ಮಾರುಕಟ್ಟೆಗೆ ಎಂಟ್ರಿಕೊಟ್ಟ 9,800mAh ಬ್ಯಾಟರಿ ಸಾಮರ್ಥ್ಯದ ಸ್ಮಾರ್ಟ್‌ಫೋನ್‌!

|

ಟೆಕ್‌ ಮಾರುಕಟ್ಟೆಯಲ್ಲಿ ಬಳಕೆದಾರರು ಅನುಕೂಲಕ್ಕೆ ತಕ್ಕಂತ ಸ್ಮಾರ್ಟ್‌ಫೋನ್‌ಗಳನ್ನು ಕಾಣಬಹುದು. ಸ್ಮೂತ್‌ ಆಗಿ ಬಳಸುವವರಿಗೆ ಹಲವು ಆಯ್ಕೆಗಳಿದ್ದರೆ ರಫ್‌ ಆಗಿ ಬಳಸುವವರಿಗೆ ಅನೇಕ ಆಯ್ಕೆಯ ಸ್ಮಾರ್ಟ್‌ಫೋನ್‌ಗಳು ಲಭ್ಯವಿದೆ. ಇದಕ್ಕೆ ಅನುಗುಣವಾಗಿ ಸ್ಮಾರ್ಟ್‌ಫೋನ್‌ ತಯಾರಕರು ಕೂಡ ರಗಡ್‌ ಡಿವೈಸ್‌ಗಳನ್ನು ಪರಿಚಯಿಸುತ್ತಾ ಬಂದಿದ್ದಾರೆ. ಇದರಲ್ಲಿ ಔಕಿಟೆಲ್ (Oukitel) ಕಂಪನಿ ಕೂಡ ಒಂದಾಗಿದೆ. ಸದ್ಯ ಇದೀಗ Oukitel ಕಂಪೆನಿ ಹೊಸ Oukitel WP21 ಫೋನ್‌ ಲಾಂಚ್‌ ಮಾಡಿದೆ.

ಔಕಿಟೆಲ್‌

ಹೌದು, ಔಕಿಟೆಲ್‌ ಕಂಪೆನಿ ಮಾರುಕಟ್ಟೆಗೆ ಹೊಸ ಔಕಿಟೆಲ್‌ WP21 ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ 9,800mAh ಸಾಮರ್ಥ್ಯದ ಬಿಗ್‌ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ ಮೀಡಿಯಾಟೆಕ್‌ ಟೆಕ್‌ ಹಿಲಿಯೋ G99 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ವಿಶೇಷತೆ ಏನಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಔಕಿಟೆಲ್‌ WP21 ರಗಡ್‌ ಸ್ಮಾರ್ಟ್‌ಫೋನ್‌ 6.78 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಅನ್ನು ಬೆಂಬಲಿಸಲಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ AOD ಅನ್ನು ಬೆಂಬಲಿಸಲಿದ್ದು, ರಿಯರ್‌ ಪ್ಯಾನಲ್‌ನಲ್ಲಿ ಸೆಕೆಂಡರಿ ಡಿಸ್‌ಪ್ಲೇ ಹೊಂದಿದೆ. ಇದು ನೋಟಿಫಿಕೇಶನ್‌, ಮ್ಯೂಸಿಕ್‌ ಕಂಟ್ರೋಲ್‌ ಮಾಡಲಿದೆ. ಅಲ್ಲದೆ ಕ್ಯಾಮರಾ ವ್ಯೂಫೈಂಡರ್ ಆಗಿ ಕಾರ್ಯನಿರ್ವಹಿಸುತ್ತದೆ.

ಪ್ರೊಸೆಸರ್‌ ಯಾವುದು?

ಪ್ರೊಸೆಸರ್‌ ಯಾವುದು?

ಔಕಿಟೆಲ್‌ WP21 ರಗಡ್‌ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಹಿಲಿಯೊ G99 ಚಿಪ್‌ಸೆಟ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಆಂಡ್ರಾಯ್ಡ್ 12 ಬೆಂಬಲವನ್ನು ಪಡೆದುಕೊಂಡಿದೆ. ಹಾಗೆಯೇ 12GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಇದಲ್ಲದೆ ಮೈಕ್ರೊ SD ಕಾರ್ಡ್ ಬಳಸಿ ಸಂಗ್ರಹವನ್ನು ಇನ್ನಷ್ಟು ವಿಸ್ತರಿಸುವುದಕ್ಕೆ ಅವಕಾಶವನ್ನು ಕೂಡ ಪಡೆದುಕೊಂಡಿದೆ.

ಕ್ಯಾಮೆರಾ ಸೆಟ್‌ಅಪ್‌

ಕ್ಯಾಮೆರಾ ಸೆಟ್‌ಅಪ್‌

ಔಕಿಟೆಲ್‌ WP21 ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್‌ ಸೋನಿ IMX 686 ಸೆನ್ಸಾರ್‌, ಎರಡನೇ ಕ್ಯಾಮೆರಾ 20ಮೆಗಾಪಿಕ್ಸೆಲ್‌ ನೈಟ್‌ ವ್ಯೂ ಕ್ಯಾಮೆರಾ ಮತ್ತು ಮೂರನೇ ಕ್ಯಾಮೆರಾ 2ಮೆಗಾಪಿಕ್ಸೆಲ್‌ ಮ್ಯಾಕ್ರೋ ಲೆನ್ಸ್‌ ಅನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್‌ನ ಸೆಲ್ಫಿ ಕ್ಯಾಮೆರಾ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಬ್ಯಾಟರಿ ಬ್ಯಾಕ್‌ಅಪ್‌ ಏನಿದೆ?

ಬ್ಯಾಟರಿ ಬ್ಯಾಕ್‌ಅಪ್‌ ಏನಿದೆ?

ಔಕಿಟೆಲ್‌ WP21 ಸ್ಮಾರ್ಟ್‌ಫೋನ್‌ 9,800 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 1,150 ಗಂಟೆಗಳ ಸ್ಟ್ಯಾಂಡ್‌ಬೈ ಸಮಯ ಮತ್ತು 12 ಗಂಟೆಗಳ ನಿರಂತರ ವೀಡಿಯೊ ಪ್ಲೇಬ್ಯಾಕ್‌ ಟೈಂ ಅನ್ನು ನೀಡಲಿದೆ ಎಂದು ಹೇಳಲಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ NFC, GNSS ಸ್ಥಾನೀಕರಣ ಮತ್ತು ಬ್ಲೂಟೂತ್ 5.0 ಅನ್ನು ಬೆಂಬಲಿಸುತ್ತದೆ. ಇದು IP68 ವಾಟರ್‌ ಪ್ರೂಫ್‌ ಮತ್ತು IP69K ಡಸ್ಟ್‌ ಪ್ರೂಫ್‌ ಅನ್ನು ಒಳಗೊಂಡಿದೆ. ಈ ಫೋನ್‌ MIL-STD-810H ಕಂಪ್ಲೈಂಟ್ ಆಗಿದೆ, ಇದು ಎಲ್ಲಾ ರೀತಿಯ ಹವಾಮಾನದಲ್ಲಿ ಬಳಕೆಗೆ ಸೂಕ್ತವಾಗಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಈ ಸ್ಮಾರ್ಟ್‌ಫೋನ್ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಇದರ ಬೆಲೆ $280 (ಅಂದಾಜು 22,825ರೂ.) ಆಗಿದೆ. ಇದು ನವೆಂಬರ್ 24 ರಿಂದ AliExpress ಮೂಲಕ ಖರೀದಿಗೆ ಲಭ್ಯವಿರುತ್ತದೆ. ಈ ಸ್ಮಾರ್ಟ್‌ಫೋನ್‌ ಭಾರತದಲ್ಲಿ ಯಾವಾಗ ಲಭ್ಯವಾಗಲಿದೆ ಎಂಬುದರ ಬಗ್ಗೆ ಇನ್ನು ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.

Best Mobiles in India

English summary
Oukitel WP21 Rugged Smartphone with 9,800mAh Battery Launched

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X