ಹೊಸ ವರ್ಷಕ್ಕೆ ರಿಯಲ್‌ಮಿ ಬಿಗ್‌ ಸೇಲ್‌..! ಅತ್ಯಾಕರ್ಷಕ ಆಫರ್ಸ್‌..!

By Gizbot Bureau
|

ಚೈನಾ ಸ್ಮಾರ್ಟ್‌ಫೋನ್ ಬ್ರಾಂಡ್ ರಿಯಲ್‌ಮಿ ಹೊಸ ವರ್ಷದ ಪ್ರಯುಕ್ತ ರಿಯಲ್‌ಮಿ 2020 ಎಂಬ ನಾಲ್ಕು ದಿನಗಳ ವಿಶೇಷ ಮಾರಾಟವನ್ನು ಪ್ರಾರಂಭಿಸಿದೆ. ಜನವರಿ 2 ರಿಂದ ಆರಂಭವಾಗಿರುವ ಮಾರಾಟ ಜನವರಿ 5 ರಂದು ಅಂತ್ಯವಾಗಲಿದ್ದು, ವಿಶೇಷ ಮಾರಾಟದಲ್ಲಿ ಗ್ರಾಹಕರಿಗೆ ಹೆಚ್ಚುವರಿ ರಿಯಾಯಿತಿ ದೊರೆಯುತ್ತಿದೆ. ಮತ್ತು ರಿಯಲ್‌ಮಿ ಬ್ರಾಂಡ್ ಸ್ಮಾರ್ಟ್‌ಫೋನ್‌ಗಳ ಮೇಲೆ ನೋ ಕಾಸ್ಟ್ ಇಎಂಐಗಳನ್ನು ಕೂಡ ಕಂಪನಿ ನೀಡುತ್ತಿದೆ. ನ್ಯೂ ಇಯರ್‌ ಸೇಲ್‌ನ ಒಂದಿಷ್ಟು ಆಫರ್‌ ಇಲ್ಲಿದೆ ನೋಡಿ.

ರಿಯಲ್‌ಮಿ 3 ಪ್ರೊ: 3,000 ರೂ. ರಿಯಾಯಿತಿ

ರಿಯಲ್‌ಮಿ 3 ಪ್ರೊ: 3,000 ರೂ. ರಿಯಾಯಿತಿ

4GB RAM ಮತ್ತು 64GB ಆಂತರಿಕ ಮೆಮೊರಿ ಹೊಂದಿರುವ ರಿಯಲ್‌ಮಿ 3 ಪ್ರೊನ ಮೂಲ ಆವೃತ್ತಿ 3,000 ರೂ. ರಿಯಾಯಿತಿಯಲ್ಲಿ ಸಿಗುತ್ತಿದೆ. ಅಂದರೆ, 9,999 ರೂ.ಗಳಿಗೆ ಗ್ರಾಹಕರ ಕೈ ಸೇರುತ್ತದೆ. ಇನ್ನು, 6GB RAM ಮತ್ತು 64GB ರೂಪಾಂತರ 11,999 ರೂ.ಗಳಿಗೆ ಮತ್ತು 6GB RAM ಮತ್ತು 128GB ರೂಪಾಂತರ 12,999 ರೂ.ಗಳಿಗೆ ಲಭ್ಯವಿದೆ.

ರಿಯಲ್‌ಮಿ ಎಕ್ಸ್: 2,000 ರೂ. ರಿಯಾಯಿತಿ

ರಿಯಲ್‌ಮಿ ಎಕ್ಸ್‌ನ 4GB + 128GB ರೂಪಾಂತರ 14,999 ರೂ.ಗಳಿಗೆ ಮತ್ತು 8GB + 128GB ರೂಪಾಂತರ 17,999 ರೂ.ಗಳಿಗೆ ಮಾರಾಟವಾಗುತ್ತಿದೆ. ಪ್ರತಿ ಆವೃತ್ತಿಯ ಮೇಲೆ ತಾತ್ಕಾಲಿಕವಾಗಿ 2,000 ರೂ. ಬೆಲೆ ಕಡಿತಗೊಳಿಸಲಾಗಿದೆ.

ರಿಯಲ್‌ಮಿ 3i: 2,000 ರೂ. ರಿಯಾಯಿತಿ

ರಿಯಲ್‌ಮಿ 3i: 2,000 ರೂ. ರಿಯಾಯಿತಿ

ರಿಯಲ್‌ಮಿ 3i ಸ್ಮಾರ್ಟ್‌ಫೋನ್‌ನ ಎರಡೂ ಆವೃತ್ತಿಗಳು 2,000 ರೂ. ರಿಯಾಯಿತಿಯನ್ನು ಹೊಂದಿವೆ. 3GB RAM ಮತ್ತು 32GB ಆವೃತ್ತಿ 6,999 ರೂ.ಗಳಿಗೆ ಮತ್ತು 4GB RAM ಮತ್ತು 64GB ಆವೃತ್ತಿ 7,999 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ.

ರಿಯಲ್‌ಮಿ 5 ಪ್ರೊ: 1,000 ರೂ. ಡಿಸ್ಕೌಂಟ್‌

ರಿಯಲ್‌ಮಿ 5 ಪ್ರೊ: 1,000 ರೂ. ಡಿಸ್ಕೌಂಟ್‌

ರಿಯಲ್‌ಮಿ 5 ಪ್ರೊ ಮೂರು ಆವೃತ್ತಿಗಳಲ್ಲಿ ಬರುತ್ತಿದ್ದು, ಪ್ರತಿ ಆವೃತ್ತಿಯು 1,000 ರೂ.ಗಳ ರಿಯಾಯಿತಿಯಲ್ಲಿ ಮಾರಾಟವಾಗುತ್ತಿದೆ. 4GB + 64GB ಆವೃತ್ತಿ 12,999 ರೂ.ಗಳಿಗೆ, 6GB + 64GB ರೂಪಾಂತರ 13,999 ರೂ.ಗಳಿಗೆ ಹಾಗೂ 8GB + 128GB ಆವೃತ್ತಿ 15,999 ರೂ.ಗಳಿಗೆ ಮಾರಾಟವಾಗುತ್ತಿದೆ.

ರಿಯಲ್‌ಮಿ C2: 500 ರೂ. ಆಫ್

ರಿಯಲ್‌ಮಿ C2 ಎರಡು ಆವೃತ್ತಿಗಳಲ್ಲಿ ಲಭ್ಯವಿದೆ. ಎರಡು ಆವೃತ್ತಿಗಳು ಕೂಡ 500 ರೂ. ಬೆಲೆ ಕಡಿತ ಹೊಂದಿವೆ. 2GB RAM ಮತ್ತು 32GB ಆವೃತ್ತಿಯು 5,999 ರೂ.ಗಳಿಗೆ ಮತ್ತು 3GB RAM ಮತ್ತು 32GB ರೂಪಾಂತರ 6,999 ರೂ.ಗಳಿಗೆ ಗ್ರಾಹಕರ ಕೈಗೆ ಸಿಗುತ್ತಿದೆ.

Most Read Articles
Best Mobiles in India

Read more about:
English summary
Realme 2020 Sale: Offers Up To Rs. 3,000 Off On Realme X, Realme 3 Pro

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X