Paytm ನಿಂದ ಆಲ್-ಇನ್-ಒನ್ ಪೋರ್ಟಬಲ್ ಆಂಡ್ರಾಯ್ಡ್ ಸ್ಮಾರ್ಟ್ POS ಡಿವೈಸ್‌ ಬಿಡುಗಡೆ!

|

ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಡಿಜಿಟಲ್‌ ಪೇಮೆಂಟ್ ಸೇವೆಯು ಸಾಕಷ್ಟು ಪ್ರಗತಿಯನ್ನು ಕಂಡಿದೆ. ಡಿಜಿಟಲ್‌ ಪೇಮೆಂಟ್ ಸೇವೆ ನೀಡುವ ಪ್ಲಾಟ್‌ಫಾರ್ಮ್‌ಗಳು ಕೂಡ ಸಾಕಷ್ಟು ಹೊಸ ಮಾದರಿಯ ಟೆಕ್ನಾಲಜಿಯನ್ನ ಆಪ್‌ಡೇಟ್‌ ಮಾಡುತ್ತಾ ಬಂದಿದೆ. ಸದ್ಯ ಇದೀಗ ದೇಶದಲ್ಲಿ ಲಭ್ಯವಿರುವ ಪ್ರಮುಖ ಡಿಜಿಟಲ್ ಪಾವತಿ ಸೇವೆ ಪೇಟಿಎಂ ತನ್ನ ಹೊಸ ಆಂಡ್ರಾಯ್ಡ್ ಆಧಾರಿತ,pocked-sized point of sale (POS) ಡಿವೈಸ್‌ ಅನ್ನು ಬಿಡುಗಡೆ ಮಾಡಿದೆ, ಇದು ಇಂಟಿಗ್ರೇಟೆಡ್ ಬಿಲ್ಲಿಂಗ್ ಸಾಫ್ಟ್‌ವೇರ್, ಅನ್ನು ಬೆಂಬಲಿಸಲಿದೆ. ಅಲ್ಲದೆ ಕ್ಯೂಆರ್ ಸ್ಕ್ಯಾನಿಂಗ್‌ಗಾಗಿ ಕ್ಯಾಮೆರಾ ಮತ್ತು 4G ಸಿಮ್ ಕಾರ್ಡ್‌ಗಳ ವೈ-ಫೈ ಮತ್ತು ಬ್ಲೂಟೂತ್ ಸಂಪರ್ಕವನ್ನು ಬೆಂಬಲಿಸುತ್ತದೆ.

ಪೇಟಿಎಂ

ಹೌದು, ಪ್ರಮುಖ ಡಿಜಿಟಲ್‌ ಪೇಮೆಂಟ್‌ ಸೇವೆ ನೀಡುತ್ತಿರುವ ಪೇಟಿಎಂ ಸಂಸ್ಥೆಯು pocked-sized point of sale (POS) ಅನ್ನು ಪರಿಚಯಿಸಿದೆ. ಇದರ ಪರಿಚಯಾತ್ಮಕ ಮಾಸಿಕ ಬಾಡಿದೆ ಬೆಲೆ 499 ರೂ ಆಗಿದೆ. ಇನ್ನು ಈ ‘ಪೇಟಿಎಂ ಆಲ್ ಇನ್ ಒನ್ ಪೋರ್ಟಬಲ್ ಆಂಡ್ರಾಯ್ಡ್ ಸ್ಮಾರ್ಟ್ ಪಿಒಎಸ್' ಪ್ರಯಾಣದಲ್ಲಿರುವಾಗ ಆದೇಶಗಳು ಮತ್ತು ಪಾವತಿಗಳನ್ನು ಸ್ವೀಕರಿಸಬಹುದಾಗಿದೆ. ಇದಲ್ಲದೆ 2021 ರ ಆರ್ಥಿಕ ವರ್ಷದಲ್ಲಿ ಈ ಡಿವೈಸ್‌ಗಳ ವಿತರಣೆ ಮತ್ತು ಮಾರುಕಟ್ಟೆಗಾಗಿ 100 ಕೋಟಿ ರೂ. ಹೂಡಿಕೆ ಮಾಡುವ ಉದ್ದೇಶವನ್ನು ಪೇಟಿಎಂ ಹೊಂದಿದ್ದು, ಮುಂದಿನ ಕೆಲವು ತಿಂಗಳುಗಳಲ್ಲಿ ಎರಡು ಲಕ್ಷ POS ಡಿವೈಸ್‌ಗಳನ್ನು ಬಿಡುಗಡೆ ಮಾಡಲಿದ್ದು, ಅದು ತಿಂಗಳಿಗೆ 20 ದಶಲಕ್ಷಕ್ಕೂ ಹೆಚ್ಚು ವಹಿವಾಟು ನಡೆಸುವ ಸಾಧ್ಯತೆಯಿದೆ.

ಪೇಟಿಎಂ

ಇನ್ನು ಈ ಕೈಗೆಟುಕುವ ಪಾಕೆಟ್ ಗಾತ್ರದ ಆಂಡ್ರಾಯ್ಡ್ ಪಿಒಎಸ್ ಸಾಧನವು SMEಗಳಿಂದ (small and medium enterprises) ಕಿರಾನಾ ಅಂಗಡಿಗಳ ವಿತರಣಾ ಸಿಬ್ಬಂದಿಯವರೆಗೆ ಪಾವತಿಗಳನ್ನು ಸುರಕ್ಷಿತವಾಗಿ ಸಂಗ್ರಹಿಸಲು ಅನುವು ಮಾಡಿಕೊಡುತ್ತದೆ ಎಂದು ಪೇಟಿಎಂ ಹೇಳಿದೆ. ಅಲ್ಲದೆ ಪೇಟಿಎಂ ಕಂಪನಿಯ ಪ್ರಕಾರ, ಇದು ಪ್ರಸ್ತುತ ದೇಶದಲ್ಲಿ ಲಭ್ಯವಿರುವ ಪೋರ್ಟಬಲ್ ಲಿನಕ್ಸ್ ಆಧಾರಿತ ಪಿಒಎಸ್ ಸಾಧನಗಳಿಗಿಂತ ಹೆಚ್ಚು ಶಕ್ತಿಶಾಲಿ ಮತ್ತು ಸುರಕ್ಷಿತವಾಗಿದೆ. ಪಿಒಎಸ್ ಸಾಧನವು ಪೇಟಿಎಂನ ಸ್ಕ್ಯಾನ್ ಟು ಆರ್ಡರ್ ಸೇವೆಯೊಂದಿಗೆ ಸೇರಿಕೊಳ್ಳಲಿದೆ ಎನ್ನಲಾಗಿದೆ.

ಪ್ರೊಸೆಸರ್

ಇನ್ನು ಈ ergonomic device 163 ಗ್ರಾಂ ತೂಕವಿದ್ದು, 12mm ದಪ್ಪವಾಗಿದೆ. ಇದಲ್ಲದೆ ಇದು 4.5 ಇಂಚಿನ ಟಚ್ ಸ್ಕ್ರೀನ್ ಹೊಂದಿದೆ. ಜೊತೆಗೆ ಸ್ಟ್ರಾಂಗ್‌ ಪ್ರೊಸೆಸರ್, ಇಡೀ ದಿನ ಬ್ಯಾಟರಿ ಪವರ್‌ ನೀಡುವ ಸಾಮರ್ಥ್ಯ ಹೊಂದಿದೆ. ಇದಲ್ಲದೆ ಕ್ಯೂಆರ್ ಕೋಡ್‌ಗಳನ್ನು ಸ್ಕ್ಯಾನ್ ಮಾಡಲು ಮತ್ತು ತ್ವರಿತವಾಗಿ ಪಾವತಿಯನ್ನು ಪ್ರಕ್ರಿಯೆಗೊಳಿಸಲು ಇಂಟರ್‌ಬಿಲ್ಟ್‌ ಕ್ಯಾಮೆರಾವನ್ನು ಸಹ ಹೊಂದಿದೆ. ಈ ಡಿವೈಸ್‌ ಬಿಲ್ಲಿಂಗ್, ಪಾವತಿಗಳು ಮತ್ತು ಗ್ರಾಹಕ ನಿರ್ವಹಣೆಗಾಗಿ ಕ್ಲೌಡ್‌ ಆಧಾರಿತ ಸಾಫ್ಟ್‌ವೇರ್‌ನಂತಹ ಫೀಚರ್ಸ್‌ಗಳನ್ನು ಸಹ ಒಳಗೊಂಡಿದೆ.

ಪೇಮೆಂಟ್‌

ಇನ್ನು ಈ ಡಿವೈಸ್‌ 4G ಸಿಮ್ ಕಾರ್ಡ್‌ಗಳು, ವೈ-ಫೈ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಅಲ್ಲದೆ ಪೇಮೆಂಟ್‌ ಎಂದಿಗೂ ವಿಫಲವಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಬ್ಲೂಟೂತ್ ಕನೆಕ್ಟಿವಿಟಿಯನ್ನು ಸಹ ಹೊಂದಿದೆ.ಅಲ್ಲದೆ GST ಕಂಪ್ಲೈಂಟ್ ಬಿಲ್‌ಗಳನ್ನು ಜನರೇಟ್‌ ಮಾಡುವ ಮತ್ತು ಸೆಟಲ್‌ಮೆಂಟ್‌ಗಳನ್ನು ನಿರ್ವಹಿಸಲು ಸ್ಮಾರ್ಟ್ ಪಿಓಎಸ್ ಡಿವೈಸ್‌ ಅನ್ನು ‘Paytm for Business' ಅಪ್ಲಿಕೇಶನ್‌ನೊಂದಿಗೆ ಸಂಯೋಜಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

Best Mobiles in India

Read more about:
English summary
Available for an introductory monthly rental of Rs 499, the 'Paytm All-in-One Portable Android Smart POS' can accept orders and payments on the go.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X