ವಿಶ್ವದ ಮೊದಲ 64ಎಂಪಿ ಕ್ಯಾಮರಾ ಫೋನ್ ಬಿಡುಗಡೆಗೊಳಿಸಲು ರೆಡ್ಮಿ ತಯಾರಿ

By Gizbot Bureau
|

ಸ್ಯಾಮ್ ಸಂಗ್ ಇತ್ತೀಚೆಗಷ್ಟೇ ವಿಶ್ವದ ಮೊದಲ 64ಎಂಪಿ ಸ್ಮಾರ್ಟ್ ಫೋನ್ ಕ್ಯಾಮರಾ ಸೆನ್ಸರ್ ನ್ನು ಬಿಡುಗಡೆಗೊಳಿಸಿದೆ. ಇದು ಪಿಕ್ಸಲ್ ಬಿನ್ನಿಂಗ್ ತಂತ್ರಗಾರಿಕೆಯೊಂದಿಗೆ 16ಎಂಪಿ ಇಮೇಜ್ ನ್ನು ತೆಗೆಯುವ ಸಾಮರ್ಥ್ಯವನ್ನು ಹೊಂದಿದೆ. ಕೆಲವು ವದಂತಿಗಳು ಸಲಹೆ ನೀಡುವಂತೆ ಸ್ಯಾಮ್ ಸಂಗ್ ಗ್ಯಾಲಕ್ಸಿ ಎ70 ಮೊದಲ ಸ್ಮಾರ್ಟ್ ಫೋನ್ ಆಗಿದ್ದು 64ಎಂಪಿ ಸ್ಯಾಮ್ ಸಂಗ್ ಜಿಡಬ್ಲ್ಯೂ-1 ಕ್ಯಾಮರಾ ಸೆನ್ಸರ್ ನ್ನು ಹೊಂದಿದೆ. ಆದರೆ ಇದೀಗ ಹೊಸ ವರದಿಯೊಂದು ಐಸ್ ರಿಪೋರ್ಟ್ ನಿಂದ ಬಂದಿದ್ದು ಇದು ಬೇರೆಯದ್ದೇ ಕಥೆಯನ್ನು ಹೇಳುತ್ತಿದೆ.

ವಿಶ್ವದ ಮೊದಲ 64ಎಂಪಿ ಕ್ಯಾಮರಾ ಫೋನ್ ಬಿಡುಗಡೆಗೊಳಿಸಲು ರೆಡ್ಮಿ ತಯಾರಿ

ಐಸ್ ಯುನಿವರ್ಸ್ ನ ವೈಬೋ ಪೋಸ್ಟ್ ಹೇಳುವ ಪ್ರಕಾರ ಶಿಯೋಮಿಯ ಬ್ರ್ಯಾಂಡ್ ರೆಡ್ಮಿ ಸ್ಯಾಮ್ ಸಂಗ್ ನಿಂದ ಎಲ್ಲಾ ಹೊಸ 64ಎಂಪಿ ಕ್ಯಾಮರಾ ಸೆನ್ಸರ್ ನ್ನು ಬಿಡುಗಡೆಗೊಳಿಸುವ ಮೊದಲ ಬ್ರ್ಯಾಂಡ್ ಆಗಲಿದೆ ಎನ್ನಲಾಗಿದೆ.

ರೆಡ್ಮಿ ಫೋನ್ ನಲ್ಲಿ 64ಎಂಪಿ ಕ್ಯಾಮರಾ ಸೆನ್ಸರ್

ರೆಡ್ಮಿ ಫೋನ್ ನಲ್ಲಿ 64ಎಂಪಿ ಕ್ಯಾಮರಾ ಸೆನ್ಸರ್

ಈ ವರದಿಯು ಹೇಳುವಂತೆ ರೆಡ್ಮಿ ಸ್ಮಾರ್ಟ್ ಫೋನ್ ಜೊತೆಗೆ 64ಎಂಪಿ ಕ್ಯಾಮರಾ ಸೆನ್ಸರ್ ನ್ನು ಚೀನಾದಲ್ಲಿ ಮೊದಲು ತಯಾರಿಸಲಾಗಿದೆ . ಆದರೆ ಚೀನಾದಿಂದ ಹೊರಭಾಗದಲ್ಲಿ ಸ್ಯಾಮ್ ಸಂ ಡಿವೈಸ್ ಮೊದಲ ಬಾರಿಗೆ 64ಎಂಪಿ ಕ್ಯಾಮರಾ ಸೆನ್ಸರ್ ನ್ನು ಬಿಡುಗಡೆಗೊಳಿಸಿದೆ.

ಸದ್ಯ ಮುಂಬರುವ ರೆಡ್ಮಿ ಸ್ಮಾರ್ಟ್ ಫೋನಿನ ವೈಶಿಷ್ಟ್ಯತೆಗಳು ಅಥವಾ ವಿಶೇಷತೆಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ.ಆದರೆ ಕ್ಯಾಮರಾ ಪವರ್ ಹೌಸ್ ಇದಾಗಿರಲಿದೆ ಎಂಬುದು ಮಾತ್ರ ಖಾತ್ರಿ. ಯಾಕಂದ್ರೆ ಸ್ಯಾಮ್ ಸಂಗ್ ಜಿಡಬ್ಲ್ಯೂ1 64ಎಂಪಿ ಸೆನ್ಸರ್ ನ್ನು ಇದು ಹೊಂದಿರಲಿದೆ.

ಎಂಟ್ರಿ ಲೆವೆಲ್ ಸ್ಮಾರ್ಟ್ ಫೋನ್

ಎಂಟ್ರಿ ಲೆವೆಲ್ ಸ್ಮಾರ್ಟ್ ಫೋನ್

2018 ರ ಅಂತ್ಯದವರೆಗೆ ರೆಡ್ಮಿ ಕೇವಲ ಎಂಟ್ರಿ ಲೆವೆಲ್ ಸ್ಮಾರ್ಟ್ ಫೋನ್ ಗಳಿಗೆ ಮತ್ತು ಮಧ್ಯಮ ರೇಂಜಿನ ಸ್ಮಾರ್ಟ್ ಫೋನ್ ಗಳಿಗೆ ಪರಿಚಿತವಾಗಿತ್ತು. 2019 ರಲ್ಲಿ ಕಂಪೆನಿಯು ನಿಜಕ್ಕೂ ಅಧ್ಬುತ ಫ್ಲ್ಯಾಗ್ ಶಿಪ್ ಫೋನ್ ಗಳನ್ನು ಪರಿಚಯಿಸಿದೆ.

ರೆಡ್ಮಿ ಕೆ20 ಪ್ರೋ ನ್ನು ಇನ್ನು ಕೆಲವೇ ವಾರಗಳಲ್ಲಿ ಭಾರತದಲ್ಲಿ ಬಿಡುಗಡೆಗೊಳ್ಳುವ ಬಗ್ಗೆ ನಿರೀಕ್ಷೆ ಇದೆ. ಇದು ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 855 ಸಾಕೆಟ್ ಹೊಂದಿದ್ದು 8ಜಿಬಿ ಮೆಮೊರಿ ಮತ್ತು 256ಜಿಬಿ ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯನ್ನು ಹೊಂದಿರುತ್ತದೆ ಮತ್ತು ಟ್ರಿಪಲ್ ಹಿಂಭಾಗದ ಕ್ಯಾಮರಾ ವ್ಯವಸ್ಥೆಯನ್ನು ಹೊಂದಿರುತ್ತದೆ. ರೆಡ್ಮಿ ಕೆ20 ಪ್ರೋ ನಲ್ಲಿ ಪಾಪ್ ಅಪ್ ಸೆಲ್ಫೀ ಕ್ಯಾಮರಾ ಜೊತೆಗೆ OLED ಡಿಸ್ಪ್ಲೇ, ಇನ್ ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್ ನ್ನು ಕೂಡ ಇದು ಒಳಗೊಂಡಿರುತ್ತದೆ.

ಮುಂಬರುವ ರೆಡ್ಮಿ ಸ್ಮಾರ್ಟ್ ಫೋನ್ ಬಗ್ಗೆ ನಾವೇನು ಯೋಚಿಸಬಹುದು?

ಮುಂಬರುವ ರೆಡ್ಮಿ ಸ್ಮಾರ್ಟ್ ಫೋನ್ ಬಗ್ಗೆ ನಾವೇನು ಯೋಚಿಸಬಹುದು?

ಶಿಯೋಮಿಯ ಸಹ ಸ್ಮಾರ್ಟ್ ಫೋನ್ ಬ್ರ್ಯಾಂಡ್ ರೆಡ್ಮಿ ಕೈಗೆಟುಕುವ ಬೆಲೆಯಲ್ಲಿ ಹೆಚ್ಚು ಬೆಲೆಯ ಫೀಚರ್ ಗಳುಳ್ಳ ಪೋನ್ ಗಳನ್ನು ಮಾರುಕಟ್ಟೆಗೆ ಪರಿಚಯಿಸುವುದರಲ್ಲ ಪ್ರಸಿದ್ಧಿಯಾಗಿದೆ ಮತ್ತು ರೆಡ್ಮಿ ನೋಟ್ 7 ಪ್ರೋ 48ಎಂಪಿ ಸೋನಿ IMX586 ಸೆನ್ಸರ್ ಹೊಂದಿರುವ ಭಾರತದಲ್ಲಿನ ಕೈಗೆಟುಕುವ ಬೆಲೆಯ ಫೋನ್ ಗಳಲ್ಲಿ ಅಗ್ರಪಂಕ್ತಿಯಲ್ಲಿದೆ. ಇದೇ ಸೆನ್ಸರ್ ನ್ನು ಒನ್ ಪ್ಲಸ್ 7 ಪ್ರೋ ಅಥವಾ ಆಸೂಸ್ 6ಝಡ್ ನಲ್ಲೂ ಕೂಡ ಬಳಕೆ ಮಾಡಲಾಗಿದೆ.

ಹೆಚ್ಚೆಚ್ಚು OEM ಗಳ ಸ್ಮಾರ್ಟ್ ಫೋನ್ ಜೊತೆಗೆ 64ಎಂಪಿ ಸೆನ್ಸರ್ ನ್ನು ಬಿಡುಗಡೆಗೊಳಿಸುವ ನಿರೀಕ್ಷೆ ಇದೆ ಮತ್ತು ರೆಡ್ಮಿ ಆಫರ್ ಖಂಡಿತ ಕೈಗೆಟುಕುವ ಬೆಲೆಯ ಆಫರ್ ಆಗಿರುತ್ತದೆ ಜೊತೆಗೆ ಗರಿಷ್ಟ ರೆಸಲ್ಯೂಷನ್ ಕ್ಯಾಮರಾ ಸೆನ್ಸರ್ ನ್ನು ಈ ಸ್ಮಾರ್ಟ್ ಫೋನ್ ಹೊಂದಿರಲಿದೆ ಎಂಬ ನಿರೀಕ್ಷೆ ಇದೆ.

Best Mobiles in India

Read more about:
English summary
Redmi To Launch A 64 MP Camera Smartphone And More

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X