Just In
Don't Miss
- News
Pervez Musharraf death: ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ 79 ನಿಧನ
- Movies
Hitler Kalyana: 400 ಸಂಚಿಕೆ ಪೂರೈಸಿದ ಎಜೆ- ಲೀಲಾ ಕಥೆ: ಸಂಭ್ರಮಾಚರಣೆ ಮಾಡಿದ ತಂಡ
- Sports
BGT 2023: ಆಸ್ಟ್ರೇಲಿಯಾಗೆ ಆರಂಭದಲ್ಲೇ ಆಘಾತ; ಮತ್ತೋರ್ವ ಸ್ಟಾರ್ ವೇಗಿ ಮೊದಲ ಟೆಸ್ಟ್ನಿಂದ ಔಟ್!
- Automobiles
ಪ್ರಮುಖ ಮಾದರಿಗಳಿಗೆ ಫೆಬ್ರವರಿ ತಿಂಗಳಲ್ಲಿ ಭರ್ಜರಿ ರಿಯಾಯಿತಿ ಘೋಷಿಸಿದ ಟಾಟಾ ಮೋಟಾರ್ಸ್
- Finance
LIC Jeevan Umang: ದಿನಕ್ಕೆ 150 ರೂ ಹೂಡಿಕೆ ಮಾಡಿ, 10 ಲಕ್ಷ ಪಡೆಯಿರಿ!
- Lifestyle
ವಾರ ಭವಿಷ್ಯ ಫೆ.4-11: ಈ ವಾರ ಯಾವ ರಾಶಿಯವರಿಗೆ ಅದೃಷ್ಟ, ಯಾರು ಸ್ವಲ್ಪ ಜಾಗ್ರತೆವಹಿಸಬೇಕು ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಟ್ವಿಟ್ಟರ್ ಬಿಟ್ಟು ಮಾಸ್ಟೋಡಾನ್‌ನತ್ತ ವಾಲುತ್ತಿದ್ದಾರೆ ಬಳಕೆದಾರರು; ಏನೆಲ್ಲಾ ಫೀಚರ್ಸ್ ಇದೆ!
ಟ್ವಿಟ್ಟರ್‌ನಲ್ಲಿ ಈ ಹಿಂದೆ ಶೇರ್ ಆಗುವ ಪೋಸ್ಟ್‌ಗಳು ಸದ್ದು ಮಾಡುತ್ತಿದ್ದವು. ಆದರೆ, ಈಗ ಟ್ವಿಟ್ಟರ್ ವೇದಿಕೆಯೇ ಸದ್ದು ಮಾಡುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೇ ಟ್ವಿಟ್ಟರ್ ತನ್ನ ಕಾರ್ಯಾಚರಣೆಯಲ್ಲಿ ಅಡೆತಡೆ ಅನುಭವಿಸಿತ್ತು. ಟ್ವಿಟ್ಟರ್‌ನಲ್ಲಿ ಬದಲಾಗುತ್ತಿರುವ ಕೆಲವು ನಿಯಮಗಳು ಬೇರೆ ಪ್ಲಾಟ್‌ಫಾರ್ಮ್ ಕಡೆ ಬಳಕೆದಾರರು ಮುಖ ಮಾಡುವಂತೆ ಆಗಿದೆ. ಇದರ ನಡುವೆ ಟ್ವಿಟ್ಟರ್‌ಗೆ ಟಕ್ಕರ್ ಕೊಡಲು ಮಾಸ್ಟೋಡಾನ್ ಮುನ್ನೆಲೆಗೆ ಬಂದಿದೆ.

ಹೌದು, ಎಲೋನ್ ಮಸ್ಕ್ ಅವರು ಟ್ವಿಟರ್ ಅನ್ನು ಖರೀದಿಸಿದ ನಂತರ ಹಲವಾರು ಬದಲಾವಣೆಗಳನ್ನು ಟ್ವಿಟ್ಟರ್‌ನಲ್ಲಿ ಮಾಡಿದ್ದಾರೆ ಅದರಲ್ಲಿ ಹಣ ಗಳಿಸುವ ಭಾಗವಾಗಿ ಬ್ಲೂ ಟಿಕ್‌ಗೆ ದರ ನಿಗದಿ ಮಾಡಿರುವುದು, ಕೆಲವು ವಿಡಿಯೋ ವೀಕ್ಷಣೆಗೆ ಶುಲ್ಕ ವಿಧಿಸಲು ಮುಂದಾಗಿರುವುದು ಹಾಗೆಯೇ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕ್ರಿಯೆ ಸೇರಿದಂತೆ ಇನ್ನಿತರೆ ಕಾರಣಗಳಿಂದ ಬಹಳಷ್ಟು ಮಂದಿ ಟ್ವಿಟ್ಟರ್ ಪ್ಲಾಟ್‌ಫಾರ್ಮ್‌ನಿಂದ ದೂರ ಸರಿಯುತ್ತಿದ್ದಾರೆ ಎನ್ನಲಾಗಿದೆ.

ಇನ್ನು ಟ್ವಿಟ್ಟರ್ ನ ಈ ಬದಲಾವಣೆಯಿಂದ ಜನರು ಮಾಸ್ಟೋಡಾನ್ (Mastodon) ಎಂಬ ಪ್ಲಾಟ್‌ಫಾರ್ಮ್ ಕಡೆ ವಾಲುತ್ತಿದ್ದಾರೆ. ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ರೆಡ್ಡಿಟ್‌ನಂತಹ ಹಲವಾರು ಪ್ಲಾಟ್‌ಫಾರ್ಮ್‌ಗಳು ಲಭ್ಯ ಇವೆಯಾದರೂ ಜನರು ಈಗ ಮಾಸ್ಟೋಡಾನ್ ಪ್ಲಾಟ್‌ಫಾರ್ಮ್ ಕಡೆ ಹೆಚ್ಚಿನ ಮುಖ ಮಾಡುತ್ತಿದ್ದಾರೆ ಎಂದು ವರದಿಗಳಿಂದ ತಿಳಿದುಬಂದಿದೆ.

ಪ್ರಮುಖವಾಗಿ ಕಳೆದ ವಾರವಷ್ಟೇ 2,30,000 ಜನರು ಈ ವೇದಿಕೆಗೆ ಸೇರ್ಪಡೆಗೊಂಡಿದ್ದಾರಂತೆ. ಆದರೆ, ಇವರೆಲ್ಲರೂ ಟ್ವಿಟ್ಟರ್ ಬಳಕೆದಾರರು ಎಂದು ನೇರವಾಗಿ ಹೇಳಲು ಸಾಧ್ಯವಾಗದಿದ್ದರೂ ಇದೇ ಪ್ಲಾಟ್‌ಫಾರ್ಮ್‌ನಲ್ಲಿ #Twitterreufugees ಮತ್ತು #Introduction ಎಂಬ ಎರಡು ವಿಷಯ ಟ್ರೆಂಡಿಂಗ್ ಆಗುತ್ತಿರುವುದನ್ನು ಗಮನಿಸಿದರೆ ಟ್ವಿಟ್ಟರ್‌ಗೆ ಟಕ್ಕರ್ ಕೊಡಲು ಜನ ಮುಂದಾಗಿರುವಂತೆ ಕಾಣುತ್ತಿದೆ.

ಹಾಗಿದ್ರೆ, ಈ ಮಾಸ್ಟೋಡಾನ್ (Mastodon) ಎಂದರೆ ಏನು?
ಮಾಸ್ಟೋಡಾನ್ ಎಂಬುದು ಓಪನ್ ಸೋರ್ಸ್ ಮೈಕ್ರೋ ಬ್ಲಾಗಿಂಗ್ ಸೈಟ್ ಆಗಿದ್ದು, ಪ್ರಸ್ತುತ ಇರುವ ಟ್ವಿಟ್ಟರ್‌ಗಿಂತ ಕೊಂಚ ಭಿನ್ನವಾಗಿ ಕೆಲಸ ಮಾಡಲಿದೆ. ಅದರಲ್ಲಿ ಹಲವು ರೀತಿಯ ನಿರ್ವಹಣಾ ಸರ್ವರ್‌ಗಳು ಇವೆ. ಬಹಳಷ್ಟು ಸರ್ವರ್‌ಗಳು ಅಕಾ ಸಮುದಾಯಗಳನ್ನು (aka communities) ಒಳಗೊಂಡಿವೆ. ಇದರಲ್ಲೂ ವಿವಿಧ ವರ್ಗಗಳಿದ್ದು, ಬಳಕೆದಾರರು ತಮ್ಮ ಆಸಕ್ತಿಯ ಮೇಲೆ ಈ ಪ್ಲಾಟ್‌ಫಾರ್ಮ್ ಪ್ರವೇಶ ಪಡೆಯಬಹುದಾಗಿದೆ.

ಉದಾಹರಣೆಗೆ ಹೇಳುವುದಾದರೆ ನೀವು ಇಂಗ್ಲಿಷ್ ನಲ್ಲಿ ಸಂವಹನ ನಡೆಸುವವರಾಗಿದ್ದರೆ ಜನರಲ್ ವಿಭಾಗದಲ್ಲಿ C.IM ಸರ್ವರ್ ಎಂಬ ಆಯ್ಕೆ ಇದೆ. ಇದಕ್ಕೆ ನೀವು ಪ್ರವೇಶ ಪಡೆದರೆ ಈ ಇಲ್ಲಿ ಇಂಗ್ಲಿಷ್‌ನಲ್ಲಿ ಮಾತ್ರ ಸಂವಹನ ನಡೆಸಬಹುದು. ಹಾಗೆಯೇ ಪ್ರತಿಯೊಂದು ಸರ್ವರ್ ಎಲ್ಲಾ ರೀತಿಯ ವಿವರಣೆಯನ್ನು ಹೊಂದಿದ್ದು, ನಿರ್ದಿಷ್ಟ ಸಮುದಾಯದಿಂದ ನೀವು ಏನೇನು ನಿರೀಕ್ಷಿಸಬಹುದು ಎಂಬುದನ್ನು ವಿವರಿಸಲಾಗಿದೆ. ಈ ಮೂಲಕ ಆರಂಭದಲ್ಲೇ ಮಾಹಿತಿ ಪಡೆದುಕೊಂಡು ಕಮ್ಯೂನಿಟಿಗೆ ಸೇರ್ಪಡೆ ಆಗಬಹುದಾದ ಆಯ್ಕೆ ನೀಡಲಾಗಿದೆ.

ಇನ್ನು ಈ ಪ್ಲಾಟ್‌ಫಾರ್ಮ್‌ನಲ್ಲಿ ನಿಮ್ಮದೇ ರೀತಿಯ ಆಲೋಚನೆಗಳನ್ನು ಶೇರ್ ಮಾಡಿಕೊಳ್ಳುವವರು ಎಷ್ಟು ಜನ ಇದ್ದಾರೆ ಹಾಗೆಯೇ ಎಷ್ಟು ಜನ ಈ ಸರ್ವರ್‌ಗೆ ಸೇರ್ಪಡೆ ಆಗುತ್ತಿದ್ದಾರೆ ಎಂಬ ವಿವರವನ್ನು ಇದರಲ್ಲಿ ನೀಡಲಾಗುತ್ತದೆ. ಜೊತೆಗೆ ಸೆಟ್ಟಿಂಗ್ ವಿಭಾಗದಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ ಇತರ ಸರ್ವರ್‌ಗಳಿಗೂ ನೀವು ಎಂಟ್ರಿ ಕೊಡಬಹುದಾಗಿದೆ.

ಮಾಸ್ಟೋಡಾನ್ ಲಾಗ್ ಇನ್ ಪ್ರಕ್ರಿಯೆ
ನೀವು ಮೊದಲು ನಿಮ್ಮ ಡಿವೈಸ್‌ಗಳಲ್ಲಿ ಈ ಆಪ್ ಇನ್‌ಸ್ಟಾಲ್ ಮಾಡಿಕೊಳ್ಳಬೇಳ್ಳಬೇಕಿದೆ. ನಂತರ 'ಗೆಟ್ ಸ್ಟಾರ್ಟೆಟ್' ಆಯ್ಕೆ ಮೇಲೆ ಕ್ಲಿಕ್ ಮಾಡಿ. ಇದಾದ ಬಳಿಕ ನಿಮಗೆ ಯಾವ ವಿಷಯದಲ್ಲಿ ಆಸಕ್ತಿ ಇದೆಯೋ ಆ ವಿಷಯಕ್ಕೆ ಸಂಬಂಧಿಸಿದ ಸರ್ವರ್ ಅನ್ನು ಸೆಲೆಕ್ಟ್ ಮಾಡಿಕೊಳ್ಳಿ. ನಂತರ ಆಪ್‌ನ ನಿಯಮಗಳನ್ನು ಅನುಸರಿಸಲು ಒಪ್ಪಿಗೆ ಸೂಚಿಸಬೇಕಿದೆ.

ಇದೆಲ್ಲಾ ಪ್ರಕ್ರಿಯೆ ಮುಗಿದ ನಂತರ ನೀವು ನಿಮ್ಮದೇ ಐಡಿ ಹಾಗೂ ಪಾಸ್‌ವರ್ಡ್ ಅನ್ನು ರಚಿಸಿಕೊಳ್ಳಬೇಕಿದೆ. ಇದರಲ್ಲಿ ನಿಮ್ಮ ಇ-ಮೇಲ್ ಐಡಿಯನ್ನು ನಮೂದು ಮಾಡಿ ಬಳಿಕ ನಿಮ್ಮ ಮೇಲ್ ತೆರೆದರೆ ಅಲ್ಲಿ ಪರಿಶೀಲನೆ ಸಂಬಂಧ ಒಂದು ಸಂದೇಶ ಬಂದಿರುತ್ತದೆ. ಇನ್ನು ಈ ಪ್ಲಾಟ್‌ಫಾರ್ಮ್ ಪ್ರವೇಶ ಪಡೆಯಲು ಕನಿಷ್ಠ 18 ವರ್ಷ ತುಂಬಿರಬೇಕು ಎಂಬ ನಿಯಮ ಇದೆಯಾದರೂ ಇದನ್ನು ಆಪ್ ಕೂಲಂಕಷವಾಗಿ ಪರಿಶೀಲನೆ ನಡೆಸುವುದಿಲ್ಲ.

ಮಾಸ್ಟೋಡಾನ್ ಬಳಕೆ ಹೇಗೆ?
ಆಪ್ ಓಪನ್ ಮಾಡಿದ ನಂತರ ಆಪ್‌ನ ಬಲಭಾಗದಲ್ಲಿ ದೊಡ್ಡದಾಗಿ ಕಾಣಿಸಿಕೊಳ್ಳುವ 'ಎಡಿಟ್ ' ಬಟನ್ ಅನ್ನು ಟ್ಯಾಪ್ ಮಾಡಿ. ಇದರಲ್ಲಿ ನೀವು ಏನನ್ನಾದರೂ ಪೋಸ್ಟ್ ಮಾಡಬಹುದು. ನಂತರ 'ಪಬ್ಲಿಷ್' ಆಯ್ಕೆ ಮೇಲೆ ಟ್ಯಾಪ್ ಮಾಡಿ. ಇನ್ನು ಟ್ವಿಟರ್‌ನಲ್ಲಿ ರಿಟ್ವೀಟ್ ಹಾಗೂ ಲೈಕ್ ಎಂಬ ಆಯ್ಕೆ ಇರುವಂತೆಯೇ ರಿಬ್ಲಾಗ್ಜ್ಡ್ ಹಾಗೂ ಫೇವರಿಟ್ ಎಂಬ ಆಯ್ಕೆ ನೀಡಲಾಗಿದೆ.

ಇನ್ನು ಮೇನ್ ಪೇಜ್‌ನಲ್ಲಿ ನೀವು ಅನುಸರಿಸುತ್ತಿರುವ ಜನರ ಮಾಹಿತಿ ನೋಡಬಹುದಾಗಿದೆ. ಹಾಗೆಯೇ ಪ್ರೊಫೈಲ್ ವಿಭಾಗದಲ್ಲಿ ನಿಮ್ಮ ಪೋಸ್ಟ್‌ಗಳನ್ನು ನೀವು ಪರಿಶೀಲಿಸಬಹುದು. ಜೊತೆಗೆ ಇದರಲ್ಲಿ ಪೋಲ್ ರಚಿಸಲು ಸಹ ಅವಕಾಶ ನೀಡಲಾಗಿದೆ. ಇದೆಲ್ಲದರ ಜೊತೆ ಗೌಪ್ಯತೆ ಆಯ್ಕೆಯೂ ಇದ್ದು, ನಿಮ್ಮ ಪೋಸ್ಟ್‌ಗೆ ಯಾರು ಪ್ರತ್ಯುತ್ತರ ನೀಡಬಹುದು ಎಂಬುದನ್ನು ಹೊಂದಿಸಲು ಇದು ಅನುಮತಿಸುತ್ತದೆ.

ಟ್ವಿಟ್ಟರ್‌ಗೂ ಇದಕ್ಕೂ ಭಿನ್ನತೆ ಏನು?
ಪ್ರಮುಖವಾದ ವಿಷಯ ಎಂದರೆ ಟ್ವಿಟ್ಟರ್‌ನಲ್ಲಿ ನೀವು ಕೇವಲ 280 ಅಕ್ಷರಗಳ ಮಿತಿಯಲ್ಲಿ ಏನಾದರೂ ಬರೆದು ಪೋಸ್ಟ್ ಮಾಡಬೇಕಿತ್ತು.ಆದರೆ ಈ ಪ್ಲಾಟ್‌ಫಾರ್ಮ್‌ನಲ್ಲಿ ಯಾವುದೇ ಅಕ್ಷರಗಳ ಮಿತಿಯನ್ನು ನೀಡಿಲ್ಲ ಹಾಗೆಯೇ ಸುಮಾರು 5,000 ಅಕ್ಷರಗಳನ್ನೂ ಬರೆದು ಇದರಲ್ಲಿ ಪೋಸ್ಟ್ ಮಾಡಬಹುದಾಗಿದೆ. ಇನ್ನು ಈ ಪ್ಲಾಟ್‌ಫಾರ್ಮ್‌ನಲ್ಲಿ ಟ್ವಿಟ್ಟರ್‌ನಲ್ಲಿರುವ ಎಲ್ಲಾ ರೀತಿಯ ಫೀಚರ್ಸ್ ಇಲ್ಲ. ಅದರಂತೆ ನಿಮ್ಮ ಪೋಸ್ಟ್‌ಗಳ ಡ್ರಾಫ್ಟ್ ಸೇವ್ ಆಯ್ಕೆಯೂ ಇದರಲಿಲ್ಲ ಮತ್ತು DM ವಿಭಾಗವೂ ಇಲ್ಲ. ಇದೆಲ್ಲಕ್ಕಿಂತ ಮಿಗಿಲಾಗಿ ಬ್ಲೂ ಟಿಕ್ ವೈಶಿಷ್ಟ್ಯವು ಎಲ್ಲರಿಗೂ ಲಭ್ಯವಾಗುತ್ತದೇ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಇದೆಲ್ಲವನ್ನೂ ಒಳಗೊಂಡ ಪ್ರಮುಖ ವಿಷಯ ಎಂದರೆ ಇದರಲ್ಲಿ ಯಾವುದೇ ಜಾಹೀರಾತುಗಳು ಈವರೆಗೂ ಈ ಪ್ಲಾಟ್‌ಫಾರ್ಮ್‌ನಲ್ಲಿ ಕಂಡುಬಂದಿಲ್ಲ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470