ಬ್ರೇಕಿಂಗ್ ನ್ಯೂಸ್!..'ಜಿಯೋ ಗಿಗಾಫೈಬರ್' ಸೇವೆ ಹೇಗಿರಲಿದೆ ಗೊತ್ತಾ?

|

2018ರಲ್ಲೇ ರಿಲಯನ್ಸ್ ಜಿಯೋ ಗಿಗಾಫೈಬರ್ FTTH ಬ್ರಾಡ್ಬ್ಯಾಂಡ್ ಸೇವೆ ಬಿಡುಗಡೆಯಾದರೂ ಈವರೆಗೂ ಈ ಸೇವೆ ಸಾರ್ವಜನಿಕರಿಗೆ ದೊರೆತಿಲ್ಲ. ಆದರೆ, ಇದೀಗ ಬಂದಿರುವ ಸಿಹಿಸುದ್ದಿ ಎಂದರೆ, ರಿಲಯನ್ಸ್ ಜಿಯೊಗಿಗಾಫೈಬರ್ ಸೇವೆ ಹೇಗಿರಬಹುದು ಎಂಬ ಕುತೋಹವನ್ನು ಜಿಯೋ ಟ್ರಿಪಲ್ ಪ್ಲೇ' ಯೋಜನೆ ತಣಿಸಿದೆ. ಟೆಲಿಕಾಂ ಟಾಕ್ ವರದಿಯ ಪ್ರಕಾರ, ರಿಲಯನ್ಸ್ ಜಿಯೊಗಿಗಾಫೈಬರ್ ತನ್ನ ಉದ್ಯೋಗಿಗಳ ಹೆಸರಿನಲ್ಲಿ ಎಫ್ಟಿಟಿಎಚ್ ಕನೆಕ್ಟರ್ಗಳಿಗಾಗಿ ಹೊಸ 'ಟ್ರಿಪಲ್ ಪ್ಲೇ' ಯೋಜನೆಯನ್ನು ಬಿಡುಗಡೆ ಮಾಡಿದೆ ಎಂದು ತಿಳಿದುಬಂದಿದೆ.

ಬ್ರೇಕಿಂಗ್ ನ್ಯೂಸ್!..'ಜಿಯೋ ಗಿಗಾಫೈಬರ್' ಸೇವೆ ಹೇಗಿರಲಿದೆ ಗೊತ್ತಾ?

ಹೌದು, ಬಳಕೆದಾರರಿಗೆ ಜಿಯೋ ಗಿಗಾಫೈಬರ್ ಪ್ರಯೋಜನಗಳು ಹೇಗಿರಲಿವೆ ಎಂಬುದು ಆನ್ಲೈನ್‌ನಲ್ಲಿ ಹೊರಹೊಮ್ಮಿದೆ. ಜಿಯೋ ಗೀಗಾಫೈಬರ್‌ನ 'ಟ್ರಿಪಲ್ ಪ್ಲೇ' ಯೋಜನೆಯಲ್ಲಿ ಪ್ರಾಥಮಿಕ ಯೋಜನೆಯು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಈ ಯೋಜನೆಯಲ್ಲಿ 100GB ನಷ್ಟು ಡೇಟಾ, ಜಿಯೋ ಹೋಮ್ ಟಿವಿ ಚಂದಾದಾರಿಕೆ, ಅಪರಿಮಿತ ಧ್ವನಿ ಕರೆ ಮತ್ತು ಜಿಯೋ ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆಯನ್ನು ಒದಗಿಸುತ್ತದೆ ಎಂದು ಹೇಳಲಾಗಿದೆ. ಆದರೆ, ಜಿಯೊಗಿಗಾಫೈಬರ್ ಯೋಜನೆಯ ಬೆಲೆ ಮಾತ್ರ ಊಹೆಯಲ್ಲಿದೆ.

ಮಾಧ್ಯಮ ವರದಿಗಳ ಪ್ರಕಾರ, 100 ಎಂಬಿಪಿಎಸ್ FUP ನೊಂದಿಗೆ 30 ದಿನಗಳವರೆಗೆ 100 ಜಿಬಿ ಡೇಟಾ ಜೊತೆಗೆ 1000GB ಬೋನಸ್ ಡೇಟಾ ಇರಲಿದೆಯಂತೆ. ಇನ್ನು ಆನ್‌ಲೈನಿನಲ್ಲಿ ಈಗಾಗಲೇ ಜಿಯೋ ಗೀಗಾಫೈಬರ್‌ಗೆ ನೋಂದಣಿ ಆರಂಭಿಸಿರುವ ಜಿಯೋ, ಮುಂಬರುವ ವಾರಗಳಲ್ಲಿ ( (ಏಪ್ರಿಲ್ ಎರಡನೇ ವಾರ) ಬಳಕೆದಾರರಿಗೆ ಈ ಸೇವೆಯನ್ನು ರೋಲ್ಔಟ್ ಮಾಡಲು ತಯಾರಾಗಿದೆ ಎಂದು ಹೇಳಲಾಗಿದೆ. ಹಾಗಾದರೆ, ಇನ್ನೇನು ಗ್ರಾಹಕರ ಆಯ್ಕೆಗೆ ಬರುತ್ತಿರುವ ಜಿಯೋ ಗಿಗಾಫೈಬರ್ ಬಗೆಗಿನ ಮಾಹಿತಿಯನ್ನು ಮುಂದೆ ಓದಿ ತಿಳಿಯಿರಿ.

ಮೂರು ತಿಂಗಳು ಉಚಿತ ಸೇವೆ!

ಮೂರು ತಿಂಗಳು ಉಚಿತ ಸೇವೆ!

ಏರ್‌ಟೆಲ್ ಬ್ರಾಡ್ ಬ್ಯಾಂಡ್ ಮತ್ತು ಬಿಎಸ್ಎನ್ಎಲ್ ಬ್ರಾಡ್ ಬ್ಯಾಂಡ್ ಗಳ ಜೊತೆಗೆ ಸ್ಪರ್ಧೆಗಿಳಿಯಲು ಸಿದ್ಧವಾಗುತ್ತಿರುವ ರಿಲಾಯನ್ಸ್ ಜಿಯೋ ಮತ್ತೆ ಮೂರು ತಿಂಗಳ ಉಚಿತ ಸೇವೆಯನ್ನು ನೀಡಲಿದೆ ಎಂದು ಹೇಳಲಾಗಿದೆ. ಜಿಯೋ ಗಿಗಾಫೈಬರ್ ಬ್ರಾಡ್ ಬ್ಯಾಂಡ್ ಸೇವೆಯನ್ನು ಪಡೆಯಲು 500 ರೂಪಾಯಿ ಡೆಪಾಸಿಟ್ ಇಡಬೇಕಿದ್ದು, ಈ ಮೊತ್ತವನ್ನು ನಿಮಗೆ ಕನೆಕ್ಷನ್ ಹಿಂಪಡೆದಾಗ ಮರುಪಾವತಿ ಮಾಡಲಾಗುತ್ತದೆ. ಕನೆಕ್ಷನ್ ಪೆಡದ ನಂತರ ಮೂರು ತಿಂಗಳು ಗಿಗಾಫೈಬರ್ ಸೇವೆ ಉಚಿತವಾಗಿರಲಿದೆ.

ಜಿಯೋ 'ಗಿಗಾ ಟಿವಿ' ಸೆಟ್ ಟಾಪ್ ಬಾಕ್ಸ್ ಉಚಿತ!

ಜಿಯೋ 'ಗಿಗಾ ಟಿವಿ' ಸೆಟ್ ಟಾಪ್ ಬಾಕ್ಸ್ ಉಚಿತ!

ರಿಲಯನ್ಸ್ ಇಂಡಸ್ಟ್ರೀಸ್ 41 ನೇ ವಾರ್ಷಿಕ ಸಭೆಯಲ್ಲಿ ಯಾರೂ ಕೂಡ ಊಹಿಸದಂತೆ ಬಿಡುಗಡೆಯಾದ ಒಂದು ಡಿವೈಸ್ ಎಂದರೆ ಅದು ಜಿಯೋ 'ಗಿಗಾ ಟಿವಿ' ಸೆಟ್ ಟಾಪ್ ಬಾಕ್ಸ್.! ಜಿಯೋ ಡಿಟಿಹೆಚ್ ಬದಲಿಗೆ ಇಂಟರ್‌ನೆಟ್ ಆಧಾರಿತ ಜಿಯೋ 'ಗಿಗಾ ಟಿವಿ' ಸೆಟ್ ಟಾಪ್ ಬಾಕ್ಸ್ ಅನ್ನು ಜಿಯೋ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಈಗ ಗಿಗಾಫೈಬರ್ ಬ್ರಾಡ್ ಬ್ಯಾಂಡ್ ಸೇವೆಯ ಜೊತೆ ಜಿಯೋ ಟಿವಿ ರೂಟರ್ ಸಹ ಉಚಿತವಾಗಿ ದೊರೆಯುತ್ತಿರುವುದು ಬಂಪರ್ ಆಫರ್ ಆಗಿದೆ.

ಜಿಯೋ 'ಗಿಗಾ ಟಿವಿ' ವಿಶೇಷತೆಗಳೇನು?

ಜಿಯೋ 'ಗಿಗಾ ಟಿವಿ' ವಿಶೇಷತೆಗಳೇನು?

ರಿಲಯನ್ಸ್ ಘೋಷಣೆ ಮಾಡಿರುವ ಜಿಯೋ 'ಗಿಗಾರೂಟರ್' ಬಗೆಗಿನ ವಿಶೇಷತೆಗಳನ್ನು ರಿಲಯನ್ಸ್ ಕಂಪೆನಿ ಈಗಾಗಲೇ ಬಹಿರಂಗಪಡಿಸಿದೆ. 600 ಪ್ಲಸ್ ಚಾನೆಲ್‌ಗಳು, ಲಕ್ಷಾಂತರ ಹಾಡುಗಳು ಮತ್ತು 4K ರೆಸೊಲ್ಯೂಶನ್‌ನಲ್ಲಿ ಅಲ್ಟ್ರಾ ಹೆಚ್‌ಡಿಯಲ್ಲಿ ವೀಡಿಯೋಗಳನ್ನು ಜಿಯೋ 'ಗಿಗಾ ಟಿವಿ' ಸೆಟ್ ಟಾಪ್ ಬಾಕ್ಸ್ ಬಳಕೆದಾರರಿಗೆ ಜಿಯೋ ಉಚಿತವಾಗಿ ನೀಡುತ್ತಿದೆ.ಟಿವಿ ಲೋಕಕ್ಕೆ ಆಶ್ಚರ್ಯ ಮೂಡಿಸಿರುವ ರಿಲಾಯನ್ಸ್ ಜಿಯೋ 'ಗಿಗಾ ಟಿವಿ' ಸೆಟ್ ಟಾಪ್ ಬಾಕ್ಸ್ ಅನ್ನ ಧ್ವನಿ ಕಮಾಂಡ್ ಮೂಲಕ ಟಿವಿಯಲ್ಲಿ ನಿಯಂತ್ರಿಸುವ ವೈಶಿಷ್ಟ್ಯವನ್ನು ಸಹ ಹೊಂದಿದೆ.

ಜಿಯೋ 'ಗಿಗಾ ಟಿವಿ' ಸೇವೆ ಎಲ್ಲೆಲ್ಲಿ ಲಭ್ಯ

ಜಿಯೋ 'ಗಿಗಾ ಟಿವಿ' ಸೇವೆ ಎಲ್ಲೆಲ್ಲಿ ಲಭ್ಯ

ರಿಲಾಯನ್ಸ್ ಜಿಯೋ ಕಂಪೆನಿ ಜಿಯೋ 'ಗಿಗಾ ಟಿವಿ' ಸೆಟ್ ಟಾಪ್ ಬಾಕ್ಸ್ ಸೇವೆಯನ್ನು ಭಾರತದಾದ್ಯಂತ 1100 ನಗರಗಳಲ್ಲಿ ಒದಗಿಸುವುದಾಗಿ ಹೇಳಿಕೊಂಡಿದೆ. ಕರ್ನಾಟಕದಲ್ಲಿ ಮೊದಲು ಬೆಂಗಳೂರಿನಲ್ಲಿ ಜಿಯೋ 'ಗಿಗಾ ಟಿವಿ' ಸೆಟ್ ಟಾಪ್ ಬಾಕ್ಸ್ ಸೇವೆ ಸಿಗುವುದು ಈಗಾಗಲೇ ಪಕ್ಕಾ ಆಗಿದೆ. ರಾಜ್ಯದಲ್ಲಿನ ಇನ್ನಿತರ ನಗರಗಳು ಯಾವುವು ಎಂಬ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದ್ದು, ಬೆಂಗಳೂರಿಗರಿಗೆ ಮೊದಲು ಸಿಹಿಸುದ್ದಿ ಸಿಕ್ಕಿದೆ.

ಗಿಗಾಫೈಬರ್ ಸೇವೆ ಪಡೆಯುವ ಮೊದಲ ನಗರಗಳು!

ಗಿಗಾಫೈಬರ್ ಸೇವೆ ಪಡೆಯುವ ಮೊದಲ ನಗರಗಳು!

ಬೆಂಗಳೂರು, ಮುಂಬೈ, ದೆಹಲಿ, ಹೈದರಾಬಾದ್, ಚೆನ್ನೈ, ಪುಣೆ, ಗುರುಗ್ರಾಂ, ಲಕ್ನೋ, ಕಾನ್ಫುರ, ರಾಯ್ ಪುರ, ನಾಗಪುರ, ಇಂದೋರ್, ಪುಣೆ, ಭೋಪಾಲ್, ಗಾಝಿಯಾಬಾದ್, ಲುದಿಯಾನ, ಕೋಯಂಬತ್ತೂರ್, ಆಗ್ರಾ, ಮಧುರೈ, ನಾಸಿಕ್, ಫರಿದಾಬಾದ್, ಮೀರತ್, ರಾಜ್ ಕೋಟ್, ಶ್ರೀನಗರ, ಅಮೃತ್ ಸರ, ಪಾಟ್ನಾ, ಅಲಹಾಬಾದ್, ರಾಂಚಿ, ಜೋಧ್ ಪುರ, ಕೋಟಾ. ಗೌಹಾಟಿ, ಚಂಡೀಗಡ, ಸೋಲಾಪುರ ನಗರಗಳಲ್ಲಿ ಜಿಯೋ ಗಿಗಾಫೈಬರ್ ಸೇವೆ ಮೊದಲ ಆರಂಭವಾಗಲಿದೆ ಎಂದು ತಿಳಿದುಬಂದಿದೆ.

ಮೂರು ಹಂತಗಳಲ್ಲಿ ರಾಜ್ಯಗಳಿಗೆ ವಿಸ್ತಾರ!

ಮೂರು ಹಂತಗಳಲ್ಲಿ ರಾಜ್ಯಗಳಿಗೆ ವಿಸ್ತಾರ!

ಗುಜರಾತ್, ದೆಹಲಿ, ತೆಲಂಗಾಣ, ರಾಜಸ್ತಾನ, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ, ಮಹಾರಾಷ್ಟ್ರ ರಾಜ್ಯಗಳು ಮೊದಲ ಹಂತದಲ್ಲಿ ಗಿಗಾಫೈಬರ್ ಸೇವೆಯನ್ನು ಪಡೆದುಕೊಂಡರೆ, ಕರ್ನಾಟಕ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ತಮಿಳುನಾಡು ರಾಜ್ಯಗಳು ಎರಡನೇ ಪಟ್ಟಿಯಲ್ಲಿ ಸ್ಥಾನಪಡೆದಿವೆ. ಇನ್ನು ಮಧ್ಯ ಪ್ರದೇಶ, ಕೇರಳ, ಜಮ್ಮು ಮತ್ತು ಕಾಶ್ಮೀರ, ಬಿಹಾರ, ಗೋವಾ, ಜಾರ್ಖಂಡ್, ಉತ್ತರಾಖಂಡ, ಓರಿಸ್ಸಾ, ಹಿಮಾಚಲ ಪ್ರದೇಶ, ಛತ್ತೀಸ್ ಗಢ ರಾಜ್ಯಗಳು ಮೂರನೇ ಪಟ್ಟಿಯಲ್ಲಿ ಸ್ಥಾನಪಡೆದಿವೆ.

500 ರೂಪಾಯಿಗಳಿಂದ ಪ್ಲಾನ್ ಆರಂಭ!

500 ರೂಪಾಯಿಗಳಿಂದ ಪ್ಲಾನ್ ಆರಂಭ!

ಮನೆಮನೆಯಲ್ಲೂ ಅಂತರ್ಜಾಲ ಸೇವೆ ಒದಗಿಸಿ ಇತರೆ ಕಂಪೆನಿಗಳ ಜೊತೆಗೆ ಸ್ಪರ್ಧೆಯ ಮಟ್ಟವನ್ನು ಹೆಚ್ಚಿಸುವ ನಿರೀಕ್ಷೆ ಇಟ್ಟುಕೊಂಡಿರುವ ಜಿಯೋ ಗಿಗಾ ಪೈಬರ್ ಸೇವೆಯು ಕೇವಲ 500 ರೂಪಾಯಿಗಳಿಂದ ಆರಂಭವಾಗಲಿದೆ ಎಂದು ಹೇಳಲಾಗಿದೆ. ಒಟ್ಟು ಮೂರಕ್ಕೂ ಹೆಚ್ಚು ಜಿಯೋ ಗಿಗಾ ಪೈಬರ್ ಸೇವೆ ಪ್ಲಾನ್‌ಗಳು ಲೀಕ್ ಆಗಿದ್ದು, ಇತರೆ ಬ್ರಾಡ್‌ಬ್ಯಾಂಡ್ ಕಂಪೆನಿಗಳು ಹೆದರುವಂತೆ ಮಾಡಿದೆ. ಇದರಿಂದ ಬ್ರಾಡ್‌ಬ್ಯಾಂಡ್ ಸೇವಾ ನಿರತರು ಈಗ ಸ್ಪರ್ಧೆಗೆ ಸಿದ್ಧಗೊಳ್ಳಲೇಬೇಕಾಗಿದೆ.

Best Mobiles in India

English summary
Reliance Jio could be all set to launch its broadband services in the coming weeks.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X