ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 7(ನೋಟ್ ಎಫ್ಇ): ಇನ್ನು ಜುಲೈ ಅಂತ್ಯದವರೆಗೂ ವಿಳಂಬ..!

By: Akshatha J

ಜೂನ್ ಮೊದಲವಾರ ನವೀಕರಿಸಿದ ಗ್ಯಾಲಕ್ಸಿ 7(ನೋಟ್ ಎಫ್ಇ) ಜೂಲೈ 7 ರಂದು ಬಿಡುಗಡೆ ಮಾಡಲಾಗುವುದು ಎಂಬ ಮಾಹಿತಿ ಸೋರಿಕೆಯಾಗಿತ್ತು. ಹಾಗು ವರದಿಗಳ ಪ್ರಕಾರ ಈ ತಿಂಗಳ (ಜೂನ್) 30 ರಂದು ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗುತಿತ್ತು.

ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 7(ನೋಟ್ ಎಫ್ಇ):ಇನ್ನು ಜುಲೈ ಅಂತ್ಯದವರೆಗೂ ವಿಳಂಬ

ಕೊರಿಯಾದ ನ್ಯೂಸ್ 1 ರ, ಹೊಸ ವರದಿಯ ಪ್ರಕಾರ ಗ್ಯಾಲಕ್ಸಿ ನೋಟ್ ಎಫ್ಇ ಮತ್ತಷ್ಟು ವಿಳಂಬವಾಗುತ್ತದೆ. ಇನ್ನು ಈ ಹೊಸ ಮೊಬೈಲ್ ಗ್ರಾಹಕರ ಕೈ ಸೇರಲು ಜುಲೈ ಅಂತ್ಯದವರೆಗೂ ಕಾಯಬೇಕು ಎಂದು ವರದಿಗಳು ತಿಳಿಸಿದೆ.

ನಮ್ಮ ನಿರೀಕ್ಷೆಯ ಪ್ರಕಾರ,

ಗ್ಯಾಲಕ್ಸಿ ನೋಟ್ ಎಫ್ಇ , 3200mAh ಬ್ಯಾಟರಿ ಸಾಮರ್ಥ್ಯದಲ್ಲಿ ಹಾಗು ಮೊಬೈಲ್ ಮಾದರಿಯಲ್ಲಿ ಸಣ್ಣ ಬದಲಾವಣೆ ಆಗಬಹುದು. ಇನ್ನು ಈ ಮೊಬೈಲ್ 2016 ರಲ್ಲಿ ಬಿಡುಗಡೆಯಾದ ಮಾದರಿಗೆ ಹೋಲಿಕೆ ಆಗಬಹುದು ಎಂದು ಕೆಲವರ ಅಭಿಪ್ರಾಯವಾಗಿದೆ.

ವಿಳಂಬಕ್ಕೆ ಕಾರಣ

ಗ್ಯಾಲಕ್ಸಿ ನೋಟ್ ಎಫ್ಇ ಗೆ, ಕಂಪನಿ ನಿರೀಕ್ಷಿಸಿದ ಮಾದರಿಯಲ್ಲೆ ಬೇಡಿಕೆ ಹೆಚ್ಚಿದ್ದು ಒಂದು ಕಡೆಯಾದರೆ, ಇತ್ತೀಚೆಗೆ ಬಿಡುಗಡೆಯಾದ ಗ್ಯಾಲಕ್ಸಿ ಎಸ್ 8 ಮತ್ತು ಗ್ಯಾಲಕ್ಸಿ ಎಸ್ 8 + ನಿಂದ ಆದಂತಹ ಯಶಸ್ಸು. ಹಾಗೂ ಗ್ಯಾಲಕ್ಸಿ ನೋಟ್ 7 ಕಡಿಮೆ ಬೆಲೆಯದ್ದಾಗಿದ್ದು, ಗ್ರಾಹಕರಿಂದ ಹೆಚ್ಚಿದ ಬೇಡಿಕೆಗಳೇ ಮೊಬೈಲ್ ವಿಳಂಬಕ್ಕೆ ಬಹುಮುಖ್ಯವಾದ ಕಾರಣ ಎಂದು ಹೇಳಲಾಗಿದೆ.English summary
Refurbished Samsung Galaxy Note 7 aka Galaxy Note FE is likely to be delayed until the end of July.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot