ನಿಮ್ಮದೇ ಫೋನ್ ಸಂಖ್ಯೆಗೆ ಜಿಯೋ ಕನೆಕ್ಷನ್ ಪಡೆದುಕೊಳ್ಳುವುದು ಹೇಗೆ?

By Shwetha
|

ರಿಲಾಯನ್ಸ್ ಜಿಯೋ ಎಂಬ ಅಬ್ಬರದ ಅಲೆ ಟೆಲಿಕಾಮ್ ಇಂಡಸ್ಟ್ರಿಯನ್ನು ವಿಪರೀತವಾಗಿ ತಟ್ಟಿದೆ. ಜಿಯೋ ತನ್ನ ಪ್ರಿವ್ಯೂ ಆಫರ್ ಅನ್ನೇ ವೆಲ್‌ಕಮ್ ಆಫರ್‌ನಂತೆ ಈಗ ಪ್ರಸ್ತುತಪಡಿಸಿದ್ದು ಡಿಸೆಂಬರ್ 31 ರವರೆಗೆ ಇದು ಉಚಿತವಾಗಿ ಲಭ್ಯವಿದೆ. ತದನಂತರ ಘೋಷಣೆ ಮಾಡಿದ ದರಗಳು ಇದಕ್ಕೆ ಅನ್ವಯವಾಗುತ್ತದೆ.

ಓದಿರಿ: ಜಿಯೋ ಕುರಿತಾದ ದೂರು ಸಲ್ಲಿಸಲು ಟಾಲ್ ಫ್ರಿ, ಕಸ್ಟಮರ್ ಕೇರ್ ವಿವರಗಳು

ಉಚಿತ ವಾಯ್ಸ್ ಕರೆಗಳು ಮತ್ತು ಆಕರ್ಷಕ ಡೇಟಾ ದರಗಳು ಹೆಚ್ಚಿನ ಬಳಕೆದಾರರನ್ನು ಆಕರ್ಷಿಸಲಿದ್ದು ಜಿಯೋ ನೆಟ್‌ವರ್ಕ್‌ಗೆ ಬದಲಾಗಲು ಇದು ಅವರನ್ನು ಪ್ರೇರೇಪಿಸುವುದು ಖಂಡಿತ. ಹೊಸ ಸಂಖ್ಯೆಯನ್ನು ಪಡೆದುಕೊಳ್ಳುವುದರ ಬದಲಿಗೆ, ಮೊಬೈಲ್ ನಂಬರ್ ಪೋರ್ಟೇಬಿಲಿಟಿಯನ್ನು ಆಯ್ಕೆಮಾಡಿಕೊಳ್ಳಬಹುದಾಗಿದೆ. ಹಾಗಿದ್ದರೆ ಇದನ್ನು ಮಾಡುವುದು ಹೇಗೆ ಎಂಬುದನ್ನು ಇಂದಿಲ್ಲಿ ತಿಳಿದುಕೊಳ್ಳೋಣ.

ಓದಿರಿ: 4ಜಿ ಸ್ಮಾರ್ಟ್‌ಫೋನ್‌ನಲ್ಲಿರುವ ದೋಷಕ್ಕೆ ಅದ್ಭುತ ಪರಿಹಾರಗಳು: ಟ್ರೈ ಮಾಡಿ

ಅನನ್ಯ ಪೋರ್ಟಿಂಗ್

ಅನನ್ಯ ಪೋರ್ಟಿಂಗ್

ಮೊದಲಿಗೆ ನಿಮ್ಮ ಪ್ರಸ್ತುತ ಆಪರೇಟರ್‌ಗೆ ಪೋರ್ಟ್ ಔಟ್ ಆಗಲು ನೀವು ಪಠ್ಯ ಸಂದೇಶವನ್ನು ಕಳುಹಿಸಬೇಕು. PORT ಸಂದೇಶವನ್ನು 1900 ಗೆ ಕಳುಹಿಸಬೇಕು. ಇದಕ್ಕೆ ಪ್ರತಿಯಾಗಿ, 15 ದಿನಗಳ ಒಳಗಾಗಿ 1901 ನಿಂದ ಅನನ್ಯ ಪೋರ್ಟಿಂಗ್ ಕೋಡ್ ಅನ್ನು ನೀವು ಪಡೆದುಕೊಳ್ಳುತ್ತೀರಿ.

ಜಿಯೋ ಸಿಮ್ ಕಾರ್ಡ್

ಜಿಯೋ ಸಿಮ್ ಕಾರ್ಡ್

ಯಾವುದೇ ರಿಲಾಯನ್ಸ್ ಮೊಬೈಲ್ ಸ್ಟೋರ್ ಅಥವಾ ರಿಟೈಲ್ ಶಾಪ್‌ಗೆ ಹೋಗಿ ಇಲ್ಲಿ ಕಸ್ಟಮರ್ ಅಪ್ಲಿಕೇಶನ್ ಫಾರ್ಮ್ ಅನ್ನು ಭರ್ತಿ ಮಾಡಿ. ಬೇಕಾದ ದಾಖಲೆಗಳನ್ನು ಸಲ್ಲಿಸಿ. ಆಗ ರಿಲಾಯನ್ಸ್ ನಿಮಗೆ ಜಿಯೋ ಸಿಮ್ ಕಾರ್ಡ್ ಅನ್ನು ನೀಡುತ್ತದೆ. ಒಮ್ಮೆ ಆಕ್ಟಿವೇಟ್ ಆದ ನಂತರ, ನೀವು ಈಗಾಗಲೇ ಹೊಂದಿರುವ ಅದೇ ಫೋನ್ ಸಂಖ್ಯೆಯನ್ನು ಈ ಸಿಮ್ ಬಳಸುತ್ತದೆ, ಮತ್ತು ನಿಮ್ಮ ಹಳೆಯ ಸಿಮ್ ಡಿಆಕ್ಟಿವೇಟ್ ಆಗುತ್ತದೆ.

7 ದಿನ

7 ದಿನ

ಜಿಯೋ ಸಿಮ್ ಆಕ್ಟಿವೇಟ್ ಆಗಲು 7 ದಿನಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಇದಕ್ಕೆ ರೂ 19 ರ ಶುಲ್ಕವನ್ನು ವಿಧಿಸಲಾಗುತ್ತದೆ. ಪೋರ್ಟ್ ಮಾಡುವ ಸಂದರ್ಭದಲ್ಲಿ ನಿಮ್ಮ ಸಂಖ್ಯೆಯು ಎರಡು ಗಂಟೆಗಳಿಗಾಗಿ ಡೆಡ್ ಆಗಿರುತ್ತದೆ. ಹೊಸ ರಿಲಾಯನ್ಸ್ ಸಿಮ್ ಆಕ್ಟಿವೇಟ್ ಆಗುವ ಇದು ನಡೆಯುತ್ತದೆ. ನಿಮ್ಮ ಪ್ರಸ್ತುತ ಸಿಮ್ "ನೊ ಸರ್ವೀಸ್" ಎಂದು ತೋರಿಸುತ್ತಿರುವಾಗ, ನಿಮ್ಮ ಹೊಸ ಸಿಮ್ ಅನ್ನು ಹಾಕುವ ಸಮಯ ಇದಾಗಿದೆ.

ಜಿಯೋ ಸಿಮ್ ಆಕ್ಟಿವೇಟ್

ಜಿಯೋ ಸಿಮ್ ಆಕ್ಟಿವೇಟ್

ಒಮ್ಮೆ ಪೋರ್ಟ್ ಆದ ನಂತರ, ಜಿಯೋ ಸಿಮ್ ಆಕ್ಟಿವೇಟ್ ಆಗಿರುತ್ತದೆ ಅಂತೆಯೇ ನೆನಪಿರಲಿ ಕನಿಷ್ಟ 90 ದಿನಗಳ ಕಾಲ ನಿಮ್ಮ ಹಳೆಯ ಆಪರೇಟರ್‌ಗೆ ಹಿಂತಿರುಗಲು ಎಮ್‌ಎನ್‌ಪಿಯನ್ನು ಬಳಸಲಾಗುವುದಿಲ್ಲ. ಅಂತೆಯೇ ಎಮ್‌ಎನ್‌ಪಿಯನ್ನು ಬಳಸಿಕೊಂಡು ಗ್ರಾಹಕರನ್ನು ಸೀಮಿತಗೊಳಿಸದಿರಿ ಎಂಬುದಾಗಿ ಅಂಬಾನಿ ವಿನಂತಿಸಿಕೊಂಡಿದ್ದಾರೆ.

ಕಳಪೆ ಸೇವೆ

ಕಳಪೆ ಸೇವೆ

ಜಿಯೋ ಗ್ರಾಹಕರಿಗೆ ಟೆಲಿಕಾಂ ಕಂಪೆನಿಗಳು ಕಳಪೆ ಸೇವೆಯನ್ನು ಒದಗಿಸುತ್ತಿವೆ ಎಂಬುದಾಗಿ ಅಂಬಾನಿ ದೂರಿದ್ದಾರೆ. ಸ್ಪರ್ಧಿಗಳು ಪೂರಕವಲ್ಲದ ಇಂಟರ್ ಕನೆಕ್ಟ್ ಸಾಮರ್ಥ್ಯವನ್ನು ಒದಗಿಸಿರುವುದರಿಂದಾಗಿ 5 ಕೋಟಿ ಕರೆ ವಿಫಲತೆಗಳನ್ನು ಜಿಯೋ ಬಳಕೆದಾರರು ಫೇಸ್ ಮಾಡಿದ್ದಾರೆ ಎಂಬುದಾಗಿ ಅಂಬಾನಿ ತಿಳಿಸಿದ್ದಾರೆ.

ಕರೆ ಡ್ರಾಪ್

ಕರೆ ಡ್ರಾಪ್

ಇಷ್ಟಲ್ಲದೆ ಕಂಪೆನಿಗಳು ಜಿಯೋ ಗ್ರಾಹಕರಿಗೆ ವಾಯ್ಸ್ ಕಾಲಿಂಗ್ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಅಭಿಪ್ರಾಯವನ್ನು ನೀಡುತ್ತಿದ್ದಾರೆ, ಅದಕ್ಕಾಗಿಯೇ ಟೆಲಿಕೊ ಆಪರೇಟರ್‌ಗಳು ಕರೆಗಳನ್ನು ಡ್ರಾಪ್ ಮಾಡುತ್ತಿದ್ದಾರೆ ಎಂಬುದೂ ಅವರ ದೂರಾಗಿದೆ.

Best Mobiles in India

English summary
Here's how you can use MNP to shift to Reliance Jio without changing your number.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X