ಕ್ರಿಕೆಟ್ ಸೀಸನ್ ಡಾಟಾ ಪ್ಯಾಕ್ ಬಿಡುಗಡೆಗೊಳಿಸಿದ ರಿಲಯನ್ಸ್ ಜಿಯೋ

By Gizbot Bureau
|

ಇದೀಗ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಸೀಸನ್ ನ ಹವಾ ಎಲ್ಲಾ ಕಡೆ ನಡೆಯುತ್ತಿದೆ. ಕ್ರಿಕೆಟ್ ಜ್ವರ ಎಲ್ಲಾ ಕಡೆ ಇರುವುದರಿಂದಾಗಿ ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗಾಗಿ ಹೊಸ ಪ್ಯಾಕ್ ಗಳನ್ನು ಪ್ರಕಟಿಸಿದೆ. ಅದುವೇ ಕ್ರಿಕೆಟ್ ಸೀಸನ್ ಡಾಟಾ ಪ್ಯಾಕ್.ರುಪಾಯಿ 251 ರ ಪ್ಲಾನ್ ಕ್ರಿಕೆಟ್ ಅಭಿಮಾನಿಗಳಿಗಾಗಿ ಬಿಡುಗಡೆಗೊಳಿಸಲಾಗಿದೆ.

ಕ್ರಿಕೆಟ್ ಡಾಟಾ ಪ್ಯಾಕ್: ಡಾಟಾ ಮತ್ತು ಕರೆಗಳ ಬೆನಿಫಿಟ್

ಕ್ರಿಕೆಟ್ ಡಾಟಾ ಪ್ಯಾಕ್: ಡಾಟಾ ಮತ್ತು ಕರೆಗಳ ಬೆನಿಫಿಟ್

ಈ ಪ್ಲಾನಿನ ಭಾಗವಾಗಿ ರಿಲಯನ್ಸ್ ಜಿಯೋ 2ಜಿಬಿ ಪ್ರತಿದಿನ 4ಜಿ ಡಾಟಾವನ್ನು 51 ದಿನಗಳ ಅವಧಿಗಾಗಿ ನೀಡುತ್ತದೆ. ಅಂದರೆ ಒಟ್ಟು 102ಜಿಬಿ ಡಾಟಾವನ್ನು ನೀವು 51 ದಿನಗಳ ಕಾಲ ಬಳಕೆ ಮಾಡಲು ಅವಕಾಶವಿರುತ್ತದೆ. ಒಂದು ವೇಳೆ ಪ್ರತಿನಿತ್ಯದ ಡಾಟಾ ಲಿಮಿಟ್ 2ಜಿಬಿ ಮುಗಿದರೆ 64Kbps ನಲ್ಲಿ ಡಾಟಾ ಆಕ್ಸಿಸ್ ಮಾಡಬಹುದು. ಅಂದರೆ 4ಜಿ ಡಾಟಾಕ್ಕಾಗಿ 2.46 ರುಪಾಯಿ ಕಟ್ ಆಗುತ್ತದೆ.

ಕ್ರಿಕೆಟ್ ಡಾಟಾ ಪ್ಯಾಕ್: ನೀವು ತಿಳಿದುಕೊಳ್ಳಬೇಕಾಗಿರುವ ಅಂಶ

ಕ್ರಿಕೆಟ್ ಡಾಟಾ ಪ್ಯಾಕ್: ನೀವು ತಿಳಿದುಕೊಳ್ಳಬೇಕಾಗಿರುವ ಅಂಶ

ಎಲ್ಲರೂ ಮುಖ್ಯವಾಗಿ ಗಮನಿಸಬೇಕಾಗಿರುವ ಅಂಶವೇನೆಂದರೆ ಈ ಪ್ಲಾನ್ ನ ಅಡಿಯಲ್ಲಿ ಬಳಕೆದಾರರಿಗೆ ಯಾವುದೇ ಎಸ್ಎಂಎಸ್ ಬೆನಿಫಿಟ್ ಮತ್ತು ಕರೆಗಳ ಬೆನಿಫಿಟ್ ಇರುವುದಿಲ್ಲ. ಕೇವಲ ಡಾಟಾ ಬಳಕೆಗೆ ಮಾತ್ರವೇ ಇದು ಅವಕಾಶ ನೀಡುತ್ತದೆ. ಇದು ಸ್ಪೆಷಲ್ ಡಾಟಾ ಪ್ಯಾಕ್ ಆಗಿದ್ದು ಕೆಲವು ದಿನಗಳ ಅವಧಿಗೆ ಮಾತ್ರವೇ ಲಭ್ಯವಿರುತ್ತದೆ. ಪ್ರತಿದಿನ ಡಾಟಾ ಲಿಮಿಟ್ ಪ್ರತಿದಿನ ಮಧ್ಯರಾತ್ರಿ ಅಂದಾಜು 00:00 hrs ಗೆ ರಿನ್ಯೂ ಮಾಡಲಾಗುತ್ತದೆ. ಸರಿಯಾದ ರಿನೀವಲ್ ಸಮಯವನ್ನು ಪರೀಕ್ಷಿಸುವುದಕ್ಕಾಗಿ ನೀವು ಮೈಜಿಯೋ ಆಪ್ ನ್ನು ರೆಫರ್ ಮಾಡಿ ನೋಡಬಹುದು.

ಕ್ರಿಕೆಟ್ ಡಾಟಾ ಪ್ಯಾಕ್ : ನೀವು ತಿಳಿದುಕೊಳ್ಳಬೇಕಾಗಿರುವ ಅಂಶ

ಕ್ರಿಕೆಟ್ ಡಾಟಾ ಪ್ಯಾಕ್ : ನೀವು ತಿಳಿದುಕೊಳ್ಳಬೇಕಾಗಿರುವ ಅಂಶ

ಈ ಪ್ಲಾನ್ ನಲ್ಲಿ ತಮ್ಮ ನೆಚ್ಚಿನ ಟೀಮಿನ ಎಕ್ಸ್ ಕ್ಲೂಸೀವ್ ವಾಲ್ ಪೇಪರ್ ಗಳು ಮತ್ತು ಲೋಗೋಗಳು ಮೈಜಿಯೋ ಆಪ್ ನ ಕೂಪನ್ ಸೆಕ್ಷನ್ ನಲ್ಲಿ ಲಭ್ಯವಿರುತ್ತದೆ. ಅಷ್ಟೇ ಅಲ್ಲದೆ ಜಿಯೋ ಇದರಲ್ಲಿ ತಮ್ಮ ಫೇವರೆಟ್ ಟೀಮ್ ಜೊತೆಗೆ ಟಾಸ್ ಗೂ ಮುನ್ನ ಬ್ಯಾಕ್ ಗ್ರೌಂಡ್ ನಲ್ಲಿ ಸೆಲ್ಫೀ ತೆಗೆದುಕೊಳ್ಳುವುದಕ್ಕೆ ಅವಕಾಶ ನೀಡಲಾಗುವುದು ಎಂದು ಕೂಡ ತಿಳಿಸಿದೆ.ಮ್ಯಾಚ್ ನೋಡಲು ಟಿಕೆಟ್ ವಿನ್ ಆಗುವುದು ಮತ್ತು ಇತರೆ ಅವಕಾಶಗಳೂ ಕೂಡ ಲಭ್ಯವಿದೆ.

Best Mobiles in India

Read more about:
English summary
Reliance Jio launches Cricket Season Data pack: Here's what you will get

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X