ಫೋನ್‌ಪೇ ತೆಗೆದುಕೊಂಡ ಈ ನಿರ್ಧಾರ ಎಲ್ಲರಿಗೂ ಉಪಯುಕ್ತ ಎನಿಸಲಿದೆ!

|

ಯುಪಿಐ ಪಾವತಿ ಅಪ್ಲಿಕೇಶನ್‌ ಬಳಸಬೇಕು ಎಂದು ಕೊಂಡವರಿಗೆ ಫೋನ್‌ಪೇ ಅಪ್ಲಿಕೇಶನ್‌ ಗುಡ್‌ ನ್ಯೂಸ್‌ ನೀಡಿದೆ. ಡೆಬಿಟ್‌ ಕಾರ್ಡ್‌ ಇಲ್ಲದೇ ಯುಪಿಐ ಆಕ್ಟಿವೇಟ್‌ ಮಾಡಲು ಸಾಧ್ಯವಾಗದವರಿಗೆ ಹೊಸ ನಿಯಮವನ್ನು ಪರಿಚಯಿಸಿದೆ. ಇದರಿಂದ ಡೆಬಿಟ್‌ ಕಾರ್ಡ್‌ ಇಲ್ಲದೆ ಯುಪಿಐ ಬಳಸಲು ಸಾಧ್ಯವಾಗದೇ ಇದ್ದ ಸಾಕಷ್ಟು ಮಂದಿಗೆ ಅನುಕೂಲ ಮಾಡಿಕೊಟ್ಟಿದೆ. ಇದಕ್ಕಾಗಿ ಇನ್ಮುಂದೆ ಡೆಬಿಟ್‌ ಕಾರ್ಡ್‌ ಬದಲಿಗೆ ಆಧಾರ್‌ ಸಂಖ್ಯೆಯ ಮೂಲಕ ಕೂಡ ಫೋನ್‌ಪೇ ಆಕ್ಟಿವ್‌ ಮಾಡುವುದಕ್ಕೆ ಅವಕಾಶ ನೀಡಿದೆ.

ಫೋನ್‌ಪೇ

ಹೌದು, ಫೋನ್‌ಪೇ ಅಪ್ಲಿಕೇಶನ್‌ನಲ್ಲಿ ಯುಪಿಐ ಐಡಿ ಆಕ್ಟಿವೇಟ್‌ ಮಾಡಲು ಇನ್ಮುಂದೆ ನೀವು ಆಧಾರ್‌ ಆಧಾರಿತ ಒಟಿಪಿಯನ್ನು ಬಳಸಬಹುದಾಗಿದೆ. ಆಧಾರ್‌ ಸಂಖ್ಯೆಯ ಮೂಲಕ UPI ಆಕ್ಟಿವೇಟ್‌ ಮಾಡಲು ಅವಕಾಶ ಮಾಡಿಕೊಟ್ಟ ಮೊದಲ UPI ಅಪ್ಲಿಕೇಶನ್‌ ಫೋನ್‌ಪೇ ಆಗಿದೆ. ಇದರಿಂದ ಭಾರತದಲ್ಲಿ ಡೆಬಿಟ್‌ ಕಾರ್ಡ್‌ ಹೊಂದಿಲ್ಲದವರು ಕೂಡ ಯುಪಿಐ ಅಪ್ಲಿಕೇಶನ್‌ ಬಳಸಲು ಸಾಧ್ಯವಾಗಲಿದೆ. ಹಾಗಾದ್ರೆ ಫೋನ್‌ಪೇ ಪರಿಚಯಿಸಿರುವ ಆಧಾರ್‌ ಆಧಾರಿತ ಒಟಿಪಿ ಮೂಲಕ ಯುಪಿಐ ಸಕ್ರಿಯಗೊಳಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಧಾರ್‌ ಬಳಸಿ ಫೋನ್‌ಪೇ ಯುಪಿಐ ಆಕ್ಟಿವೇಟ್‌ ಮಾಡುವುದು ಹೇಗೆ?

ಆಧಾರ್‌ ಬಳಸಿ ಫೋನ್‌ಪೇ ಯುಪಿಐ ಆಕ್ಟಿವೇಟ್‌ ಮಾಡುವುದು ಹೇಗೆ?

ಫೋನ್‌ಪೇ ಹೊಸದಾಗಿ ಜಾರಿಗೆ ತಂದಿರುವ ಆಧಾರ್‌ ಆಧಾರಿತ ಒಟಿಪಿ ಮೂಲಕ ಯುಪಿಐ ಆಕ್ಟಿವೇಟ್‌ ಮಾಡುವ ವಿಧಾನ ಸಾಕಷ್ಟು ಮಂದಿಗೆ ಅನುಕೂಲವಾಗಲಿದೆ. ಇದಲರಲಿ ಆಧಾರ್ ಇ-ಕೆವೈಸಿ ಫ್ಲೋ ಅನ್ನು ಫೋನ್‌ಪೇ ಅಪ್ಲಿಕೇಶನ್‌ನಲ್ಲಿ ಯುಪಿಐ ಆನ್‌ಬೋರ್ಡಿಂಗ್ ಮಾಡಲು ಬಳಸಲಾಗುತ್ತದೆ. ಈ ಆಯ್ಕೆಯನ್ನು ಆರಿಸಿಕೊಳ್ಳುವ ಬಳಕೆದಾರರು ಫೋನ್‌ಪೇನಲ್ಲಿ ಆನ್‌ಬೋರ್ಡಿಂಗ್ ಪ್ರಕ್ರಿಯೆಯನ್ನು ಪ್ರಾರಂಭಿಸಲು ತಮ್ಮ ಆಧಾರ್ ಸಂಖ್ಯೆಯ ಕೊನೆಯ 6 ಅಂಕೆಗಳನ್ನು ಮಾತ್ರ ನಮೂದಿಸಬೇಕಾಗುತ್ತದೆ.

ಆಧಾರ್‌

ಆಧಾರ್‌ ಕಾರ್ಡ್‌ ನಂಬರ್‌ ಅನ್ನು ನಮೂದಿಸಿದ ನಂತರ ದೃಢೀಕರಣ ಪ್ರಕ್ರಿಯೆಗಾಗಿ UIDAI ಮತ್ತು ಸಂಬಂಧಿತ ಬ್ಯಾಂಕ್‌ನಿಂದ OTP ಬರಲಿದೆ. ಒಟಿಪಿಯನ್ನು ಫೋನ್‌ಪೇಯಲ್ಲಿ ನಮೂದಿಸುವ ಮೂಲಕ ಫೋನ್‌ಪೇ ಯುಪಿಐ ಆಕ್ಟಿವೇಟ್‌ ಮಾಡಬಹುದಾಗಿದೆ. ನಂತರ ಫೋನ್‌ಪೇ ಅಪ್ಲಿಕೇಶನ್‌ನಲ್ಲಿ ಪಾವತಿಗಳು ಮತ್ತು ಬ್ಯಾಲೆನ್ಸ್ ಚೆಕ್‌ಗಳಂತಹ ಎಲ್ಲಾ UPI ಫೀಚರ್ಸ್ಗಳನ್ನು ಪ್ರವೇಶಿಸಲು ಸಾಧ್ಯವಾಗಲಿದೆ.

ಹಿಂದೆ ಇದ್ದ ಕ್ರಮಗಳೇನು?

ಹಿಂದೆ ಇದ್ದ ಕ್ರಮಗಳೇನು?

ಫೋನ್‌ಪೇ ಸೆರಿದಂತೆ ಯಾವುದೇ ಯುಪಿಐ ಪಾವತಿ ಆಧಾರಿತ ಅಪ್ಲಿಕೇಶನ್‌ ಆಕ್ಟಿವೇಟ್‌ ಮಾಡುವಾಗ ಡೆಬಿಟ್‌ ಕಾರ್ಡ್‌ ಅವಶ್ಯಕವಾಗಿತ್ತು. ಇದೇ ಕಾರಣಕ್ಕೆ ಡೆಬಿಟ್‌ ಕಾರ್ಡ್‌ ಅನ್ನು ಹೊಂದಿರದ ಬ್ಯಾಂಕ್‌ ಖಾತೆ ಹೊಂದಿರುವ ಬಳಕೆದಾರರು ಯುಪಿಐ ಪಾವತಿ ಅಪ್ಲಿಕೇಶನ್‌ ಬಳಸಲು ಸಾಧ್ಯವಾಗಿರಲಿಲ್ಲ. ಇದನ್ನೇ ಗಮನದಲ್ಲಿಟ್ಟುಕೊಂಡು ಫೋನ್‌ಪೇ ಅಪ್ಲಿಕೇಶನ್‌ ಇದೀಗ ಆಧಾರ್‌ ಆಧಾರಿತ ಯುಪಿಐ ಅಪ್ಲಿಕೇಶನ್‌ಗೆ ಪ್ರವೇಶ ನೀಡಲು ಅವಕಾಶ ನೀಡಿದೆ. ಇದು ಮುಂದಿನ ದಿನಗಳಲ್ಲಿ ಡೆಬಿಟ್‌ ಕಾರ್ಡ್‌ ಹೊಂದಿಲ್ಲದ ಬಳಕೆದಾರರು ಫೋನ್‌ಪೇ ಬಳಸುವುದಕ್ಕೆ ಸಾಧ್ಯವಾಗಲಿದೆ.

ಫೋನ್‌ಪೇ ಹೇಳಿದ್ದೇನು?

ಫೋನ್‌ಪೇ ಹೇಳಿದ್ದೇನು?

ಇದು RBI, NPCI ಮತ್ತು UIDAI ಯ ಅತ್ಯಂತ ಪ್ರಗತಿಪರ ಕ್ರಮವಾಗಿದೆ ನಾವು ನಂಬುತ್ತೇವೆ ಎಂದು ಫೋನ್‌ಪೇ ಹೇಳಿದೆ. UIDAI ಯ ಆಧಾರ್ ಪ್ರೋಗ್ರಾಂ ಚಾಲನೆ ಮಾಡಲು ಸಮರ್ಥವಾಗಿರುವ ಡಿಜಿಟಲ್ ಹಣಕಾಸು ಸೇರ್ಪಡೆಗೆ ಇದು ಉತ್ತಮ ಉದಾಹರಣೆಯಾಗಿದೆ ಎಂದು ಫೋನ್‌ಪೇ ಪಾವತಿಗಳ ಮುಖ್ಯಸ್ಥ ದೀಪ್ ಅಗರವಾಲ್ ಹೇಳಿದ್ದಾರೆ. ಇದು ಒಟ್ಟಾರೆ UPI ಪರಿಸರ ವ್ಯವಸ್ಥೆಯನ್ನು ವಿಸ್ತರಿಸಲು ಸಹಾಯ ಮಾಡುತ್ತದೆ. ಜೊತೆಗೆ ಹೊಸ ಗ್ರಾಹಕರನ್ನು ಡಿಜಿಟಲ್ ಪಾವತಿಗಳಿಗೆ ಒಳಪಡಿಸುತ್ತದೆ. UPI ಅಂತರಾಷ್ಟ್ರೀಯ ಮಟ್ಟದಲ್ಲಿ ತೆಗೆದುಕೊಳ್ಳಲು ನಾವು NPCI ಯೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ ಎನ್ನುವ ಮಾಹಿತಿಯನ್ನು ಕೂಡ ಅಗರವಾಲ್ ನೀಡಿದ್ದಾರೆ.

ಫೋನ್‌ಪೇ

ಪ್ರಸ್ತುತ ಫೋನ್‌ಪೇ ಅಪ್ಲಿಕೇಶನ್‌ 41.5 ಕೋಟಿ ನೋಂದಾಯಿತ ಬಳಕೆದಾರರನ್ನು ಹೊಂದಿದೆ. ಇದರಲ್ಲಿ ಕಂಪನಿಯು 3.3 ಕೋಟಿ ಆಫ್‌ಲೈನ್ ವ್ಯಾಪಾರಿಗಳನ್ನು ಯಶಸ್ವಿಯಾಗಿ ಡಿಜಿಟೈಸ್ ಮಾಡಿದೆ. ಫೋನ್‌ಪೇ ಬಳಸುವ ನಾಲ್ಕು ಬಳಕೆದಾರರಲ್ಲಿ ಒಬ್ಬರು ಭಾರತೀಯರು ಇದ್ದಾರೆ ಎನ್ನಲಾಗಿದೆ. ಅಂದರೆ ದೇಶದಲ್ಲಿ 99% ಪಿನ್ ಕೋಡ್‌ಗಳನ್ನು ಫೋನ್‌ಪೇ ಒಳಗೊಂಡಿದೆ.

Best Mobiles in India

Read more about:
English summary
PhonePe announced it has enabled UPI activation using Aadhaar

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X