ಜಿಯೋ 5G ವೇಗದ ಮಾಹಿತಿ ಬಹಿರಂಗ! ಜಿಯೋ 5G ವೇಗ ಎಷ್ಟು?

|

ಟೆಲಿಕಾಂ ದೈತ್ಯ ಎನಿಸಿಕೊಂಡಿರುವ ಜಿಯೋ ದೇಶದಲ್ಲಿ 5G ಸೇವೆಯನ್ನು ಪರಿಚಯಿಸುವುದಕ್ಕೆ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ ದೇಶದ ಕೆಲವು ಪ್ರಮುಖ ನಗರಗಳಲ್ಲಿ ರಿಲಯನ್ಸ್ ಜಿಯೋ ತನ್ನ 5G ಸೇವೆಗಳ ಪರೀಕ್ಷೆಯನ್ನು ನಡೆಸುತ್ತಿದೆ. ಸದ್ಯ ರಿಲಯನ್ಸ್‌ನ 5G ನೆಟ್‌ವರ್ಕ್ ಪೈಲಟ್‌ನ ಡೌನ್‌ಲೋಡ್ ವೇಗ ಸುಮಾರು 420Mbps ಹೊಂದಿದ್ದು, ಅಪ್‌ಲೋಡ್ ವೇಗವು ಸುಮಾರು 412Mbps ಹೊಂದಿದೆ ಎನ್ನಲಾಗಿದೆ. ಇದಲ್ಲದೆ, ರಿಲಯನ್ಸ್ ಜಿಯೋ 5 ಜಿ ನೆಟ್‌ವರ್ಕ್ 11 ಎಂಎಸ್ ಲೇಟೆನ್ಸಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.

ಜಿಯೋ

ಹೌದು, ರಿಲಯನ್ಸ್‌ ಜಿಯೋ ದೇಶದಲ್ಲಿ 5G ನೆಟ್‌ವರ್ಕ್‌ ಪರಿಚಯಿಸುವ ನಿಟ್ಟಿನಲ್ಲಿ ಸಾಕಷ್ಟು ಕಾರ್ಯನ್ಮೋಖವಾಗಿದೆ. ಇದಕ್ಕಾಗಿ ಹಲವು ಹಂತದ 5G ಪರೀಕ್ಷೆಗಳನ್ನು ನಡೆಸಿದೆ. ಈ ಪರೀಕ್ಷೆಗಳಲ್ಲಿ 5G ನೆಟ್‌ವರ್ಕ್‌ನ ವೇಗ ಎಷ್ಟಿದೆ ಅನ್ನೊ ಮಾಹಿತಿ ಲೀಕ್‌ ಆಗಿದೆ. ಸದ್ಯ ಜಿಯೋ 4G ಯ ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗಗಳು ಕ್ರಮವಾಗಿ 46.82Mbps ಮತ್ತು 25.31Mbps ಎಂದು ನಮೂದಿಸಲಾಗಿದೆ. ಹಾಗಾದ್ರೆ ಜಿಯೋ 5G ವೇಗ ಎಷ್ಟು? ಲೀಕ್‌ ಮಾಹಿತಿ ಪ್ರಕಾರ ಜಿಯೋ 5G ವೇಗ ಎಷ್ಟಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜಿಯೋ

ಮುಂಬೈನಲ್ಲಿ ನಡೆದ ಸರ್ವರ್ ಆಧಾರಿತ ಪರೀಕ್ಷೆಯಲ್ಲಿ ಜಿಯೋ 5G ನೆಟ್‌ವರ್ಕ್‌ ವೇಗದ ಮಾಹಿತಿ ಲೀಕ್‌ ಆಗಿದೆ. ರಿಲಯನ್ಸ್ ಜಿಯೋದ 5G ಮತ್ತು 4G ನೆಟ್‌ವರ್ಕ್‌ಗಳ ನಡುವಿನ ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗದ ವ್ಯತ್ಯಾಸದ ನಡುವಿನ ಹೋಲಿಕೆ ಬಹಿರಂಗವಾಗಿದೆ. ಅದರಂತೆ ರಿಲಯನ್ಸ್‌ ಜಿಯೋ 5G ಡೌನ್‌ಲೋಡ್ ವೇಗವು 4G ನೆಟ್‌ವರ್ಕ್‌ನಲ್ಲಿನ ಡೌನ್‌ಲೋಡ್ ವೇಗಕ್ಕಿಂತ ಸುಮಾರು ಎಂಟು ಪಟ್ಟು ಹೆಚ್ಚು ಎನ್ನಲಾಗಿದೆ. ಹಾಗೆಯೇ ರಿಲಯನ್ಸ್ ಜಿಯೋದ 5G ನೆಟ್‌ವರ್ಕ್‌ನಲ್ಲಿ ಅಪ್‌ಲೋಡ್ ವೇಗವು 4G ನೆಟ್‌ವರ್ಕ್‌ಗಿಂತ ಸುಮಾರು 15 ಪಟ್ಟು ವೇಗವಾಗಿದೆ.

ರಿಲಯನ್ಸ್ ಜಿಯೋ 5G ವೇಗ ಎಷ್ಟು?

ರಿಲಯನ್ಸ್ ಜಿಯೋ 5G ವೇಗ ಎಷ್ಟು?

ಮುಂಬೈನಲ್ಲಿ ಸರ್ವರ್‌ ಆಧಾರಿತ 5G ಪರೀಕ್ಷೆಯನ್ನು ಸೀಮಿತ ಸಂಖ್ಯೆಯ ಬಳಕೆದಾರರೊಂದಿಗೆ ನಿಯಂತ್ರಿತ ಪರಿಸರದಲ್ಲಿ ಪ್ರಾಯೋಗಿಕವಾಗಿ ನಡೆಸಲಾಗಿದೆ. ಆದರೆ ಜಿಯೋ 5G ಸೇವೆಗಳನ್ನು ದೇಶದಲ್ಲಿ ಸಾಮಾನ್ಯ ಬಳಕೆದಾರರಿಗೆ ಪ್ರಾರಂಭಿಸಿದಾಗ, ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗದಲ್ಲಿ ಇಳಿಕೆಯಾಗುವ ಸಾದ್ಯತೆ ಇದೆ. ಏಕೆಂದರೆ ರಿಲಯನ್ಸ್‌ ಜಿಯೋ 4G 2018 ರಲ್ಲಿ ಸುಮಾರು 130Mbps ಡೌನ್‌ಲೋಡ್ ವೇಗವನ್ನು ನೀಡಿತು. ಆದರೆ ನೆಟ್‌ವರ್ಕ್‌ನಲ್ಲಿ ಬಳಕೆದಾರರ ಸಂಖ್ಯೆ ಹೆಚ್ಚಾದಂತೆ, ಪರಿಣಾಮಕಾರಿ ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗವು ಕಡಿಮೆಯಾಗುತ್ತಲೇ ಇದೆ. ಇದು 5G ನೆಟ್‌ವರ್ಕ್‌ ವೇಗಕ್ಕೂ ಅನ್ವಯಿಸಲಿದೆ ಎಂದು ಹೇಳಲಾಗಿದೆ.ಸದ್ಯ ಜಿಯೋ 4G ಯ ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗಗಳು ಕ್ರಮವಾಗಿ 46.82Mbps ಮತ್ತು 25.31Mbps ಎಂದು ನಮೂದಿಸಲಾಗಿದೆ.

5G

ಇದೀಗ ಮುಂಬೈನಲ್ಲಿ ನಡೆದಿರುವ ಪರೀಕ್ಷೆಯಲ್ಲಿ ಬಂದಿರುವ ಜಿಯೋ 5G ಡೌನ್‌ಲೋಡ್ ವೇಗವನ್ನು ನಿಜವದ ಡೌನ್‌ಲೋಡ್‌ ವೇಗ ಎಂದು ಪರಿಗಣಿಸಲು ಸಧ್ಯವಿಲ್ಲ. ಬಳಕೆದಾರರ ಸಂಖ್ಯೆಯಲ್ಲಿ ಹೆಚ್ಚಳದ ನಂತರ, ರಿಲಯನ್ಸ್‌ ಜಿಯೋ 5G ನೀಡುವ ನಿಜವಾದ ಡೌನ್‌ಲೋಡ್ ವೇಗವು 100Mbps ಗಿಂತ ಕಡಿಮೆಯಿರಬಹುದು. ಆದರೆ ಬಳಕೆದಾರರು ತಮ್ಮ 4G ಮೊಬೈಲ್ ಡೇಟಾದಲ್ಲಿ ಪ್ರಸ್ತುತ ಪಡೆಯುತ್ತಿರುವ ವೇಗಕ್ಕಿಂತ ಡೌನ್‌ಲೋಡ್ ವೇಗ ಹೆಚ್ಚಾಗಿರಲಿದೆ. ಹೆಚ್ಚುವರಿಯಾಗಿ, ಹೆಚ್ಚಿನ ಡೌನ್‌ಲೋಡ್ ವೇಗವನ್ನು ನೀಡುವ ಎಂಎಂವೇವ್ ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸಲು ಭಾರತೀಯ ಟೆಲಿಕಾಂ ಪೂರೈಕೆದಾರರು ಅನುಮತಿಯನ್ನು ಹೊಂದಿಲ್ಲದಿರುವುದರಿಂದ ಡೌನ್‌ಲೋಡ್ ವೇಗವು ಜಿಬಿಪಿಎಸ್‌ಗೆ ಹತ್ತಿರದಲ್ಲಿದೆ ಎಂದು ಭಾರತದಲ್ಲಿನ ಬಳಕೆದಾರರು ನಿರೀಕ್ಷಿಸುವಂತಿಲ್ಲ ಎಂದು ಸಹ ಹೇಳಲಾಗಿದೆ.

Most Read Articles
Best Mobiles in India

English summary
It is important to note that the pilot test has been conducted in a controlled environment with a limited number of users by Reliance Jio.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X