ಕ್ವಾಲ್ಕಾಮ್‌ನಿಂದ ಹೊಸ ಪ್ರೊಸೆಸರ್‌ ಅನಾವರಣ! ಕಾರ್ಯದಕ್ಷತೆ ಹೇಗಿದೆ?

|

ಜನಪ್ರಿಯ ಪ್ರೊಸೆಸರ್‌ ತಯಾರಕ ಕಂಪೆನಿ ಕ್ವಾಲ್ಕಾಮ್‌ ತನ್ನ ಹೊಸ ಪ್ರೊಸೆಸರ್‌ ಅನ್ನು ಅನಾವರಣಗೊಳಿಸಿದೆ. ಕ್ವಾಲ್ಕಾಮ್‌ ತನ್ನ ವಾರ್ಷಿಕ ಸ್ನಾಪ್‌ಡ್ರಾಗನ್‌ ಟೆಕ್‌ ಶೃಂಗಸಭೆಯಲ್ಲಿ ಈ ಪ್ರೊಸೆಸರ್‌ ಅನ್ನು ಪರಿಚಯಿಸಿದ್ದು, ಇದನ್ನು ಸ್ನಾಪ್‌ಡ್ರಾಗನ್ 8 Gen 2 SoC ಎಂದು ಹೆಸರಿಸಲಾಗಿದೆ. ಇದು ಕ್ವಾಲ್ಕಾಮ್‌ ಈ ಹಿಂದೆ ಪರಿಚಯಿಸಿದ್ದ ಸ್ನಾಪ್‌ಡ್ರಾಗನ್ 8 Gen 1 SoC ಪ್ರೊಸೆಸರ್‌ನ ಅಪ್ಡೇಟ್‌ ಆವೃತ್ತಿಯಾಗಿದ್ದು, ಹಿಂದಿನ ಆವೃತ್ತಿಗಿಂತ 40% ಹೆಚ್ಚು ಪವರ್‌ಫುಲ್‌ ಆಗಿದೆ.

ಕ್ವಾಲ್ಕಾಮ್‌

ಹೌದು, ಕ್ವಾಲ್ಕಾಮ್‌ ಕಂಪೆನಿ ಹೊಸ ಸ್ನಾಪ್‌ಡ್ರಾಗನ್‌ 8 Gen 2 SoC ಪ್ರೊಸೆಸರ್‌ ಪರಿಚಯಿಸಿದೆ. ಇದು ಹೊಸ ಮೊಬೈಲ್ 5G ಪ್ಲಾಟ್‌ಫಾರ್ಮ್ ಆಗಿದ್ದು, ಗೇಮಿಂಗ್‌ಗಾಗಿ ರಿಯಲ್‌-ಟೈಂ ರೇಟ್ರೇಸಿಂಗ್ ಅನ್ನು ನೀಡಲಿದೆ. ಅಲ್ಲದೆ INT4 ಮತ್ತು Wi-Fi 7 ಅನ್ನು ಬೆಂಬಲಿಸುತ್ತದೆ ಎಂದು ಹೇಳಲಾಗಿದೆ. ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8 Gen 2 SoC ಪ್ರೊಸಸರ್‌ 200 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್‌ ISOCELL HP3 ನಂತಹ ಹೊಸ ಇಮೇಜ್ ಸೆನ್ಸಾರ್‌ ಬೆಂಬಲಿಸುವುದು ಇದರ ಪ್ರಮುಖ ಹೈಲೈಟ್‌ ಆಗಿದೆ. ಇನ್ನುಳಿದಂತೆ ಈ ಹೊಸ ಪ್ರೊಸೆಸರ್‌ ವಿಶೇಷತೆ ಏನಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸ್ನಾಪ್‌ಡ್ರಾಗನ್

ಕ್ವಾಲ್ಕಾಮ್‌ನ ಹೊಸ ಸ್ನಾಪ್‌ಡ್ರಾಗನ್ 8 Gen 2 SoC ಪ್ರೊಸೆಸರ್‌ ಕ್ವಾಲ್‌ಕಾಮ್ AI ಎಂಜಿನ್‌ನೊಂದಿಗೆ ಬರಲಿದೆ. ಇದು AI ಮತ್ತು ಮೆಷಿನ್‌ ಲರ್ನಿಂಗ್‌ ಸಾಮರ್ಥ್ಯಕ್ಕಾಗಿ ಹೆಕ್ಸಾಗನ್ ಪ್ರೊಸೆಸರ್‌ ಹೊಂದಿದೆ. ಇದಲ್ಲದೆ ಈ ಪ್ರೊಸೆಸರ್‌ 4nm ಪ್ರೊಸೆಸ್‌ ಟೆಕ್ನಾಲಜಿಯನ್ನು ಆಧರಿಸಿದೆ. ಈ ಮಾದರಿಯ ಪ್ರೊಸೆಸ್‌ ಅನ್ನು ಆಪಲ್‌ನ A16 ಬಯೋನಿಕ್ ಚಿಪ್ ಕೂಡ ಒಳಗೊಂಡಿದೆ. ಇದರಲ್ಲಿ AI ಯೂನಿಟ್‌ ಮಲ್ಟಿ-ಲ್ಯಾಂಗ್ವೇಜ್‌ ಟ್ರಾನ್ಸ್‌ಲೇಶನ್‌ ಮತ್ತು ಸುಧಾರಿತ AI ಕ್ಯಾಮೆರಾ ಫೀಚರ್ಸ್‌ ಹೊಂದಿದೆ. ಇದಲ್ಲದೆ ಹೊಸ ಹೆಕ್ಸಾಗನ್ ಪ್ರೊಸೆಸರ್ 4.35x ವರೆಗೆ ಹೆಚ್ಚಿದ AI ಕಾರ್ಯಕ್ಷಮತೆಯನ್ನು ನೀಡಲಿದೆ.

ಸ್ನಾಪ್‌ಡ್ರಾಗನ್

ಇನ್ನು ಈ ಸ್ನಾಪ್‌ಡ್ರಾಗನ್ INT4 ಅನ್ನು ಬೆಂಬಲಿಸುವ ಮೊದಲ ಕ್ವಾಲ್ಕಾಮ್‌ ಮೊಬೈಲ್‌ ಚಿಪ್‌ ಆಗಿದೆ. ಇದರಲ್ಲಿ ನಿರಂತರ AI ಇನ್ಫೆರೆನ್ಸಿಂಗ್‌ ಗಾಗಿ 60% ಕಾರ್ಯಕ್ಷಮತೆ ಅಪ್ಡೇಟ್‌ ಹೊಂದಿದೆ. ಅಲ್ಲದೆ ಇತ್ತೀಚಿನ ಕ್ವಾಲ್ಕಾಮ್ ಸೆನ್ಸಿಂಗ್ ಹಬ್ ಡ್ಯುಯಲ್ AI ಪ್ರೊಸೆಸರ್‌ಗಳನ್ನು ಒಳಗೊಂಡಿದೆ ಎನ್ನಲಾಗಿದೆ. ಇದು ಫೋಟೋಗ್ರಾಫರ್‌ಗಳಿಗಾಗಿ ಸ್ನಾಪ್‌ಡ್ರಾಗನ್ ಸೈಟ್ ಅಪ್ಡೇಟ್‌ ಅನ್ನು ಕೂಡ ಹೊಂದಿದೆ. ಜೊತೆಗೆ ರಿಯಲ್‌ ಟೈಂನಲ್ಲಿ ಸೆಮ್ಯಾಂಟಿಕ್ ವಿಭಾಗವನ್ನು ನಿರ್ವಹಿಸುವುದಕ್ಕಾಗಿ ಕಾಗ್ನಿಟಿವ್ ISP ಫೀಚರ್ಸ್‌ ಅನ್ನು ನೀಡಲಾಗಿದೆ.

ನೆಟ್‌ವರ್ಕ್

ಇದರಿಂದ AI ನ್ಯೂರಲ್ ನೆಟ್‌ವರ್ಕ್ ಬಳಸಿಕೊಂಡು, ಕ್ಯಾಮೆರಾವು ಫೇಸ್‌ಗಳಲ್ಲಿರುವ ವ್ಯತ್ಯಾಸವನ್ನು ಗುರುತಿಸಲಿದೆ. ಫೇಸ್‌ ಫೀಚರ್ಸ್‌ಗಳಾದ ಕೂದಲು, ಬಟ್ಟೆ ಮತ್ತು ವೃತ್ತಿಪರ ಇಮೇಜ್ ಟ್ಯೂನಿಂಗ್‌ಗಾಗಿ ಸ್ಕೈ ಅನ್ನು ಸಹ ಗುರುತಿಸುತ್ತದೆ. ಇದಲ್ಲದೆ ಈ ಪ್ರೊಸೆಸರ್‌ 200 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್‌ ISOCELL HP3 ಸೆನ್ಸಾರ್‌ ಮತ್ತು ಸೋನಿಯ ಹೊಸ HDR ಟೆಕ್ನಾಲಜಿಯನ್ನು ಆಧರಿಸಿದ ಸೆನ್ಸಾರ್‌ಗಳನ್ನು ಬೆಂಬಲಿಸಲಿದೆ. ಇದು ಕ್ವಾಲ್ಕಾಮ್ AV1 ವೀಡಿಯೊ ಕೊಡೆಕ್ ಅನ್ನು ಸಹ ಆಕ್ಟಿವ್‌ ಮಾಡಲಿದೆ.

ಪ್ರೊಸೆಸರ್‌ನಲ್ಲಿ

ಈ ಪ್ರೊಸೆಸರ್‌ನಲ್ಲಿ ಗೇಮಿಂಗ್‌ಗಾಗಿ, HDR ವಿಶ್ಯುಯಲ್‌ಗಳ ಮೂಲಕ ರಿಯಲ್‌ ಟೈಂ ಹಾರ್ಡ್‌ವೇರ್-ವೇಗವರ್ಧಿತ ರೇ ಟ್ರೇಸಿಂಗ್ ಅನ್ನು ಒಳಗೊಂಡಿದೆ. ಇದು ಆಂಡ್ರೆನೊ GPU 45%ಹೆಚ್ಚಿನ ಪವರ್‌ ಫುಲ್‌ ಆಗಿದೆ. ಇದರ ಮೊಬೈಲ್ ಪ್ಲಾಟ್‌ಫಾರ್ಮ್ ಅನ್ರಿಯಲ್ ಎಂಜಿನ್ 5 ಮೆಟಾಹ್ಯೂಮನ್ಸ್ ಫ್ರೇಮ್‌ವರ್ಕ್ ಅನ್ನು ಬೆಂಬಲಿಸುತ್ತದೆ ಎನ್ನಲಾಗಿದೆ. ಇದು ಗೇಮರುಗಳಿಗಾಗಿ ತಮ್ಮ ಆಟಗಳಲ್ಲಿ ಫೋಟೋರಿಯಾಲಿಸ್ಟಿಕ್ ಮಾನವ ಪಾತ್ರಗಳನ್ನು ಅನುಭವಿಸಲು ಅನುವು ಮಾಡಿಕೊಡಲಿದೆ ಎಂದು ಹೇಳಲಾಗಿದೆ.

ಸ್ನಾಪ್‌ಡ್ರಾಗನ್‌

ಇದರೊಂದಿಗೆ ಈ ಸ್ನಾಪ್‌ಡ್ರಾಗನ್‌ ಫಾಸ್ಟ್‌ ಕನೆಕ್ಟ್‌ 7800 ಸಿಸ್ಟಮ್‌ನೊಂದಿಗೆ Wi-Fi 7 ಅನ್ನು ಪಡದುಕೊಂಡಿದೆ. ಇದು ಕಳೆದ ವರ್ಷ ಸ್ನಾಪ್‌ಡ್ರಾಗನ್‌ 8 Gen 1 SoC ಬಳಸಿದ ಫಾಸ್ಟ್‌ ಕನೆಕ್ಟ್‌ 6900 ಗಿಂತ ಅಪ್‌ಗ್ರೇಡ್ ಆಗಿದೆ. ಇದರಲ್ಲಿ ಬ್ಲೂಟೂತ್ v5.3 ಬೆಂಬಲವನ್ನು ಸಹ ಪಡೆದಿದೆ. ಇದು ಸ್ನಾಪ್‌ಡ್ರಾಗನ್ X70 5G ಮೋಡೆಮ್ ಅನ್ನು ಒಳಗೊಂಡಿದೆ. ಜೊತೆಗೆ ಇದು 5G+5G/4G ಡ್ಯುಯಲ್-ಸಿಮ್ ಡ್ಯುಯಲ್-ಆಕ್ಟಿವ್ ಬೆಂಬಲವನ್ನು ಬೆಂಬಲಿಸುವ ಮೊದಲ ಸ್ನಾಪ್‌ಡ್ರಾಗನ್ ಪ್ಲಾಟ್‌ಫಾರ್ಮ್ ಆಗಿದೆ. ಇದರಿಂದ ಎರಡು 5G ಸಿಮ್‌ಗಳ ಬಳಕೆಯನ್ನು ಏಕಕಾಲದಲ್ಲಿ ಸಕ್ರಿಯಗೊಳಿಸಲಿದೆ ಎನ್ನಲಾಗಿದೆ.

Best Mobiles in India

English summary
Qualcomm Snapdragon 8 Gen 2 SoC With INT4 Launched

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X