Subscribe to Gizbot

ಶಾಕಿಂಗ್ ನ್ಯೂಸ್: ಈ ವಾರದಲ್ಲಿಯೇ ಕೊನೆಯಾಗಲಿದೆ ಜಿಯೋ ಉಚಿತ ಆಫರ್!

Written By:

ಜಿಯೋವಿನ ಈ ಉಚಿತ ಸೇವೆ ನ್ಯಾಯಸಮ್ಮತವಾಗಿಲ್ಲ, ಇನ್ನು ಇದಕ್ಕೆ ಟ್ರಾಯ್‌ ಸಂಪೂರ್ಣ ಸಹಕಾರ ನೀಡುತ್ತಿದೆ. ಇದರಿಂದಾಗಿ, ಇತರ ಎಲ್ಲಾ ಟೆಲಿಕಾಂಗಳಿಗೆ ದೊಡ್ಡ ಹೊಡೆತ ಬೀಳುತ್ತದೆ ಎಂದು ಏರ್‌ಟೆಲ್ ಕಂಪೆನಿ ಟೆಲಿಕಾಂ ಮೇಲ್ಮನವಿ ನ್ಯಾಯಮಂಡಳಿಗೆ (TDSAT) ದೂರು ದಾಖಲಿಸಿದ್ದ ವಿಷಯ ಎಲ್ಲರಿಗೂ ಗೊತ್ತೇ ಇದೆ. ಇದನ್ನು ಪರೀಶೀಲನೆ ನಡೆಸುತ್ತಿರುವ ಮೇಲ್ಮನವಿ ನ್ಯಾಯಮಂಡಳಿ ಇನ್ನೊಂದು ವಾರದಲ್ಲಿ ತನ್ನ ತೀರ್ಪನ್ನು ನೀಡಲಿದೆ ಎನ್ನಲಾಗಿದೆ.!

ಶಾಕಿಂಗ್ ನ್ಯೂಸ್: ಈ ವಾರದಲ್ಲಿಯೇ ಕೊನೆಯಾಗಲಿದೆ ಜಿಯೋ ಉಚಿತ ಆಫರ್!

90 ದಿವಸಗಳಿಗಿಂತ ಹೆಚ್ಚುದಿನ ಉಚಿತ ಸೇವೆಯನ್ನು ನೀಡಬಾರದು ಎನ್ನುವ ನಿಯಮವನ್ನು ನೀವು ಹೇಗೆ ಮುರಿದಿದ್ದೀರಿ? ಜಿಯೋ ಅಲ್ಲದೇ ಬೇರೆ ಟೆಲಿಕಾಂಗಳು ಇದೇ ರೀತಿಯಲ್ಲಿ ನೀಡಿದ್ದರೆ ಅದಕ್ಕೆ ನೀವು ಒಪ್ಪಿಗೆ ಸೂಚಿಸುತ್ತಿದ್ದಿರಾ? ಎಂದು ಭಾರತ ಸರ್ಕಾರದ ಅಧೀನ ಟೆಲಿಕಾಂ ನಿಯಂತ್ರಣ ಮಂಡಳಿ ಸಂಸ್ಥೆ "ಟ್ರಾಯ್‌" ಅನ್ನು ಈ ಬಗ್ಗೆ ಪ್ರಶ್ನಿಸಿದೆ.

ಶಾಕಿಂಗ್ ನ್ಯೂಸ್: ಈ ವಾರದಲ್ಲಿಯೇ ಕೊನೆಯಾಗಲಿದೆ ಜಿಯೋ ಉಚಿತ ಆಫರ್!

ಟೆಲಿಕಾಂ ಮಾರುಕಟ್ಟೆಯಲ್ಲಿ ಈ ರೀತಿಯ ಉಚಿತ ಸೇವೆ ನೀಡುವುದರಿಂದ ಮುಂದಿನ ದಿನಗಳಲ್ಲಿ ಗ್ರಾಹಕರು ಸೇರಿದಂತೆ ಟೆಲಿಕಾಂ ಕಂಪೆನಿಗಳು ನಷ್ಟ ಅನುಭವಿಸುತ್ತವೆ ಎಂದು ಏರ್‌ಟೆಲ್‌ ಚೇರ್‌ಮನ್ ಸುನೀಲ್ ಭಾರತಿ ಮಿತ್ತಲ್ ಹೇಳಿದ್ದ ರೀತಿಯಲ್ಲಿಯೇ, ಮುಂದಿನ ದಿನಗಳಲ್ಲಿ ಜಿಯೋ ಕೂಡ ತನ್ನ ದರಗಳನ್ನು ಹೆಚ್ಚಿಸಿದರೆ ಏನು ಆಗಬಹದು? ಇತರ ಟೆಲಿಕಾಂಗಳ ಮೇಲೆ ದಾಳಿ ಮಾಡಿ ಟೆಲಿಕಾಂ ನಾಶವಾಗುವಂತಹ ಪರಿಸ್ಥಿತಿ ಸೃಷ್ಟಿಯಾಗುತ್ತದೆ ಅಲ್ಲವೇ ಎಂದು ಟೆಲಿಕಾಂ ಮೇಲ್ಮನವಿ ಟ್ರಾಯ್‌ನ ಪ್ರಶ್ನಿಸಿತ್ತು.

ಶಾಕಿಂಗ್ ನ್ಯೂಸ್: ಈ ವಾರದಲ್ಲಿಯೇ ಕೊನೆಯಾಗಲಿದೆ ಜಿಯೋ ಉಚಿತ ಆಫರ್!

ಇನ್ನು ಈ ಪ್ರಶ್ನೆಗಳಿಗೆ ಟ್ರಾಯ್‌ ಉತ್ತರ ನೀಡಲು ಜಿಯೋಗೆ ಹೇಳಿತ್ತು, ಜಿಯೋ ಕೂಡ ತನ್ನ ನ್ಯೂ ಇಯರ್ ಉಚಿತ ಆಫರ್ 2 ಬಗ್ಗೆ ಸ್ಪಷ್ಟನೆ ನೀಡಿತ್ತು, ಆದರೆ ಈ ಯಾವ ಸ್ಪಷ್ಟನೆಗಳಿಗೂ ಟೆಲಿಕಾಂ ಮೇಲ್ಮನವಿ ನ್ಯಾಯಮಂಡಳಿ ತೃಪ್ತಿಯಾಗಿಲ್ಲ ಎನ್ನಲಾಗಿದೆ. ಹಾಗಾಗಿ ಇನ್ನು ಕೆಲವೇ ದಿನಗಳಲ್ಲಿ ಏರ್‌ಟೆಲ್ ದೂರಿನ ಬಗ್ಗೆ ತೀರ್ಪು ಹೊರಬೀಳಲಿದೆ.!

ಟ್ರಾಯ್‌ನ ನಿಯಮಗಳಲ್ಲಿ ದೂಷವಿದ್ದು, ಜಿಯೋಗೆ ಉಚಿತ ಆಫರ್‌ ನಿಡಿರುವುದುನ್ಯಾಯಸಮ್ಮತವಾಗಿಲ್ಲ ಎನ್ನುವ ತೀರ್ಮಾನಕ್ಕೆ ಟೆಲಿಕಾಂ ಮೇಲ್ಮನವಿ ನ್ಯಾಯಮಂಡಳಿಗೆ (TDSAT) ಬಂದಿದೆ ಎನ್ನಲಾಗಿದ್ದು, ತೀರ್ಪು ಹೊರಬಿದ್ದ ನಂತರ ಜಿಯೋ ಉಚಿತ ಸೇವೆ ಬಹತೇಕ ಕೊನೆಗೊಳ್ಳಲಿದೆ ಎನ್ನಲಾಗಿದೆ.

English summary
Reliance Jio to Immediately Stop Free 4G Services, Find Out Why? To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot