ಆಂಡ್ರಾಯ್ಡ್ ನಲ್ಲಿ ವಾಟ್ಸ್ ಆಪ್ ಮೆಸೇಜ್ ಕಳುಹಿಸುತ್ತಲೇ ಜಿಯೋ ಟಿವಿ ನೋಡಿ

By Gizbot Bureau
|

ಮಾರುಕಟ್ಟೆಗೆ ಹೊಸದಾಗಿ ಬಂದಿದ್ದರೂ ಕೂಡ ಜಿಯೋ ಟಿವಿ ಇದೀಗ ಪ್ರಸಿದ್ಧ ಟಿವಿ ನೋಡುವ ಆಪ್ ಆಗಿ ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್ ನಲ್ಲಿ ಗುರುತಿಸಿಕೊಂಡಿದೆ.ಈ ಆಪ್ ಡೌನ್ ಲೋಡ್ ಮಾಡಿಕೊಳ್ಳುವುದಕ್ಕೆ ಉಚಿತವಾಗಿರುತ್ತದೆ ಮತ್ತು ಜಿಯೋ ಚಂದಾದಾರರಿಗೆ ಯಾವುದೇ ಚಂದಾದಾರಿಕೆ ಇಲ್ಲದೆಯೂ ಕೂಡ ಇದನ್ನು ನೋಡುವುದಕ್ಕೆ ಅವಕಾಶವಿರುತ್ತದೆ. ಈ ಫ್ಲ್ಯಾಟ್ ಫಾರ್ಮ್ ನಲ್ಲಿ ಸುಮಾರು 640 ಚಾನಲ್ ಗಳನ್ನು ವೀಕ್ಷಿಸುವುದಕ್ಕೆ ಅವಕಾಶವಿದೆ ಮತ್ತು ಹೆಚ್ಚುವರಿಯಾಗಿ ಡಿಸ್ನಿ ಚಂದಾದಾರಿಕೆಯನ್ನು ಕೂಡ ಮಾಡಿಕೊಳ್ಳಬಹುದು.

ಪಿಐಪಿ ಮೋಡ್ :

ಪಿಐಪಿ ಮೋಡ್ :

ಇದೀಗ ಜಿಯೋ ತನ್ನ ಆಪ್ ನ್ನು ಅಪ್ ಡೇಟ್ ಮಾಡಿದ್ದು ಹೊಸದಾಗಿ ಕೆಲವು ಫೀಚರ್ ಗಳನ್ನು ಸೇರಿಸಿದೆ ಮತ್ತು ಆ ಮೂಲಕ ಗ್ರಾಹಕರಿಗೆ ಉತ್ತಮವಾದ ನೋಡುವಿಕೆಯ ಅನುಭವ ಒದಗಿಸುವುದಕ್ಕೆ ಪ್ರಯತ್ನ ಮಾಡುತ್ತಿದೆ. ನೂತವಾದ ಜಿಯೋ ಟಿವಿ ಆಪ್ ಅಪ್ ಡೇಟ್ ನಲ್ಲಿ ಪಿಐಪಿ(ಪಿಕ್ಚರ್ ಇನ್ ಪಿಕ್ಚರ್) ಮೋಡ್ ಗೆ ಬೆಂಬಲ ನೀಡಲಾಗುತ್ತದೆ. ಕಳೆದ ಕೆಲವು ದಿನಗಳಿಂದ ಯುಟ್ಯೂಬ್ ಬೆಂಬಲಿಸುವ ಪಿಐಪಿ ಮೋಡ್ ನಂತೆಯೇ ಇದು ಕೂಡ ಕಾರ್ಯ ನಿರ್ವಹಿಸುತ್ತದೆ. ವಾಟ್ಸ್ ಆಪ್ ಕೂಡ ಇದೀಗ ಪಿಐಪಿ ಮೋಡ್ ನ್ನು ಬೆಂಬಲಿಸಿದ್ದು ತನ್ನ ಆಪ್ ನಲ್ಲಿ ವೀಡಿಯೋ ಪ್ಲೇ ಬ್ಯಾಕ್ ಗೆ ಬೆಂಬಲ ನೀಡುತ್ತದೆ. ಆದರೆ, ಜಿಯೋ ಟಿವಿಯಲ್ಲಿರುವ ಪಿಐಪಿ ಮೋಡ್ ಇದುವರೆಗೆ ನಾವು ನೋಡಿರುವ ಆಂಡ್ರಾಯ್ಡ್ ಎಕೋಸಿಸ್ಟಮ್ ನ ಪಿಐಪಿ ಮೋಡ್ ಗಿಂತ ವಿಭಿನ್ನವಾಗಿದೆ.

ಹೇಗೆ ಕೆಲಸ ಮಾಡುತ್ತದೆ?

ಹೇಗೆ ಕೆಲಸ ಮಾಡುತ್ತದೆ?

ಈ ಹೊಸ ಫೀಚರ್ ಮೂಲಕ ಫೋನ್ ನಲ್ಲಿ ಇತರೆ ಯಾವುದೇ ಆಪ್ ಗಳನ್ನು ನೋಡುತ್ತಾ ಲೈವ್ ಟಿವಿಯನ್ನು ನೋಡುವುದಕ್ಕೆ ನೋಡುಗರಿಗೆ ಅವಕಾಶವಿರುತ್ತದೆ.ಆಪ್ ನಲ್ಲಿ ವೀಡಿಯೋ ಪ್ಲೇ ಆಗುತ್ತಿರುವಾಗ ನೋಡುಗರ ಹೋಮ್ ಸ್ಕ್ರೀನ್ ಗೆ ನೇವಿಗೇಟ್ ಮಾಡಬಹುದು ಮತ್ತು ಆಪ್ ಫ್ಲೋಟಿಂಗ್ ವಿಂಡೋದಲ್ಲಿ ವೀಡಿಯೋವನ್ನು ಪ್ಲೇ ಮಾಡುತ್ತಲೇ ಇರುತ್ತದೆ.

ವಾಟ್ಸ್ ಆಪ್ ನಲ್ಲಿ ಮೆಸೇಜ್ ಸೆಂಡ್ ಮಾಡುವುದಕ್ಕೆ ಅಥವಾ ವೆಬ್ ಬ್ರೌಸರ್ ನ್ನು ಕೂಡ ತೆರೆಯುವುದಕ್ಕೆ ಸಾಧ್ಯವಾಗುತ್ತದೆ. ಫ್ಲೋಟಿಂಗ್ ವಿಂಡೋದಲ್ಲಿ ವೀಡಿಯೋ ನೋಡಿದ್ದು ಮುಗಿದ ನಂತರ ಸಿಂಪಲ್ ಆಗಿ ಬಳಕೆದಾರರು ಅದನ್ನು ಡಿಸ್ ಮಿಸ್ ಮಾಡಿದರೆ ನಾರ್ಮಲ್ ವಿಂಡೋ ತೆರೆದುಕೊಳ್ಳುತ್ತದೆ.

ಪ್ರಮುಖ ಅಗತ್ಯತೆ:

ಪ್ರಮುಖ ಅಗತ್ಯತೆ:

ಪಿಕ್ಚರ್ ಇನ್ ಪಿಕ್ಚರ್ ಮೋಡ್ ನ್ನು ಬಳಕೆ ಮಾಡುವುದಕ್ಕಾಗಿ ನಿಮ್ಮ ಫೋನ್ ಆಂಡ್ರಾಯ್ಡ್ 8.0 ಮತ್ತು ಅದಕ್ಕಿಂತ ಮೇಲಿನ ವರ್ಷನ್ ನಲ್ಲಿ ರನ್ ಆಗಬೇಕಿರುವುದು ಕಡ್ಡಾಯವಾಗಿರುತ್ತದೆ.ಆಂಡ್ರಾಯ್ಡ್ 8 ಓರಿಯೋ ಮತ್ತು ಅದಕ್ಕಿಂತ ಮೇಲಿನ ವರ್ಷನ್ ಗೆ ಮಾತ್ರವೇ ಈ ಪಿಕ್ಚರ್ ಇನ್ ಪಿಕ್ಚರ್ ಮೋಡ್ ಬೆಂಬಲಿಸುತ್ತದೆ. ಪ್ಲೇ ಸ್ಟೋರ್ ನಲ್ಲಿ ಆಪ್ ಅಪ್ ಡೇಟ್ ಆದ ನಂತರವಷ್ಟೇ ಈ ಫೀಚರ್ ನ್ನು ಆಕ್ಸಿಸ್ ಮಾಡುವುದಕ್ಕೆ ಅವಕಾಶವಿರುತ್ತದೆ.

ಲಾಭದಾಯಕ:

ಲಾಭದಾಯಕ:

ನಿಮ್ಮ ಫೋನಿನಲ್ಲೇ ಸಾಕಷ್ಟು ಟಿವಿ ಕಟೆಂಟ್ ಗಳನ್ನು ನೀವು ವೀಕ್ಷಿಸುತ್ತೀರಾದರೆ, ಪಿಐಪಿ ಮೋಡ್ ಖಂಡಿತ ಲಾಭದಾಯಕವಾಗಿದೆ. ಮೂವಿ ಅಥವಾ ಯಾವುದೇ ಟಿವಿ ಶೋಗಳನ್ನು ವೀಕ್ಷಿಸುವಾಗ ಕೇವಲ ಜಿಯೋ ಟಿವಿ ಆಪ್ ಗೆ ಮಾತ್ರವೇ ನೀವು ಸೀಮಿತವಾಗಿರುವುದಿಲ್ಲ. ಟ್ಯಾಬ್ಲೆಟ್ ಬಳಕೆ ಮಾಡುವವರಿಗೆ ಇದು ಮತ್ತಷ್ಟು ಲಾಭದಾಯಕವಾಗಿರಲಿದ್ದು ಪಿಐಪಿ ವಿಂಡೋ ಸಹಜ ಆಂಡ್ರಾಯ್ಡ್ ಫೋನಿನ ಡಿಸ್ಪ್ಲೇಗಿಂತ ಟ್ಯಾಬ್ಲೆಟ್ ನಲ್ಲಿ ಡಿಸ್ಪ್ಲೇ ಸ್ಕ್ರೀನ್ ದೊಡ್ಡದಾಗಿರುತ್ತದೆ.

Best Mobiles in India

English summary
Picture-in-picture mode now available on JioTV

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X