ಒಪ್ಪೋ A98 ಸ್ಮಾರ್ಟ್‌ಫೋನ್ ಫೀಚರ್ಸ್ ಬಹಿರಂಗ; 108 ಮೆಗಾಪಿಕ್ಸೆಲ್‌ ಕ್ಯಾಮೆರಾ?

|

ಸ್ಮಾರ್ಟ್‌ ಫೋನ್ ತಯಾರಿಕಾ ವಿಭಾಗದಲ್ಲಿ ಒಪ್ಪೋ ಸಹ ಪ್ರಮುಖ ಕಂಪೆನಿಯಾಗಿ ಗುರುತಿಸಿಕೊಂಡಿದೆ. ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುತ್ತಿದ್ದು, ಇದರ ನಡುವೆ ಈಗ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ ಒಂದನ್ನು ಪರಿಚಯಿಸಲು ಮುಂದಾಗಿದೆ. ಈ ಫೋನ್ ಕರ್ವ್ಡ್ ಡಿಸ್‌ಪ್ಲೇ ಫೀಚರ್ಸ್‌ ಪಡೆದಿದ್ದು, ಬರೋಬ್ಬರಿ 108 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿರಲಿದೆ. ಹಾಗೆಯೇ ಈ ಫೋನ್ A ಸರಣಿಯ ಮೊದಲ ಸ್ಮಾರ್ಟ್‌ಫೋನ್ ಆಗಿರಬಹುದು ಎಂದು ನಿರೀಕ್ಷಿಸಲಾಗಿದೆ.

ಒಪ್ಪೋ ಕಂಪೆನಿ

ಹೌದು, ಒಪ್ಪೋ ಕಂಪೆನಿ ಒಪ್ಪೋ A98 ಸ್ಮಾರ್ಟ್‌ಫೋನ್ ಅನಾವರಣಕ್ಕೆ ಮುಂದಾಗಿದ್ದು, ಇದಕ್ಕೂ ಮೊದಲೇ ಕೆಲವು ಪ್ರಮುಖ ಫೀಚರ್ಸ್‌ ಲೀಕ್‌ ಆಗಿವೆ. ಈ ಲೀಕ್‌ ಆದ ಮಾಹಿತಿ ಪ್ರಕಾರ ಈ ಸ್ಮಾರ್ಟ್‌ಫೋನ್ PHQ110 ಎಂಬ ವೇರಿಯಂಟ್ ನಂಬರ್‌ ಅನ್ನು ಪಡೆದುಕೊಂಡಿದೆ ಎನ್ನಲಾಗಿದೆ. ಹಾಗೆಯೇ ಬ್ಯಾಕ್‌ ಪ್ಯಾನಲ್‌ನಲ್ಲಿ ಕ್ಯಾಮೆರಾ ರಿಂಗ್‌ಗಳನ್ನು ಲಂಬ ಶ್ರೇಣಿಯಲ್ಲಿ ಜೋಡಿಸಲಾಗಿದೆ. ಇದರ ಕೆಳಗೆ ಎಲ್ಇಡಿ ಫ್ಲ್ಯಾಶ್ ಇರುವ ರಚನೆ ಪಡೆದಿದೆ ಎನ್ನುವ ಮಾಹಿತಿ ಹೊರಬಿದ್ದಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ನ ಪ್ರಮುಖ ಫೀಚರ್ಸ್‌ ಏನು ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ಡಿಸ್‌ಪ್ಲೇ ವಿವರ

ಡಿಸ್‌ಪ್ಲೇ ವಿವರ

ಒಪ್ಪೋ A98 ಸ್ಮಾರ್ಟ್‌ಫೋನ್‌ 6.43 ಇಂಚಿನ ಡಿಸ್‌ಪ್ಲೇ ಹೊಂದಿರಲಿದ್ದು, ಇದು 1080 x 2400 ಪಿಕ್ಸೆಲ್‌ಗಳ ರೆಸಲ್ಯೂಶನ್ ನೀಡಲಿದೆ. ಹಾಗೆಯೇ ಅಮೋಲ್ಡ್‌ ಡಿಸ್‌ಪ್ಲೇ ಆಯ್ಕೆಯ ಜೊತೆಗೆ 120Hz ರಿಫ್ರೆಶ್ ರೇಟ್ ನೀಡಲಿದೆ ಎಂಬುದನ್ನು ನಿರೀಕ್ಷಿಸಲಾಗಿದೆ.

ಪ್ರೊಸೆಸರ್‌ ಯಾವುದಿರಬಹುದು?

ಪ್ರೊಸೆಸರ್‌ ಯಾವುದಿರಬಹುದು?

ಒಪ್ಪೋ A98 ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಕ್ವಾಲ್ಕಾಮ್ ಸ್ನ್ಯಾಪ್ಡ್ರ್ಯಾಗನ್ 778G ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಲಿದ್ದು, ಅಡ್ರಿನೊ 642L ಗ್ರಾಫಿಕ್ ಪ್ರೊಸೆಸರ್ ಯೂನಿಟ್‌ ಒಳಗೊಂಡಿರಲಿದೆ. ಜೊತೆಗೆ ಈ ಫೋನ್‌ ಆಂಡ್ರಾಯ್ಡ್ v12 ಆಪರೇಟಿಂಗ್ ಸಿಸ್ಟಮ್ ನಲ್ಲಿ ರನ್‌ ಆಗಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ನ ಕ್ವಾಲ್ಕಾಮ್ ಸ್ನ್ಯಾಪ್ಡ್ರ್ಯಾಗನ್ 778G ಪ್ರೊಸೆಸರ್ ಅನ್ನು ಸ್ಯಾಮ್‌ಸಂಗ್ ಗ್ಯಾಲಕ್ಸಿ A52s 5G, ಕ್ಸಿಯೋಮಿ 11 ಲೈಟ್ NE 5G, ರಿಯಲ್‌ GT ಮಾಸ್ಟರ್ ಆವೃತ್ತಿಯ ಸ್ಮಾರ್ಟ್‌ಫೋನ್‌ಗಳಿಗೂ ಬಳಕೆ ಮಾಡಲಾಗಿದ್ದು, ಹೆಚ್ಚಿನ ಜನಪ್ರಿಯತೆ ಹೊಂದಿವೆ. ಇದರ ಜೊತೆಗೆ ಈ ಫೋನ್‌ 8GB RAM ಹಾಗೂ 128GB ಇಂಟರ್ನಲ್ ಸ್ಟೋರೇಜ್‌ ಹಾಗೂ 12GB RAM ಹಾಗೂ 256GB ಇಂಟರ್ನಲ್‌ ಸ್ಟೋರೇಜ್‌ ನ ಎರಡು ವೇರಿಯಂಟ್‌ನಲ್ಲಿ ಲಭ್ಯವಾಗಿದೆ ಎನ್ನಲಾಗಿದೆ.

ಕ್ಯಾಮೆರಾ ವಿಶೇಷತೆ

ಕ್ಯಾಮೆರಾ ವಿಶೇಷತೆ

ಒಪ್ಪೋ A98 5G ಸ್ಮಾರ್ಟ್‌ಫೋನ್‌ 108 ಮೆಗಾಪಿಕ್ಸೆಲ್‌ನ ಪ್ರಮುಖ ಕ್ಯಾಮೆರಾ ಹೊಂದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹಾಗೆಯೇ 16 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿರಲಿದೆ. ಇನ್ನುಳಿದಂತೆ ಈ ಫೋನ್‌ ಸ್ಮಾರ್ಟ್‌ಫೋನ್‌ ಡ್ಯುಯಲ್‌‌ ಅಥವಾ ಟ್ರಿಪಲ್‌ ಕ್ಯಾಮೆರಾ ರಚನೆ ಹೊಂದಿದೆಯಾ ಎಂಬ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.

 ಬ್ಯಾಟರಿ ಹಾಗೂ ಕನೆಕ್ಟಿವಿಟಿ ಆಯ್ಕೆ

ಬ್ಯಾಟರಿ ಹಾಗೂ ಕನೆಕ್ಟಿವಿಟಿ ಆಯ್ಕೆ

ಈ ಸ್ಮಾರ್ಟ್‌ಫೋನ್ 67Wಸೂಪರ್‌ ವೂಕ್ ಚಾರ್ಜಿಂಗ್‌ ಬೆಂಬಲದ 5000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆಯನ್ನು ಪಡೆದಿರಲಿದೆ. ಇನ್ನು ವೈ-ಫೈ 802.11 a/b/g/n/ac, ಮೊಬೈಲ್ ಹಾಟ್‌ಸ್ಪಾಟ್, ಬ್ಲೂಟೂತ್ ಆವೃತ್ತಿ v5.2, ಅಕ್ಸೆಲೆರೊಮೀಟರ್, ಗೈರೊ, ಪ್ರಾಕ್ಸಿಮಿಟಿ, ಕಂಪಾಸ್ ಸೇರಿದಂತೆ ಇನ್ನಿತರೆ ಕನೆಕ್ಟಿವಿಟಿ ಫೀಚರ್ಸ್‌ ಹೊಂದಿರಲಿದೆ. ಈ ಫೋನ್‌ 159.9 mm x 73.2 mm x 7.5 mm ಸುತ್ತಳಗೆ ಹೊಂದಿದ್ದು, ಸುಮಾರು 171 ಗ್ರಾಂ ತೂಕ ಹೊಂದಿದೆ ಎಂದು ವರದಿಯಾಗಿದೆ.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ಈ ಸ್ಮಾರ್ಟ್‌ಫೋನ್‌ ಭಾರತದಲ್ಲಿ ಜುಲೈ ತಿಂಗಳಲ್ಲಿ ಮಾರುಕಟ್ಟೆಗೆ ಬರಲಿದೆ ಎಂದು ನಿರೀಕ್ಷಿಸಲಾಗಿದ್ದು, ಈ ಫೋನ್‌ಗೆ 22,869ರೂ. ಗಳು ಇರಬಹುದು ಎಂದು ನಿರೀಕ್ಷಿಸಲಾಗಿದೆ.

Best Mobiles in India

English summary
Oppo is also recognized as a leading company in the smartphone manufacturing segment. Meanwhile, Oppo A98 smartphone features have been leaked.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X