ವಿ ಟೆಲಿಕಾಂ ಗ್ರಾಹಕರಿಗೆ ಬಿಗ್‌ ಶಾಕ್‌! 30 ಕೋಟಿ ಗ್ರಾಹಕರ ವೈಯಕ್ತಿಕ ಡೇಟಾ ಸೋರಿಕೆ?

|

ವಿ ಟೆಲಿಕಾಂ ಗ್ರಾಹಕರು ಈ ಸುದ್ದಿಯನ್ನು ಓದಲೇಬೇಕು. ಈಗಾಗಲೇ ಸಾಲದ ಸುಳಿಯಲ್ಲಿ ನಲುಗುತ್ತಿರುವ ವಿ ಟಲಿಕಾಂ ತನ್ನ ಗ್ರಾಹಕರ ಡೇಟಾ ಸೋರಿಕೆಯ ಕಾರಣದಿಂದ ಮತ್ತೊಮ್ಮೆ ಸುದ್ದಿಯಾಗಿದೆ. ವಿ ಟೆಲಿಕಾಂ ಸಿಸ್ಟಂನಲ್ಲಿ ಉಂಟಾದ ದೋಷದಿಂದ ಸುಮಾರು 30.1 ಕೋಟಿ ಗ್ರಾಹಕರ ಡೇಟಾ ಸೋರಿಕೆಯಾಗಿದೆ ಎನ್ನಲಾಗಿದೆ. ಅದರಲ್ಲೂ ಸೈಬರ್ ಭದ್ರತಾ ಸಂಶೋಧನಾ ತಂಡದ ಪ್ರಕಾರ, CyberX9 ನ ಬಹು ನಿರ್ಣಾಯಕ ಭದ್ರತಾ ದೋಷಗಳು ಕಂಡುಬಂದಿವೆ. ಇದರಿಂದ ಗ್ರಾಹಕರ ಕರೆ ಲಾಗ್‌ಗಳು ಸೇರಿದಂತೆ ಗ್ರಾಹಕರ ಸೂಕ್ಷ್ಮ ಮತ್ತು ಗೌಪ್ಯ ವೈಯಕ್ತಿಕ ಡೇಟಾವನ್ನು ಬಹಿರಂಗವಾಗಿದೆ ಎನ್ನಲಾಗಿದೆ.

ವಿ ಟೆಲಿಕಾಂ

ಹೌದು, ವಿ ಟೆಲಿಕಾಂ ಸಿಸ್ಟಂನಲ್ಲಿ ಉಂಟಾದ ದೋಷದಿಂದಾಗಿ 30.1 ಕೋಟಿ ಗ್ರಾಹಕರ ಗೌಪ್ಯ ಡೇಟಾ ಸೋರಿಕೆಯಾಗಿದೆ ಎಂದು ವರದಿಯಾಗಿದೆ. ಇನ್ನು ವಿ ಟೆಲಿಕಾಂ 20 ಮಿಲಿಯನ್ ಪೋಸ್ಟ್‌ಪೇಯ್ಡ್ ಗ್ರಾಹಕರ ಡೇಟಾವನ್ನು ಒಳಗೊಂಡಿದೆ. ಇದರಿಂದ ಗ್ರಾಹಕರ ಡೇಟಾ ಸೋರಿಕೆಯಾಗಿರುವುದು ಸಾಕಷ್ಟು ಸಂಚಲನ ಸೃಷ್ಟಿಸಿದೆ. ಇನ್ನು ವಿ ಟೆಲಿಕಾಂ ಕೂಡ ಗ್ರಾಹಕರ ಡೇಟಾ ಸೋರಿಕೆಯನ್ನು ಒಪ್ಪಿಕೊಂಡಿದೆ ಅಲ್ಲದೆ ತಕ್ಷಣವೇ ಸಮಸ್ಯೆಯನ್ನು ಪರಿಹರಿಸಿದೆ. ಹಾಗಾದ್ರೆ ಡೇಟಾ ಸೋರಿಕೆಯ ಬಗ್ಗೆ ವಿ ಟೆಲಿಕಾಂ ಹೇಳಿದ್ದೇನು? ಇದೆಲ್ಲದರ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಮುಂದೆ ಓದಿರಿ.

ಡೇಟಾ ಸೋರಿಕೆಯ ಬಗ್ಗೆ ವಿ ಟೆಲಿಕಾಂ ಹೇಳಿದ್ದೇನು?

ಡೇಟಾ ಸೋರಿಕೆಯ ಬಗ್ಗೆ ವಿ ಟೆಲಿಕಾಂ ಹೇಳಿದ್ದೇನು?

ಲೈವ್‌ಮಿಂಟ್ ವರದಿಯಲ್ಲಿ ಉಲ್ಲೇಖಿಸಿರುವಂತೆ ವಿ ಟೆಲಿಕಾಂ ತನ್ನ ಬಿಲ್ಲಿಂಗ್ ಸಂವಹನ ವ್ಯವಸ್ಥೆಯಲ್ಲಿನ ದೋಷವನ್ನು ಒಪ್ಪಿಕೊಂಡಿದೆ. ಆದರೂ ಅದು ಸಮಸ್ಯೆಯನ್ನು "ತಕ್ಷಣ" ಪರಿಹರಿಸಿದೆ. ವಿ "ಸಂಪೂರ್ಣ ವಿಧಿವಿಜ್ಞಾನ ವಿಶ್ಲೇಷಣೆ" ನಡೆಸಿದೆ ಎಂದು ವರದಿಯಾಗಿದೆ. ಇದಾದ ನಂತರ ಯಾವುದೇ ರೀತಿಯ ಡೇಟಾ ಉಲ್ಲಂಘನೆಯಾಗಿಲ್ಲ ಎಂದು ಹೇಳಲಾಗಿದೆ. ಇನ್ನು ವಿ ಟೆಲಿಕಾಂ ಭದ್ರತಾ ಮೂಲಸೌಕರ್ಯವನ್ನು ಬಲಪಡಿಸಲು ಲೆಕ್ಕಪರಿಶೋಧನೆಗಳನ್ನು ನಡೆಸುವುದಾಗಿ ಹೇಳಿಕೊಂಡಿದೆ.

ಸೈಬರ್‌X9 ನ ಸಂಶೋಧನೆಯಲ್ಲಿ ಕಂಡು ಬಂದಿದ್ದೇನು?

ಸೈಬರ್‌X9 ನ ಸಂಶೋಧನೆಯಲ್ಲಿ ಕಂಡು ಬಂದಿದ್ದೇನು?

ಸೈಬರ್‌X9 ಸಂಸೋಧನೆಯ ವರದಿ ಪ್ರಕಾರ ವಿ ಟೆಲಿಕಾ ತನ್ನ ಲಕ್ಷಾಂತರ ಗ್ರಾಹಕರ ಡೇಟಾವನ್ನು ಸೋರಿಕೆ ಮಾಡಿದೆ. ವಿ ಟೆಲಿಕಾಂ ಸಿಸ್ಟಂನಲ್ಲಿ ದೋಷ ಪತ್ತೆಯಾಗಿದ್ದು, ಇದರಿಂದ ಗ್ರಾಹಕರ ಕಾಲ್‌ ಲಾಗ್ಸ್‌, ಕಾಲ್‌ ಟೈಂ, ಕರೆ ಮಾಡಿದ ಸ್ಥಳ ಮತ್ತು ಫೋನ್ ಸಂಖ್ಯೆಯಂತಹ ಡೇಟಾವನ್ನು ಅಪಾಯದಲ್ಲಿ ಸಿಲುಕಿಸಿದೆ ಎಂದು ವರದಿಯಾಗಿದೆ. ಇದರಿಂದ ಗ್ರಾಹಕರ ವೈಯುಕ್ತಿಕ ಮಾಹಿತಿಯನ್ನು ಹಾನಿಮಾಡಿದೆ ಎಂದು ಹೇಳಿದೆ. ಅಲ್ಲದೆ ವಿ ಟೆಲಿಕಾಂ ಗ್ರಾಹಕರ ಡೇಟಾ ಸುರಕ್ಷತೆಯ ಬಗ್ಗೆ ಅಸಡ್ಡೆ ವಹಿಸಿದೆ ಎಂದು ವರದಿ ಮಾಡಿದೆ.

ಸಂಬಂಧಿಸಿದಂತೆ

ಇದಲ್ಲದೆ ಕಳೆದ ಎರಡು ವರ್ಷಗಳಿಂದ ಸೈಬರ್ ದಾಳಿಗಳಿಗೆ ಸಂಬಂಧಿಸಿದಂತೆ ಪತ್ತೆಯಾದ ಪ್ರಮುಖ ದೋಷ ಇದಾಗಿದೆ ಎಂದು ಹೈಲೈಟ್‌ ಮಾಡಿದೆ. ಅದರಂತೆ ಕಳೆದ ಎರಡು ವರ್ಷಗಳಿಂದ Vi ಬಳಕೆದಾರರ ಡೇಟಾವನ್ನು ಉಲ್ಲಂಘಿಸಲಾಗಿದೆ ಎಂದು ವರಿದಯಾಗಿದೆ. ಆದರಿಂದ ಸೈಬರ್ ದಾಳಿಯಲ್ಲಿ ತಮ್ಮ ಡೇಟಾ ಸೋರಿಕೆಯಾಗಿದೆಯಾ ಇಲ್ಲವೇ ಎಂದು ನೋಡಲು ಬಳಕೆದಾರರು ಈಗಲೂ HaveIBeenPwned ನಂತಹ ವೆಬ್‌ಸೈಟ್‌ಗಳಿಗೆ ಭೇಟಿ ನೀಡಬಹುದು. ಇದರ ನಡುವೆ ವಿ ಟೆಲಿಕಾಂ ತನ್ನ ಬಳಕೆದಾರರ ಡೇಟಾ ಉಲ್ಲಂಘನೆಯ ಬಗ್ಗೆ ಸಂಪೂರ್ಣವಾಗಿ ಒಪ್ಪಿಕೊಂಡಿಲ್ಲ ಎಂದು ಕೂಡ ವರದಿಯಾಗಿದೆ.

ಟೆಲಿಕಾಂ

ಇನ್ನು ವಿ ಟೆಲಿಕಾಂ ಭಾರತದಲ್ಲಿ 5G ನೆಟ್‌ವರ್ಕ್‌ ಅನ್ನು ಪರಿಚಯಿಸುವುದಕ್ಕೆ ಮುಂದಾಗಿದೆ. ಆದರೆ ವಿ ಟೆಲಿಕಾಂ 5G ನೆಟ್‌ವರ್ಕ್‌ ಸೇವೆಗಳನ್ನು ಪ್ರಾರಂಭಿಸಿದ ನಂತರ ವರ್ಷಾಂತ್ಯದ ವೇಳೆಗೆ ಮೊಬೈಲ್ ಫೋನ್ ಸೇವೆಗಳ ಸುಂಕವನ್ನು ಹೆಚ್ಚಿಸುವ ನಿರೀಕ್ಷೆಯಿದೆ. 4G ಸೇವೆಗಿಂತ 5G ಸೇವೆಗೆ ಹೆಚ್ಚಿನ ಬೆಲೆಯನ್ನು ನಿಗದಿಪಡಿಸಲಿದೆ. 5G ನೆಟ್‌ವರ್ಕ್‌ನಲ್ಲಿ ಡೇಟಾ ಬಳಕೆಯ ಹೆಚ್ಚಳವು ಗ್ರಾಹಕರು ಅಭಿವೃದ್ಧಿಪಡಿಸಿದ ಮತ್ತು ಅಳವಡಿಸಿಕೊಳ್ಳುವ ಬಳಕೆಯ ಪ್ರಕರಣಗಳನ್ನು ಅವಲಂಬಿಸಿರುತ್ತದೆ ಎಂದು ರವೀಂದರ್ ಟಕ್ಕರ್ ಹೇಳಿದ್ದಾರೆ.

ಟೆಲಿಕಾಂ

ಈಗಾಗಲೇ ವಿ ಟೆಲಿಕಾಂ ಭಾರತದಲ್ಲಿ 5G ನೆಟ್‌ವರ್ಕ್‌ ಸ್ಪೆಕ್ಟ್ರಂ ಹರಾಜಿನಲ್ಲಿ VIL 18,800 ಕೋಟಿ ಮೌಲ್ಯದ ಸ್ಪೆಕ್ಟ್ರಮ್ ಅನ್ನು ಸ್ವಾಧೀನಪಡಿಸಿಕೊಂಡಿದೆ. ಇದು 5G ಸೇವೆಗಳಿಗಾಗಿ 17 ಆದ್ಯತಾ ವಲಯಗಳಲ್ಲಿ ಮಿಡ್‌-ಬ್ಯಾಂಡ್ (3300 MHz ಬ್ಯಾಂಡ್) ಮತ್ತು 16 ವಲಯಗಳಲ್ಲಿ 26 GHz ಬ್ಯಾಂಡ್‌ನಲ್ಲಿ ಸ್ಪೆಕ್ಟ್ರಮ್‌ನಲ್ಲಿ ರೇಡಿಯೊವೇವ್‌ಗಳನ್ನು ಒಳಗೊಂಡಿದೆ.

Best Mobiles in India

Read more about:
English summary
Vi has responded to a claim that a bug in its system caused a data breach.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X