6ಜಿ ತಂತ್ರಜ್ಞಾನ ಬೇಕು ಎಂದ ಅಮೇರಿಕಾ ಅಧ್ಯಕ್ಷ ಟ್ರಂಪ್

By Gizbot Bureau
|

ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟರ್ ಪ್ರಿಯರು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ತಾವು ಅಮೇರಿಕನ್ನರಿಗೆ ಏನನ್ನಾದರೂ ಹೇಳಬೇಕು ಎಂದು ಬಯಸಿದರೆ ಅವರು ಟ್ವೀಟರ್ ಮೂಲಕವೇ ಹೇಳುತ್ತಾರೆ. ಅದೇ ಕಾರಣಕ್ಕೆ ಟ್ರಂಪ್ ಗೆ ಜಗತ್ತಿನ ಅತೀ ದುಬಾರಿ ಫೋನ್ ಗಳನ್ನು ಕೂಡ ನೀಡಲಾಗಿದೆ. ಅದರ ಭದ್ರತಾ ಕಾರ್ಯವನ್ನು ಶ್ವೇತಭವನ ನೋಡಿಕೊಳ್ಳುತ್ತಿದೆ. ಇದೀಗ ಟ್ರಂಪ್ ಮತ್ತೊಂದು ಸಂದೇಶವನ್ನು ಅಮೇರಿಕದ ಜನತೆಗೆ ನೀಡಿದ್ದಾರೆ.

6ಜಿ ಪರಿಕಲ್ಪನೆಗೆ ಮುಂದಾದ ಟ್ರಂಪ್:

6ಜಿ ಪರಿಕಲ್ಪನೆಗೆ ಮುಂದಾದ ಟ್ರಂಪ್:

ಹೌದು,ಅಮೇರಿಕಾದ ಕಂಪೆನಿಗಳು 5ಜಿ ಮತ್ತು 6ಜಿ ಕೂಡ ಲೀಡರ್ ಆಗಿರಬೇಕು ಎಂದು ಡೊಲಾಲ್ಡ್ ಟ್ರಂಪ್ ಅಮೇರಿಕನ್ನರಿಗೆ ಕರೆ ನೀಡಿದ್ದಾರೆ. ತಂತ್ರಜ್ಞಾನಕ್ಕೆ ಸಂಬಂಧಿಸಿದ ಹಲವು ಟ್ವೀಟ್ ಗಳನ್ನು ಮಾಡಿರುವ ಟ್ರಂಪ್ ಹೊಸ ತಂತ್ರಜ್ಞಾನದ ಸೃಷ್ಟಿಗೆ ನಾವೇ ಕಾರಣರಾಗಿರಬೇಕು ಮತ್ತು ಅದರ ಲೀಡರ್ ನಾವೇ ಆಗಿರಬೇಕು ಎಂದು ಹೇಳಿದ್ದಾರೆ.

ಟ್ವೀಟ್:

ಟ್ವೀಟ್:

"ನಾನು ಅಮೇರಿಕಾದಲ್ಲಿ 5ಜಿಯನ್ನು ಬಯಸುತ್ತೇನೆ ಮತ್ತು ಆದಷ್ಟು ಬೇಗ ನನಗೆ 6ಜಿ ಕೂಡ ಇಲ್ಲಿ ಲಭ್ಯವಾಗಬೇಕು ಎಂದು ಅಮೇರಿಕಾ ಅಧ್ಯಕ್ಷರು ಟ್ವೀಟ್ ಮಾಡಿದ್ದಾರೆ.

ಅಮೇರಿಕಾ ಕಂಪೆನಿಗಳಿಗೆ ಸಂದೇಶ:

ಅಮೇರಿಕಾ ಕಂಪೆನಿಗಳಿಗೆ ಸಂದೇಶ:

ಇದು ಹೆಚ್ಚು ಶಕ್ತಿಶಾಲಿಯಾಗಿರುತ್ತದೆ, ವೇಗವಾಗಿರುತ್ತದೆ ಮತ್ತು ಸದ್ಯ ಲಭ್ಯವಿರುವ ತಂತ್ರಜ್ಞಾನಕ್ಕಿಂತ ಹೆಚ್ಚು ಸ್ಮಾರ್ಟ್ ಆಗಿರುತ್ತದೆ. ಅಮೇರಿಕಾದ ಕಂಪೆನಿಗಳು ತಮ್ಮ ಎಲ್ಲಾ ಶಕ್ತಿಯನ್ನು ಇದಕ್ಕೆ ವಿನಿಯೋಗಿಸಬೇಕು ಮತ್ತು ಒಂದು ಹೆಜ್ಜೆ ಮುಂದೆ ಸಾಗಬೇಕು ಎಂದು ತಿಳಿಸಿದ್ದಾರೆ.

ನಾವೇ ಲೀಡರ್:

ನಾವೇ ಲೀಡರ್:

ಭವಿಷ್ಯದ ಕೆಲವು ಅಗತ್ಯ ವಿಚಾರಗಳಿಗಾಗಿ ನಾವು ಯಾವುದನ್ನೇ ಸುಮ್ಮನೆ ಹಿಂದೇಟು ಹಾಕಿ ಎಳೆಯುವುದರಲ್ಲಿ ಅರ್ಥವಿಲ್ಲ. ಕಠಿಣ ಸ್ಪರ್ಧೆಯಲ್ಲಿ ಅಮೇರಿಕಾ ಜಯಗಳಿಸುವುದನ್ನು ನಾನು ಬಯಸುತ್ತೇನೆ. ಸದ್ಯದ ತಂತ್ರಜ್ಞಾನವನ್ನು ಬ್ಲಾಕ್ ಮಾಡುವ ಮೂಲಕ ನಾವು ಇಲ್ಲಿಗೇ ನಿಲ್ಲಬಾರದು. ಮುಂದೆ ಸಾಗಬೇಕು. ನಾವು ಮಾಡುವ ಪ್ರತಿ ಕೆಲಸದಲ್ಲೂ ನಾವೇ ಲೀಡರ್ ಆಗಿರಬೇಕು. ಅದರಲ್ಲೂ ಜಗತ್ತು ಬಯಸುವ ತಂತ್ರಜ್ಞಾನದಲ್ಲಿ ನಾವು ಮುಂದಿರಬೇಕು ಎಂದು ನಾನು ಬಯಸುತ್ತೇನೆ" ಎಂದು ಅಮೇರಿಕಾ ಅಧ್ಯಕ್ಷರು ಟ್ವೀಟ್ ಮಾಡಿದ್ದಾರೆ.

ಭಾರೀ ಮುಂದಾಲೋಚನೆ:

ಭಾರೀ ಮುಂದಾಲೋಚನೆ:

ಮುಂದಿನ ವಾರ ಫಿನ್ ಲ್ಯಾಂಡ್ ದೊಡ್ಡ ಮೊಬೈಲ್ ಕಾರ್ಯಕ್ರಮದಲ್ಲಿ ಭಾಗವಾಗಿಸುತ್ತಿರುವುದರ ವಿಚಾರಕ್ಕೆ ಸಂಬಂಧಿಸಿದಂತೆ ಅಮೇರಿಕಾ ಅಧ್ಯಕ್ಷರು ಈ ಸರಣಿ ಟ್ವೀಟ್ ಗಳನ್ನು ಮಾಡಿದ್ದಾರೆ. ಉಳಿದೆಲ್ಲಾ ದೇಶಗಳು ಇದೀಗ 5ಜಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದಕ್ಕೆ ಮುಂದಾಗುತ್ತಿದೆ. ಆದರೆ ಅಮೇರಿಕಾ ಈಗಾಗಲೇ 6ಜಿ ಬಗ್ಗೆ ಯೋಚಿಸುವುದಕ್ಕೆ ಮುಂದಾಗುತ್ತಿದೆ.

2030ಕ್ಕೆ ಸಾಧ್ಯವಾಗಬಹುದು!

2030ಕ್ಕೆ ಸಾಧ್ಯವಾಗಬಹುದು!

ಆದರೆ 6ಜಿ ತಂತ್ರಜ್ಞಾನದ ಬಗ್ಗೆ ಮಿಸ್ಟರ್ ಟ್ರಂಪ್ ಮಾಡಿರುವ ಟ್ವೀಟ್ ಕಾರ್ಯರೂಪಕ್ಕೆ ತರುವುದೇ ಆದರೂ ಕೂಡ ಕನಿಷ್ಟ 2030 ರ ವರೆಗೆ ಸಾಧ್ಯವಿಲ್ಲ ಎನ್ನುತ್ತದೆ ವಿಶ್ವ ನೆಟ್ ವರ್ಕ್ ದುನಿಯಾ. ಆದರೆ ಆ ಬಗ್ಗೆ ಯೋಚಿಸುವುದಕ್ಕೆ ಈಗಾಗಲೇ ಅಮೇರಿಕಾ ಅಧ್ಯಕ್ಷರು ಯೋಚಿಸಲು ಪ್ರಾರಂಭಿಸಿದ್ದಾರೆ ಎಂದರೆ ಖಂಡಿತ ಭವಿಷ್ಯದ ತಂತ್ರಗಾರಿಕೆಯ ಬಗ್ಗೆ ಅಮೇರಿಕಾದ ಆಲೋಚನೆಯನ್ನು ಸ್ಪಷ್ಟಪಡಿಸುತ್ತದೆ.

Best Mobiles in India

Read more about:
English summary
Trump demands 6G technology in rant against American companies: 'We must be the leader in everything we do'

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X