ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ ರಿಯಲ್‌ಮಿ ಪ್ರಾಡಕ್ಟ್‌ಗಳಿಗೆ ಬಿಗ್‌ ಡಿಸ್ಕೌಂಟ್‌!

|

ಆನ್‌ಲೈನ್‌ ಶಾಪಿಂಗ್‌ ಪ್ರಿಯರ ನೆಚ್ಚಿನ ತಾಣ ಫ್ಲಿಪ್‌ಕಾರ್ಟ್‌ ಮತ್ತೊಮ್ಮೆ ಬಿಗ್‌ಬಿಲಿಯನ್‌ ಡೇಸ್‌ ಸೇಲ್‌ ಅನ್ನು ಹೊತ್ತು ತಂದಿದೆ. ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಸೇರಿದಂತೆ ಹಲವು ಮಾದರಿಯ ಗ್ಯಾಜೆಟ್ಸ್‌ಗಳ ಮೇಲೆ ರಿಯಾಯಿತಿ ನೀಡುವುದಾಗಿ ಫ್ಲಿಪ್‌ಕಾರ್ಟ್‌ ಘೋಷಿಸಿದೆ. ಇದಕ್ಕಾಗಿಯೇ ಫ್ಲಿಪ್‌ಕಾರ್ಟ್‌ನ ವೆಬ್‌ಸೈಟ್‌ನಲ್ಲಿ ಮೈಕ್ರೊಸೈಟ್ ಅನ್ನು ಕ್ರಿಯೆಟ್‌ ಮಾಡಲಾಗಿದೆ. ಇನ್ನು ಈ ಸೇಲ್‌ನಲ್ಲಿ ಹಲವು ಕಂಪೆನಿಗಳ ಹೊಸ ಪ್ರಾಡಕ್ಟ್‌ಗಳು ಲಾಂಚ್‌ ಆಗಲಿದ್ದು, ರಿಯಲ್‌ಮಿ ಕಂಪೆನಿ ಕೂಡ ಹೊಸ ಪ್ರಾಡಕ್ಟ್‌ಗಳ ಲಾಂಚ್‌ ಮಾಡುವುದಕ್ಕೆ ಸಿದ್ದತೆ ನಡೆಸಿದೆ.

ಫ್ಲಿಪ್‌ಕಾರ್ಟ್

ಹೌದು, ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ 2021 ನಲ್ಲಿ ರಿಯಲ್‌ಮಿ ಸಂಸ್ಥೆ ಹೊಸ ಪ್ರಾಡಕ್ಟ್‌ಗಳನ್ನು ಲಾಂಚ್‌ ಮಾಡಲು ಸಿದ್ಧತೆ ನಡೆಸಿದೆ. ಇದಲ್ಲದೆ ರಿಯಲ್‌ಮಿ ಸಂಸ್ಥೆ ಹಲವು ರಿಯಾಯಿತಿಗಳು ಮತ್ತು ಆಫರ್‌ ನೀಡಲಿದೆ. ಇದಲ್ಲದೆ ಹೊಸ ವಲಯಕ್ಕೂ ಎಂಟ್ರಿ ನೀಡುವುದಕ್ಕೂ ವೇದಿಕೆ ಸಿದ್ಧಪಡಿಸಿದೆ. ಹಾಗಾದ್ರೆ ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ ರಿಯಲ್‌ಮಿ ಕಂಪೆನಿಯ ಯಾವೆಲ್ಲಾ ಪ್ರಾಡಕ್ಟ್‌ ಲಾಂಚ್‌ ಆಗಲಿದೆ? ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಫ್ಲಿಪ್‌ಕಾರ್ಟ್‌

ರಿಯಲ್‌ಮಿ ಕಂಪೆನಿ ಫ್ಲಿಪ್‌ಕಾರ್ಟ್‌ ಬಿಗ್ ಬಿಲಿಯನ್ ಡೇಸ್ ಸೇಲ್ 2021 ನಲ್ಲಿ ತನ್ನ ಮೊದಲ ಸ್ಟ್ರೀಮಿಂಗ್‌ ಡಿವೈಸ್‌ ರಿಯಲ್‌ಮಿ ಟಿವಿ ಸ್ಟಿಕ್ ಅನ್ನು ಲಾಂಚ್‌ ಮಾಡುವ ನಿರೀಕ್ಷೆ ಇದೆ. ಇದು 4K ಗೂಗಲ್ ಟಿವಿ ಸ್ಟಾಕ್ ಆಗಿದ್ದು, ರಿಯಲ್‌ಮಿ ಟಿವಿ ಸ್ಟಿಕ್ ಅಮೆಜಾನ್ ಫೈರ್ ಟಿವಿ ಸ್ಟಿಕ್ 4 ಕೆ ಮತ್ತು ಶಿಯೋಮಿ ಮಿ ಟಿವಿ ಸ್ಟಿಕ್‌ಗೆ ಪ್ರತಿಸ್ಪರ್ಧಿ ಯಾಗಿರಲಿದೆ ಎಂದು ಅಂದಾಜಿಸಲಾಗಿದೆ.

ಫ್ಲಿಪ್‌ಕಾರ್ಟ್‌

ಇದಲ್ಲದೇ, ಫ್ಲಿಪ್‌ಕಾರ್ಟ್‌ ಬಿಗ್ ಬಿಲಿಯನ್ ಡೇಸ್ ಸೇಲ್ 2021 ನಲ್ಲಿ ರಿಯಲ್‌ಮಿ 8i ಮತ್ತು ರಿಯಲ್‌ಮಿ 8s ಸ್ಮಾರ್ಟ್‌ಫೋನ್‌ ಭಾರತದಲ್ಲಿ ಲಾಂಚ್‌ ಮಾಡುವ ನಿರೀಕ್ಷೆ ಇದೆ. ಈ ಎರಡೂ ಸ್ಮಾರ್ಟ್‌ಫೋನ್‌ಗಳು ಬಜೆಟ್‌ ಬೆಲೆಯಲ್ಲಿ ಬರಲಿದೆ ಎಂದು ಊಹಿಸಲಾಗಿದೆ. ಇದರಲ್ಲಿ ಮತ್ತೊಂದು ಮಹತ್ವದ ಸಂಗತಿಯೆಂದರೆ ರಿಯಲ್‌ಮಿ ನಾರ್ಜೊ 50 ಸರಣಿ ಇದೇ ಸೆಪ್ಟೆಂಬರ್ 24 ಕ್ಕೆ ಲಾಂಚ್‌ ಆಗಲಿದೆ. ಇದು ಕೂಡ ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ ಖರೀದಿಗೆ ಬರಲಿದೆ. ಇನ್ನು ರಿಯಲ್‌ಮಿ ಪ್ಯಾಡ್ ಮತ್ತು ರಿಯಲ್‌ಮಿ ಬುಕ್‌ಗಳನ್ನು ಸಹ ಲಾಂಚ್‌ ಮಾಡುವ ನಿರೀಕ್ಷೆ ಇದೆ.

ಫ್ಲಿಪ್‌ಕಾರ್ಟ್‌

ಇದಲ್ಲದೆ ಫ್ಲಿಪ್‌ಕಾರ್ಟ್‌ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳಿಗೆ ಮಾತ್ರವಲ್ಲ ಇಯರ್‌ಫೋನ್‌ಗಳ ಮೇಲೂ ಕೂಡ ಡಿಸ್ಕೌಂಟ್‌ ನೀಡಲಿದೆ. ಇನ್ನು ಈ ಸೇಲ್‌ನಲ್ಲಿ ಲೈಫ್ ನೋಟ್ ಇ ಸೈನಾ ನೆಹ್ವಾಲ್ ಎಡಿಷನ್ ಇಯರ್‌ಫೋನ್‌ಗಳು, ಗೇಮಿಂಗ್ ಲ್ಯಾಪ್‌ಟಾಪ್, ಬೌಲ್ಟ್ ಆಡಿಯೋ ಸೋಲ್ ಪಾಡ್ಸ್ ಇಯರ್‌ಫೋನ್‌ ಮತ್ತು ಫೈರ್-ಬೋಲ್ಟ್ ಮ್ಯಾಕ್ಸ್ ಸ್ಮಾರ್ಟ್‌ವಾಚ್‌ ಡಿವೈಸ್‌ಗಳ ಮೇಲೆ ಬಿಗ್‌ ಡಿಸ್ಕೌಂಟ್‌ ಪಡೆದುಕೊಳ್ಳಬಹುದಾಗಿದೆ.

ಕ್ಯಾಶ್‌ಬ್ಯಾಕ್ ಆಫರ್‌ಗಳು

ಕ್ಯಾಶ್‌ಬ್ಯಾಕ್ ಆಫರ್‌ಗಳು

ಫ್ಲಿಪ್‌ಕಾರ್ಟ್‌ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು, ಎಲೆಕ್ಟ್ರಾನಿಕ್ಸ್, ಟಿವಿಗಳು, ಫ್ಯಾಷನ್ ಮತ್ತು ಇತರೆ ಡಿವೈಸ್‌ಗಳ ಮೇಲೆ ರಿಯಾಯಿತಿ ದೊರೆಯಲಿದೆ. ಇದಕ್ಕೆಂದೆ ಮೀಸಲಾದ ಮೈಕ್ರೊಸೈಟ್ ಅನ್ನು ರಚಿಸಲಾಗಿದೆ. ಈ ಸೇಲ್‌ನಲ್ಲಿ ಹೆಚ್ಚಿನ ಪ್ರಾಡಕ್ಟ್‌ಗಳ ಮೇಲೆ 80% ರಷ್ಟು ರಿಯಾಯಿತಿ ಲಭ್ಯವಿರುವುದನ್ನು ಫ್ಲಿಪ್‌ಕಾರ್ಟ್ ಖಚಿತಪಡಿಸಿದೆ. ಹೆಚ್ಚುವರಿಯಾಗಿ, ಆಕ್ಸಿಸ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಜೊತೆ ಫ್ಲಿಪ್‌ಕಾರ್ಟ್‌ ಪಾಲುದಾರಿಕೆ ಹೊಂದಿದೆ. ಐಸಿಐಸಿಐ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಬಳಸುವ ಗ್ರಾಹಕರು ಇನ್ಸಟಂಟ್‌ ಡಿಸ್ಕೌಂಟ್‌ ಪಡೆಯಲಿದ್ದಾರೆ. ಇದಲ್ಲದೆ, ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರು ತಾವು ಮಾಡುವ ಖರೀದಿಗಳಲ್ಲಿ 5% ಅನಿಯಮಿತ ಕ್ಯಾಶ್‌ಬ್ಯಾಕ್ ಪಡೆಯಬಹುದು. ಫ್ಲಿಪ್‌ಕಾರ್ಟ್ ವಾಲೆಟ್ ಮತ್ತು ಯುಪಿಐ ಪಾವತಿಗಳನ್ನು ಬಳಸುವಾಗ ಪೇಟಿಎಂ ಕ್ಯಾಶ್‌ಬ್ಯಾಕ್ ಅನ್ನು ಸಹ ಪಡೆದುಕೊಳ್ಳಬಹುದಾಗಿದೆ.

Most Read Articles
Best Mobiles in India

English summary
Realme Mobiles Offers and Discounts During Flipkart Big Billion Days Sale 2021.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X