ಕ್ರಿಕೆಟ್‌ ಪ್ರಿಯರಿಗಾಗಿ ಹೊಸ ಆಪ್‌ ಪರಿಚಯಿಸಿದ ಜಿಯೋ!

|

ಟೆಲಿಕಾಂ ವಲಯದ ದೈತ್ಯ ಎನಿಸಿಕೊಂಡಿರುವ ಜಿಯೋ ತನ್ನ ಜಿಯೋ ಫೀಚರ್‌ಫೋನ್‌ಗಳಿಂದಲೂ ಪ್ರಸಿದ್ಧಿಯನ್ನ ಪಡೆದುಕೊಂಡಿದೆ. ಸಾಮಾನ್ಯ ಫೀಚರ್‌ಫೋನ್‌ಗಳಲ್ಲಿ ಲಭ್ಯವಾಗದ ಫೀಚರ್‌ ಜಿಯೋ ಫಿಚರ್‌ಫೋನ್‌ನಲ್ಲಿ ಲಭ್ಯವಿದೆ. ಸದ್ಯ ಇದೀಗ ಜಿಯೋ ತನ್ನ ಜಿಯೋ ಫೀಚರ್‌ ಫೋನ್‌ನಲ್ಲಿ ಹೊಸ ಜಿಯೋ ಕ್ರಿಕೆಟ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಕ್ರಿಕೆಟ್ ಅಪ್ಲಿಕೇಶನ್ ಲೈವ್ ಸ್ಕೋರ್‌ಗಳು, ಮ್ಯಾಚ್‌ ಆಪ್ಡೇಟ್ಸ್‌, ಸುದ್ದಿ ಮತ್ತು ವೀಡಿಯೊಗಳನ್ನು ನೀಡಲಿದೆ.

ಜಿಯೋ

ಹೌದು, ಜಿಯೋ ಸಂಸ್ಥೆ ಕ್ರಿಕೆಟ್‌ ಪ್ರಿಯರಿಗೆ ಶುಭಸುದ್ದಿಯನ್ನ ನೀಡಿದೆ. ಜಿಯೋ ಫೀಚರ್‌ ಫೋನ್‌ ಹೊಂದಿರುವ ಸಾಮಾನ್ಯರು ಕೂಡ ತಮ್ಮ ಫೀಚರ್‌ಫೋನ್‌ನಲ್ಲಿ ಕ್ರಿಕೆಟ್‌ ಬಗ್ಗೆ ತಿಳಿದುಕೊಳ್ಳುವ ಅವಕಾಶವನ್ನು ನೀಡಿದೆ. ಇದಕ್ಕಾಗಿದೆ ಜಿಯೋ ಕ್ರಿಕೆಟ್‌ ಅಪ್ಲಿಕೇಶನ್‌ ಅನ್ನು ಪರಿಚಯಿಸಿದೆ. ಇನ್ನು ಜಿಯೋ ಫೀಚರ್‌ ಫೋನ್‌ KioOS ನಲ್ಲಿ ಕಾರ್ಯನಿರ್ವಹಿಸುವುದರಿಂದ ಕಿಯೋಸ್‌ ಆಪ್ ಸ್ಟೋರ್ ಮೂಲಕ JioCricket ಅಪ್ಲಿಕೇಶನ್ ಅನ್ನು JioPhone ಮತ್ತು JioPhone 2 ನಲ್ಲಿ ಡೌನ್‌ಲೋಡ್ ಮಾಡಬಹುದಾಗಿದೆ. ಇನ್ನು ಈ ಕ್ರಿಕೆಟ್‌ ಆಪ್ಲಿಕೇಶನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜಿಯೋ

ಸದ್ಯ ಎಲ್ಲೆಡೆ ಐಪಿಎಲ್‌ ಹಂಗಾಮದ ಹವಾ ಜೋರಾಗಿ ಇದೆ. ಯುಎಇಯಲ್ಲಿ ಐಪಿಎಲ್‌ ನಡೆಯುತ್ತಿದ್ದರೂ ಭಾರತದಲ್ಲಿ ಕ್ರಿಕೆಟ್‌ ಪ್ರೇಮಕ್ಕೇನು ಭಂಗವಾಗಿಲ್ಲ. ಐಪಿಎಲ್‌ ಮೇಲಿನ ಆಸಕ್ತಿ ಮೊದಲಿಗಿಂತಲೂ ಹೆಚ್ಚಾಗಿದೆ. ಇನ್ನು ಮ್ಯಾಚ್‌ನ ಸಮಯದಲ್ಲಿ ಪಂದ್ಯದ ಸ್ಕೋರ್‌ ಮಾಹಿತಿ, ವಿಕೆಟ್‌ ಮಾಹಿತಿ ತಿಳಿಯುವುದಕ್ಕೆ ಸ್ಮಾರ್ಟ್‌ಫೋನ್‌ನಲ್ಲಿ ಹಲವು ಆಪ್‌ಗಳಿವೆ. ಆದರೆ ಸಾಮಾನ್ಯ ಫೀಚರ್‌ ಫೋನ್‌ನಲ್ಲಿ ಇದು ಲಭ್ಯವಿಲ್ಲ. ಆದರೆ ಈ ಕೊರತೆಯನ್ನ ಜಿಯೋ ನೀಗಿಸಿದೆ. ತನ್ನ ಫೀಚರ್‌ ಫೋನ್‌ಗಾಗಿ ಜಿಯೋ ಕ್ರಿಕೆಟ್ ಅಪ್ಲಿಕೇಶನ್ ಪರಿಚಯಿಸಿದ್ದು, ಇದು ಹಿಂದಿ, ಬಾಂಗ್ಲಾ, ಮರಾಠಿ, ತೆಲುಗು, ತಮಿಳು, ಮಲಯಾಳಂ, ಕನ್ನಡ, ಗುಜರಾತಿ ಮತ್ತು ಇಂಗ್ಲಿಷ್ ಸೇರಿದಂತೆ ಒಂಬತ್ತು ಭಾಷೆಗಳಲ್ಲಿ ಲಭ್ಯವಿದೆ.

ಜಿಯೋ

ಇನ್ನು ಜಿಯೋ ಕ್ರಿಕೆಟ್‌ ಅಪ್ಲಿಕೇಶನ್ ವಿಭಿನ್ನ ಟ್ಯಾಬ್‌ಗಳಿಂದ ಬೇರ್ಪಟ್ಟ ವಿಭಿನ್ನ ವಿಭಾಗಗಳನ್ನು ಹೊಂದಿದೆ. ಅಪ್ಲಿಕೇಶನ್ ತೆರೆದಾಗ, ನಡೆಯುತ್ತಿರುವ ಪಂದ್ಯದ ಆಪ್ಡೇಟ್‌ ಸ್ಕೋರ್‌ಗಳನ್ನು ತೋರಿಸುವ ಲೈವ್ ಸ್ಕೋರ್ ವಿಭಾಗವನ್ನು ನೀವು ಕಾಣಬಹುದು. ಅಲ್ಲದೆ ಮುಖಪುಟ ಪರದೆಯಲ್ಲಿ ಟ್ರೆಂಡಿಂಗ್ ವಿಭಾಗ ಮತ್ತು ಆಟಗಳ ವಿಭಾಗವೂ ಇದೆ. ಅಲ್ಲದೆ ಜಿಯೋ ಕ್ರಿಕೆಟ್ ಅಪ್ಲಿಕೇಶನ್‌ನ ಇತರ ವಿಭಾಗಗಳಲ್ಲಿ ಸುದ್ದಿ, ಆಟಗಳು, ವೀಡಿಯೊಗಳು ಮತ್ತು Fixture ವಿಭಾಗಗಳಿಗಾಗಿವೆ. ಅಲ್ಲದೆ ಜಿಯೋಫೋನ್ ಬಳಕೆದಾರರು ಈ ಆಪ್ ಮೂಲಕ ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್ ಆಟವನ್ನು ಸಹ ಆಡಬಹುದು.

ಜಿಯೋ

ಜಿಯೋಫೋನ್ ಬಳಕೆದಾರರು ಕೈಯೋಸ್ ಆಪ್ ಸ್ಟೋರ್ ಮೂಲಕ ಜಿಯೋ ಕ್ರಿಕೆಟ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಧ್ವನಿ ಆಜ್ಞೆಯ ಮೂಲಕ ಬಳಕೆದಾರರು ಅಪ್ಲಿಕೇಶನ್‌ಗಾಗಿ ಹುಡುಕಬಹುದು. ಸದ್ಯ ಜಿಯೋ ಫಿಚರ್‌ ಫೋನ್‌ ಬಳಕೆದಾರರು ಕ್ರಿಕೆಟ್‌ ಮನರಂಜನೆಯನ್ನ ಎಲ್ಲೆ ಇದ್ದರೂ ಸವಿಯುವುದಕ್ಕೆ ಉತ್ತಮ ಅವಕಾಶವನ್ನ ನೀಡಿದೆ.

Best Mobiles in India

Read more about:
English summary
Reliance Jio has launched a new JioCricket app for JioPhone. The new cricket app will offer live scores, match updates, news and videos, and more.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X