ಜಿಯೋ V/S ಬಿಎಸ್‌ಎನ್‌ಎಲ್, ಬೆಸ್ಟ್ ಯಾವುದು?
ರಿಲಾಯನ್ಸ್ ಜಿಯೋ ತನ್ನ ಸೇವೆಗಳನ್ನು ಈ ತಿಂಗಳ ಆರಂಭದಲ್ಲಿ ಪ್ರಸ್ತುತಪಡಿಸಿದ ಬೆನ್ನಲ್ಲೇ ಬಿಎಸ್‌ಎನ್‌ಎಲ್ ಕೂಡ ತನ್ನ ಅತ್ಯುತ್ತಮ ಯೋಜನೆಗಳ ಪಟ್ಟಿಯೊಂದಿಗೆ ಬಂದಿದೆ. ಇದೀಗ ತಾನೇ ಬಿಎಸ್‌ಎನ್‌ಎಲ್ ಹೆಚ್ಚು ಆಸಕ್ತಿಕರ ಬ್ರಾಡ್‌ಬ್ಯಾಂಡ್ ಯೋಜನೆಗಳೊಂದಿಗೆ ಬಂದಿದ್ದು ಅದರಲ್ಲಿ ಒಂದು ಯೋಜನೆಯಾಗಿದೆ ಬಿಎಸ್‌ಎನ್‌ಎಲ್ ಬಿಬಿಜಿ ಕೊಂಬೊ ಪ್ಲಾನ್ ಇದರ ಬೆಲೆ ರೂ 1,199 ಆಗಿದೆ. ಇದೇ ಸಮಯಕ್ಕೆ ಜಿಯೋ ಕೂಡ ಗಿಗಾಫೈಬರ್ ಬ್ರಾಡ್‌ಬ್ಯಾಂಡ್ ಯೋಜನೆಯನ್ನು ಸದ್ಯದಲ್ಲಿಯೇ ಹೊರತರುವ ಸಾಧ್ಯತೆ ಕೂಡ ಇದೆ.
ಓದಿರಿ: ಜಿಯೋದ 7 ಟ್ಯಾರಿಪ್ ಪ್ಲಾನ್‌ಗಳಲ್ಲಿ ಉಚಿತ ವಾಯ್ಸ್ ಕರೆ ಮತ್ತು ರೋಮಿಂಗ್ ಆಫರ್!
ಇಂದಿನ ಲೇಖನದಲ್ಲಿ ಟಾರಿಫ್, ಪ್ರಯೋಜನಗಳು ಮತ್ತು ಜಿಯೋ ಗಿಗಾಫೈಬರ್ ಫೈಬರ್ ನೆಟ್ ಸರ್ವೀಸ್ ಮತ್ತು ಬಿಎಸ್‌ಎನ್‌ಎಲ್ ಬಿಬಿಜಿ 1199 ಯೋಜನೆಗಳ ವ್ಯತ್ಯಾಸವನ್ನು ತಿಳಿಸಲಿದ್ದೇವೆ.

ಬಿಬಿಜಿ 1199 ಪ್ಲಾನ್‌ನಲ್ಲಿ ಅನಿಯಮಿತ ಕರೆ
ಅನಿಯಮಿತ ಕರೆಗಳನ್ನು ಈ ಬಿಬಿಜಿ ಪ್ಲಾನ್ ಹೊಂದಿದೆ. ಅನಿಯಮಿತ ಸ್ಥಳೀಯ ಮತ್ತು ಎಸ್‌ಟಿಡಿ ಕರೆಗಳನ್ನು 24 ಗಂಟೆಗಳ ಕಾಲ ಬಳಕೆದಾರರು ಆನಂದಿಸಬಹುದಾಗಿದ್ದು ಬಿಎಸ್‌ಎನ್‌ಎಲ್ ಬ್ರಾಡ್‌ಬ್ಯಾಂಡ್ ಯೋಜನೆಯನ್ನು ಇದು ಒಳಗೊಂಡಿದೆ.

ವೆಲ್‌ಕಮ್ ಆಫರ್ ಅನ್ನು ಇದು ಹೊಂದಿದೆ
ಗಿಗಾಫೈಬರ್ ಇಂಟರ್ನೆಟ್ ಸೇವೆಯ ವಿಶೇಷತೆ ಏನೆಂದರೆ ಜಿಯೋ 4ಜಿ ಸೇವೆಯಂತೆಯೇ ಇದು ಕೂಡ ವೆಲ್‌ಕಮ್ ಆಫರ್ ಅನ್ನು ಪಡೆದುಕೊಂಡಿದೆ ಎಂಬುದಾಗಿದೆ. ಜಿಯೋ 4ಜಿ ವೆಲ್‌ಕಮ್ ಆಫರ್ ಸ್ಮಾರ್ಟ್‌ಫೋನ್‌ಗಳಿಗಾಗಿ ಮಾತ್ರವೇ ಇದೆ. ಇದನ್ನು ಬಸಿಕೊಂಡು ಬಳಕೆದಾರರು 90 ದಿನಗಳ ಅನಿಯಮಿತ ಕರೆಯನ್ನು ಆಸ್ವಾದಿಸಬಹುದಾಗಿದೆ.

ಸ್ಪೀಡ್‌ನಲ್ಲಿ ಜಿಯೋ ಮುಂದೆ ಇದೆ
ಬಿಎಸ್‌ಎನ್‌ಎಲ್ ಬಿಬಿಜಿ 1199 ಪ್ಲಾನ್ ಡೇಟಾ ವೇಗ 2 ಎಮ್‌ಬಿಪಿಎಸ್ ಅನ್ನು ಒದಗಿಸಲಿದ್ದು, ರಿಲಾಯನ್ಸ್‌ನ ಗಿಗಾಫೈಬರ್ ಪ್ಲಾನ್ 50 ಎಮ್‌ಬಿಪಿಎಸ್‌ನಿಂದ 1ಜಿಬಿಪಿಎಸ್ ವರೆಗೆ ಇದು ವೇಗವನ್ನು ನಿಮಗೆ ನೀಡಲಿದೆ. ಹೆಚ್ಚಿನ ಬಳಕೆದಾರರು ಏಕಕಾಲದಲ್ಲಿ ಇದನ್ನು ಬಳಸುವಾಗ ಇದರ ವೇಗ ಹೇಗಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಟಾರಿಫ್ ಯೋಜನೆಗಳು
ಬಿಎಸ್‌ಎನ್‌ಎಲ್ ಎರಡು ಬ್ರಾಡ್‌ಬ್ಯಾಂಡ್ ಯೋಜನೆಗಳನ್ನು ಒದಗಿಸಲಿದೆ. ಬಿಬಿಜಿ 1199 ಪ್ಲಾನ್ ಒಂದಾದರೆ ಇನ್ನೊಂದು ಬಿಬಿ 249 ಪ್ಲಾನ್ ಆಗಿದೆ. ಇದರಲ್ಲಿ 2ಜಿಬಿ ಡೇಟಾ ಇದ್ದು 2ಎಮ್‌ಬಿಪಿಎಸ್ ಮತ್ತು ಅನಿಯಮಿತ ಡೇಟಾವನ್ನು 1 ಎಮ್‌ಬಿಪಿಎಸ್‌ಗೆ ಲಿಮಿಟ್ ಅನ್ನು ಮೀರಿದ ಬಳಿಕೆ ಪಡೆದುಕೊಳ್ಳಬಹುದಾಗಿದೆ. ಜಿಯೋ ಬೇರೆ ಬೇರೆ ಪ್ಲಾನ್‌ಗಳನ್ನು ಪ್ರಸ್ತುತಪಡಿಸಲಿದ್ದು ರೂ 1,500 ರಿಂದ ರೂ 5,000 ವರೆಗೆ ಇದು ಇದ್ದು ಪ್ರತಿಯೊಂದರ ವ್ಯಾಲಿಡಿಟಿ 30 ದಿನಗಳಾಗಿದೆ.

ಡೇಟಾ ಬಳಕೆ ಮಿತಿ
ಇತ್ತೀಚಿನ ವರದಿಯ ಪ್ರಕಾರ, ಜಿಯೋ ಗಿಗಾಫೈಬರ್ ಪ್ಲಾನ್‌ಗಳು ಡೇಟಾ ಬಳಕೆ ಮಿತಿಗಳನ್ನು ಹೊಂದಿದ್ದು 2000 ಜಿಬಿಯಿಂದ 50 ಎಮ್‌ಬಿಪಿಎಸ್ ಸ್ಪೀಡ್ ಪ್ಲಾನ್‌ಗಳನ್ನು ಇದು ಪಡೆದುಕೊಂಡಿದೆ ಮತ್ತು 300 ಜಿಬಿಯಿಂದ 600 ಎಮ್‌ಬಿಪಿಎಸ್ ಪ್ಲಾನ್‌ವರೆಗೆ ಇದು ಇದೆ.

ಹಣ ಉಳಿಸಲು ಒಮ್ಮೆಲೆ ಪಾವತಿಸಿ
ಬಿಎಸ್‌ಎನ್‌ಎಲ್ ಪ್ಲಾನ್ ಪ್ರಕಾರವಾಗಿ, ಬಿಬಿಜಿ 1199 ಪ್ಲಾನ್‌ಗಾಗಿ ಬಳಕೆದಾರರು ಎರಡು ಅಥವಾ ಮೂರು ವರ್ಷಗಳಿಗಾಗಿ ಪಾವತಿಸಬಹುದಾಗಿದೆ.


Click it and Unblock the Notifications








