ನೀವು ವಾಟ್ಸ್‌ಆಪ್‌ನಲ್ಲಿ ವ್ಯಯಿಸಿದ ಸಮಯ ಕೇಳಿದ್ರೇ ಹುಬ್ಬೇರಿಸುತ್ತೀರಿ..!

By Avinash
|

ಇಂಟರ್‌ನೆಟ್‌ ಯುಗದಲ್ಲಿ ಎಲ್ಲರೂ ಫೇಸ್‌ಬುಕ್‌, ವಾಟ್ಸ್‌ಆಪ್‌, ಟ್ವಿಟ್ಟರ್‌ನಂತಹ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಆದರೆ, ಅದೆಷ್ಟು ಎಂಬುದು ಯಾರಿಗಾದರೂ ಗೊತ್ತಾ..? ಹೌದು ಇಲ್ಲೊಂದು ಮಾಹಿತಿ ಬಹಿರಂಗವಾಗಿದ್ದು, ವಾಟ್ಸ್‌ಆಪ್‌ನಲ್ಲಿ ಕಳೆದ ಸಮಯವನ್ನು ಬಹಿರಂಗ ಪಡಿಸಲಾಗಿದೆ. ಆ ಮಾಹಿತಿ ನೋಡಿದರೆ, ಇಷ್ಟೊಂದು ಪ್ರಮಾಣದಲ್ಲಿ ವಾಟ್ಸ್‌ಆಪ್‌ ಬಳಸುತ್ತಿದ್ದೇವಾ? ಎಂಬ ಪ್ರಶ್ನೆ ಕಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ನೀವು ವಾಟ್ಸ್‌ಆಪ್‌ನಲ್ಲಿ ವ್ಯಯಿಸಿದ ಸಮಯ ಕೇಳಿದ್ರೇ ಹುಬ್ಬೇರಿಸುತ್ತೀರಿ..!

ಹೌದು, ಫೋರ್ಬ್ಸ್‌ ಸೋಮವಾರ ಪ್ರಕಟಿಸಿರುವ ವರದಿಯಲ್ಲಿ ಈ ಮಾಹಿತಿ ಬಹಿರಂಗವಾಗಿದ್ದು, ಯುಎಸ್‌ ಆಧಾರಿತ ಆಪ್‌ ವಿಶ್ಲೇಷಕ ಕಂಪನಿ ಆಪ್‌ಟೋಪಿಯಾ ಕಳೆದ ಮೂರು ತಿಂಗಳ ಡೇಟಾವನ್ನು ಬಿಡುಗಡೆ ಮಾಡಿದ್ದು, ಬರೋಬ್ಬರಿ 85 ಬಿಲಿಯನ್‌ ಗಂಟೆಗಳನ್ನು ವಾಟ್ಸ್‌ಆಪ್‌ನಲ್ಲಿ ಜಾಗತಿಕವಾಗಿ ಕಳೆಯಲಾಗಿದೆ ಎಂದು ವರದಿಯಲ್ಲಿ ಹೇಳಿದೆ. ಆಪ್‌ಟೋಪಿಯಾ ಬಹಿರಂಗಪಡಿಸಿರುವ ವರದಿಯಲ್ಲಿ ಮತ್ತೇನಿದೆ..? ಮುಂದೆ ನೋಡಿ.

85 ಬಿಲಿಯನ್ ಗಂಟೆಗಳು

85 ಬಿಲಿಯನ್ ಗಂಟೆಗಳು

ಆಪ್‌ಟೋಪಿಯಾ ಬಿಡುಗಡೆ ಮಾಡಿರುವ ವರದಿಯಂತೆ ಜಾಗತಿಕವಾಗಿ ವಾಟ್ಸ್‌ಆಪ್‌ನ್ನು ಕಳೆದ ಮೂರು ತಿಂಗಳಲ್ಲಿ 85 ಬಿಲಿಯನ್‌ ಗಂಟೆಗಳ ಕಾಲ ಸ್ಮಾರ್ಟ್‌ಫೋನ್‌ ಗ್ರಾಹಕರು ಬಳಸಿದ್ದಾರೆ ಎಂದಿದೆ. ವಾಟ್ಸ್‌ಆಪ್‌ ಸದ್ಯ ವಿಶ್ವದಾದ್ಯಂತ 1.5 ಬಿಲಿಯನ್‌ ಬಳಕೆದಾರರನ್ನು ಹೊಂದಿದೆ. ಪ್ರತಿ ಮನುಷ್ಯ ವಾಟ್ಸ್‌ಆಪ್‌ನಲ್ಲಿ ಕಳೆದ ಮೂರು ತಿಂಗಳಲ್ಲಿ 11,425 ಗಂಟೆ ಕಾಲ ಕಳೆದಿರುವುದು ಗೊತ್ತಾಗಿದ್ದು, ಎಲ್ಲರೂ ಇಷ್ಟೊಂದು ಕಾಲವನ್ನು ವಾಟ್ಸ್‌ಆಪ್‌ನಲ್ಲಿ ಕಳೆಯುತ್ತಿವಾ ಎಂದು ಅಚ್ಚರಿ ಪಡುವುದು ಖಂಡಿತ.

ಫೇಸ್‌ಬುಕ್‌ನಲ್ಲಿ ಎಷ್ಟು..?

ಫೇಸ್‌ಬುಕ್‌ನಲ್ಲಿ ಎಷ್ಟು..?

ವಾಟ್ಸ್‌ಆಪ್‌ನ ಮೂಲ ಸಂಸ್ಥೆಯಾಗಿರುವ ಫೇಸ್‌ಬುಕ್‌ನಲ್ಲಿ ಬಳಕೆದಾರರು ಸುಮಾರು 30 ಬಿಲಿಯನ್‌ ಗಂಟೆಗಳನ್ನು ವ್ಯಯಿಸಿದ್ದು, ಹೆಚ್ಚು ಜನರು ಬಳಸುತ್ತಿರುವ ಸಾಮಾಜಿಕ ಜಾಲತಾಣವಾಗಿ ಹೊರಹೊಮ್ಮಿದೆ ಎಂದು ಆಪ್‌ಟೋಪಿಯಾ ವರದಿ ಹೇಳಿದೆ.

ಜಾಗತಿಕ ಮೆಸೆಂಜಿಂಗ್‌ ಆಪ್‌

ಜಾಗತಿಕ ಮೆಸೆಂಜಿಂಗ್‌ ಆಪ್‌

ಈ ದತ್ತಾಂಶಗಳು ಸ್ಪಷ್ಟವಾಗಿ ವಾಟ್ಸ್‌ಆಪ್‌ನ್ನು ಜಾಗತಿಕ ಮೆಸೆಂಜಿಂಗ್‌ ಆಪ್‌ ಎಂದು ಘೋಷಿಸುತ್ತವೆ ಎಂದು ಆಪ್‌ಟೋಪಿಯಾ ವಕ್ತಾರ ಆಗಿರುವ ಆಡಮ್‌ ಬ್ಲಾಕರ್ ಹೇಳಿದ್ದಾರೆ. ಅದಲ್ಲದೇ ಸಂವಹನಕ್ಕಾಗಿ ಮೊಬೈಲ್‌ ಆಪ್‌ಗಳನ್ನು ಹೆಚ್ಚು ಅವಲಂಭಿಸಲಾಗಿದ್ದು, ಹೆಚ್ಚಿನ ಸಮಯವನ್ನು ಆಪ್‌ನಲ್ಲಿಯೇ ಕಳೆಯುತ್ತಿದ್ದೇವೆ ಎಂದು ಹೇಳಿದ್ದಾರೆ.

ಟಾಪ್‌10 ಆಪ್‌ಗಳು

ಟಾಪ್‌10 ಆಪ್‌ಗಳು

ಆಪ್‌ಟೋಪಿಯಾ ವರದಿಯಲ್ಲಿ ಹೆಚ್ಚು ಸಮಯ ವ್ಯಯಿಸುವ ಆಪ್‌ಗಳನ್ನು ಪಟ್ಟಿ ಮಾಡಲಾಗಿದೆ. ವಾಟ್ಸ್‌ಆಪ್, ವೀಚಾಟ್‌, ಫೇಸ್‌ಬುಕ್‌, ಮೆಸೆಂಜರ್, ಪಂಡೋರಾ, ಯೂಟ್ಯೂಬ್, ಇನ್‌ಸ್ಟಾಗ್ರಾಂ, ಟ್ವಿಟ್ಟರ್‌, ಗೂಗಲ್ ಮ್ಯಾಪ್ಸ್‌ ಮತ್ತು ಸ್ಪೂಟಿಫೈ ಆಪ್‌ಗಳು ಕ್ರಮವಾಗಿ ಟಾಪ್‌ 10 ಆಪ್‌ಗಳಾಗಿವೆ.

ಫೇಸ್‌ಬುಕ್‌ ಮತ್ತು ಗೂಗಲ್ ಪಾರಮ್ಯ

ಫೇಸ್‌ಬುಕ್‌ ಮತ್ತು ಗೂಗಲ್ ಪಾರಮ್ಯ

ಟಾಪ್‌ 10 ಆಪ್‌ಗಳಲ್ಲಿ ಫೇಸ್‌ಬುಕ್‌ ಮತ್ತು ಗೂಗಲ್ ಪಾರಮ್ಯ ಮೆರೆದಿದ್ದು, ಫೇಸ್‌ಬುಕ್ ಒಡೆತನದ ವಾಟ್ಸ್‌ಆಪ್, ಫೇಸ್‌ಬುಕ್‌, ಮೆಸೆಂಜರ್, ಇನ್‌ಸ್ಟಾಗ್ರಾಂ ಸ್ಥಾನ ಪಡೆದಿದ್ದು, ಗೂಗಲ್‌ನ ಗೂಗಲ್‌ ಮ್ಯಾಪ್ಸ್‌ ಮತ್ತು ಯೂಟ್ಯೂಬ್‌ ಸ್ಥಾನ ಪಡೆದಿದ್ದು, ಟೆಕ್‌ ಜಗತ್ತಿನಲ್ಲಿ ನಾವೇ ಎಲ್ಲಾ ಎಂಬುದನ್ನು ಸ್ಪಷ್ಟಪಡಿಸಿವೆ.

ಕ್ಲಾಷ್‌ ಆಫ್‌ ಕ್ಲಾನ್ಸ್‌ ಫಸ್ಟ್‌

ಕ್ಲಾಷ್‌ ಆಫ್‌ ಕ್ಲಾನ್ಸ್‌ ಫಸ್ಟ್‌

ಗೇಮ್‌ಗಳ ವಿಚಾರಕ್ಕೆ ಬಂದರೆ ಕ್ಲಾಷ್‌ ಆಫ್‌ ಕ್ಲಾನ್ಸ್‌ ಹೆಚ್ಚು ಸಮಯ ವ್ಯಯಿಸಿದ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯುತ್ತದೆ. ಒಟ್ಟು 3.83 ಬಿಲಿಯನ್‌ ಗಂಟೆಗಳನ್ನು ಕ್ಲಾಷ್‌ ಆಫ್‌ ಕ್ಲಾನ್ಸ್‌ನಲ್ಲಿ ಗ್ರಾಹಕರು ಸಮಯವನ್ನು ವ್ಯಯಿಸಿದ್ದಾರೆ. ಮೈ ಟಾಕಿಂಗ್‌ ಟಾಮ್‌, ಕ್ಯಾಂಡಿ ಕ್ರಷ್‌ ಸಾಗಾ, ಫೋರ್ಟ್‌ನೈಟ್‌, ಲಾರ್ಡ್ಸ್ ಮೊಬೈಲ್‌, ಸಬ್‌ವೇ ಸರ್ಫರ್ಸ್‌, ಹೆಲಿಕ್ಸ್‌ ಜಂಪ್‌, ಸ್ಲಿಥರ್‌.ಐಒ, ಪಬ್‌ಜಿ ಮೊಬೈಲ್‌ ಮತ್ತು ಫಿಶ್‌ಡಮ್‌ ಗೇಮ್‌ಗಳು ಕ್ರಮವಾಗಿ ನಂತರದ ಸ್ಥಾನವನ್ನು ಪಡೆದಿವೆ.

ಮೂರು ಗಂಟೆಗೂ ಹೆಚ್ಚು ಕಾಲ ಮೊಬೈಲ್ ಬಳಕೆ

ಮೂರು ಗಂಟೆಗೂ ಹೆಚ್ಚು ಕಾಲ ಮೊಬೈಲ್ ಬಳಕೆ

ಮಾರುಕಟ್ಟೆ ಸಂಶೋಧನಾ ಕಂಪನಿಯಾಗಿರುವ ಇ-ಮಾರ್ಕೇಟರ್ ಅಧ್ಯಯನದಂತೆ ಅಮೇರಿಕಾದ ಯುವಜನಾಂಗ ದಿನವೊಂದಕ್ಕೆ ಮೂರು ಗಂಟೆ ಅಥವಾ ಅದಕ್ಕಿಂತ ಹೆಚ್ಚು ಸಮಯವನ್ನು ಮೊಬೈಲ್‌ನಲ್ಲಿ ಕಳೆಯುತ್ತಾರೆ. ಇದು ವಿವಿಧ ದೇಶಗಳಿಗೆ ವಿಭಿನ್ನವಾಗಿದ್ದು, ಭಾರತದಲ್ಲಿ ಈ ಪ್ರಮಾಣ ಹೆಚ್ಚಿರಬಹುದು ಎಂದು ಊಹೆ ಮಾಡಲಾಗಿದೆ.

Best Mobiles in India

English summary
People spent this much time on WhatsApp and Facebook in last 3 months. To know more thsi visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X