Just In
Don't Miss
- Movies
ಇನ್ಸ್ಟಾಗ್ರಾಂ ಖಾತೆಯ ಎಲ್ಲಾ ಪೋಸ್ಟ್ ಡಿಲೀಟ್ ಮಾಡಿದ ಖ್ಯಾತ ನಿರ್ದೇಶಕ
- News
ರಫೇಲ್ ಒಪ್ಪಂದದಲ್ಲಿ ಭ್ರಷ್ಟಾಚಾರ ಆರೋಪ: 2 ವಾರಗಳಲ್ಲಿ ಹೊಸ ಅರ್ಜಿ ವಿಚಾರಣೆ
- Automobiles
ಹೊಸ ನವೀಕರಣಗಳೊಂದಿಗೆ ಡೀಲರ್ ಬಳಿ ಕಾಣಿಸಿಕೊಂಡ ಟಾಟಾ ನೆಕ್ಸಾನ್
- Finance
ಷೇರುಪೇಟೆಯಲ್ಲಿ ಕರಡಿ ಕುಣಿತ: ಸೆನ್ಸೆಕ್ಸ್ 1,700 ಪಾಯಿಂಟ್ಸ್ ಕುಸಿತ
- Sports
ಐಪಿಎಲ್ 2021: ಮತ್ತೆ ಅಬ್ಬರಿಸಲು ಸಿದ್ಧ ಎಂದು ಘೋಷಿಸಿದ ದೇವದತ್ ಪಡಿಕ್ಕಲ್
- Lifestyle
ರಂಜಾನ್ 2021: ದಿನಾಂಕ, ಸೆಹ್ರಿ ಹಾಗೂ ಇಫ್ತಾರ್ ಕೂಟದ ಸಮಯಗಳು ಇಲ್ಲಿವೆ
- Education
NCL Recruitment 2021: 49 ಮೆಡಿಕಲ್ ಸ್ಪೆಷಲಿಸ್ಟ್ ಮತ್ತು ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಗ್ಗದ ಬೆಲೆಯಲ್ಲಿ ರಿಯಲ್‌ಮಿ C20, ರಿಯಲ್‌ಮಿ C21, ರಿಯಲ್‌ಮಿ C25 ಫೋನ್ ಲಾಂಚ್!
ಜನಪ್ರಿಯ ಮೊಬೈಲ್ ಕಂಪನಿಗಳಲ್ಲಿ ಒಂದಾದ ರಿಯಲ್‌ಮಿ ಸಂಸ್ಥೆಯು ಈಗಾಗಲೇ ಅಗ್ಗದ ಪ್ರೈಸ್‌ಟ್ಯಾಗ್‌ನಲ್ಲಿ ಹಲವು ಸ್ಮಾರ್ಟ್‌ಫೋನ್ ಸರಣಿಗಳನ್ನು ಪರಿಚಯಿಸಿದೆ. ಅವುಗಳಲ್ಲಿ ರಿಯಲ್‌ಮಿ C ಸ್ಮಾರ್ಟ್‌ಫೋನ್ ಸರಣಿಯು ಬಜೆಟ್ ದರದ ಸ್ಮಾರ್ಟ್‌ಫೋನ್‌ಗಳ ಮೂಲಕ ಹೆಚ್ಚು ಗುರುತಿಸಿಕೊಂಡಿದೆ. ಇದೀಗ ರಿಯಲ್‌ಮಿ ಸಂಸ್ಥೆಯು C ಸರಣಿಯಲ್ಲಿ ಹೊಸದಾಗಿ ಮೂರು ಸ್ಮಾರ್ಟ್‌ಫೋನ್ ಮಾಡೆಲ್‌ಗಳನ್ನು ಬಿಡುಗಡೆ ಮಾಡಿದ್ದು, ಅವುಗಳು ಕ್ರಮವಾಗಿ ರಿಯಲ್‌ಮಿ C20, ರಿಯಲ್‌ಮಿ C21, ಮತ್ತು ರಿಯಲ್‌ಮಿ C25 ಆಗಿವೆ.

ಹೌದು, ರಿಯಲ್‌ಮಿ ಕಂಪನಿಯು ನೂತನವಾಗಿ ರಿಯಲ್‌ಮಿ C20, ರಿಯಲ್‌ಮಿ C21, ಮತ್ತು ರಿಯಲ್‌ಮಿ C25 ಸ್ಮಾರ್ಟ್‌ಫೋನ್‌ಗಳನ್ನು ಭಾರತದ ಮಾರುಕಟ್ಟೆಗೆ ಲಾಂಚ್ ಮಾಡಿದೆ. ಹೊಸದಾಗಿ ಬಿಡುಗಡೆ ಆಗಿರುವ ಈ ಮೂರು ಮಾಡೆಲ್‌ಗಳು ಅಗ್ಗದ ಪ್ರೈಸ್ ಟ್ಯಾಗ್ ಅನ್ನು ಪಡೆದಿವೆ. ಹಾಗೆಯೇ ಈ ಮೂರು ಸ್ಮಾರ್ಟ್‌ಫೋನ್‌ಗಳ ಡಿಸ್‌ಪ್ಲೇಯು 20:9 ಅನುಪಾತವನ್ನು ಹೊಂದಿದ್ದು, ಆಕರ್ಷಕ ವಿನ್ಯಾಸ ಒಳಗೊಂಡಿವೆ. ಹಾಗೆಯೇ ಕ್ಯಾಮೆರಾ, ಬ್ಯಾಟರಿ ಹಾಗೂ ಪ್ರೊಸೆಸರ್ ಫೀಚರ್ಸ್‌ಗಳಲ್ಲಿ ಭಿನ್ನತೆಯನ್ನು ಹೊಂದಿವೆ. ಹಾಗಾದರೇ ರಿಯಲ್‌ಮಿ ಕಂಪನಿಯ ರಿಯಲ್‌ಮಿ C20, ರಿಯಲ್‌ಮಿ C21, ಮತ್ತು ರಿಯಲ್‌ಮಿ C25 ಸ್ಮಾರ್ಟ್‌ಫೋನ್‌ಗಳ ಇತರೆ ಫೀಚರ್ಸ್‌ಗಳು ಯಾವುವು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ರಿಯಲ್‌ಮಿ C20 ಡಿಸ್‌ಪ್ಲೇ
ರಿಯಲ್‌ಮಿ C20 ಸ್ಮಾರ್ಟ್‌ಫೋನ್ 720x1,600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.5-ಇಂಚಿನ HD+ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇಯ ಅನುಪಾತವು 20:9 ಆಗಿದೆ. ಅಲ್ಲದೆ ಈ ಡಿಸ್‌ಪ್ಲೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಪ್ರೊಟೆಕ್ಷನ್ ಹೊಂದಿದೆ.

ರಿಯಲ್‌ಮಿ C20 ಪ್ರೊಸೆಸರ್
ರಿಯಲ್‌ಮಿ C20 ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೊ G35 ಆಕ್ಟಾ-ಕೋರ್ ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 10 ಆಧಾರಿತ ರಿಯಲ್‌ಮಿ ಯುಐ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಹಾಗೇಯೇ ಈ ಸ್ಮಾರ್ಟ್‌ಫೋನ್ 2GB + 32GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಮೆಮೊರಿ ಕಾರ್ಡ್ ಮೂಲಕ 256GB ವರೆಗೂ ಬಾಹ್ಯ ಸಂಗ್ರಹ ಸಾಮರ್ಥ್ಯ ವಿಸ್ತರಣೆ ಮಾಡಿಕೊಳ್ಳುವುದಕ್ಕೆ ಅವಕಾಶವನ್ನು ಸಹ ನೀಡಲಾಗಿದೆ.

ರಿಯಲ್‌ಮಿ C20 ಕ್ಯಾಮೆರಾ
ರಿಯಲ್‌ಮಿ C20 ಸ್ಮಾರ್ಟ್‌ಫೋನ್ ಸಿಂಗಲ್ ರಿಯಲ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಅದು 8 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದ್ದು, f/2.0 ಅಪಾರ್ಚರ್ ಜೊತೆಗೆ LED ಆಯ್ಕೆಯನ್ನು ಹೊಂದಿದೆ. ಇದಲ್ಲದೆ ಸೆಲ್ಫಿಗಾಗಿ f/2.2 ಅಪಾರ್ಚರ್ ನೊಂದಿಗೆ 5 ಮೆಗಾ ಪಿಕ್ಸೆಲ್ ಸಾಮರ್ಥ್ಯದ ಕ್ಯಾಮೆರಾವನ್ನು ಸಹ ನೀಡಲಾಗಿದೆ.

ರಿಯಲ್‌ಮಿ C20 ಬ್ಯಾಟರಿ ಮತ್ತು ಇತರೆ
ರಿಯಲ್‌ಮಿ C20 ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್ ಅನ್ನು ಹೊಂದಿದ್ದು, ಇದು ಉತ್ತಮ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 4 ಜಿ ಎಲ್ ಟಿಇ, ವೈ-ಫೈ 802.11 ಬಿ / ಜಿ / ಎನ್, ಬ್ಲೂಟೂತ್ ವಿ 5.0, ಜಿಪಿಎಸ್ / ಎ-ಜಿಪಿಎಸ್, ಮೈಕ್ರೋ-ಯುಎಸ್ಬಿ ಮತ್ತು 3.5 ಎಂಎಂ ಹೆಡ್ಫೋನ್ ಜ್ಯಾಕ್ ಸೇರಿವೆ.

ರಿಯಲ್‌ಮಿ C21 ಡಿಸ್‌ಪ್ಲೇ
ರಿಯಲ್‌ಮಿ C21 ಸ್ಮಾರ್ಟ್‌ಫೋನ್ 720x1,600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.5-ಇಂಚಿನ HD+ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇಯ ಅನುಪಾತವು 20:9 ಆಗಿದೆ. ಅಲ್ಲದೆ ಈ ಡಿಸ್‌ಪ್ಲೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಪ್ರೊಟೆಕ್ಷನ್ ಹೊಂದಿದೆ.

ರಿಯಲ್‌ಮಿ C21 ಪ್ರೊಸೆಸರ್
ರಿಯಲ್‌ಮಿ C21 ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೊ G35 ಆಕ್ಟಾ-ಕೋರ್ ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 10 ಆಧಾರಿತ ರಿಯಲ್‌ಮಿ ಯುಐ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಹಾಗೇಯೇ ಈ ಸ್ಮಾರ್ಟ್‌ಫೋನ್ 3GB RAM + 32GB ಮತ್ತು 4GB RAM + 64GB ಆಂತರಿಕ ಸಂಗ್ರಹ ಸಾಮರ್ಥ್ಯದ ವೇರಿಯಂಟ್ ಆಯ್ಕೆಗಳನ್ನು ಹೊಂದಿದೆ. ಮೆಮೊರಿ ಕಾರ್ಡ್ ಮೂಲಕ ಬಾಹ್ಯ ಸಂಗ್ರಹ ಸಾಮರ್ಥ್ಯ ವಿಸ್ತರಣೆ ಮಾಡಿಕೊಳ್ಳುವುದಕ್ಕೆ ಅವಕಾಶವನ್ನು ಸಹ ನೀಡಲಾಗಿದೆ.

ರಿಯಲ್‌ಮಿ C21 ಕ್ಯಾಮೆರಾ
ರಿಯಲ್‌ಮಿ C21 ಸ್ಮಾರ್ಟ್‌ಫೋನ್ ಟ್ರಿಪಲ್ ರಿಯಲ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಮುಖ್ಯ ಕ್ಯಾಮೆರಾವು 13 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದ್ದು, ಸೆಕೆಂಡರಿ ಕ್ಯಾಮೆರಾವು 2 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಇನ್ನು ಮೂರನೇ ಕ್ಯಾಮೆರಾವು ಸಹ 2 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಹಾಗೆಯೇ 5 ಮೆಗಾ ಪಿಕ್ಸಲ್ ಸೆನ್ಸಾರ್ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ.

ರಿಯಲ್‌ಮಿ C21 ಬ್ಯಾಟರಿ ಮತ್ತು ಇತರೆ
ರಿಯಲ್‌ಮಿ C21 ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್ ಅನ್ನು ಹೊಂದಿದ್ದು, ಇದು ಉತ್ತಮ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 4 ಜಿ ಎಲ್ ಟಿಇ, ವೈ-ಫೈ 802.11 ಬಿ / ಜಿ / ಎನ್, ಬ್ಲೂಟೂತ್ ವಿ 5.0, ಜಿಪಿಎಸ್ / ಎ-ಜಿಪಿಎಸ್, ಮೈಕ್ರೋ-ಯುಎಸ್ಬಿ ಮತ್ತು 3.5 ಎಂಎಂ ಹೆಡ್ಫೋನ್ ಜ್ಯಾಕ್ ಸೇರಿವೆ.

ರಿಯಲ್‌ಮಿ C25 ಡಿಸ್‌ಪ್ಲೇ
ರಿಯಲ್‌ಮಿ C25 ಸ್ಮಾರ್ಟ್‌ಫೋನ್ 720x1,600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.5-ಇಂಚಿನ HD+ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇಯ ಅನುಪಾತವು 20:9 ಆಗಿದೆ. ಅಲ್ಲದೆ ಈ ಡಿಸ್‌ಪ್ಲೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಪ್ರೊಟೆಕ್ಷನ್ ಹೊಂದಿದೆ.

ರಿಯಲ್‌ಮಿ C25 ಪ್ರೊಸೆಸರ್
ರಿಯಲ್‌ಮಿ C25 ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೊ G70 ಆಕ್ಟಾ-ಕೋರ್ ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 11 ಆಧಾರಿತ ರಿಯಲ್‌ಮಿ ಯುಐ 2.0 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಹಾಗೇಯೇ ಈ ಸ್ಮಾರ್ಟ್‌ಫೋನ್ 4GB RAM + 64GB ಮತ್ತು 4GB RAM + 128GB ಆಂತರಿಕ ಸಂಗ್ರಹ ಸಾಮರ್ಥ್ಯದ ವೇರಿಯಂಟ್ ಆಯ್ಕೆಗಳನ್ನು ಹೊಂದಿದೆ. ಮೆಮೊರಿ ಕಾರ್ಡ್ ಮೂಲಕ ಬಾಹ್ಯ ಸಂಗ್ರಹ ಸಾಮರ್ಥ್ಯ ವಿಸ್ತರಣೆ ಮಾಡಿಕೊಳ್ಳುವುದಕ್ಕೆ ಅವಕಾಶವನ್ನು ಸಹ ನೀಡಲಾಗಿದೆ.

ರಿಯಲ್‌ಮಿ C25 ಕ್ಯಾಮೆರಾ
ರಿಯಲ್‌ಮಿ C25 ಸ್ಮಾರ್ಟ್‌ಫೋನ್ ಟ್ರಿಪಲ್ ರಿಯಲ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಮುಖ್ಯ ಕ್ಯಾಮೆರಾವು 13 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದ್ದು, ಸೆಕೆಂಡರಿ ಕ್ಯಾಮೆರಾವು 2 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಇನ್ನು ಮೂರನೇ ಕ್ಯಾಮೆರಾವು ಸಹ 2 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಹಾಗೆಯೇ 5 ಮೆಗಾ ಪಿಕ್ಸಲ್ ಸೆನ್ಸಾರ್ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ.

ರಿಯಲ್‌ಮಿ C25 ಬ್ಯಾಟರಿ ಮತ್ತು ಇತರೆ
ರಿಯಲ್‌ಮಿ C25 ಸ್ಮಾರ್ಟ್‌ಫೋನ್ 6,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್ ಅನ್ನು ಹೊಂದಿದ್ದು, ಇದು 18W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 4 ಜಿ ಎಲ್ ಟಿಇ, ವೈ-ಎಫ್ಐ 802.11 ಎಸಿ, ಬ್ಲೂಟೂತ್ ವಿ 5.0, ಜಿಪಿಎಸ್ / ಎ-ಜಿಪಿಎಸ್, ಮೈಕ್ರೋ-ಯುಎಸ್ಬಿ, ಮತ್ತು 3.5 ಎಂಎಂ ಹೆಡ್ಫೋನ್ ಜ್ಯಾಕ್ ಸೇರಿವೆ. ಮಂಡಳಿಯಲ್ಲಿನ ಸಂವೇದಕಗಳಲ್ಲಿ ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್, ಮ್ಯಾಗ್ನೆಟೋಮೀಟರ್ ಮತ್ತು ಸಾಮೀಪ್ಯ ಸಂವೇದಕ ಸೇರಿವೆ. ಫೋನ್ ಹಿಂಭಾಗದಲ್ಲಿ ಫಿಂಗರ್ಪ್ರಿಂಟ್ ಸೆನ್ಸಾರ್ನೊಂದಿಗೆ ಬರುತ್ತದೆ.

ಬೆಲೆ ಮತ್ತು ಲಭ್ಯತೆ
ರಿಯಲ್‌ಮಿ C20 ಸ್ಮಾರ್ಟ್‌ಫೋನ್ 2GB RAM + 32GB ಸ್ಟೋರೇಜ್ ವೇರಿಯಂಟ್ ಬೆಲೆಯು 6,999ರೂ. ಆಗಿದೆ. ಆದರೆ ಆರಂಭಿಕ ಕೊಡುಗೆಯಾಗಿ ಮೊದಲ ಒಂದು ಬಿಲಿಯನ್ ಗ್ರಾಹಕರುಗೆ 6,799ರೂ. ದರದಲ್ಲಿ ಲಭ್ಯವಾಗಲಿದೆ. ಇನ್ನು ಈ ಫೋನ್ ಕೂಲ್ ಬ್ಲೂ ಮತ್ತು ಕೂಲ್ ಗ್ರೇ ಬಣ್ಣಗಳ ಆಯ್ಕೆಯನ್ನು ಪಡೆದಿದೆ. ಅದೇ ರೀತಿ ರಿಯಲ್‌ಮಿ C21 ಸ್ಮಾರ್ಟ್‌ಫೋನ್ 3GB RAM + 32GB ವೇರಿಯಂಟ್ ಬೆಲೆಯು 7,999ರೂ. ಆಗಿದೆ. 4GB RAM + 64GB ವೇರಿಯಂಟ್ ಬೆಲೆಯು 8,999ರೂ. ಆಗಿದೆ. ಇನ್ನು ಈ ಫೋನ್ ಕ್ರಾಸ್ ಬ್ಲೂ ಮತ್ತು ಕ್ರಾಸ್ ಬ್ಲ್ಯಾಕ್ ಬಣ್ಣಗಳ ಆಯ್ಕೆಯನ್ನು ಪಡೆದಿದೆ. ಹಾಗೆಯೇ ರಿಯಲ್‌ಮಿ C25 ಸ್ಮಾರ್ಟ್‌ಫೋನ್ 4GB RAM + 64GB ವೇರಿಯಂಟ್ ದರವು 9,999ರೂ. ಆಗಿದ್ದು, 4GB RAM + 128GB ವೇರಿಯಂಟ್ ಬೆಲೆಯು 10,999ರೂ. ಆಗಿದೆ.
-
54,535
-
1,19,900
-
54,999
-
86,999
-
49,975
-
49,990
-
20,999
-
1,04,999
-
44,999
-
64,999
-
20,699
-
49,999
-
11,499
-
54,999
-
7,999
-
8,980
-
17,091
-
10,999
-
34,999
-
39,600
-
25,750
-
33,590
-
27,760
-
44,425
-
13,780
-
1,25,000
-
45,990
-
1,35,000
-
82,999
-
17,999