ಇತ್ತೀಚಿಗಷ್ಟೇ ಬಿಡುಗಡೆಯಾಗಿದ್ದ 'ರೆಡ್‌ಮಿ ನೋಟ್ 7ಎಸ್' ಬೆಲೆ ಇಳಿಕೆ!

|

ರೆಡ್‌ ನೋಟ್ 7 ಮತ್ತು ರೆಡ್ಮಿ ನೋಟ್ 7 ಪ್ರೊ ಯಶಸ್ಸಿನ ನಂತರ, ಶಿಯೋಮಿ ಭಾರತದಲ್ಲಿ ಬಿಡುಗಡೆ ಮಾಡಿರುವ ಮೂರನೇ ನೋಟ್ 7 ಮಾದರಿ ಫೋನ್ 'ರೆಡ್ಮಿ ನೋಟ್ 7ಎಸ್' ಬೆಲೆ ಇದೀಗ ಮತ್ತೆ ಇಳಿಕೆಯಾಗಿದೆ. ಕಳೆದ ತಿಂಗಳು 10,999 ರೂ.ಗಳಿಗೆ ಬಿಡುಗಡೆಯಾಗಿದ್ದ 48ಎಂಪಿ ಕ್ಯಾಮೆರಾ ಸಾಮರ್ಥ್ಯದ ಸ್ಮಾರ್ಟ್‌ಫೋನ್ ಬೆಲೆಯನ್ನು ಇದೀಗ 1000, ರೂ.ಗಳನ್ನು ಇಳಿಕೆ ಮಾಡಿರುವ ಶಿಯೋಮಿ ಕಂಪೆನಿ, ಕೇವಲ 9,999 ರೂಪಾಯಿಗಳಿಗೆ ಸ್ಮಾರ್ಟ್‌ಫೋನ್ ಅನ್ನು ಮಾರಾಟ ಮಾಡುತ್ತಿದೆ.

ಇತ್ತೀಚಿಗಷ್ಟೇ ಬಿಡುಗಡೆಯಾಗಿದ್ದ 'ರೆಡ್‌ಮಿ ನೋಟ್ 7ಎಸ್' ಬೆಲೆ ಇಳಿಕೆ!

ಹೌದು, ಶಿಯೋಮಿ ಆಯೋಜಿಸಿರುವ 'ಮಿ ಸೂಪರ್ ಸೇಲ್' ಮಾರಾಟ ಮೇಳದಲ್ಲಿ ಕೇವಲ 9,999 ರೂಪಾಯಿಗಳಿಗೆ 'ರೆಡ್ಮಿ ನೋಟ್ 7ಎಸ್' ಸ್ಮಾರ್ಟ್‌ಫೋನ್ ಖರೀದಿಗೆ ಲಭ್ಯವಿದೆ. ಜುಲೈ 15 ರಿಂದ ಜುಲೈ 18ನೇ ತಾರೀಖಿನವರೆಗೂ ಈ ಆಫರ್ ಲಭ್ಯವಿರಲಿದೆ. ಈ ಮೂಲಕ ಅತ್ಯಂತ ಕಡಿಮೆ ಬೆಲೆಯಲ್ಲಿ 48ಎಂಪಿ ಕ್ಯಾಮೆರಾ ಫೋನ್ ಎಂಬ ಹೆಗ್ಗಳಿಕೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ. ಹಾಗಾದರೆ, 'ರೆಡ್‌ಮಿ ನೋಟ್ 7 ಎಸ್' ಫೋನ್ ಹೇಗಿದೆ? ಫೀಚರ್ಸ್ ಯಾವುವು ಯಾವುವು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಡಿಸ್‌ಪ್ಲೇ

ಡಿಸ್‌ಪ್ಲೇ

ರೆಡ್ಮಿ ನೋಟ್ 7 ಎಸ್ ಫೋನ್ 6.3 ಪೂರ್ಣ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯು ಹೆಚ್ಚು ಪ್ರಖರವಾಗಿದೆ. 1,080 x 2,340ಪಿ ಪಿಕ್ಸೆಲ್ ಸಾಮರ್ಥ್ಯದ ಡಿಸ್‌ಪ್ಲೇಯ ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್ ಅನ್ನು ಒದಗಿಸಲಾಗಿದೆ. ಹಾಗೇ ಡಿಸ್‌ಪ್ಲೇಯಲ್ಲಿ ವಾಟರ್ ಡ್ರಾಪ್ ಡಾಟ್ ನೋಚ್ ನೀಡಲಾಗಿದ್ದು ಜೊತೆ ತೆಳುವಾದ 1.95 ಎಂಎಂ ಬೆಜಲ್ ರಚನೆಯನ್ನು ಪಡೆದುಕೊಂಡಿದೆ.

ಪ್ರೊಸೆಸರ್

ಪ್ರೊಸೆಸರ್

ರೆಡ್ಮಿ ನೋಟ್ 7ಎಸ್ ನಲ್ಲಿ 2.2 ಗಿಗಾಹರ್ಡ್ಜ ಶಕ್ತಿಯ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 660 ಪ್ರೊಸೆಸರ್ MIUI 10 ಟಾಪ್ ಆಂಡ್ರಾಯ್ಡ್ ಪೈನಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನು ಫೋನ್ ಎರಡು ವೇರಿಯಂಟ್ ಆಯ್ಕೆಗಳಲ್ಲಿ ದೊರೆಯಲಿದ್ದು, ಅವು ಕ್ರಮವಾಗಿ 3GB RAM ಮತ್ತು 32GB ಆಂತರಿಕ ಸಂಗ್ರಹ ಹಾಗೂ 4GB RAM ಮತ್ತು 64 GB ಸ್ಟೋರೇಜ್‌ ಸ್ಥಳಾವಕಾಶವನ್ನು ಹೊಂದಿದೆ.

ರಿಯರ್ ಕ್ಯಾಮೆರಾ

ರಿಯರ್ ಕ್ಯಾಮೆರಾ

ರೆಡ್ಮಿ ನೋಟ್‌ 7ಎಸ್ ನಲ್ಲಿ 48 ಮೆಗಾಪಿಕ್ಸಲ್ ಸೋನಿ IMX586 ಕ್ಯಾಮೆರಾ ಒದಗಿಸಲಾಗಿದ್ದು, ಸೆಕೆಂಡರಿ ಕ್ಯಾಮೆರಾವು 5 ಎಂಪಿ ಸಾಮರ್ಥ್ಯದಲ್ಲಿದೆ ಇನ್ನು ಸ್ಮಾರ್ಟ್‌ಫೋನ್ PDAF, EIS ಮತ್ತು AI ಪೋರ್ಟ್ರೇಟ್ ಮೋಡ್ ಬೆಂಬಲದೊಂದಿಗೆ ಬರುತ್ತದೆ ಮತ್ತು ಗುಣಮಟ್ಟದಲ್ಲಿ ಫೋಟೊಗಳನ್ನು ಸೆರೆಹಿಡಿಯಬಲ್ಲ 4x ಡೈನಾಮಿಕ್ ಶ್ರೇಣಿಯ ಸೂಪರ್‌ ಪಿಕ್ಸಲ್ ತಂತ್ರಜ್ಞಾನ ಹೊಂದಿದೆ.

ಸೆಲ್ಫೀ ಕ್ಯಾಮೆರಾ!

ಸೆಲ್ಫೀ ಕ್ಯಾಮೆರಾ!

ರೆಡ್ಮಿ ನೋಟ್ 7ಎಸ್ ಸ್ಮಾರ್ಟ್‌ಫೋನ್ 13 ಎಂಪಿ ಎಐ ಸೆಲ್ಫಿ ಕ್ಯಾಮರಾವನ್ನು ಹೊಂದಿದೆ. ಎಐ ಭಾವಚಿತ್ರ ಸೆಲ್ಫಿ, ಸ್ಟುಡಿಯೋ ಲೈಟಿಂಗ್ ಸೆಲ್ಫಿ, ಎಐ ಫೇಸ್ ಅನ್ಲಾಕ್, ಎಐ ಬ್ಯೂಟಿಗಳೊಂದಿಗೆ 13 ಎಂಪಿ ಎಐ ಸೆಲ್ಫ್ ಕ್ಯಾಮರಾ ಅದ್ಬುತವಾಗಿದೆ. ನಿರ್ದಿಷ್ಟ ಆಪ್ಟಿಮೈಸೇಶನ್ಗಳೊಂದಿಗೆ AI ದೃಶ್ಯ ಪತ್ತೆಹಚ್ಚುವಿಕೆ ತಂತ್ರಜ್ಞಾನ ಹೊಂದಿರುವುದು ಈ ಕ್ಯಾಮೆರಾದ ವಿಶೇಷತೆಯಾಗಿದೆ.

ಬ್ಯಾಟರಿ ಶಕ್ತಿ

ಬ್ಯಾಟರಿ ಶಕ್ತಿ

ರೆಡ್ಮಿ ನೋಟ್ 7ಎಸ್ ಸ್ಮಾರ್ಟ್‌ಫೋನಿನಲ್ಲಿ 4000mAh ಬ್ಯಾಟರಿಯನ್ನು ನೀಡಲಾಗಿದ್ದು, 2.0 ಕ್ವಾಲ್ಕಮ್ ಕ್ವಿಕ್‌ ಚಾರ್ಜರ್‌(10w) ಸೌಲಭ್ಯವನ್ನು ಪಡೆದಿದೆ. ನಿರಂತರ 13 ಗಂಟೆಗಳ ವಿಡಿಯೊ ಪ್ಲೇಬ್ಯಾಕ್‌ ಸಾಮರ್ಥ್ಯ ಪಡೆದಿದೆ ಹಾಗೂ 150 ಗಂಟೆಗಳ ಮ್ಯೂಸಿಕ್ ಪ್ಲೇಬ್ಯಾಕ್ ಶಕ್ತಿ ಇದ್ದು, ಒಟ್ಟು 250 ಗಂಟೆಗಳ ಸ್ಟ್ಯಾಂಡ್‌ಬೈ ಟೈಮ್‌ ಸಾಮರ್ಥ್ಯವನ್ನು ಹೊಂದಿದೆ.

ಕ್ಯಾಮೆರಾ ತಂತ್ರಜ್ಞಾನ!

ಕ್ಯಾಮೆರಾ ತಂತ್ರಜ್ಞಾನ!

ರೆಡ್ಮಿ ನೋಟ್ 7ಎಸ್ ನಲ್ಲಿ ಸೂಪರ್‌ ಪಿಕ್ಸಲ್ ಟೆಕ್ನೊಲಜಿ ಪರಿಚಯಿಸಿದ್ದು, ಈ ತಂತ್ರಜ್ಞಾನದಲ್ಲಿ ಝೂಮ್‌ ಮಾಡಿದರು ಫೋಟೊ ಪಿಕ್ಸಲ್ ಒಡೆಯುವುದಿಲ್ಲ.ಈ ಫೋನ್‌ AI ತಂತ್ರಜ್ಞಾನ ನೆರವಿನಿಂದ ಮಂದಬೆಳಕಿನಲ್ಲೂ ಉತ್ತಮ ಬ್ರೈಟ್‌ನೆಸ್ ಕಂಡುಕೊಳ್ಳದೆ. ರಾತ್ರಿವೇಳೆಯಲ್ಲಿ ನೈಟ್‌ಮೋಡ್‌ ಆಯ್ಕೆಯು ಹೆಚ್ಚು ಪರಿಣಾಮಕಾರಿಯಾಗಿ ಚಿತ್ರಗಳನ್ನು ಸೆರೆಹಿಡಿಯಲಿದೆ.

Best Mobiles in India

English summary
This is good news for those who have been waiting for an offer on the Redmi Note 7Ssince its launch. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X