.2 ಎಂಎಂ ಆಟೋ ಡ್ರೈವರ್‌ಗಳನ್ನು ಒಳಗೊಂಡಿದೆ.

ಒನ್‌ಪ್ಲಸ್‌

ಹೌದು, ಒನ್‌ಪ್ಲಸ್‌ ಕಂಪೆನಿ ಭಾರತದಲ್ಲಿ ಹೊಸ ಒನ್‌ಪ್ಲಸ್‌ ನಾರ್ಡ್ ವೈರ್ಡ್ ಇಯರ್‌ಫೋನ್‌ ಪರಿಚಯಿಸಿದೆ. ಇದು 0.42cc ಸೌಂಡ್ ಕ್ಯಾವಿಟಿ ಅನ್ನು ಒಳಗೊಂಡಿದ್ದು, ಹೆಚ್ಚು ಪರಿಚಿತವಾದ ಬಾಸ್ ಅನುಭವವನ್ನು ನೀಡುತ್ತದೆ. ಇದರಲ್ಲಿ ಕರೆಗಳು, ಮೀಡಿಯಾ ಪ್ಲೇಬ್ಯಾಕ್ ಮತ್ತು ವಾಯ್ಸ್‌ ಅಸಿಸ್ಟೆಂಟ್‌ ಅನ್ನು ಕಂಟ್ರೋಲ್‌ ಮಾಡಲು ಇನ್-ಲೈನ್ ಮೈಕ್ ಮತ್ತು ಬಟನ್‌ಗಳನ್ನು ಒಳಗೊಂಡಿದೆ. ಹಾಗಾದ್ರೆ ಒನ್‌ಪ್ಲಸ್‌ ನಾರ್ಡ್ ವೈರ್ಡ್ ಇಯರ್‌ಫೋನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇಯರ್‌ಫೋನ್‌

ಒನ್‌ಪ್ಲಸ್‌ ನಾರ್ಡ್‌ ವೈರ್ಡ್ ಇಯರ್‌ಫೋನ್‌ ಬುಲೆಟ್ ವಾಯರ್‌ಲೆಸ್ Z ಸರಣಿಯಿಂದ ಸ್ಫೂರ್ತಿ ಪಡೆದಿವೆ. ಈ ಇಯರ್‌ಫೋನ್‌ ಹ್ಯಾಸಲ್‌-ಫ್ರೀ ಬಳಕೆದಾರ ಅನುಭವವನ್ನು ನೀಡಲಿದೆ. ಇದು ಆಡಿಯೋ ಪ್ಲೇಬ್ಯಾಕ್ ಅನ್ನು ಕಂಟ್ರೋಲ್‌ ಮಾಡಲು ಬಳಕೆದಾರರಿಗೆ ಸಹಾಯ ಮಾಡಲಿದೆ. ಅಂದರೆ ಪ್ಲೇಬ್ಯಾಕ್ ಅನ್ನು ವಿರಾಮಗೊಳಿಸಲು ಬಳಕೆದಾರರು ಅವುಗಳನ್ನು ಅನ್-ಕ್ಲಿಪ್ ಮಾಡಬಹುದಾಗಿದೆ. ಇದಲ್ಲದೆ, ಬೆವರು ಮತ್ತು ನೀರಿನ ಪ್ರತಿರೋಧಕ್ಕಾಗಿ IPX4 ರೇಟಿಂಗ್ ಅನ್ನು ಹೊಂದಿದೆ.

ಸಿಲಿಕಾನ್

ಇದು ಬಳಕೆದಾರರಿಗೆ ಆರಾಮದಾಯಕವಾದ ಫಿಟ್ ಅನ್ನು ಪಡೆಯಲು ಮೂರು ಜೋಡಿ ಪರಸ್ಪರ ಬದಲಾಯಿಸಬಹುದಾದ ಸಿಲಿಕಾನ್ ಟಿಪ್ಸ್‌ ಅನ್ನು ಒಳಗೊಂಡಿದೆ. ಈ ಇಯರ್‌ಫೋನ್‌ಗಳು ಮ್ಯಾಗ್ನೆಟ್‌ಗಳೊಂದಿಗೆ ಬರುತ್ತದೆ, ನೀವು ಅವುಗಳನ್ನು ಒಟ್ಟಿಗೆ ಅಂಟಿಸಿದಾಗ ಆಡಿಯೊವನ್ನು ಸ್ಟಾಪ್‌ ಮಾಡಬಹುದಾಗಿದೆ. ಇನ್ನು ಈ ಇಯರ್‌ಫೋನ್‌ಗಳು ನಯವಾದ ಬ್ಲ್ಯಾಕ್‌ ಫಿನಿಶ್‌ ಅನ್ನು ಹೊಂದಿದ್ದು, ಇದು ಕ್ಲಾಸಿಕ್ ಒನ್‌ಪ್ಲಸ್‌ ಲುಕ್‌ ಉಳಿಸಿಕೊಳ್ಳಲು ರೋಮಾಂಚಕ ವೈಬ್ರೆಂಟ್‌ ರೆಡ್‌ ಗಳಿಂದ ಪೂರಕವಾಗಿದೆ.

ಇಯರ್‌ಫೋನ್‌

ಇನ್ನು ಈ ಇಯರ್‌ಫೋನ್‌ ಭಾರತದಲ್ಲಿ ಕೇವಲ 799ರೂ. ಬೆಲೆಯನ್ನು ಹೊಂದಿದೆ. ಇದು ಇದೇ ಸೆಪ್ಟೆಂಬರ್ 1 ರಿಂದ ಮಾರಾಟವಾಗಲಿದೆ ಮತ್ತು ಒನ್‌ಪ್ಲಸ್ ವೆಬ್‌ಸೈಟ್ ಮತ್ತು ಅಮೆಜಾನ್‌ನಲ್ಲಿ ಖರೀದಿಗೆ ಲಭ್ಯವಿರುತ್ತದೆ ಎಂದು ಕಂಪನಿ ಹೇಳಿದೆ. ಇದನ್ನು ನೀವು ಒನ್‌ಪ್ಲಸ್ ಎಕ್ಸ್‌ಪೀರಿಯೆನ್ಸ್ ಸ್ಟೋರ್ ಮತ್ತು ರಿಲಯನ್ಸ್ ಡಿಜಿಟಲ್, ಬಜಾಜ್ ಎಲೆಕ್ಟ್ರಾನಿಕ್ಸ್, ವಿಜಯ್ ಸೇಲ್ಸ್, ಟಾಪ್ 10 ಮೊಬೈಲ್‌ಗಳು ಮತ್ತು ಪೂಜಾರ ಟೆಲಿಕಾಂನಂತಹ ಇತರ ಆಫ್‌ಲೈನ್ ರಿಟೇಲ್‌ ಸ್ಟೋರ್‌ಗಳಲ್ಲಿ ಖರೀದಿಸಬಹುದಾಗಿದೆ.

ಒನ್‌ಪ್ಲಸ್‌

ಇದಲ್ಲದೆ ಒನ್‌ಪ್ಲಸ್‌ ಕಂಪೆನಿ ಭಾರತದಲ್ಲಿ ಇತ್ತೀಚಿಗೆ ಒನ್‌ಪ್ಲಸ್‌ 10T ಸ್ಮಾರ್ಟ್‌ಫೋನ್‌ ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್‌ 6.7 ಇಂಚಿನ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು 120hz ಸ್ಕ್ರೀನ್ ರಿಫ್ರೆಶ್ ರೇಟ್‌ ಅನ್ನು ಸಹ ನೀಡಲಿದೆ. ಈ ಸ್ಮಾರ್ಟ್‌ಫೋನ್‌ ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್ 8+ Gen 1 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಆಕ್ಸಿಜನ್ OS 12.1 ಜೊತೆಗೆ ಆಂಡ್ರಾಯ್ಡ್‌ 12 ಬೆಂಬಲದೊಂದಿಗೆ ರನ್‌ ಆಗಲಿದೆ. ಈ ವರ್ಷದ ಅಂತ್ಯದ ವೇಳೆಗೆ ಈ ಫೋನ್‌ OxygenOS 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ ಎಂದು ಹೇಳಲಾಗಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್‌16GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ.

ಸ್ಮಾರ್ಟ್‌ಫೋನ್‌

ಒನ್‌ಪ್ಲಸ್‌ 10T ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಕ್ಯಾಮೆರಾ ಡ್ಯುಯಲ್ LED ಫ್ಲ್ಯಾಷ್‌ ಅನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX766 ಸೆನ್ಸಾರ್‌ ಹೊಂದಿದೆ. ಇದಲ್ಲದೆ ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿರುತ್ತದೆ. ಒನ್‌ಪ್ಲಸ್‌ 10T ಸ್ಮಾರ್ಟ್‌ಫೋನ್‌ 4800mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 150W SUPERVOOC ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಈ ಚಾರ್ಜರ್ ಕೇವಲ 19 ನಿಮಿಷಗಳಲ್ಲಿ ಫೋನ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

Best Mobiles in India

English summary
OnePlus launched the Nord wired earphones in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X