ಜಿಯೋ ಸಂಸ್ಥೆಯಿಂದ ಐದು ಹೊಸ ಪ್ರಿಪೇಯ್ಡ್‌ ರೀಚಾರ್ಜ್‌ ಪ್ಲ್ಯಾನ್‌ ಬಿಡುಗಡೆ!

|

ಭಾರತದ ಟೆಲಿಕಾಂ ದೈತ್ಯ ರಿಲಯನ್ಸ್‌ ಜಿಯೋ ತನ್ನ ಗ್ರಾಹಕರಿಗೆ ಐದು ಹೊಸ ಪ್ಲ್ಯಾನ್‌ಗಳನ್ನು ಲಾಂಚ್‌ ಮಾಡಿದೆ. 'ನೋ ಡೈಲಿ ಲಿಮಿಟ್' 'ಪ್ರಿಪೇಯ್ಡ್ ಮೊಬಿಲಿಟಿ ಆಫರ್‌ಗಳೊಂದಿಗೆ ಈ ಹೊಸ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಡೇಟಾ ಮತ್ತು ಅನಿಯಮಿತ ಕರೆ ಪ್ರಯೋಜನಗಳ ಮೇಲೆ ಶೂನ್ಯ ಎಫ್‌ಯುಪಿ ನಿರ್ಬಂಧಗಳೊಂದಿಗೆ ಈ ಪ್ಲ್ಯಾನ್‌ಗಳನ್ನು ಪ್ರಾರಂಭಿಸಿದೆ. ಇನ್ನು ಈ ಹೊಸ ಪ್ಲ್ಯಾನ್‌ಗಳು 127ರೂ ನಿಂದ ಹಿಡಿದು 2,397.ರೂ ವರೆಗೂ ಲಭ್ಯವಿದೆ. ಅಲ್ಲದೆ ಈ ಎಲ್ಲಾ ಯೋಜನೆಗಳು 15 ದಿನಗಳಿಂದ 365 ದಿನಗಳವರೆಗೆ ವಿಭಿನ್ನ ಮಾನ್ಯತೆಗಳನ್ನು ನೀಡುತ್ತವೆ.

ಜಿಯೋ

ಹೌದು, ಜಿಯೋ ಸಂಸ್ಥೆ ಹೊಸದಾಗಿ ಐದು ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಹೆಚ್ಚುವರಿ ಡೇಟಾಕ್ಕಾಗಿ ಡೇಟಾ ವೋಚರ್‌ಗಳನ್ನು ಖರೀದಿಸಲು ಬಯಸದ, ಯಾವುದೇ ದಿನ ಅನಿಯಮಿತ ಡೇಟಾವನ್ನು ಬಳಸಲು ಬಯಸುವವರಿಗೆ ಈ ಪ್ಲ್ಯಾನ್‌ಗಳು ಪ್ರಯೋಜನಕಾರಿಯಾಗಿವೆ. ಇನ್ನು ಜಿಯೋದಿಂದ ಈ ಎಲ್ಲಾ ಹೊಸ ಪ್ರಿಪೇಯ್ಡ್ ಯೋಜನೆಗಳು ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ವಾಯ್ಸ್‌ ಕಾಲ್‌, ದಿನಕ್ಕೆ 100 ಎಸ್‌ಎಂಎಸ್ ಮತ್ತು ಜಿಯೋ ಅಪ್ಲಿಕೇಶನ್‌ಗಳಿಗೆ ಉಚಿತ ಪ್ರವೇಶವನ್ನು ನೀಡುತ್ತವೆ. ಇನ್ನುಳಿದಂತೆ ಈ ಹೊಸ ಪ್ಲ್ಯಾನ್‌ಗಳ ಪ್ರಯೋಜನಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಪ್ರಿಪೇಯ್ಡ್

ಹೊಸ ಪ್ರಿಪೇಯ್ಡ್ ಯೋಜನೆಗಳು 30 ದಿನಗಳ ಬಹು ಮಾನ್ಯತೆಯನ್ನು ಹೊಂದಿವೆ, ಹಿಂದಿನ ಜನಪ್ರಿಯ ಪ್ರಿಪೇಯ್ಡ್ ಯೋಜನೆಗಳಿಗಿಂತ ಭಿನ್ನವಾಗಿ, ಇದು 28 ದಿನಗಳ ಬಹು ಮಾನ್ಯತೆಯೊಂದಿಗೆ ಬಂದಿತು. ಐದು ಯೋಜನೆಗಳು ದೈನಂದಿನ ಮಿತಿ ಮತ್ತು ಅನಿಯಮಿತ ಧ್ವನಿಯಿಲ್ಲದೆ ಸ್ಥಿರ ಡೇಟಾವನ್ನು ನೀಡುತ್ತವೆ. "ಹೆಚ್ಚಿನ ಡೇಟಾ ಬಳಕೆದಾರರು ದೈನಂದಿನ ಮಿತಿಗಳನ್ನು ಖಾಲಿ ಮಾಡುವ ಬಗ್ಗೆ ಚಿಂತಿಸದೆ ತಡೆರಹಿತ ಡೇಟಾ ಬಳಕೆಯನ್ನು ಆನಂದಿಸಲು ಇದು ಸಹಾಯವಾಗಲಿದೆ.

ಜಿಯೋ

ಮೈಜಿಯೊ ಅಪ್ಲಿಕೇಶನ್‌ನ ಪ್ರಕಾರ, ಈ ಯೋಜನೆಗಳು ಜಿಯೋಟಿವಿ, ಜಿಯೋ ಸಿನೆಮಾ, ಜಿಯೋನ್ಯೂಸ್ ಮತ್ತು ಇತರವುಗಳನ್ನು ಒಳಗೊಂಡಂತೆ ಜಿಯೋ ಮಾಹಿತಿ ಮತ್ತು ಯುಟಿಲಿಟಿ ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ನೀಡುತ್ತದೆ.ಇನ್ನು ಹೊಸ 127ರೂ ಜಿಯೋ ಪ್ರಿಪೇಯ್ಡ್ ಯೋಜನೆ ಬಳಕೆದಾರರಿಗೆ ಒಟ್ಟು 12GB ಡೇಟಾವನ್ನು ನೀಡುತ್ತದೆ ಮತ್ತು 15 ದಿನಗಳ ಮಾನ್ಯತೆಯ ಅವಧಿಯೊಂದಿಗೆ ಬರುತ್ತದೆ. 247 ರೂ ರೀಚಾರ್ಜ್ ಯೋಜನೆಯೂ ಇದೆ, ಇದು ಒಟ್ಟು 25GB ಡೇಟಾವನ್ನು ನೀಡಲಿದ್ದು, 30 ದಿನಗಳವರೆಗೆ ಮಾನ್ಯತೆ ಹೊಂದಿದೆ.

ಜಿಯೋ

ಇನ್ನು 56 ದಿನಗಳ ಮಾನ್ಯತೆಯೊಂದಿಗೆ 2GB ಅಥವಾ 1.5GB ದೈನಂದಿನ ಡೇಟಾವನ್ನು ನೀಡುವ ರೀಚಾರ್ಜ್ ಯೋಜನೆಗಳನ್ನು ಹುಡುಕುತ್ತಿರುವವರು, 444 ರೂ. ಜಿಯೋ ಯೋಜನೆ ಮತ್ತು 399 ರೂ, ಜಿಯೋ ಪ್ಯಾಕ್ ಖರೀದಿಸಬಹುದು. ಈ ಎರಡೂ ಯೋಜನೆಗಳು ಅನಿಯಮಿತ ಕರೆ ಪ್ರಯೋಜನಗಳನ್ನು ಮತ್ತು ದಿನಕ್ಕೆ 100 ಎಸ್‌ಎಂಎಸ್ ಸಹ ನೀಡುತ್ತವೆ. ಹಾಗೆಯೇ 447 ರೂ,ಗಳ ಜಿಯೋ ಪ್ರಿಪೇಯ್ಡ್ ಯೋಜನೆಯು ಒಟ್ಟು 50GB ಡೇಟಾವನ್ನು ನೀಡುತ್ತದೆ. ಇದು 60 ದಿನಗಳ ಮಾನ್ಯತೆಯ ಅವಧಿಯನ್ನು ಹೊಂದಿದೆ.

ಜಿಯೋ

ಇದಲ್ಲದೆ ಜಿಯೋ 597 ರೂ ರೀಚಾರ್ಜ್ ಯೋಜನೆಯನ್ನು ಸಹ ಬಿಡುಗಡೆ ಮಾಡಿದೆ. ಇದು 90 ದಿನಗಳವರೆಗೆ ಒಟ್ಟು 75 GB ಡೇಟಾವನ್ನು ನೀಡಲಿದೆ. ಇನ್ನು ಕೊನೆಯದಾಗಿ, ರೂ 2,397 ಜಿಯೋ ಪ್ರಿಪೇಯ್ಡ್ ಯೋಜನೆಯು ಒಟ್ಟು 365GB ಡೇಟಾದೊಂದಿಗೆ ಬರುತ್ತದೆ. ಇದು ವಾರ್ಷಿಕ ಯೋಜನೆಯಾಗಿದೆ, ಆದ್ದರಿಂದ ನೀವು ಇದನ್ನು ಖರೀದಿಸಿದ ನಂತರ, 365 ದಿನಗಳವರೆಗೆ ಸಕ್ರಿಯವಾಗಿರುತ್ತದೆ. ಮೈಜಿಯೊ ಅಪ್ಲಿಕೇಶನ್‌ನಲ್ಲಿ ‘ನೋ ಡೈಲಿ ಲಿಮಿಟ್' ವಿಭಾಗದ ಅಡಿಯಲ್ಲಿ ಹೊಸ ಜಿಯೋ ಪ್ರಿಪೇಯ್ಡ್ ಯೋಜನೆಗಳನ್ನು ಕಾಣಬಹುದು.

Best Mobiles in India

Read more about:
English summary
India's largest telecom operator Reliance Jio on Saturday introduced five new plans with ''no daily limit'' prepaid mobility offerings.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X