ಜಿಯೋದಿಂದ ಮತ್ತೆ ದೀರ್ಘಾವಧಿ ಪ್ಲ್ಯಾನ್: ಒಟ್ಟು 350GB ಡೇಟಾ!

|

ಭಾರತೀಯ ಟೆಲಿಕಾಂ ವಲಯದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ರಿಲಾಯನ್ಸ್ ಜಿಯೋ ಟೆಲಿಕಾಂ ಈಗಾಗಲೇ ಹಲವು ಪ್ರೀಪೇಯ್ಡ್‌ ಪ್ಲ್ಯಾನ್‌ಗಳ ಮೂಲಕ ಗ್ರಾಹಕರನ್ನು ಮೆಚ್ಚಿಸಿದೆ. ಇತ್ತೀಚಿಗೆ 2121ರೂ. ಬೆಲೆಯ ವಾರ್ಷಿಕ ಪ್ರೀಪೇಯ್ಡ್‌ ಪ್ಲ್ಯಾನ್‌ ಬಿಡುಗಡೆ ಮಾಡಿದೆ. ಅದರ ಬೆನ್ನಲ್ಲೇ ಈಗ ಮತ್ತೊಂದು ದೀರ್ಘಾವಧಿಯ ಪ್ರೀಪೇಯ್ಡ್‌ ಪ್ಲ್ಯಾನ್‌ವೊಂದನ್ನು ಲಾಂಚ್ ಮಾಡಿದ್ದು, ಟೆಲಿಕಾಂ ಮಾರುಕಟ್ಟೆಯಲ್ಲಿ ಗಮನ ಸೆಳೆದಿದೆ.

ಜಿಯೋ ಟೆಲಿಕಾಂ

ಹೌದು, ಜಿಯೋ ಟೆಲಿಕಾಂ ಈಗ 4,999ರೂ. ಬೆಲೆಯ ಪ್ರೀಪೇಯ್ಡ್ ಪ್ಲ್ಯಾನ್‌ ಅನ್ನು ಮತ್ತೆ ಬಿಡುಗಡೆ ಮಾಡಿದೆ. ಈ ಹಿಂದೆ ಗ್ರಾಹಕರನ್ನು ಸೆಳೆದಿದ್ದ ಈ ದೀರ್ಘಾವಧಿ ಪ್ರೀಪೇಯ್ಡ್ ಪ್ಲ್ಯಾನ್ ಈಗ ಮತ್ತೆ ಡೇಟಾ, ವ್ಯಾಲಿಡಿ ಮತ್ತು ವಾಯಿಸ್‌ ಕಾಲಿಂಗ್ ಸೌಲಭ್ಯದೊಂದಿಗೆ ಎಂಟ್ರಿ ಕೊಟ್ಟಿದೆ. ಅಂದಹಾಗೆ ಜಿಯೋದ ಈ ಹೊಸ ಯೋಜನೆಯು ಒಟ್ಟು 350GB ಡೇಟಾ ಪ್ರಯೋಜನ ಹೊಂದಿದೆ. ಹಾಗಾದರೇ ಜಿಯೋದ ಈ ಪ್ಲ್ಯಾನ್ ಇತರೆ ಸೌಲಭ್ಯಗಳೆನು ಎನ್ನುವ ಬಗ್ಗೆ ಮುಂದೆ ತಿಳಿಯೋಣ.

ವ್ಯಾಲಿಡಿಟಿ ಮತ್ತು ಡೇಟಾ ಎಷ್ಟು

ವ್ಯಾಲಿಡಿಟಿ ಮತ್ತು ಡೇಟಾ ಎಷ್ಟು

ಜಿಯೋದ 4,999ರೂ ಪ್ರೀಪೇಯ್ಡ್ ಯೋಜನೆಯು ಒಟ್ಟು 360GB ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಪ್ರತಿದಿನ ಪ್ರತ್ಯೇಕ ಡೇಟಾ ಸೌಲಭ್ಯವಿಲ್ಲ, ಆದರೇ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 350GB ಡೇಟಾ ಪ್ರಯೋಜನವನ್ನು ಒದಗಿಸಲಿದೆ. ಗ್ರಾಹಕರು ಪ್ರತಿದಿನ 1GB ಮಿತಿ ಇಲ್ಲದೇ ಡೇಟಾ ಬಳಕೆ ಮಾಡಬಹುದು.

ವಾಯಿಸ್‌ ಕರೆ ಮತ್ತು SMS ಸೌಲಭ್ಯ

ವಾಯಿಸ್‌ ಕರೆ ಮತ್ತು SMS ಸೌಲಭ್ಯ

ಜಿಯೋದ 4,999ರೂ ಪ್ರೀಪೇಯ್ಡ್ ಯೋಜನೆಯು ಜಿಯೋ ಟು ಜಿಯೋ ಅನಿಯಮಿತ ಉಚಿತ ವಾಯಿಸ್‌ ಕರೆಗಳ ಸೌಲಭ್ಯವನ್ನು ಪಡೆದಿದೆ. ಜಿಯೋ ಹೊರತುಪಡಿಸಿ ಇತರೆ ನೆಟವರ್ಕ್ ಕರೆಗಳಿಗೆ ಒಟ್ಟು 12,000 ನಿಮಿಷಗಳ ಮಿತಿ ಹೇರಲಾಗಿದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಗಳ ಪ್ರಯೋಜನ ಸಹ ದೊರೆಯಲಿದೆ.

ಇತರೆ ಜಿಯೋ ದೀರ್ಘಾವಧಿ ಪ್ಲ್ಯಾನ್

ಇತರೆ ಜಿಯೋ ದೀರ್ಘಾವಧಿ ಪ್ಲ್ಯಾನ್

ಜಿಯೋದ ಈ 4,999ರೂ ಪ್ರೀಪೇಯ್ಡ್ ಪ್ಲ್ಯಾನ್ ದೀರ್ಘಾವಧಿಯ ಯೋಜನೆ ಆಗಿದೆ ಆದ್ರೆ ದುಬಾರಿ ಅನಿಸಲಿದೆ. ಹಾಗೇ ಜಿಯೋದ 2121ರೂ. ಪ್ರೀಪೇಯ್ಡ್‌ ಯೋಜನೆಯು ಸಹ ದೀರ್ಘಾವಧಿ ಯೋಜನೆ ಆಗಿದ್ದು, ಒಟ್ಟು 336 ದಿನಗಳ ವ್ಯಾಲಿಡಿಟಿ ಅವಧಿ ಹೊಂದಿದೆ. ಈ ಅವಧಿಯಲ್ಲಿ ಪ್ರತಿದಿನ 1.5GB ಡೇಟಾ ಸೌಲಭ್ಯ ಒದಗಿಸುತ್ತದೆ. ಜಿಯೋ ಟು ಜಿಯೋ ಅನಿಯಮಿತ ಕರೆ ಹಾಗೂ ಇತರೆ ನೆಟವರ್ಕ್ ಗೆ 12,000 ನಿಮಿಷಗಳ ಮಿತಿ.

Most Read Articles
Best Mobiles in India

English summary
Reliance Jio is now providing three long-term offerings with the latest addition being the Rs 4,999 one.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X