ಆರೋಗ್ಯ ಮತ್ತು ಫಿಟ್‌ನೆಸ್‌ಗಾಗಿ ಇರುವ ಅದ್ಬುತ 5 ಗ್ಯಾಜೆಟ್‌ಗಳು ಇವು!!

ಫೀಟ್‌ನೆಸ್ ಮತ್ತು ಆರೋಗ್ಯಕ್ಕಾಗಿ ಸಹಾಯ ಮಾಡುವ ಚಿಕ್ಕ ಚಿಕ್ಕ ಗ್ಯಾಜೆಟ್‌ಗಳು ಕೂಡ ಇದೀಗ ಮಾರುಕಟ್ಟೆಯಲ್ಲಿ ಟ್ರೆಂಡ್ ಸೃಷ್ಟಿಸಿವೆ.

|

ಉತ್ತಮ ಆರೋಗ್ಯ ಮತ್ತು ಫಿಟ್‌ನೆಸ್ ಪಡೆಯಲು ಜನರು ಏನೆಲ್ಲಾ ಕಷ್ಟಪಡುತ್ತಾರೆ. ರನ್ನಿಂಗ್, ಜಾಗಿಂಗ್ ಮತ್ತು ಜಿಮ್ ಎನ್ನುವವರು ಹಲವರಿದ್ದರೆ, ಪ್ರೋಟಿನ್ ಯುಕ್ತ ಆಹಾರ ಸೇವನೆ ಮೂಲಕ ಆರೋಗ್ಯ ಕಾಪಾಡಿಕೊಳ್ಳುವವರು ಸಹ ಇದ್ದಾರೆ. ಹಾಗಾಗಿ, ಇಂತವರಿಗಾಗಿಯೇ ಇದೀಗ ಡಿಜಿಟಲ್ ಸಾಧನಗಳು ಸಹ ಮಾರುಕಟ್ಟೆಗೆ ಬಂದಿದೆ.!!

ಹೌದು, ಫೀಟ್‌ನೆಸ್ ಮತ್ತು ಆರೋಗ್ಯಕ್ಕಾಗಿ ಸಹಾಯ ಮಾಡುವ ಚಿಕ್ಕ ಚಿಕ್ಕ ಗ್ಯಾಜೆಟ್‌ಗಳು ಕೂಡ ಇದೀಗ ಮಾರುಕಟ್ಟೆಯಲ್ಲಿ ಟ್ರೆಂಡ್ ಸೃಷ್ಟಿಸಿದ್ದು, ಇವುಗಳ ಮೂಲಕ ಆರೋಗ್ಯವನ್ನು ಸುಲಭವಾಗಿ ಕಾಪಾಡಿಕೊಳ್ಳಬಹುದಾಗಿದೆ. ಹಾಗಾದರೆ ಆ ಗ್ಯಾಜೆಟ್‌ಗಳು ಯಾವುವು? ಮತ್ತು ಅವುಗಳಿಂದ ಏನು ಉಪಯೋಗ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಫಿಟ್ನೆಸ್ ಟ್ರ್ಯಾಕರ್ ಷೂ!!

ಫಿಟ್ನೆಸ್ ಟ್ರ್ಯಾಕರ್ ಷೂ!!

ಬೆಳಗೆದ್ದು ಓಡುವವರಿಗೆ ಖುಷಿ ನೀಡುವ ''ಷೂ ಪೌಚ್‌ ಫಾರ್ ಫಿಟ್ನೆಸ್ ಟ್ರ್ಯಾಕರ್' ಎಂಬ ಫಿಟ್ನೆಸ್ ಟ್ರ್ಯಾಕರ್ ಷೂ ಮಾರುಕಟ್ಟೆಯಲ್ಲಿ ಲಭ್ಯವಿದೆ. ಓಡುತ್ತಾ, ನಡೆಯುತ್ತಾ ಎಷ್ಟು ದೂರ ಕ್ರಮಿಸಿದ್ದೇವೆ, ಎಷ್ಟು ಕ್ಯಾಲರಿ ಶಕ್ತಿ ಖರ್ಚಾಗಿದೆ ಎಂಬ ಮಾಹಿತಿಯನ್ನು ಈ ಶೂ ನೀಡಲಿದ್ದು, ಈ ಶೂನಲ್ಲಿ ಎಷ್ಟು ವೇಗದಲ್ಲಿ ಓಡಿದ್ದೇವೆ ಎಂಬುದನ್ನು ಸಹ ತಿಳಿಯಬಹುದು.!!

ವಿಥಿಂಗ್ಸ್ ಬ್ಲಡ್ ಪ್ರೆಷರ್ ಮಾನಿಟರ್!!

ವಿಥಿಂಗ್ಸ್ ಬ್ಲಡ್ ಪ್ರೆಷರ್ ಮಾನಿಟರ್!!

ಮೊಬೈಲ್ ಮೂಲಕವೇ ನಿಮ್ಮ ರಕ್ತ ಪರೀಕ್ಷೆ ಮಾಡಿಕೊಳ್ಳಬಹುದಾದ ಸಾಧನ ಈ ವಿಥಿಂಗ್ಸ್ ಬ್ಲಡ್ ಪ್ರೆಷರ್ ಮಾನಿಟರ್ (Whithings blood pressure monitor). ಈ ಗ್ಯಾಜೆಟ್‌ನಲ್ಲಿ ದೇಹದಲ್ಲಿರುವ ರಕ್ತದೊತ್ತಡ ಪ್ರಮಾಣವನ್ನು ಮೊಬೈಲ್‌ ಪರದೆಯಲ್ಲಿ ನೋಡಬಹುದಾದ ತಂತ್ರಜ್ಞಾನ ಇರುವುದು ವಿಶೇಷ.!!

ಐಎಸ್‌ಪಿ02 (Isp02) ಸಾಧನ!!

ಐಎಸ್‌ಪಿ02 (Isp02) ಸಾಧನ!!

ದೇಹಕ್ಕೆ ಆಮ್ಲಜನಕಎಷ್ಟು ಪ್ರಮಾಣದಲ್ಲಿ ಲಭ್ಯವಾಗುತ್ತಿದೆ. ನಾಡಿ ಬಡಿತ ಹೇಗಿದೆ, ರಕ್ತದ ಒತ್ತಡ ಇತ್ಯಾದಿ ಮಾಹಿತಿಯನ್ನು ಮೊಬೈಲ್ ಪರದೆ ಮೇಲೆ ನೋಡಬಹುದು ಡಿಜಿಟಲ್ ಸಾಧನ ಈ ಐಎಸ್‌ಪಿ02 (Isp02).!! ಈ ಸಾಧನದಿಂದ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಬಹುದಾದ ಹಲವು ಪರೀಕ್ಷೆಗಳನ್ನು ಮನೆಯಲ್ಲೇ ಮಾಡಿಕೊಳ್ಳಬಹುದು.!!

ಸ್ಮಾರ್ಟ್‌ ಥರ್ಮಾ ಮೀಟರ್!!

ಸ್ಮಾರ್ಟ್‌ ಥರ್ಮಾ ಮೀಟರ್!!

ಕಿನ್ಸಾ ಸ್ಮಾರ್ಟ್ (Kinsa smart Thermometer) ಎಂಬ ಥರ್ಮಾ ಮೀಟರ್ ಇದ್ದು,ಇದರ ಒಂದು ತುದಿಯಲ್ಲಿ ಇರುವ ಪಿನ್‌ ಅನ್ನು ಸ್ಮಾರ್ಟ್‌ಫೋನ್‌ಗೆ ಅಳವಡಿಸಿ, ಅದರ ಜತೆ ಜೋಡಿಸಿರುವ ತಂತ್ರಾಂಶದ ಸಹಾಯದಿಂದ ಪರದೆಮೇಲೆ ದೇಹದ ಉಷ್ಣಾಂಶ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಬಹುದು.!!

ಮಕ್ಕಳಿಗೆ ರಕ್ಷಣೆಗೆ ಸ್ಮಾರ್ಟ್ ಗ್ಯಾಜೆಟ್!!

ಮಕ್ಕಳಿಗೆ ರಕ್ಷಣೆಗೆ ಸ್ಮಾರ್ಟ್ ಗ್ಯಾಜೆಟ್!!

ಪುಟ್ಟ ಮಕ್ಕಳ, ಆರೋಗ್ಯ ಪರಿಸ್ಥಿತಿ, ಚಲನವಲನಗಳನ್ನು ತಿಳಿಸುವ ಸಾಧನ ಮಿಮೊ ಬೇಬಿ ಮಾನಿಟರ್ (mimo baby monitor)!! ಇದನ್ನು ಮಕ್ಕಳ ಬಟ್ಟೆ ಮೇಲೆ ಅಳವಡಿಸಿದರೆ, ಅವರ ದೇಹದ ಉಷ್ಣಾಂಶ, ಹೃದಯ ಬಡಿತದ ಬಗ್ಗೆ ಸ್ಮಾರ್ಟ್‌ಫೋನ್‌ ಮೂಲಕ ತಿಳಿಯಬಹುದು. ವಿಶೇಷವೆಂದರೆ ಈ ಸಾಧನ ಮಗು ಅಳುತ್ತಿರುವುದನ್ನು ಸೆನ್ಸರ್ ಮೂಲಕ ತಿಳಿಸುತ್ತದೆ.!! ಹಾಗಾಗಿ, ಮಗುವನ್ನು ಕೋಣೆಯಲ್ಲಿ ಮಲಗಿಸಿ, ನಿಶ್ಚಿಂತೆಯಿಂದ ನಮ್ಮ ಕೆಲಸಗಳನ್ನು ಮಾಡಿಕೊಳ್ಳಬಹುದು.

ಇನ್ಮುಂದೆ ವಿಶ್ವದ ನಂಬರ್ ಶ್ರೀಮಂತ ಜೆಫ್ ಬೆಜೋಸ್!..ದಾಖಲೆ ಆಸ್ತಿಗೆ ಒಡೆಯ ಅಮೆಜಾನ್ ಸಿಇಓ!!ಇನ್ಮುಂದೆ ವಿಶ್ವದ ನಂಬರ್ ಶ್ರೀಮಂತ ಜೆಫ್ ಬೆಜೋಸ್!..ದಾಖಲೆ ಆಸ್ತಿಗೆ ಒಡೆಯ ಅಮೆಜಾನ್ ಸಿಇಓ!!

Best Mobiles in India

English summary
From a smart pain relief wand to medical devices that monitor vital signs.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X