ಆಂಡ್ರಾಯ್ಡ್ ಫೋನ್ ಖರೀದಿಸುವವರಿಗೆ ಗೂಗಲ್ ಸೂಚನೆ

By Gizbot Bureau
|

ಒಂದು ವೇಳೆ ನೀವು ಆಂಡ್ರಾಯ್ಡ್ ಫೋನ್ ಖರೀದಿಸಬೇಕು ಎಂದುಕೊಂಡಿದ್ದರೆ ನೀವು ನೂತನ ಸ್ಟಾಕ್ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಇರುವ ಹ್ಯಾಂಡ್ ಸೆಟ್ ನ್ನು ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು. ಆದರೆ ಸ್ಮಾರ್ಟ್ ಫೋನ್ ಉತ್ಸಾಹಿಗಳು ಇನ್ನು ಮುಂದೆ ಸ್ಮಾರ್ಟ್ ಫೋನ್ ಖರೀದಿಸುವಾಗ ಸ್ಟಾಕ್ ಆಂಡ್ರಾಯ್ಡ್ ಓಎಸ್ ನ್ನು ಇನ್ನು ಮುಂದೆ ನಿರ್ಣಾಯಕ ಅಂಶವೆಂದು ಪರಿಗಣಿಸಬಾರದು ಎಂದು ವಾದಿಸಬಹುದು. ಆದರೆ ಗೂಗಲ್ ಬೇರೆಯದ್ದೇ ಆಲೋಚನೆ ಮಾಡುತ್ತದೆ.

ಮಾಲ್ವೇರ್ ಗಳನ್ನು ಗುರುತಿಸಲು ಅಸಾಧ್ಯ:

ಮಾಲ್ವೇರ್ ಗಳನ್ನು ಗುರುತಿಸಲು ಅಸಾಧ್ಯ:

ಲಾಸ್ ವೇಗಾಸ್ ನಲ್ಲಿ ಇತ್ತೀಚೆಗೆ ನಡೆದ ಬ್ಲಾಕ್ ಹ್ಯಾಟ್ ಸೆಕ್ಯುರಿಟಿ ಕಾನ್ಫರೆನ್ಸ್ ನಲ್ಲಿ ಗೂಗಲ್ ಪ್ರೊಜೆಕ್ಟ್ ಝೀರೋ ಸೆಕ್ಯುರಿಟಿ ರೀಸರ್ಚರ್ ಮ್ಯಾಡಿ ಸ್ಟೋನ್ ಆಶ್ಚರ್ಯಕರವಾದ ವಿಚಾರವನ್ನು ತಿಳಿಸಿದ್ದಾರೆ.

ಸೆಕ್ಯುರಿಟಿ ರೀಸರ್ಚರ್ ತಿಳಿಸಿರುವಂತೆ ಮಿಲಿಯನ್ ಗಟ್ಟಲೆ ಹೊಸ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳು ಪ್ರೀ-ಇನ್ಸ್ಟಾಲ್ ಆಗಿರುವ ಅಂದರೆ ಮೊದಲೇ ಇನ್ಸ್ಟಾಲ್ ಆಗಿರುವ ಮಾಲ್ವೇರ್ ಗಳಿಂದ ಕೂಡಿರುತ್ತವೆ ಎಂದು ಫೋರ್ಬ್ಸ್ ವರದಿ ಮಾಡಿದೆ.

ಯಾರಿಗೆ ತಿಳಿದಿಲ್ಲವೋ ಅವರಿಗಾಗಿ ಹೇಳುತ್ತಿದ್ದೇವೆ, ಪ್ರೊಜೆಕ್ಟ್ ಝೀರೋ ತಂಡವು ಗೂಗಲ್ ಇಲೈಟ್ ತಂಡದ ಬಗ್ ಗಳನ್ನು ಹುಡುಕಾಟ ನಡೆಸುವ ತಂಡವಾಗಿರುತ್ತದೆ. ಸಾಮಾನ್ಯ ಬಳಕೆದಾರರಿಂದ ಈ ಮಾಲ್ವೇರ್ ಗಳನ್ನು ಗುರುತಿಸುವುದಕ್ಕೆ ಸಾಧ್ಯವಿಲ್ಲ ಎಂಬ ಆತಂಕಕಾರಿ ವಿಚಾರವನ್ನು ತಿಳಿಸಿದೆ. ಯಾಕೆಂದರೆ ಇದನ್ನು ಗುರುತಿಸುವುದಕ್ಕಾಗಿ ಯಾವುದೇ ಚಿಹ್ನೆಗಳಾಗಲಿ ಅಥಾ ಆಪ್ ಐಕಾನ್ ಗಳಾಗಲೀ ಇರುವುದಿಲ್ಲವಂತೆ.

 ಹಣ ಗಳಿಸುವ ಅವಕಾಶ:

ಹಣ ಗಳಿಸುವ ಅವಕಾಶ:

ಹಾಗಾದ್ರೆ ಆಂಡ್ರಾಯ್ಡ್ ಫೋನ್ ತಯಾರಕರು ಹೊಸ ಆಂಡ್ರಾಯ್ಡ್ ಫೋನ್ ಗಳನ್ನು ಮಾರಾಟ ಮಾಡುವುದಕ್ಕಿಂತ ಮುನ್ನವೇ ಅದ್ಯಾಕೆ ಮಾಲ್ವೇರ್ ಗಳನ್ನು ಪ್ರೀಇನ್ಸ್ಟಾಲ್ ಮಾಡುತ್ತಿದ್ದಾರೆ?ಆಂಡ್ರಾಯ್ಡ್ ಫೋನ್ ತಯಾರಿಕಾ ವೆಚ್ಚಗಳು ಮತ್ತು ಬಜೆಟ್ ಫೋನ್ ವಿಭಾಗದಲ್ಲಿನ ಸ್ಪರ್ಧೆಯಿಂದಾಗಿ ಕಡಿಮೆ ಪರಿಚಿತ ಬ್ರ್ಯಾಂಡ್ ಗಳು ಇದನ್ನು ಹಣ ಗಳಿಸುವ ಅವಕಾಶ ನೋಡುತ್ತಿರುವ ಸಾಧ್ಯತೆ ಇದೆ ಎನ್ನಲಾಗಿದೆ.

 ಲಾಭವೇನು ಗೊತ್ತಾ?

ಲಾಭವೇನು ಗೊತ್ತಾ?

ಅಷ್ಟೇ ಅಲ್ಲ ಈ ಮಾಡೆಲ್ ಗಳು ದುರುದ್ದೇಶಪೂರಿತ ಅಪ್ಲಿಕೇಷನ್ ಗಳನ್ನು ಪ್ರಕಟಿಸುವ ಬದಲು ಮಾಲ್ವೇರ್ ರಚಿಸುವವರಿಗೆ ಸರಿಹೊಂದಿಕೆಯಾಗುತ್ತದೆ ಮತ್ತು ಜನರು ಅದಕ್ಕೆ ಬಲಿಯಾಗುವುದಕ್ಕಾಗಿ ಕಾಯುತ್ತಿರುತ್ತಾರೆ.ಈ ರೀತಿಯ ಸಪ್ಲೈ ಚೈನ್ ನ ಲಾಭವೆಂದರೆ ಅವರು ಕೇವಲ ಒಂದು ಕಂಪೆನಿಗೆ ಮಾತ್ರವೇ ಮನವರಿಕೆ ಮಾಡಿಕೊಟ್ಟು ತಮ್ಮ ಆಪ್ ಸೇರಿಸುವುದಕ್ಕೆ ತಿಳಿಸಬೇಕಾಗುತ್ತದೆ, ಸಾವಿರಾರು ಬಳಕೆದಾರರಿಗೆ ಅರ್ಥೈಸುವ ಅಗತ್ಯತೆ ಎದುರಾಗುವುದಿಲ್ಲ ಎಂದು ವರದಿಯು ತಿಳಿಸುತ್ತಿದೆ.

200 ಬ್ರ್ಯಾಂಡ್ ಗಳಿಂದ ಇನ್ಸ್ಟಾಲೇಷನ್ ಗೆ ಅವಕಾಶ:

200 ಬ್ರ್ಯಾಂಡ್ ಗಳಿಂದ ಇನ್ಸ್ಟಾಲೇಷನ್ ಗೆ ಅವಕಾಶ:

ಒಂದು ವೇಳೆ ನೀವು ಕೆಲವೇ ಕೆಲವು ಆಂಡ್ರಾಯ್ಡ್ ಫೋನ್ ಗಳಲ್ಲಿ ಈ ಸಮಸ್ಯೆ ಇದೆ ಎಂದು ಭಾವಿಸುತ್ತಿದ್ದರೆ ಖಂಡಿತ ನಿಮ್ಮ ಊಹೆ ತಪ್ಪು. ಗೂಗಲ್ ತಿಳಿಸುವ ಪ್ರಕಾರ ಸುಮಾರು 200 ಆಂಡ್ರಾಯ್ಡ್ ಫೋನ್ ಬ್ರ್ಯಾಂಡ್ ಗಳು ಮಾಲ್ವೇರ್ ಗಳನ್ನು ಪ್ರೀಇನ್ಸ್ಟಾಲ್ ಮಾಡುವುದಕ್ಕೆ ಅವಕಾಶ ನೀಡುತ್ತಿವೆ ಮತ್ತು ರಿಮೋಟ್ ಹ್ಯಾಕಿಂಗ್ ಗೆ ಅವರು ಅವಕಾಶ ನೀಡುತ್ತಿದ್ದಾರೆ.

ಕೆಲವು ಗೋಚರ, ಕೆಲವು ಅಗೋಚರ:

ಕೆಲವು ಗೋಚರ, ಕೆಲವು ಅಗೋಚರ:

ಆಂಡ್ರಾಯ್ಡ್ ಫೋನ್ ಗಳಲ್ಲಿ ಸುಮಾರು 100 ರಿಂದ 400 ಆಪ್ ಗಳು ಪ್ರೀಇನ್ಸ್ಟಾಲ್ ಆಗಿ ಬರುತ್ತಿವೆ ಎಂದು ಸ್ಟೋನ್ ತಿಳಿಸುತ್ತಾರೆ ಮತ್ತು ಅದರಲ್ಲಿ ಕೆಲವು ನಿಮ್ಮ ಕಣ್ಣಿಗೆ ಕಾಣುವಂತವುಗಳಾದರೆ, ಇನ್ನೂ ಕೆಲವು ಅಗೋಚರವಾಗಿರುತ್ತವೆಯಂತೆ.

ಸಾಮಾನ್ಯ ಮಾಲ್ವೇರ್ ದಾಳಿಗಳು:

ಸಾಮಾನ್ಯ ಮಾಲ್ವೇರ್ ದಾಳಿಗಳು:

ಸ್ಟೋನ್ ತಿಳಿಸಿರುವ ಪ್ರಕಾರ ಸಾಮಾನ್ಯ ಮಾಲ್ವೇರ್ ದಾಳಿಗಳೆಂದರೆ ಚಮೋಯಿಸ್ ಮತ್ತು ಟ್ರಯಾಡಾ.ಚಯೋಯಿಸ್ ಜನರ ಫೋನಿನಿಂದ ಸೃಷ್ಟಿಕರ್ತರಿಗೆ ಆದಾಯ ಗಳಿಸಲು ಟೆಕ್ಸ್ಟ್ ಮೆಸೇಜ್ ಗಳನ್ನು ಕಳುಹಿಸಿದರೆ, ಟ್ರಯಾಡೋ ಬ್ಯಾಕ್ ಗ್ರೌಂಡ್ ನಲ್ಲಿ ಆಪ್ಸ್ ಗಳನ್ನು ಇನ್ಸ್ಟಾಲ್ ಮಾಡುವುದಕ್ಕೆ ಅವಕಾಶ ನೀಡುತ್ತದೆ.

ಗೂಗಲ್ ಹೋರಾಟ:

ಗೂಗಲ್ ಹೋರಾಟ:

ಸೆಕ್ಯುರಿಟಿ ಅಧ್ಯಯನಕಾರರು ಹೇಳುವಂತೆ ಮಾರ್ಚ್ 2018 ರಿಂದ 2019 ರ ವರೆಗೆ ಗೂಗಲ್ 7.4 ಮಿಲಿಯನ್ ಆಂಡ್ರಾಯ್ಡ್ ಫೋನ್ ಗಳಲ್ಲಿ ಚಮೋಯಿಸ್ ಇನ್ಫೆಕ್ಷನ್ ನ್ನು ತಡೆಯುವುದಕ್ಕಾಗಿ ಗೂಗಲ್ ಹೋರಾಟ ನಡೆಸಿದೆಯಂತೆ ಮತ್ತು ಒಂದೇ ವರ್ಷದಲ್ಲಿ ಗೂಗಲ್ ಚಯೋಯಿಸ್ ಇನ್ಫೆಕ್ಷನ್ ಗೆ ಒಳಗಾಗುವ ಡಿವೈಸ್ ಗಳ ಸಂಖ್ಯೆಯನ್ನು 7,00,000 ಕ್ಕೆ ಇಳಿಸುವುದಕ್ಕೆ ಪ್ರಯತ್ನಿಸಿದೆ ಎಂದು ತಿಳಿಸಿದ್ದಾರೆ.

Best Mobiles in India

English summary
Planning To Buy A New Smartphone? Google Has An Advice For You

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X