ಒಪ್ಪೋ A77s ಸ್ಮಾರ್ಟ್‌ಫೋನ್‌ ಲಾಂಚ್‌: ಫೀಚರ್ಸ್‌, ಬೆಲೆ ವಿವರ

|

ಸ್ಮಾರ್ಟ್‌ಫೋನ್‌ ವಿಭಾಗದಲ್ಲಿ ಒಪ್ಪೋ ಕಂಪೆನಿ ವಿಭಿನ್ನ ಶ್ರೇಣಿಯ ಮೊಬೈಲ್‌ಗಳನ್ನು ಗ್ರಾಹಕರಿಗೆ ತಲುಪಿಸಿದೆ. ಇದರ ನಡುವೆ ಆಗಾಗ್ಗೆ ಹಲವು ಫೀಚರ್ಸ್‌ ಇರುವ ಹೊಸ ಮೊಬೈಲ್‌ಗಳನ್ನೂ ಸಹ ಬಿಡುಗಡೆ ಮಾಡಿ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಈಗ ಮತ್ತೆ ಒಪ್ಪೋ A77s ಎಂಬ ಸ್ಮಾರ್ಟ್‌ಫೋನ್‌ ಅನ್ನು ಅನಾವರಣ ಗೊಳಿಸಿದ್ದು, ಈ ಫೋನ್‌ ಮೀಡಿಯಾ ಟೆಕ್‌ ಹಿಲಿಯೋ G35 SoC ನ ಶಕ್ತಿ ಪಡೆದಿದೆ.

ಒಪ್ಪೋ

ಹೌದು, ಒಪ್ಪೋ ಕಂಪೆನಿ ಹೊಸ ಒಪ್ಪೋ A77s ಸ್ಮಾರ್ಟ್‌ಫೋನ್ ಅನ್ನು ಲಾಂಚ್‌ ಮಾಡಿದೆ. ಈ ಫೋನ್‌ 6.56 ಇಂಚಿನ HD+ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದ್ದು, ಆಂಡ್ರಾಯ್ಡ್‌ 12 ಆಧಾರಿತ ColorOS 12.1 ನಲ್ಲಿ ರನ್‌ ಆಗಲಿದೆ. ಹಾಗೆಯೇ 8GB RAM + 128GB ಸ್ಟೋರೇಜ್ ವೇರಿಯಂಟ್‌ನಲ್ಲಿ ಲಭ್ಯ ಇರುವ ಈ ಸ್ಮಾರ್ಟ್‌ಫೋನ್‌ನ ಇನ್ನಷ್ಟು ಫೀಚರ್ಸ್‌, ಬೆಲೆ ಹಾಗೂ ಮತ್ತಿತರ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ ಓದಿರಿ.

ಡಿಸ್‌ಪ್ಲೇ ವಿಶೇಷತೆ

ಡಿಸ್‌ಪ್ಲೇ ವಿಶೇಷತೆ

ಒಪ್ಪೋ A77s 6.56 ಇಂಚಿನ HD+ ಡಿಸ್‌ಪ್ಲೇ ಹೊಂದಿದ್ದು, 1,612x720 ಪಿಕ್ಸೆಲ್‌ ರೆಸಲ್ಯೂಶನ್‌ ಅನ್ನು ಪಡೆದಿದೆ. ಹಾಗೆಯೇ ಈ ಎಲ್‌ಸಿಡಿ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ ಆಯ್ಕೆಯ ಜೊತೆಗೆ 600nits ಬ್ರೈಟ್‌ನೆಸ್‌ ಹೊಂದಿದೆ. ಈ ಎಲ್ಲಾ ಫೀಚರ್ಸ್‌ಗಳು ಈ ವರ್ಷದ ಆರಂಭದಲ್ಲಿ ಬಿಡುಡೆಯಾದ ಒಪ್ಪೋ A77 4G ಫೋನ್‌ ಅನ್ನೇ ಹೋಲಲಿವೆ.

ಪ್ರೊಸೆಸರ್‌ ಯಾವುದು?

ಪ್ರೊಸೆಸರ್‌ ಯಾವುದು?

ಈ ಒಪ್ಪೋ A77s ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್ ಸ್ನ್ಯಾಪ್‌ಡ್ರಾಗನ್ 680 SoC ನಲ್ಲಿ ಕಾರ್ಯನಿರ್ವಹಿಸಲಿದ್ದು, ಈ ಸ್ಮಾರ್ಟ್‌ಫೋನ್‌ ಆಂಡ್ರಾಯ್ಡ್‌ 12 ಆಧಾರಿತ ColorOS 12.1 ನಲ್ಲಿ ರನ್‌ ಆಗಲಿದೆ. ಇದರ ಜೊತೆಗೆ ಸ್ಮಾರ್ಟ್‌ಫೋನ್‌ 8GB RAM + 128GB ಇಂಟರ್ನಲ್‌ ಸ್ಟೋರೇಜ್‌ನ ಒಂದೇ ವೇರಿಯಂಟ್‌ನಲ್ಲಿ ಲಭ್ಯವಾಗಲಿದೆ. ಹಾಗೆಯೇ ಇಂಟರ್ನಲ್‌ ಸ್ಟೋರೇಜ್‌ನ್ನು ಎಸ್‌ಡಿ ಕಾರ್ಡ್‌ ಮೂಲಕ ಹೆಚ್ಚಿಗೆ ಮಾಡಿಕೊಳ್ಳಬಹುದೇ? ಎಂಬುದರ ಬಗ್ಗೆ ಕಂಪೆನಿ ಮಾಹಿತಿ ನೀಡಿಲ್ಲ.

ಕ್ಯಾಮೆರಾ ರಚನೆ

ಕ್ಯಾಮೆರಾ ರಚನೆ

ಈ ಸ್ಮಾರ್ಟ್‌ಫೋನ್‌ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಸೆನ್ಸಾರ್‌ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಸೆನ್ಸಾರ್‌ ಸೇರಿದಂತೆ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಪಡೆದಿದೆ. ಹಾಗೆಯೇ ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ.

ಬ್ಯಾಟರಿ ಹಾಗೂ ಇತರೆ

ಬ್ಯಾಟರಿ ಹಾಗೂ ಇತರೆ

ಈ ಒಪ್ಪೋ A77s ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, 33Wನ ವೇಗದ ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ. ಇದಿಷ್ಟೇ ಅಲ್ಲದೆ, AI ಚಾಲಿತ ಸುರಕ್ಷಿತ ಚಾರ್ಜಿಂಗ್ ಫೀಚರ್ಸ್‌ ಸಹ ಈ ಸ್ಮಾರ್ಟ್‌ಫೋನ್‌ನಲ್ಲಿದೆ. ಇದು ಬ್ಯಾಟರಿಯನ್ನು ಓವರ್‌ ಚಾರ್ಜಿಂಗ್‌ನಿಂದ ರಕ್ಷಣೆ ಮಾಡುತ್ತದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ನಲ್ಲಿ ಡ್ಯುಯಲ್ ಅಲ್ಟ್ರಾ ಲೀನಿಯರ್ ಸ್ಟಿರಿಯೊ ಸ್ಪೀಕರ್‌ಗಳ ಆಯ್ಕೆ ಹೊಂದಿದ್ದು, ಜೊತೆಗೆ ಫೋನ್‌ ವಾಟರ್‌ ಹಾಗೂ ಡಸ್ಟ್‌ ರೆಸಿಸ್ಟೆಂಟ್‌ ವಿಷಯದಲ್ಲಿ IPX4 ಮತ್ತು IPX5 ನಲ್ಲಿ ರೇಟ್ ಪಡೆದಿದೆ.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ಈ ಸ್ಮಾರ್ಟ್‌ಫೋನ್‌ ಒಂದೇ ವೇರಿಯಂಟ್‌ನಲ್ಲಿ ಲಭ್ಯವಾಗಲಿದ್ದು, ಇದಕ್ಕೆ THB 8,999 (ಸುಮಾರು 20,000ರೂ. ಗಳು) ನಿಗದಿ ಮಾಡಲಾಗಿದೆ. ಈ ವೇರಿಯಂಟ್‌ ಸ್ಮಾರ್ಟ್‌ಫೋನ್‌ ಬ್ಲಾಕ್ ಹಾಗೂ ಆರೆಂಜ್ ಬಣ್ಣದಲ್ಲಿ ಲಭ್ಯವಾಗಲಿದೆ. ಸದ್ಯಕ್ಕೆ ಭಾರತದಲ್ಲಿ ಈ ಸ್ಮಾರ್ಟ್‌ಫೋನ್‌ ಲಭ್ಯವಿಲ್ಲ. ಇದು ಥೈಲ್ಯಾಂಡ್‌ನಲ್ಲಿ ಅನಾವರಣಗೊಂಡಿದ್ದು, ಅಲ್ಲಿ ಕೆಲವೇ ದಿನಗಳಲ್ಲಿ ಗ್ರಾಹಕರ ಕೈ ಸೇರಲಿದೆ. ಇನ್ನುಳಿದಂತೆ ಭಾರತವೂ ಸೇರಿದಂತೆ ಇತರೆ ದೇಶಗಳಲ್ಲಿ ಈ ಸ್ಮಾರ್ಟ್‌ಫೋನ್ ಬಿಡುಗಡೆಯ ಕುರಿತು ಕಂಪೆನಿಯು ಯಾವುದೇ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ.

Best Mobiles in India

English summary
In the smartphone segment, Oppo company has delivered different range of mobiles to customers. Now Oppo has unveiled A77s smartphone with different features.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X