ಎಚ್ಚರ.. ಎಚ್ಚರ..! ಸ್ವಲ್ಪ ಯಾಮಾರಿದ್ರು ನಿಮ್ಮ ದುಡ್ಡು ಪರರ ಪಾಲು..!

By Gizbot Bureau
|

ಆನ್‌ಲೈನ್‌ ಯುಗ ಬೆಳೆದಂತೆಲ್ಲಾ ಸೈಬರ್‌ ಕ್ರೈಂಗಳು ಹೆಚ್ಚುತ್ತಿವೆ. ಬ್ಯಾಂಕಿಂಗ್‌ ಹಗರಣಗಳೇ ಸೈಬರ್‌ ಕ್ರೈಂನಲ್ಲಿ ಹೆಚ್ಚಿನ ಸ್ಥಾನ ಪಡೆದಿವೆ. ಆನ್‌ಲೈನ್‌ ಖದೀಮರು ಸ್ಟೇಟ್‌ ಬ್ಯಾಂಕ್ ಆಫ್‌ ಇಂಡಿಯಾದಂತಹ ಪ್ರಮುಖ ಬ್ಯಾಂಕ್‌ಗಳ ಗ್ರಾಹಕರನ್ನೇ ಗುರಿಯಾಗಿಸಿಕೊಂಡು ಹಣವನ್ನು ಲೂಟಿ ಹೊಡೆಯುತ್ತಿದ್ದಾರೆ. ಗ್ರಾಹಕರಿಗೆ ಕರೆ ಮಾಡಿ ಅವರ ಗೌಪ್ಯವಾದ ಬ್ಯಾಂಕಿಂಗ್ ಮಾಹಿತಿಯನ್ನು ಪಡೆಯುತ್ತಿದ್ದಾರೆ.

ಎಚ್ಚರ.. ಎಚ್ಚರ..! ಸ್ವಲ್ಪ ಯಾಮಾರಿದ್ರು ನಿಮ್ಮ ದುಡ್ಡು ಪರರ ಪಾಲು..!

ಎಟಿಎಂ ಕಾರ್ಡ್‌ ಸ್ಕಿಮ್ಮಿಂಗ್ ಮತ್ತು ಮೊಬೈಲ್ ಸಿಮ್‌ ಕಾರ್ಡ್‌ ಸ್ವಾಪ್‌ನಂತಹ ಪ್ರಕರಣಗಳು ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿರುವಾಗಲೇ, ಆನ್‌ಲೈನ್‌ ದರೋಡೆಕೋರರು ಹೊಸ ಮಾರ್ಗವೊಂದನ್ನು ಕಂಡುಹಿಡಿದುಕೊಂಡಿದ್ದು, ಗ್ರಾಹಕರನ್ನು ವಿಶಿಂಗ್‌ ಕರೆ ಮೂಲಕ ಯಾಮಾರಿಸುತ್ತಿದ್ದಾರೆ. ಹೇಗಿರುತ್ತೆ ಆನ್‌ಲೈನ್‌ ದರೋಡೆ ಎಂಬುದನ್ನು ಮುಂದೆ ಓದಿ.

ಅಪರಿಚಿತ ಅಥವಾ ವಿಶಿಂಗ್ ಕರೆ

ಅಪರಿಚಿತ ಅಥವಾ ವಿಶಿಂಗ್ ಕರೆ

ಆನ್‌ಲೈನ್‌ನಲ್ಲಿ ಹಣ ಲೂಟಿ ಹೊಡೆಯುವ ಇಡೀ ಪ್ರಕ್ರಿಯೆ ಆರಂಭವಾಗುವುದು ಅಪರಿಚಿತ ಅಥವಾ ವಿಶಿಂಗ್ ಕರೆಯಿಂದ. ಹೌದು, ಇಲ್ಲಿಂದಲೇ ನಿಮ್ಮ ಅಕೌಂಟ್‌ ಹೈಜಾಕ್ ಮಾಡಿ ಹಣವನ್ನು ವರ್ಗಾವಣೆ ಮಾಡಿಕೊಳ್ಳಲಾಗುತ್ತದೆ.

ಬ್ಯಾಂಕ್ ಅಧಿಕಾರಿ ಹೆಸರಲ್ಲಿ ಕಾಲ್

ಬ್ಯಾಂಕ್ ಅಧಿಕಾರಿ ಹೆಸರಲ್ಲಿ ಕಾಲ್

ಮೊದಲು ನಿಮಗೆ ಬ್ಯಾಂಕ್‌ ಸಿಬ್ಬಂದಿ ಎಂದು ಕಾಲ್ ಮಾಡಿ ನಿಮ್ಮ ಜೊತೆ ತಮ್ಮ ಪರಿಚಯವನ್ನು ಮಾಡಿಕೊಳ್ಳುತ್ತಾರೆ.

ವೈಯಕ್ತಿಕ ವಿವರ ಸಂಗ್ರಹ

ತಮ್ಮ ಪರಿಚಯದ ನಂತರ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುತ್ತಾರೆ. ನಿಮ್ಮ ಹೆಸರು, ಜನ್ಮ ದಿನಾಂಕ ಮತ್ತು ಮೊಬೈಲ್‌ ನಂಬರ್‌ನ್ನು ಪರಿಶೀಲಿಸಿ ಅವರು ನಿಮಗೆ ಬ್ಯಾಂಕ್‌ ಅಧಿಕಾರಿಯೆಂದು ನಂಬಿಸುತ್ತಾರೆ.

ಕಾರ್ಡ್ ಬ್ಲಾಕ್‌ ಆಗುತ್ತೆ ಅಂತಾರೆ..!

ಕಾರ್ಡ್ ಬ್ಲಾಕ್‌ ಆಗುತ್ತೆ ಅಂತಾರೆ..!

ನಂತರ ನಿಮ್ಮ ಡೆಬಿಟ್‌ ಕಾರ್ಡ್‌ ಅಥವಾ ಕ್ರೆಡಿಟ್‌ ಕಾರ್ಡ್ ಬ್ಲಾಕ್‌ ಆಗುತ್ತೆ ಎಂದು ಹೇಳಿ ನಿಮ್ಮನ್ನು ಹೆದರಿಸುವ ಕೆಲಸ ಮಾಡುತ್ತಾರೆ.

ಅಪ್‌ಗ್ರೇಡ್‌ ಮಾಡಲು ಹೇಳ್ತಾರೆ..!

ಸಾಮಾನ್ಯವಾಗಿ ನಿಮಗೆ ಕರೆ ಮಾಡಿದಾತ ನಿಮ್ಮ ಡೆಬಿಟ್‌ ಕಾರ್ಡ್‌ ಅಥವಾ ಕ್ರೆಡಿಟ್‌ ಕಾರ್ಡ್ ಅನ್ನು ಅಪ್‌ಗ್ರೇಡ್‌ ಮಾಡಲು ಹೇಳುತ್ತಾರೆ.

ನಿಮ್ಮ ಕಾರ್ಡ್ ವಿವರ ಕೇಳ್ತಾರೆ

ನಂತರ ನಿಮ್ಮ ಕಾರ್ಡ್‌ ಬ್ಲಾಕ್‌ ಆಗದಿರುವಂತೆ ಮಾಡಲು ಡೆಬಿಟ್‌ ಕಾರ್ಡ್‌ ಅಥವಾ ಕ್ರೆಡಿಟ್‌ ಕಾರ್ಡ್ ವಿವರ ಹಾಗೂ ಕಸ್ಟಮರ್‌ ಐಡಿಯನ್ನು ನಿಮ್ಮಿಂದ ಪಡೆಯುತ್ತಾರೆ.

ಅಕೌಂಟ್‌ ಡಿಟೇಲ್ಸೂ ಬೇಕು..!

ಅಕೌಂಟ್‌ ಡಿಟೇಲ್ಸೂ ಬೇಕು..!

ನೀವು ಈಗಾಗಲೇ ಡೆಬಿಟ್‌ ಕಾರ್ಡ್‌ ಅಥವಾ ಕ್ರೆಡಿಟ್‌ ಕಾರ್ಡ್ ವಿವರಗಳನ್ನು ನೀಡಿರುತ್ತೀರಿ. ನಂತರ ಅವರು ಸುಲಭವಾಗಿಯೇ ಏನು ಅನುಮಾನ ಬಾರದಂತೆ ನಿಮ್ಮ ಬ್ಯಾಂಕ್ ಅಕೌಂಟ್ ಡಿಟೇಲ್ಸ್ ಕೂಡ ಕೇಳುತ್ತಾರೆ.

ಒಟಿಪಿ ಪರಿಶೀಲನೆ..!

ನಂತರ, ನಿಮಗೆ ಕರೆ ಮಾಡಿದಾತ ನಿಮ್ಮ ಮೊಬೈಲ್‌ಗೆ ಬಂದ ಒಟಿಪಿ ಪರಿಶೀಲಿಸಲು ಹೇಳ್ತಾರೆ. ಇದು ಸೇವೆಯಾಧಾರಿತ ಒಟಿಪಿ ಎಂದು ಹೇಳಿ ನಿಮ್ಮಿಂದ ಒನ್ ಟೈಮ್‌ ಪಾಸ್‌ವರ್ಡ್‌ ಪಡೆಯಲು ಯಶಸ್ವಿಯಾಗುತ್ತಾರೆ.

ವಿವಿಧ ಅಕೌಂಟ್‌ಗಳಿಗೆ ಹಣ ವರ್ಗಾವಣೆ

ವಿವಿಧ ಅಕೌಂಟ್‌ಗಳಿಗೆ ಹಣ ವರ್ಗಾವಣೆ

ಒಟಿಪಿ ನೀಡಿದ ನಂತರ ಮತ್ತೇನು ಕಥೆ. ನಿಮ್ಮ ಅಕೌಂಟ್‌ನಿಂದ ಹಣ ವರ್ಗಾವಣೆಯಾಗಿರುತ್ತದೆ. ಅದನ್ನು ನಿಮಗೆ ಕಂಡುಹಿಡಿಯಲು ಕೂಡ ಸಾಧ್ಯವಾಗಲ್ಲ. ವಿವಿಧ ರಾಜ್ಯಗಳ, ದೇಶಗಳ ರಿಮೋಟ್ ಅಕೌಂಟ್‌ಗಳಿಗೆ ಹೋಗಿ ನಿಮ್ಮ ಹಣ ಸೇರಿರುತ್ತದೆ.

ಮೊಬೈಲ್, ಲ್ಯಾಂಡ್‌ಲೈನ್‌..?

ಸಾಮಾನ್ಯವಾಗಿ ಇಂತಹ ಕರೆಗಳು ಲ್ಯಾಂಡ್‌ಲೈನ್‌ ನಂಬರ್‌ನಿಂದ ಬರುತ್ತವೆ. ಒಂದಷ್ಟು ಸಮಯದಲ್ಲಿ ಮೊಬೈಲ್‌ನಿಂದಲೂ ಕೂಡ ಕಾಲ್ ಬರುತ್ತದೆ. ಇನ್ನು ಹೈಟೆಕ್‌ ಖದೀಮರು ಸ್ಯಾಟಲೈಟ್‌ ಫೋನ್‌ ಬಳಸಿ ನಿಮ್ಮ ಹಣ ದೋಚುತ್ತಾರೆ.

ಬ್ಯಾಂಕ್‌ ಯಾವ ಮಾಹಿತಿಯನ್ನೂ ಕೇಳಲ್ಲ

ಬ್ಯಾಂಕ್‌ ಯಾವ ಮಾಹಿತಿಯನ್ನೂ ಕೇಳಲ್ಲ

ನಿಮಗಿದು ಗೊತ್ತಿರಲಿ, ಯಾವುದೇ ಬ್ಯಾಂಕ್‌ ಕೂಡ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಪಡೆಯಲು ಕರೆ ಮಾಡಲ್ಲ. ಇನ್ನು ನಿಮ್ಮ ಅಕೌಂಟ್‌ನಲ್ಲಿ ಏನಾದ್ರೂ ಸಮಸ್ಯೆ ಇದ್ರೆ, ಹತ್ತಿರದ ಬ್ರಾಂಚ್‌ಗೆ ಬಂದು ಸಮಸ್ಯೆ ಪರಿಹರಿಸಿಕೊಳ್ಳಿ ಎಂದು ಹೇಳುತ್ತಾರೆ.

ನೀವೇ ಬ್ಯಾಂಕ್‌ಗೆ ಹೋಗಿ

ಒಂದು ವೇಳೆ ನಿಮಗೆ ಇಂತಹ ಕರೆಗಳು ಬಂದರೂ ಕರೆ ಮಾಡಿದಾತನಿಗೆ ನೇರವಾಗಿಯೇ ಹೇಳಿ, ನಾನೇ ಬ್ಯಾಂಕ್‌ಗೆ ಹೋಗಿ ಸಮಸ್ಯೆ ಬಗೆಹರಿಸಿಕೊಳ್ಳುತ್ತೇನೆ ಎನ್ನುವುದರಿಂದ ನಿಮ್ಮ ಹಣ ಖದೀಮರ ಪಾಲಾಗುವುದು ತಡೆಯುತ್ತದೆ.

ವಿವರಗಳನ್ನು ನೀಡಲೇಬೇಡಿ

ವಿವರಗಳನ್ನು ನೀಡಲೇಬೇಡಿ

ನಿಮ್ಮ ಬ್ಯಾಂಕಿಂಗ್ ವಿವರಗಳಾದ ಕಾರ್ಡ್‌ ನಂಬರ್, ಲಾಗಿನ್ ಐಡಿ, CVV, ATM ಪಿನ್‌ನ್ನು ಯಾರ ಜೊತೆಯೂ ಯಾವುದೇ ಕಾರಣವಿರಲಿ ಹಂಚಿಕೊಳ್ಳಬೇಡಿ.

Best Mobiles in India

Read more about:
English summary
Online Banking Fraud: Beware SBI Credit/Debit Card Users

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X