Subscribe to Gizbot

ಚೀನಾ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡ ಒಪ್ಪೋ A1 ಸ್ಮಾರ್ಟ್ ಫೋನ್..!

Posted By: Precilla Dias

ಚೀನಾ ಮೂಲದ ಸ್ಮಾರ್ಟ್ ಪೋನ್ ತಯಾರಿಕ ಕಂಪನಿ ಒಪ್ಪೋ ಚೀನಾ ಮಾರುಕಟ್ಟೆಗೆ A1 ಸ್ಮಾರ್ಟ್ ಪೋನ್ ಅನ್ನು ಲಾಂಚ್ ಮಾಡಿದೆ. ಏಪ್ರಿಲ್ ಒಂದರಿಂದ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದ್ದು, ರೂ.14,400ಕ್ಕೆ ಮಾರಾಟವಾಗಲಿದೆ. ಅಲ್ಲದೇ ಈ ಸ್ಮಾರ್ಟ್ ಫೋನ್ ರೆಡ್, ಬ್ಲೂ, ವೈಟ್ ಬಣ್ಣದಲ್ಲಿ ದೊರೆಯಲಿದೆ ಎನ್ನಲಾಗಿದೆ. ಆದರೆ ಈ ಸ್ಮಾರ್ಟ್ ಪೋನ್ ಎಂದಿನಿಂದ ಭಾರತೀಯ ಮಾರುಕಟ್ಟೆಯಲ್ಲಿ ದೊರೆಯಲಿದೆ ಎನ್ನುವ ಮಾಹಿತಿ ಇನ್ನು ಲಭ್ಯವಾಗಿಲ್ಲ.

ಚೀನಾ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡ ಒಪ್ಪೋ A1 ಸ್ಮಾರ್ಟ್ ಫೋನ್..!

ಒಪ್ಪೋ A1 ಸ್ಮಾರ್ಟ್ ಫೋನಿನಲ್ಲಿ 5.7 ಇಂಚಿನ IPS LED ಡಿಸ್ ಪ್ಲೇಯನ್ನು ಕಾಣಬಹುದಾಗಿದ್ದು, 18:9 ಅನುಪಾತದಿಂದ ಕೂಡಿದೆ. ಅಲ್ಲದೇ 4GB RAM ಮತ್ತು 64 GB ಇಂಟರ್ನಲ್ ಮೆಮೊರಿಯಲ್ಲಿ ಇದರಲ್ಲಿ ನೋಡಬಹುದಾಗಿದೆ. ಆದರೆ ಈ ಸ್ಮಾರ್ಟ್ ಫೋನಿನಲ್ಲಿ ಯಾವ ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ ಎನ್ನುವುದು ಇನ್ನು ತಿಳಿದಿಲ್ಲ ಎನ್ನಲಾಗಿದೆ. ಇದು ಸ್ಮಾರ್ಟ್ ಫೋನ್ ಬಿಡುಗಡೆಯ ನಂತರದಲ್ಲಿ ತಿಳಿಯಲಿದೆ.

ಒಪ್ಪೋ A1 ಸ್ಮಾರ್ಟ್ ಫೋನಿನ ಹಿಂಭಾಗದಲ್ಲಿ 13MP ಕ್ಯಾಮೆರಾವನ್ನು ನೋಡಬಹುದಾಗಿದ್ದು, ಇದು ಆಟೋ ಫೋಕಸ್ ಮತ್ತು LED ಫ್ಲಾಷ್ ಲೈಟ್ ಅನ್ನು ಒಳಗೊಂಡಿದೆ. ಈ ಸ್ಮಾರ್ಟ್ ಫೋನ್ ಮತ್ತೊಂದು ವಿಶೇಷತೆ ಎಂದರೆ ಇದರಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ನೀಡಲಾಗಿಲ್ಲ. ಬದಲಾಗಿ ಫೇಷಿಯಲ್ ರೆಗ್ನೇಷನ್ ಆಯ್ಕೆಯನ್ನು ನೀಡಲಾಗಿದೆ. ಇದರೊಂದಿಗೆ 3180mAh ಬ್ಯಾಟರಿಯನ್ನು ಕಾಣಬಹುದಾಗಿದೆ.

Here's how the Face ID of the newly launched Oppo A83 works (KANNADA)
ಇದರೊಂದಿಗೆ ಒಪ್ಪೋ ಭಾರತೀಯ ಮಾರುಕಟ್ಟೆಯಲ್ಲಿ ಒಪ್ಪೋF7 ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಲು ಮುಂದಾಗಿದೆ. ಈ ಸ್ಮಾರ್ಟ್ ಪೋನ್ ಸಹ ಸೆಲ್ಫಿ ಎಕ್ಸ್ ಪರ್ಟ್ ಫೋನ್ ಗಳ ಸಾಲಿಗೆ ಸೇರಲಿದೆ ಎನ್ನಲಾಗಿದೆ. ಈ ಸ್ಮಾರ್ಟ್ ಫೋನ್ ನೋಡಲು ಐಪೋನ್ X ಮಾದರಿಯಲ್ಲಿ ಕಾಣಿಸಿಕೊಳ್ಳಲಿದ್ದು, 19;9 ಅನುಪಾತದ ಡಿಸ್ ಪ್ಲೇಯನ್ನು ಹೊಂದಿರಲಿದೆ. ಇದರೊಂದಿಗೆ ಸೆಲ್ಫಿಗಾಗಿಯೇ 25MP ಕ್ಯಾಮೆರಾವನ್ನು ನೀಡಲಾಗಿದೆ.

ಫೇಸ್‌ಬುಕ್‌ ಕದ್ದಿರುವ ನಿಮ್ಮ ಜಾತಕವನ್ನು ಡೌನ್‌ಲೋಡ್ ಮಾಡುವುದು ಹೇಗೆ..?

ಇದಲ್ಲದೇ ಒಪ್ಪೋF7 ಸ್ಮಾರ್ಟ್ ಫೋನ್ ಆಂಡ್ರಾಯ್ಡ್ ಒರಿಯೋದಲ್ಲಿ ಕಾರ್ಯನಿರ್ವಹಿಸಲಿದ್ದು, ಕಲರ್ ಓಎಸ್5.0 ಸಹ ಇದರೊಂದಿಗೆ ಕಾಣಿಸಿಕೊಂಡಿದೆ. 3400mAh ಬ್ಯಾಟರಿಯನ್ನು ಇದರೊಂದಿಗೆ ಅಳವಡಿಸಲಾಗಿದೆ. 4GB/6GB RAM ಮತ್ತು 64GB/128GB ಇಂಟರ್ನಲ್ ಮೆಮೊರಿಯೊಂದಿಗೆ ದೊರೆಯಲಿದೆ. ಮಾರುಕಟ್ಟೆಯಲ್ಲಿ ಮುಂದಿನ ತಿಂಗಳಿನಿಂದ ಹವಾ ಎಬ್ಬಿಸಲಿದೆ.

English summary
Oppo has discreetly launched its A1 smartphone in China. The device will go on sale starting April 1 and is priced at RMB 1,399 (approx Rs 14,400).
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot