ಬಳಕೆದಾರರಿಗೆ ಎಚ್ಚರಿಕೆ ಕೊಟ್ಟ ಫೇಸ್‌ಬುಕ್‌!..ಈ ಆ್ಯಪ್ಸ್‌ ಬಳಸಬೇಡಿ?

|

ಮೆಟಾ ಕಂಪೆನಿ ತನ್ನ ಫೇಸ್‌ಬುಕ್‌ ಬಳಕೆದಾರರಿಗೆ ಎಚ್ಚರಿಕೆಯ ಸಂದೇಶವನ್ನು ನೀಡಿದೆ. ಬಳಕೆದಾರರಿಗೆ ಅರಿವಿಲ್ಲದೆ ಫೇಸ್‌ಬುಕ್‌ ವಿವರಗಳನ್ನು ಕದಿಯುತ್ತಿರುವ ಅಪ್ಲಿಕೇಶನ್‌ಗಳ ಬಗ್ಗೆ ಮಾಹಿತಿಯನ್ನು ನೀಡಿದೆ. ಇದರಲ್ಲಿ ಫೇಸ್‌ಬುಕ್‌ ಬಳಕೆದಾರರ ಪಾಸ್‌ವರ್ಡ್‌ಗಳು ಮತ್ತು ಪರ್ಸನಲ್‌ ಡೇಟಾ ಕದಿಯುತ್ತಿರುವುದು ಬಹಿರಂಗವಾಗಿದೆ. ಇನ್ನು ಈ ಅಪ್ಲಿಕೇಶನ್‌ಗಳನ್ನು ಫೇಸ್‌ಬುಕ್‌ ಖಾತೆಗಳ ಡೇಟಾ ಕದಿಯುವುದಕ್ಕಾಗಿಯೇ ವಿನ್ಯಾಸಗೊಳಿಸಲಾಗಿದೆ ಎಂಬ ಶಾಕಿಂಗ್‌ ಸಂಗತಿಯನ್ನು ಕೂಡ ಬಹಿರಂಗಗೊಳಿಸಿದೆ.

ಫೇಸ್‌ಬುಕ್‌

ಹೌದು, ಫೇಸ್‌ಬುಕ್‌ ಅಕೌಂಟ್‌ಗಳ ಡೇಟಾ ಕದಿಯುವ ಅಪ್ಲಿಕೇಶನ್‌ಗಳ ಬಗ್ಗೆ ಮೆಟಾ ಕಂಪೆನಿ ಎಚ್ಚರಿಕೆಯನ್ನು ನೀಡಿದೆ. ಅದರಲ್ಲೂ ಗೂಗಲ್‌ ಪ್ಲೇ ಸ್ಟೋರ್‌ ಮತ್ತು ಆಪ್‌ ಸ್ಟೋರ್‌ನಲ್ಲಿರುವ 400 ಅಪ್ಲಿಕೇಶನ್‌ಗಳು ಈ ರೀತಿಯ ಕೆಲಸ ಮಾಡುತ್ತಿವೆ ಎಂದು ಹೇಳಿದೆ. ಈ ರೀತಿಯ ಅಪ್ಲಿಕೇಶನ್‌ಗಳ ಬಗ್ಗೆ ಮೆಟಾ ಕಂಪೆನಿ ಸುಮಾರು ಒಂದು ಮಿಲಿಯನ್ ಫೇಸ್‌ಬುಕ್ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಹಾಗಾದ್ರೆ ಮೆಟಾ ಕಂಪೆನಿ ನೀಡಿದ ಮಾಹಿತಿಯಲ್ಲಿ ಯಾವೆಲ್ಲಾ ಅಪ್ಲಿಕೇಶನ್‌ಗಳು ಸೇರಿವೆ? ಅವುಗಳ ಯಾವ ರೀತಿಯಲ್ಲಿ ಬಳಕೆದಾರರ ಡೇಟಾ ಕದಿಯುತ್ತಿವೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌ ಪ್ಲೇ ಸ್ಟೋರ್‌

ಗೂಗಲ್‌ ಪ್ಲೇ ಸ್ಟೋರ್‌ ಮತ್ತು ಆಪಲ್‌ನ ಆಪ್‌ ಸ್ಟೋರ್‌ನಲ್ಲಿರುವ 400 ಅಪ್ಲಿಕೇಶನ್‌ಗಳು ಫೇಸ್‌ಬುಕ್‌ ಬಳಕೆದಾರರ ಪಾಸ್‌ವರ್ಡ್‌ಗಳನ್ನು ಕದಿಯುತ್ತಿವೆ ಎಂದು ಮೆಟಾ ಕಂಪೆನಿ ಹೇಳಿದೆ. ಈ ಅಪ್ಲಿಕೇಶನ್‌ಗಳನ್ನು ಫೇಸ್‌ಬುಕ್‌ ಖಾತೆಗಳ ಪಾಸ್‌ವರ್ಡ್‌ಗಳು ಮತ್ತು ವೈಯುಕ್ತಿಕ ಖಾತೆ ವಿವರಗಳನ್ನು ಕದಿಯುವುದಕ್ಕಾಗಿಯೇ ವಿನ್ಯಾಸಗೊಳಿಸಲಾಗಿದೆ ಎಂಬ ವಿಚಾರವನ್ನು ಸಹ ಹೇಳಿದೆ. ಈ ಮಾದರಿಯ ಅಪ್ಲಿಕೇಶನ್‌ಗಳು ಫೋಟೋ ಎಡಿಟರ್‌ಗಳು, ಮೊಬೈಲ್ ಗೇಮ್‌ಗಳು, ವಿಪಿಎನ್ ಸೇವೆಗಳು, ಜಾಬ್‌ ಅಪ್ಲಿಕೇಶನ್‌ಗಳ ಮೂಲಕ ಕಾರ್ಯನಿರ್ವಹಿಸುತ್ತಿವೆ ಎಂದು ಫೇಸ್‌ಬುಕ್‌ ವರದಿಯಲ್ಲಿ ತಿಳಿಸಿದೆ.

ಅಪ್ಲಿಕೇಶನ್‌ಗಳು

ಇನ್ನು 400ಕ್ಕೂ ಹೆಚ್ಚಿನ ಅಪಾಯಕಾರಿ ಅಪ್ಲಿಕೇಶನ್‌ಗಳಲ್ಲಿ ಹೆಚ್ಚಿನ ಅಪ್ಲಿಕೇಶನ್‌ಗಳು ಫೋಟೋ ಎಡಿಟರ್ ಟೂಲ್ಸ್‌ ಮಾದರಿಯಲ್ಲಿ ಕಾಣಿಸಿಕೊಂಡಿವೆ. ಈ ಅಪ್ಲಿಕೇಶನ್‌ಗಳಲ್ಲಿ ಸುಮಾರು 42.6% ಅಪ್ಲಿಕೇಶನ್‌ಗಳು ದುರುದ್ದೇಶಪೂರಿತ ಅಪ್ಲಿಕೇಶನ್‌ಗಳಾಗಿವೆ. ಇದನ್ನು ಹೊರತುಪಡಿಸಿ, 15.4% ಬ್ಯುಸಿನೆಸ್‌ ಮಾದರಿಯ ಅಪ್ಲಿಕೇಶನ್‌ಗಳು, 14.1% ಫೋನ್ ಯುಟಿಲಿಟಿ ಅಪ್ಲಿಕೇಶನ್‌ಗಳು, 11.7% ಗೇಮ್‌ಗಳು, VPN ಟೂಲ್ಸ್‌ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಫೇಸ್‌ಬುಕ್‌ ತನ್ನ ಬಳಕೆದಾರರಿಗೆ ತಿಳಿಸಿದೆ.

ಈ ಅಪ್ಲಿಕೇಶನ್‌ಗಳು ಹೇಗೆ ಕಾರ್ಯನಿರ್ವಹಿಸುತ್ತವೆ?

ಈ ಅಪ್ಲಿಕೇಶನ್‌ಗಳು ಹೇಗೆ ಕಾರ್ಯನಿರ್ವಹಿಸುತ್ತವೆ?

ಫೇಸ್‌ಬುಕ್‌ ಬಳಕೆದಾರರ ವೈಯುಕ್ತಿಕ ಡೇಟಾ ಕದಿಯುತ್ತಿರುವ ಅಪ್ಲಿಕೇಶನ್‌ಗಳುಬಳಕೆದಾರರನ್ನು ನಕಲಿ ರಿವ್ಯೂಗಳನ್ನು ಹೊಂದಿವೆ. ಈ ಮಾಲ್‌ವೇರ್- ಅಪ್ಲಿಕೇಶನ್‌ಗಳನ್ನು ವಂಚಕರು ಮ್ಯೂಸಿಕ್ ಪ್ಲೇಯರ್‌ಳ ಮೂಲಕ ಅಪ್ಲಿಕೇಶನ್ ಸ್ಟೋರ್‌ಗಳಲ್ಲಿ ಪ್ರಕಟಿಸುತ್ತಾರೆ. ಒಮ್ಮೆ ಈ ಅಪ್ಲಿಕೇಶನ್‌ಗಳಲ್ಲಿ ಒಂದನ್ನು ನೀವು ಬಳಸುವುದಕ್ಕೆ ಶುರುಮಾಡಿದರೆ "Facebook ಜೊತೆಗೆ ಲಾಗ್ ಇನ್" ಮಾಡಲು ಕೇಳುತ್ತದೆ. ನೀವು ಲಾಗ್‌ ಇನ್‌ ಆದರೆ ಫೇಸ್‌ಬುಕ್‌ನಲ್ಲಿ ನಿಮ್ಮ ಪಾಸ್‌ವರ್ಡ್‌ ಸೇರಿದಂತೆ ಎಲ್ಲಾ ಮಾಹಿತಿಯನ್ನು ಕದಿಯುವ ಕೆಲಸ ಮಾಡಲಿವೆ ಎನ್ನಲಾಗಿದೆ.

ಸ್ಪ್ಯಾಮ್‌ ಅಪ್ಲಿಕೇಶನ್‌ಗಳಿಂದ ಸೆಕ್ಯುರ್‌ ಆಗಿರುವುದು ಹೇಗೆ?

ಸ್ಪ್ಯಾಮ್‌ ಅಪ್ಲಿಕೇಶನ್‌ಗಳಿಂದ ಸೆಕ್ಯುರ್‌ ಆಗಿರುವುದು ಹೇಗೆ?

*ಯಾವುದೇ ಅಪ್ಲಿಕೇಶನ್‌ ನಿಮ್ಮ ಸೊಶೀಯಲ್‌ ಮೀಡಿಯಾ ಲಾಗ್‌ ಇನ್‌ ಕೇಳಿದರೆ ಎಚ್ಚರ ವಹಿಸಿ.
* ನೀವು ಬಳಸುವ ಅಪ್ಲಿಕೇಶನ್ ಪ್ರಯೋಜನಕಾರಿಯಾಗಿದೆಯಾ ಅನ್ನೊದನ್ನ ಮೊದಲು ಪರಿಶೀಲಿಸಿ.
* ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡುವ ಮುನ್ನ ಅದರ ಡೌನ್‌ಲೋಡ್‌ ಸಂಖ್ಯೆಗಳು ಮತ್ತು ವಿಮರ್ಶೆಗಳನ್ನು ಪರಿಶೀಲಿಸುವುದು ಸೂಕ್ತ.
* ನೀವು ಯಾವ ಉದ್ದೇಶಕ್ಕಾಗಿ ಆಪ್‌ ಡೌನ್‌ಲೋಡ್‌ ಮಾಡಿದ್ದೀರಾ ಆ ಕಾರ್ಯವನ್ನು ಮಾಡದಿದ್ದರೆ ಕೂಡಲೇ ಅಂತಹ ಆ್ಯಪ್ ಅನ್ನು ಡಿಲೀಸ್‌ ಮಾಡಿ.
* ಆ್ಯಪ್‌ ಅನ್ನು ಬಳಸುವ ಮುನ್ನ ಆಪ್‌ ಡೆವಲಪರ್‌ಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದು ಉತ್ತಮ.
* ಮಲ್ಟಿ ವೆಬ್‌ಸೈಟ್‌ಗಳಲ್ಲಿ ನಿಮ್ಮ ಪಾಸ್‌ವರ್ಡ್ ಅನ್ನು ಮರಳಿ ಬಳಸಬೇಡಿ.
* ನಿಮ್ಮ ಅಕೌಂಟ್‌ಗೆ ಭದ್ರತೆಯ ಹೆಚ್ಚುವರಿ ಲೆಯರ್‌ ಅನ್ನು ಸೇರಿಸುವುದು ಉತ್ತಮ.

Best Mobiles in India

Read more about:
English summary
Over 400 apps are stealing your password, claims Facebook

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X