ಭಾರತದಲ್ಲಿ ರಿಯಲ್‌ಮಿ ಪ್ಯಾಡ್‌ X, ರಿಯಲ್‌ಮಿ ವಾಚ್‌ 3, ಬಡ್ಸ್‌ ಏರ್‌ 3 ನಿಯೋ ಬಿಡುಗಡೆ!

|

ರಿಯಲ್‌ಮಿ ಕಂಪೆನಿ ಟೆಕ್‌ ವಲಯದ ಜನಪ್ರಿಯ ಬ್ರ್ಯಾಂಡ್‌ಗಳಲ್ಲಿ ಒಂದೆನಿಸಿಕೊಂಡಿದೆ. ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌, ಸ್ಮಾರ್ಟ್‌ಟಿವಿ, ಇಯರ್‌ಫೋನ್‌ ಸೇರಿದಂತೆ ಅನೇಕ ಗ್ಯಾಜೆಟ್ಸ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದೆ. ತನ್ನ ವೈವಿಧ್ಯಮಯ ಫೀಚರ್ಸ್‌ ಹಾಗೂ ಆಕರ್ಷಕ ಡಿವೈಸ್‌ಗಳಿಗೆ ರಿಯಲ್‌ಮಿ ಕಂಪೆನಿ ಪ್ರಸಿಧ್ಧಿಯನ್ನು ಪಡೆದುಕೊಂಡಿದೆ. ಇದೀಗ ಭಾರತದ ಮಾರುಕಟ್ಟೆಯಲ್ಲಿ ತನ್ನ ಹೊಸ ರಿಯಲ್‌ಮಿ ಪ್ಯಾಡ್‌ X, ಫ್ಲಾಟ್‌ಮಾನಿಟರ್‌, ರಿಯಲ್‌ಮಿ ವಾಚ್‌ 3, ಬಡ್ಸ್‌ ಏರ್‌ 3 ನಿಯೋ, ಬಡ್ಸ್‌ ವಾಯರ್‌ಲೆಸ್‌ 2S ಇಯರ್‌ಫೋನ್ಸ್‌ ಅನ್ನು ಲಾಂಚ್‌ ಮಾಡಿದೆ.

ರಿಯಲ್‌ಮಿ

ಹೌದು, ರಿಯಲ್‌ಮಿ ಕಂಪೆನಿ ಭಾರತದಲ್ಲಿ ಹೊಸ ಟ್ಯಾಬ್‌, ಮಾನಿಟರ್‌, ಇಯರ್‌ಫೋನ್‌, ಸ್ಮಾರ್ಟ್‌ವಾಚ್‌ ಹಾಗೂ ಇಯರ್‌ಬಡ್ಸ್‌ ಅನ್ನು ಪರಿಚಯಿಸಿದೆ. ಈ ಎಲ್ಲಾ ಗ್ಯಾಜೆಟ್ಸ್‌ಗಳು ತಮ್ಮ ವಿಶೇಷವಾದ ಫೀಚರ್ಸ್‌ ಹಾಗೂ ಬೆಲೆಯ ಕಾರಣಕ್ಕೆ ಗಮನಸೆಳೆದಿವೆ. ಇದರಲ್ಲಿ ರಿಯಲ್‌ಮಿ ಪ್ಯಾಡ್‌ X ಟ್ಯಾಬ್‌ 5G ಕನೆಕ್ಟಿವಿಟಿಯನ್ನು ನೀಡುವ ರಿಯಲ್‌ಮಿ ಕಂಪೆನಿಯ ಮೊದಲ ಟ್ಯಾಬ್‌ ಆಗಿದೆ. ಹಾಗೆಯೇ ರಿಯಲ್‌ ಫ್ಲಾಟ್‌ ಮಾನಿಟರ್‌ ಮಲ್ಟಿ ಪೋರ್ಟ್‌ ಆಯ್ಕೆಗಳನ್ನು ನೀಡಲಿದೆ. ಇನ್ನುಳಿದಂತೆ ರಿಯಲ್‌ಮಿ ಕಂಪೆನಿ ಹೊಸದಾಗಿ ಲಾಂಚ್‌ ಮಾಡಿರುವ ಗ್ಯಾಜೆಟ್ಸ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಮುಂದೆ ಓದಿರಿ.

ರಿಯಲ್‌ಮಿ ಪ್ಯಾಡ್‌ X ಫೀಚರ್ಸ್‌

ರಿಯಲ್‌ಮಿ ಪ್ಯಾಡ್‌ X ಫೀಚರ್ಸ್‌

ರಿಯಲ್‌ಮಿ ಪ್ಯಾಡ್‌ X 11 ಇಂಚಿನ WUXGA+ ಫುಲ್‌ ವ್ಯೂ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 450 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಅನ್ನು ಬೆಂಬಲಿಸಲಿದೆ. ಇದು 84.5% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದೆ. ಈ ಟ್ಯಾಬ್‌ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್‌ ಬಲವನ್ನು ಪಡೆದಿದ್ದು, ಆಂಡ್ರಾಯ್ಡ್‌ 12 ಆಧಾರಿತ ರಿಯಲ್‌ಮಿ UI 3.0 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 6GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. ಇದರಲ್ಲಿ ಹೆಚ್ಚುವರಿ ಸ್ಟೋರೇಜ್‌ ಅನ್ನು ವರ್ಚುವಲ್ RAM ಆಗಿ 5GB ವರೆಗೆ ವಿಸ್ತರಿಸುವುದಕ್ಕೆ ಅವಕಾಶವಿದೆ.

ರಿಯಲ್‌ಮಿ ಪ್ಯಾಡ್‌ X

ಇನ್ನು ರಿಯಲ್‌ಮಿ ಪ್ಯಾಡ್‌ X ಸ್ಮಾರ್ಟ್‌ ಟ್ಯಾಬ್‌ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸಿಂಗಲ್‌ ರಿಯರ್‌ ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ 8 ಮೆಗಾಪಿಕ್ಸೆಲ್ ವೈಡ್ ಆಂಗಲ್ ಫ್ರಂಟ್-ಫೇಸಿಂಗ್ ಕ್ಯಾಮೆರಾವನ್ನು ಕೂಡ ನೀಡಲಾಗಿದೆ. ಇನ್ನು ಈ ಪ್ಯಾಡ್‌ 33W ವೇಗದ ಚಾರ್ಜಿಂಗ್‌ಗೆ ಬೆಂಬಲಿಸುವ 8,340mAh ಬ್ಯಾಟರಿ ಬ್ಯಾಕ್‌ಅಪ್‌ ಹೊಂದಿದೆ. ಇದು 1.5 ತಿಂಗಳ ಸ್ಟ್ಯಾಂಡ್‌ಬೈ ಟೈಂ, 11 ಗಂಟೆಗಳ ವೀಡಿಯೊ ಕಾಲ್‌ ಟೈಂ, 19 ಗಂಟೆಗಳ ವೀಡಿಯೊ ಪ್ಲೇಬ್ಯಾಕ್ ಟೈಂ ಮತ್ತು 138 ಗಂಟೆಗಳವರೆಗೆ ಮ್ಯೂಸಿಕ್‌ ಸ್ಟ್ರೀಮಿಂಗ್ ಟೈಂ ನೀಡಲಿದೆ ಎಂದು ರಿಯಲ್‌ಮಿ ಕಂಪೆನಿ ಹೇಳಿಕೊಂಡಿದೆ.

ರಿಯಲ್‌ಮಿ

ಭಾರತದಲ್ಲಿ ರಿಯಲ್‌ಮಿ ಪ್ಯಾಡ್‌ X ಟ್ಯಾಬ್‌ Wi-Fi ಕನೆಕ್ಟಿವಿಟಿ ನೀಡುವ ಬೇಸ್‌ ಮಾಡೆಲ್‌ 4GB + 64GB ಸ್ಟೋರೇಜ್ ಮಾದರಿಯ ಬೆಲೆ 19,999ರೂ ಆಗಿದೆ. ಆದರೆ 5G ಸಾಮರ್ಥ್ಯದ ಮಾದರಿಯ ಬೆಲೆ 25,999ರೂ. ಆಗಿರಲಿದೆ. ಇದಲ್ಲದೆ 5G ಸಂಪರ್ಕವನ್ನು ಬೆಂಬಲಿಸುವ 6GB + 128GB ರೂಪಾಂತರದ ಬೆಲೆ 27,999ರೂ.ಗೆ ನಿಗಧಿಮಾಡಲಾಗಿದೆ. ಇನ್ನು ಈ ಪ್ಯಾಡ್‌ ಫ್ಲಿಪ್‌ಕಾರ್ಟ್, ರಿಯಲ್‌ಮಿ.ಕಾಮ್‌ ಮತ್ತು ಆಫ್‌ಲೈನ್ ರಿಟೇಲ್‌ ಸ್ಟೋರ್‌ಗಳಲ್ಲಿ ಆಗಸ್ಟ್ 1ರಿಂದ ಸೇಲ್‌ ಆಗಲಿದೆ.

ರಿಯಲ್‌ಮಿ ಫ್ಲಾಟ್ ಮಾನಿಟರ್ ಫೀಚರ್ಸ್‌

ರಿಯಲ್‌ಮಿ ಫ್ಲಾಟ್ ಮಾನಿಟರ್ ಫೀಚರ್ಸ್‌

ರಿಯಲ್‌ಮಿ ಫ್ಲಾಟ್ ಮಾನಿಟರ್ 23.8 ಇಂಚಿನ ಫುಲ್‌ ಹೆಚ್‌ಡಿ ಎಲ್ಇಡಿ ಡಿಸ್‌ಪ್ಲೇ ಹೊಂದಿದೆ. ಇದು ಫ್ಯೂಚರಿಸ್ಟಿಕ್ ಡಿಸ್‌ಪ್ಲೇ ಪ್ರೊಫೈಲ್ ಅನ್ನು ನೀಡುತ್ತದೆ ಎಂದು ಹೇಳಲಾಗಿದೆ. ಇನ್ನು ಈ ಮಾನಿಟರ್‌ ಡಿಸ್‌ಪ್ಲೇ 75Hz ಹೆಚ್ಚಿನ ರಿಫ್ರೆಶ್ ರೇಟ್ ಟೆಕ್ನಾಲಜಿಯನ್ನು ಬೆಂಬಲಿಸಲಿದೆ. ಇದು 8ms ರೆಸ್ಪಾನ್ಸ್‌ ಟೈಂ ಅನ್ನು ಹೊಂದಿದ್ದು, ಇದು ವೇಗದ ಮತ್ತು ವಿಳಂಬ-ಮುಕ್ತ ಕಾರ್ಯಕ್ಷಮತೆಯನ್ನು ನೀಡಲಿದೆ. ಅಲ್ಲದೆ ಈ ಫ್ಲಾಟ್‌ ಮಾನಿಟರ್‌ ಮಿಲಿಯನ್ ಬಣ್ಣಗಳನ್ನು ಸಹ ಬೆಂಬಲಿಸುತ್ತದೆ.

ರಿಯಲ್‌ಮಿ

ಇನ್ನು ರಿಯಲ್‌ಮಿ ಫ್ಲಾಟ್‌ ಮಾನಿಟರ್‌ ಮಲ್ಟಿ ಪೋರ್ಟ್‌ ಆಯ್ಕೆಗಳನ್ನು ಹೊಂದಿದೆ. ಇದು HDMI 1.4 ಪೋರ್ಟ್, USB ಟೈಪ್-C ಪೋರ್ಟ್, DC ಪೋರ್ಟ್ ಮತ್ತು VGA ಪೋರ್ಟ್ ಅನ್ನು ಒಳಗೊಂಡಿದೆ. ಇದಲ್ಲದೆ ಈ ಮಾನಿಟರ್‌ ಆಡಿಯೊಗಾಗಿ 3.5mm ಹೆಡ್‌ಫೋನ್ ಜ್ಯಾಕ್ ಅನ್ನು ಹೊಂದಿದೆ. ಸದ್ಯ ರಿಯಲ್‌ಮಿ ಫ್ಲಾಟ್‌ ಮಾಟನಿರ್‌ ಭಾರತದ ಮಾರುಕಟ್ಟೆಯಲ್ಲಿ 18,999ರೂ. ಬೆಲೆಯನ್ನು ಹೊಂದಿದೆ. ಈ ಮಾನಿಟರ್ ಬ್ಲಾಕ್‌ ಕಲರ್‌ ಆಯ್ಕೆಗಳಲ್ಲಿ ಬರಲಿದ್ದು, ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟವಾಗಲಿದೆ. ಸದ್ಯ ಈ ಮಾನಿಟರ್‌ನ ಸೇಲ್‌ ಡೇಟ್‌ ಇನ್ನು ಅಧಿಕೃತವಾಗಿಲ್ಲ.

ರಿಯಲ್‌ಮಿ ವಾಚ್‌ 3 ಫೀಚರ್ಸ್‌

ರಿಯಲ್‌ಮಿ ವಾಚ್‌ 3 ಫೀಚರ್ಸ್‌

ರಿಯಲ್‌ಮಿ ವಾಚ್‌ 3 ಸ್ಮಾರ್ಟ್‌ವಾಚ್‌ನ ಪ್ರಮುಖ ಫೀಚರ್ಸ್ ಎಂದರೆ ಬ್ಲೂಟೂರ್‌ ಕಾಲ್‌ ಆಗಿದೆ. ಇದು ನಿಮ್ಮ ಮಣಿಕಟ್ಟಿನಲ್ಲಿರುವಾಗ ಸ್ಮಾರ್ಟ್‌ಫೋನ್‌ಗಾಗಿ ಹ್ಯಾಂಡ್ಸ್-ಫ್ರೀ ಸ್ಪೀಕರ್ ಡಿವೈಸ್‌ ಮಾದರಯಲ್ಲಿ ಕಾರ್ಯನಿರ್ವಹಿಸುತ್ತದೆ. ಇನ್ನು ಈ ಸ್ಮಾರ್ಟ್‌ವಾಚ್‌ 1.8 ಇಂಚಿನ TFT-LCD ಟಚ್ ಸ್ಕ್ರೀನ್ ಅನ್ನು ಹೊಂದಿದೆ. ಈ ಸ್ಮಾರ್ಟ್ ವಾಚ್ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ಅನ್ನು ರೇಟ್ ಮಾಡಿದೆ. ಅಲ್ಲದೆ ಹೃದಯ ಬಡಿತ ಮತ್ತು SpO2 ಮಾನಿಟರಿಂಗ್ ಮತ್ತು ಸ್ಲೀಪ್‌ ಟ್ರ್ಯಾಕಿಂಗ್‌ ಸೆನ್ಸಾರ್‌ಗಳನ್ನು ಕೂಡ ಒಳಗೊಂಡಿದೆ.

ಸ್ಮಾರ್ಟ್‌ವಾಚ್‌

ಇದಲ್ಲದೆ ಈ ಸ್ಮಾರ್ಟ್‌ವಾಚ್‌ ವರ್ಕೌಟ್‌ ಟ್ರ್ಯಾಕಿಂಗ್‌ಗಾಗಿ 110 ಕ್ಕೂ ಹೆಚ್ಚು ಫಿಟ್‌ನೆಸ್ ಮೋಡ್‌ಗಳನ್ನು ಹೊಂದಿದೆ. ಇದು 340mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದ್ದು, ಪ್ರತಿ ಚಾರ್ಜ್‌ಗೆ ಏಳು ದಿನಗಳವರೆಗೆ ಬ್ಯಾಟರಿ ಅವಧಿಯನ್ನು ಹೊಂದಿದೆ. ಇನ್ನು ರಿಯಲ್‌ಮಿ ವಾಚ್‌ 3 ಭಾರತದಲ್ಲಿ 3,499ರೂ, ಬೆಲೆಯನ್ನು ಹೊಂದಿದೆ. ಆದರೆ ಇದರ ಲಾಂಚ್‌ ಆಫರ್‌ ಪ್ರಯುಕ್ತ ಇದನ್ನು ನೀವು ಕೇವಲ 2,999 ರೂ.ಗಳಿಗೆ ಖರೀದಿಸಬಹುದು. ಈ ಸ್ಮಾರ್ಟ್‌ವಾಚ್‌ನ ಫಸ್ಟ್‌ ಸೇಲ್‌ ಆಗಸ್ಟ್ 2ರ ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್‌, ರಿಯಲ್‌ಮಿ ಆನ್‌ಲೈನ್‌ ಸ್ಟೋರ್‌ನಲ್ಲಿ ನಡೆಯಲಿದೆ.

ರಿಯಲ್‌ಮಿ ಬಡ್ಸ್‌ ಏರ್‌ 3 ನಿಯೋ

ರಿಯಲ್‌ಮಿ ಬಡ್ಸ್‌ ಏರ್‌ 3 ನಿಯೋ

ರಿಯಲ್‌ಮಿ ಬಡ್ಸ್‌ ಏರ್‌ 3 ನಿಯೋ ಇಯರ್‌ಬಡ್ಸ್ ಡಾಲ್ಬಿ ಅಟ್ಮಾಸ್ ಅನ್ನು ಬೆಂಬಲಿಸುವ ಕಂಪೆನಿಯ ಮೊದಲ ಎಂಟ್ರಿ ಲೆವೆಲ್‌ ಇಯರ್‌ಬಡ್ಸ್‌ ಆಗಿದೆ. ಇದನ್ನು ನೀವು ಆಪಲ್‌ ಮ್ಯೂಸಿಕ್‌ನಂತಹ ಅಪ್ಲಿಕೇಶನ್‌ಗಳೊಂದಿಗೆ ಬಳಸಬಹುದು. ಇನ್ನು ಈ ಇಯರ್‌ಬಡ್ಸ್‌ ಆಕ್ಟಿವ್‌ ನಾಯ್ಸ್‌ ಅನ್ನು ಬೆಂಬಲಿಸುವುದಿಲ್ಲ ಎನ್ನಲಾಗಿದೆ. ರಿಯಲ್‌ಮಿ ಬಡ್ಸ್‌ ಏರ್‌ 3 ನಿಯೋ ಭಾರತದಲ್ಲಿ 1,999ರೂ, ಬೆಲೆಯನ್ನು ಹೊಂದಿದೆ. ಆದರೆ ಲಾಂಚ್‌ ಆಫರ್‌ ಪ್ರಯುಕ್ತ ಪ್ರಾರಂಭಿಕ ದಿನಗಳಲ್ಲಿ ಇದು ನಿಮಗೆ ಕೇವಲ 1,699ರೂ. ಬೆಲೆಗೆ ದೊರೆಯಲಿದೆ. ಇದರ ಮೊದಲ ಮಾರಾಟವು ಜುಲೈ 27 ರ ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್‌, ರಿಯಲ್‌ಮಿ ಆನ್‌ಲೈನ್‌ ಸ್ಟೋರ್‌ನಲ್ಲಿ ನಡೆಯಲಿದೆ.

ರಿಯಲ್‌ಮಿ ಬಡ್ಸ್‌ ವೈರ್‌ಲೆಸ್ 2S

ರಿಯಲ್‌ಮಿ ಬಡ್ಸ್‌ ವೈರ್‌ಲೆಸ್ 2S

ರಿಯಲ್‌ಮಿ ಬಡ್ಸ್‌ ವಾಯರ್‌ಲೆಸ್‌ 2S ನೆಕ್‌ಬ್ಯಾಂಡ್‌ ಇಯರ್‌ ಫೋನ್‌ ಆಗಿದೆ. ಇದು ಬಡ್ಸ್ ವೈರ್‌ಲೆಸ್ 2 ನ ಟೋನ್-ಡೌನ್ ಆವೃತ್ತಿಯಾಗಿದೆ. ಈ ನೆಕ್‌ಬ್ಯಾಂಡ್ ENC ನೊಂದಿಗೆ ಬರುತ್ತದೆ. ಇನ್ನು ಈ ನೆಕ್‌ಬ್ಯಾಂಡ್ ತ್ವರಿತ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ ಸಿಂಗಲ್‌ ಚಾರ್ಜ್‌ನಲ್ಲಿ 24 ಗಂಟೆಗಳ ಪ್ಲೇಬ್ಯಾಕ್ ಟೈಂ ನೀಡಲಿದೆ ಎಂದು ಹೇಳಲಾಗಿದೆ. ಈ ನೆಕ್‌ಬ್ಯಾಂಡ್‌ ಭಾರತದಲ್ಲಿ 1,499ರೂ.ಬೆಲೆಯನ್ನು ಹೊಂದಿದೆ. ಆದರೆ ಪರಿಚಯಾತ್ಮಕ ಕೊಡುಗೆಯಾಗಿ 1,299ರತೂ.ಬೆಲೆಗೆ ದೊರೆಯಲಿದೆ.

Best Mobiles in India

English summary
Realme Pad X, Flat Monitor, Watch 3, Buds Air 3 Neo and more Launched in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X