2022ರ ಅಂತ್ಯಕ್ಕೆ ಪಿಸಿ ಮತ್ತು ಟ್ಯಾಬ್ಲೆಟ್‌ ಮಾರುಕಟ್ಟೆಯಲ್ಲಿ ಭಾರಿ ಕುಸಿತ! ವರದಿ

|

ಕಳೆದ ಎರಡು ವರ್ಷಗಳಿಂದ ಸಾಕಷ್ಟು ಬೇಡಿಕೆಯನ್ನು ಪಡೆದುಕೊಂಡಿದ್ದ ಪಿಸಿ, ಡೆಸ್ಕ್‌ಟಾಪ್‌ ಮತ್ತು ಟ್ಯಾಬ್ಲೆಟ್‌ ಮಾರುಕಟ್ಟೆ ಈ ವರ್ಷ ಸಾಕಷ್ಟು ಕುಸಿತವನ್ನು ಅನುಭವಿಸಲಿದೆ ಎಂದು ವರದಿಯಾಗಿದೆ. ಕೊರೊನಾ ವೈರಸ್‌ನ ಆರ್ಭಟ ಹೆಚ್ಚಾದ ಸಂದರ್ಭದಲ್ಲಿ ಹೆಚ್ಚಿನ ಜನರು ಮನೆಯಿಂದಲೇ ಕಾರ್ಯನಿರ್ವಹಿಸಬೇಕಾಗಿತ್ತು. ಅಲ್ಲದೆ ಆನ್‌ಲೈನ್‌ ತರಗತಿಗಳ ಪರಿಪಾಠ ಶುರುವಾದ ಕಾರಣ ಟ್ಯಾಬ್ಲೆಟ್‌ಗಳು ಹಾಗೂ ಪಿಸಿಗಳಿಗೆ ಭಾರಿ ಬೇಡಿಕೆ ಬಂದಿತ್ತು. ಆದರೆ ಇದೀಗ ಎಲ್ಲವೂ ಸಹಜ ಸ್ಥಿತಿಗೆ ಮರಳಿರುವುದರಿಂದ ಪಿಸಿ ಮತ್ತು ಟ್ಯಾಬ್ಲೆಟ್‌ ಮಾರುಕಟ್ಟೆ ಕುಸಿಯುವ ಮುನ್ಸೂಚನೆ ಸಿಕ್ಕಿದೆ.

ಟ್ಯಾಬ್ಲೆಟ್‌

ಹೌದು, ಪಿಸಿ ಮತ್ತು ಟ್ಯಾಬ್ಲೆಟ್‌ ಮಾರುಕಟ್ಟೆ ಈ ವರ್ಷಾಂತ್ಯದ ವೇಳೆಗೆ ಸಾಕಷ್ಟು ಕುಸಿತವನ್ನು ಕಾಣವು ಲಕ್ಷಣ ಕಾಣಿಸಿದೆ. ಕೊರೊನಾ ವೈರಸ್‌ನ ಆರ್ಭಟ ಕಡಿಮೆ ಆಗಿರೊದರ ಪ್ರಭಾವ ಈ ಕುಸಿತಕ್ಕೆ ಕಾರಣ ಎನ್ನಲಾಗಿದೆ. ಇಂಟರ್‌ನ್ಯಾಷನಲ್ ಡಾಟಾ ಕಾರ್ಪೊರೇಷನ್ (IDC) ವರ್ಲ್ಡ್‌ವೈಡ್ ಕ್ವಾರ್ಟರ್ಲಿ ಪರ್ಸನಲ್ ಕಂಪ್ಯೂಟಿಂಗ್ ಡಿವೈಸ್ ಟ್ರ್ಯಾಕರ್ ಬಿಡುಗಡೆ ಮಾಡಿದ ಹೊಸ ಅಂದಾಜಿನ ಪ್ರಕಾರ PC ಮತ್ತು ಟ್ಯಾಬ್ಲೆಟ್ ಮಾರುಕಟ್ಟೆ ಎರಡು ಕೂಡ ಮುಂದಿನ ವರ್ಷ ಕುಸಿತ ಅನುಭವಿಸಲಿದೆ ಎಂದು ಅಂದಾಜಿಸಲಾಗಿದೆ. ಹಾಗಾದ್ರೆ ಐಡಿಸಿ ರಿಪೋರ್ಟ್‌ನಲ್ಲಿ ಏನಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

PC

ಐಡಿಸಿ ರಿಪೋರ್ಟ್‌ ಪ್ರಕಾರ ಸಾಂಪ್ರದಾಯಿಕ PC ಗಳ ಗ್ಲೋಬಲ್‌ ಶಿಪ್ಪಿಂಗ್‌ 2022 ರಲ್ಲಿ 12.8% ರಷ್ಟು ಅಂದರೆ 305.3 ಮಿಲಿಯನ್ ಯೂನಿಟ್‌ಗಳಿಗೆ ಕುಸಿಯುವ ಮುನ್ಸೂಚನೆ ಇದೆ. ಆದರೆ ಟ್ಯಾಬ್ಲೆಟ್ ಸಾಗಣೆಗಳು 6.8% ರಿಂದ 156.8 ಮಿಲಿಯನ್‌ಗೆ ಕುಸಿತವನ್ನು ಅನುಭವಿಸಲಿದೆ. ಹಣದುಬ್ಬರ, ದುರ್ಬಲಗೊಳ್ಳುತ್ತಿರುವ ಜಾಗತಿಕ ಆರ್ಥಿಕತೆ ಮತ್ತು ಕಳೆದ ಎರಡು ವರ್ಷಗಳಲ್ಲಿ ಹೆಚ್ಚಾದ ಖರೀದಿಯ ಕಾರಣ ಮಾರುಕಟ್ಟೆ ಕುಸಿತಕ್ಕೆ ಪ್ರಮುಖ ಕಾರಣಗಳಾಗಿವೆ.

ಮಾರುಕಟ್ಟೆ

ಇನ್ನು 2023 ರಲ್ಲಿ ಈ ಮಾರುಕಟ್ಟೆ ಇನ್ನಷ್ಟು ಕುಸಿತವನ್ನು ಪಡೆದಯಲಿದೆ. ಏಕೆಂದರೆ ಗ್ರಾಹಕರ ಬೇಡಿಕೆಯು ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗಿದೆ. ಕಳೆದ ಎರಡು ವರ್ಷಗಳಲ್ಲಿ ಇವುಗಳ ಪೂರೈಕೆ ಪ್ರಮಾಣ ಹೆಚ್ಚಾಗಿದೆ. ಹದಗೆಡುತ್ತಿರುವ ಆರ್ಥಿಕ ಪರಿಸ್ಥಿತಿಗಳಿಂದಾಗಿ ಉದ್ಯಮದ ಬೇಡಿಕೆಯು ಕೂಡ ಕಡಿಮೆಯಾಗಲಿದೆ ಎನ್ನಲಾಗಿದೆ. ಆದರಿಂದ PC ಗಳು ಮತ್ತು ಟ್ಯಾಬ್ಲೆಟ್‌ಗಳ ಸಂಯೋಜಿತ ಮಾರುಕಟ್ಟೆಯು 2024 ರಲ್ಲಿ ಬೆಳವಣಿಗೆ ಸಾಧಿಸುವುದಕ್ಕಿಂದ 2023 ರಲ್ಲಿ 2.6% ರಷ್ಟು ಕುಸಿಯುವ ಮುನ್ಸೂಚನೆ ಇದೆ.

ಮಾರುಕಟ್ಟೆ

ಇದಲ್ಲದೆ ಆರ್ಥಿಕ ಹೆಡ್‌ವಿಂಡ್‌ಗಳು ವೇಗವನ್ನು ಪಡೆಯುವುದರಿಂದ, ಮುಂದಿನ ಆರು ತ್ರೈಮಾಸಿಕಗಳಲ್ಲಿ ಮತ್ತಷ್ಟು ಗ್ರಾಹಕ ಮಾರುಕಟ್ಟೆ ಸಂಕೋಚನಗಳು ಸೃಷ್ಟಿಯಾಗುವ ಸಾಧ್ಯತೆಯಿದೆ. ರಿಫ್ರೆಶ್ ಸೈಕಲ್‌ ಟೈಂನಲ್ಲಿ ಆರ್ಥಿಕ ಚೇತರಿಕೆಯು ಬೆಳವಣಿಗೆಯನ್ನು ಮತ್ತೆ ಮುಂದೂಡುವ ಅವಕಾಶ ಕೂಡ ಇದೆ. ಅಂದರೆ ಕೊರೊನಾ ಸಮಯದಲ್ಲಿ ಹೆಚ್ಚಳವನ್ನು ಕಂಡಿದ್ದ ಪಿಸಿ ಮತ್ತು ಟ್ಯಾಬ್ಲೆಟ್‌ ಮಾರುಕಟ್ಟೆ ಮುಂದಿನ ವರ್ಷ ಹೆಚ್ಚಿನ ಕುಸಿತ ಅನುಭವಿಸುವುದು ಪಕ್ಕಾ ಆಗಿದೆ.

ಸ್ಮಾರ್ಟ್‌

ಇನ್ನು ಇತ್ತೀಚಿಗೆ ವರದಿಯಾದಂತೆ ಭಾರತದಲ್ಲಿ ಸ್ಮಾರ್ಟ್‌ ವೆರಿಯೆಬಲ್ಸ್‌ ಮಾರುಕಟ್ಟೆ ಸಾಕಷ್ಟು ವೇಗವಾಗಿ ಬೆಳೆಯುತ್ತಿದೆ ಎಂದು ಹೇಳಲಾಗಿದೆ. ಅದರಲ್ಲೂ 2022ರ 2ನೇ ತ್ರೈ ಮಾಸಿಕದಲ್ಲಿ 23.9 ಮಿಲಿಯನ್ ವೆರಿಯೆಬಲ್ಸ್‌ ಡಿವೈಸ್‌ಗಳು ಮಾರಾಟ ಕಂಡಿವೆ. ಅಂದರೆ ಭಾರತದಲ್ಲಿ ಕೈಗೆ ಧರಿಸಬಹುದಾದ ಡಿವೈಸ್‌ಗಳ ಮಾರಾಟ ವರ್ಷದಿಂದ ವರ್ಷಕ್ಕೆ 113% ಬೆಳೆವಣಿಗೆ ಕಾಣುತ್ತಿದೆ ಎನ್ನಲಾಗಿದೆ

ಇಂಟರ್‌ನ್ಯಾಷನಲ್

ಇಂಟರ್‌ನ್ಯಾಷನಲ್ ಡಾಟಾ ಕಾರ್ಪೊರೇಷನ್ (IDC) ಇಂಡಿಯಾ ಟ್ರ್ಯಾಕರ್‌ ಪ್ರಕಾರ, 2022 ರ 2ನೇ ತ್ರೈಮಾಸಿಕದಲ್ಲಿ ಭಾರತದಲ್ಲಿ ಒಟ್ಟಾರೆ ಸರಾಸರಿ ಮಾರಾಟದ ಬೆಲೆ (ASP) 7.2% ವರ್ಷದಿಂದ ವರ್ಷಕ್ಕೆ ಕಡಿಮೆಯಾಗಿದೆ. ಆದರೆ ವಾಚ್-ಆಧಾರಿತ ವೇರಿಯೆಬಲ್ಸ್‌ 6.4 ಮಿಲಿಯನ್ ಯುನಿಟ್‌ಗಳ ಶಿಪ್ಪಿಂಗ್ ಕಂಡಿದ್ದು, 98.4% ಬೆಳೆವಣಿಗೆ ಸಾಧಿಸಿದೆ. 2Q22 ರಲ್ಲಿ ವಾರ್ಷಿಕವಾಗಿ 306.4% ಅಂದರೆ 95.2% ರಷ್ಟು ಪಾಲು ಬೆಳೆಯುವುದರೊಂದಿಗೆ ಮೂಲ ಕೈಗಡಿಯಾರಗಳು ಪ್ರಾಬಲ್ಯ ಸಾಧಿಸಿವೆ.

ಸ್ಮಾರ್ಟ್‌

ಭಾರತದ ಸ್ಮಾರ್ಟ್‌ ವೆರಿಯೆಬಲ್ಸ್‌ ಮಾರುಕಟ್ಟೆಯಲ್ಲಿ ಬೋಟ್‌ ಕಂಪೆನಿ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದೆ. ಅಂದರೆ 2Q22 ನಲ್ಲಿ 34.3% ಮಾರುಕಟ್ಟೆ ಪಾಲನ್ನು ಪಡೆದಿದೆ. ಇದು ವರ್ಷದಿಂದ ವರ್ಷಕ್ಕೆ 76.6% ಬೆಳವಣಿಗೆ ಸಾಧಿಸಿದೆ. ಇದು ಇಯರ್‌ವೇರ್ ಡಿವೈಸ್‌ಗಳ ಮೇಲೆ ಕೇಂದ್ರೀಕರಿಸಿದೆ. ಅದರಂತೆ TWS ನಲ್ಲಿ 42.8% ಪಾಲನ್ನು ಹೊಂದಿದೆ.

Best Mobiles in India

English summary
PC market and tablet market to decline in 2022

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X